ಕನ್ನಡತಿ ಧಾರಾವಾಹಿ ಮೂಲಕ ಜನಪ್ರಿಯತೆ ಪಡೆದ ನಟಿ ರಂಜನಿ ರಾಘವನ್. ಸದ್ಯ ನಿರ್ದೇಶನದಲ್ಲಿ ಬ್ಯುಸಿಯಾಗಿದ್ದಾರೆ. ‘ಡಿ ಢೀ ಡಿಕ್ಕಿ’ ಸಿನಿಮಾ ನಿರ್ದೇಶಕಿಯಾಗಿದ್ದಾರೆ.
tv-talk Jul 11 2026
Author: Pavna Das Image Credits:Instagram
Kannada
ಇಟಲಿಯಲ್ಲಿ ಕನ್ನಡತಿ
ಇದೀಗ ರಂಜನಿ ರಾಘವನ್ ಇಟಲಿಯಲ್ಲಿದ್ದು, ತಮಮ್ ಸೋಲೋ ಟ್ರಿಪ್ ನಲ್ಲಿ ಸಖತ್ ಆಗಿ ಎಂಜಾಯ್ ಮಾಡುತ್ತಿದ್ದಾರೆ. ಜೊತೆಗೆ ಫೋಟೋಗಳನ್ನು ಸಹ ಶೇರ್ ಮಾಡಿದ್ದಾರೆ.
Image credits: Instagram
Kannada
ಫೋಟೋಸ್ ಯಾರು ತೆಗೆದಿದ್ದು
ರಂಜನಿ ಬಳಿ ನಿಮ್ಮ ಫೋಟೊ ಕ್ಲಿಕ್ ಮಾಡಿದ್ದು ಎಂದು ಅಭಿಮಾನಿಗಳು ಕೇಳಿದ್ದು, ಅದಕ್ಕೆ ರಂಜನಿ ಇಲ್ಲಿದೆ ಕ್ಲೂ ಎನ್ನುತ್ತಾ, ತಮ್ಮ ಫೋಟೋ, ಅಲ್ಲಿನ ಸುಂದರ ತಾಣಗಳ ಬಗ್ಗೆ ಮಾಹಿತಿ ನೀಡಿದ್ದಾರೆ.
Image credits: Instagram
Kannada
ವೆನಿಸ್ ಎಂಬ ಸುಂದರ ಕನಸು
ನಟಿ ವೆನಿಸ್ ನ ಸೌಂದರ್ಯವನ್ನು ವರ್ಣಿಸಿ, ವೆನಿಸ್ ನೆಲದ ಮೇಲೆ ನಿರ್ಮಾಣವಾಗಿಲ್ಲ. ಬದಲಾಗಿ ಕನಸಿನಲ್ಲಿ ನಿರ್ಮಾಣವಾಗಿದೆ.
Image credits: Instagram
Kannada
ಕೆಲವು ಸ್ಥಳಗಳು ಇತಿಹಾಸದ ಕಥೆ ಹೇಳುತ್ತೆ
ವೆನಿಸ್ ನ ಐತಿಹಾಸಿಕ ಸ್ಥಳಗಳ ಮುಂದೆ ನಿಂತು ಫೋಟೊಗಳನ್ನು ಶೇರ್ ಮಾಡಿರುವ ರಂಜನಿ ಕೆಲವು ಸ್ಥಳಗಳು ಇತಿಹಾಸವನ್ನು ಹಿಡಿದಿಟ್ಟುಕೊಳ್ಳುವುದಲ್ಲ, ಕಥೆಯನ್ನೂ ಸಹ ಹೇಳುತ್ತೆ ಎಂದಿದ್ದಾರೆ.
Image credits: Instagram
Kannada
ಹೊಳೆಯುವ ವೆನಿಸ್
ಸೂರ್ಯ ಮುಳುಗಿದ. ಆದರೆ ವೆನಿಸ್ ಹೊಳೆಯುವುದನ್ನು ನಿಲ್ಲಿಸಲಿಲ್ಲ. ಕೆಲವು ನಗರಗಳಿಗೆ ಬೆಳಕು ಸೂರ್ಯನಿಂದ ಬರುವುದಿಲ್ಲ. ಅವುಗಳ ಇತಿಹಾಸವೇ ಸಾಕು ಅವು ಹೊಳೆಯಲು..
Image credits: Instagram
Kannada
ಕ್ಲೂ ಕೊಟ್ಟ ನಟಿ
ಇನ್ನು ತಮ್ಮ ಫೋಟೊಗಳನ್ನು ಯಾರು ತೆಗೆದವರು ಎಂದು ಕೇಳಿದವರಿಗೆ, ತಮ್ಮ ಸೆಲ್ಫಿ ತೆಗೆದುಕೊಂಡು ತಾವೇ ಫೊಟೊ ಕ್ಲಿಕ್ ಮಾಡಿರುವುದಾಗಿ ಕ್ಲೂ ಕೊಟ್ಟಿದ್ದಾರೆ.
Image credits: Instagram
Kannada
ರೋಮ್ ನಲ್ಲಿ ಕಳೆದು ಹೋದ ಸುಂದರಿ
ರಂಜನಿ ತಮ್ಮ ಸಿನಿಮಾದ ಬ್ಯುಸಿ ಶೆಡ್ಯೂಲ್ ನಡುವೆ, ಬ್ರೇಕ್ ತೆಗೆದುಕೊಂಡು ತಮಗೆ ತಾವೇ ಸಮಯ ಕೊಟ್ಟುಕೊಂಡಿದ್ದಾರೆ, ರೋಮ್ ನಲ್ಲಿ ಪ್ರತಿ ಕ್ಷಣಗಳನ್ನು ಎಂಜಾಯ್ ಮಾಡ್ತಿದ್ದಾರೆ ರಂಜನಿ.
Image credits: Instagram
Kannada
ರೋಮ್ ತಿಳಿಸಿಕೊಟ್ಟದ್ದು ಹಲವು
ರೋಮ್‌ಗೆ ಇತಿಹಾಸ ನೋಡಲು ಹೋದೆ. ಆದರೆ ಅಲ್ಲಿಂದ ಹಿಂದಿರುಗುವಾಗ, ಅಧಿಕಾರ, ಸಮಯ, ಮನುಷ್ಯನ ಮಹತ್ವಾಕಾಂಕ್ಷೆ… ಎಲ್ಲದರ ಬಗ್ಗೆ ಹೊಸ ದೃಷ್ಟಿಕೋನದೊಂದಿಗೆ ಬಂದೆ.
Image credits: Instagram
Kannada
ಸಿನಿಮಾ ರಿಲೀಸ್ ಯಾವಾಗ?
ನೆನಪಿರಲಿ ಪ್ರೇಮ್ ಮತ್ತು ವಿವಾನ್ ಗಣೇಶ್ ನಟಿಸಿರುವ ಡಿ ಢೀ ಡಿಕ್ಕಿ ಸಿನಿಮಾ ಬಿಡುಗಡೆಯ ಬಗ್ಗೆ ಅಭಿಮಾನಿಗಳು ಕಾಯುತ್ತಿದ್ದಾರೆ. ಆದರೆ ಸಿನಿಮಾ ಬಿಡುಗಡೆ ಬಗ್ಗೆ ರಂಜನಿ ಇನ್ನೂ ಮಾಹಿತಿ ನೀಡಿಲ್ಲ.