MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • Amruthadhaare Serial: ಆ ಹಿಟ್ ಧಾರಾವಾಹಿ ಥರ ಚಿಕ್ಕ ವಯಸ್ಸಿನ ಹುಡುಗನನ್ನೇ ಮಲ್ಲಿ ಮದುವೆ ಆಗ್ತಾಳಾ?

Amruthadhaare Serial: ಆ ಹಿಟ್ ಧಾರಾವಾಹಿ ಥರ ಚಿಕ್ಕ ವಯಸ್ಸಿನ ಹುಡುಗನನ್ನೇ ಮಲ್ಲಿ ಮದುವೆ ಆಗ್ತಾಳಾ?

Amruthadhaare Serial Episode: ಅಮೃತಧಾರೆ ಧಾರಾವಾಹಿಯಲ್ಲಿ ಒಂದು ಕಡೆ ಗೌತಮ್‌ ಹಾಗೂ ಭೂಮಿಕಾ ಒಂದಾಗಿ, ಒಟ್ಟಿಗೆ ಜೀವನ ಮಾಡುತ್ತಿದ್ದಾರೆ. ಇನ್ನೊಂದು ಕಡೆ ಮಲ್ಲಿ ಜೀವನ ಕೂಡ ಸೆಟಲ್‌ ಆಗೋ ಥರ ಇದೆ. ಹಾಗಾದರೆ ಮುಂದೆ ಏನಾಗುವುದು?  

1 Min read
Author : Padmashree Bhat
Published : Feb 05 2026, 11:20 AM IST
Share this Photo Gallery
  • FB
  • TW
  • Linkdin
  • Whatsapp
15
ಪ್ಲ್ಯಾನ್‌ ಮಾಡಿದ ಭೂಮಿಕಾ
Image Credit : zee kannada

ಪ್ಲ್ಯಾನ್‌ ಮಾಡಿದ ಭೂಮಿಕಾ

ಹೌದು, ಗೌತಮ್‌, ಭೂಮಿಕಾ ಈಗ ಏಕಾಂತದಲ್ಲಿ ಸಮಯ ಕಳೆಯುತ್ತಿದ್ದಾರೆ. ಮನೆಯಲ್ಲಿ ಮಕ್ಕಳು ಇಲ್ಲ, ಮಲ್ಲಿಯೂ ಇಲ್ಲ ಎಂದು ಭೂಮಿಕಾ ಪ್ಲ್ಯಾನ್‌ ಮಾಡಿ, ಗಂಡನನ್ನು ಮನೆಗೆ ಕರೆಸಿಕೊಂಡಿದ್ದಾಳೆ. ಇದು ಅಪರ್ಣಾ ಕೊಟ್ಟ ಐಡಿಯಾ ಆಗಿತ್ತು.

25
ಭೂಮಿಕಾ ಮಡಿಲಿನಲ್ಲಿ ಗೌತಮ್‌
Image Credit : zee kannada

ಭೂಮಿಕಾ ಮಡಿಲಿನಲ್ಲಿ ಗೌತಮ್‌

ಅಪರ್ಣಾ ಹಾಗೂ ಭೂಮಿಕಾ ಏಕಾಂತದಲ್ಲಿ ಮಾತನಾಡಿಕೊಂಡಿದ್ದಾರೆ. ಗೌತಮ್‌ ಈಗ ಭೂಮಿಕಾ ಮಡಿಲ ಮೇಲೆ ಮಲಗಿಕೊಂಡಿದ್ದಾನೆ. ತುಂಬ ದಿನಗಳಿಂದ ಭೂಮಿಕಾ ಮಡಿಲಿನಲ್ಲಿ ಮಲಗೋದು ಗೌತಮ್‌ ಕನಸಾಗಿತ್ತು. ಒಟ್ಟಿನಲ್ಲಿ ಈ ಜೋಡಿ ಮೇಲೆ ಜಯದೇವ್‌ ಕಣ್ಣು ಬೀಳದೆ ಇದ್ರೆ ಸಾಕು.

Related Articles

Related image1
Amruthadhaare Serial: ಅಮೃತಧಾರೆಯ ಪುಟ್ ಮಗು ಲಚ್ಚಿ ಹೊಸ ಲುಕ್‌ ನೋಡಿದ್ರಾ!
Related image2
Amruthadhaare Serial: 18 ವರ್ಷಗಳ ಹಿಂದೆ ರಾಧಿಕಾ ಪಂಡಿತ್‌ಗೆ ಹೇಳಿದ್ದನ್ನು‌ ಮತ್ತೆ ರಿಪೀಟ್‌ ಮಾಡಿದ ಗೌತಮ್!
35
ಮಲ್ಲಿ ಜೀವನದ ಸತ್ಯ ಸುನೀಲ್‌ಗೆ ಗೊತ್ತಾಯ್ತು
Image Credit : zee kannada

ಮಲ್ಲಿ ಜೀವನದ ಸತ್ಯ ಸುನೀಲ್‌ಗೆ ಗೊತ್ತಾಯ್ತು

ಇನ್ನು ಮಲ್ಲಿ ಜೀವನದಲ್ಲಿ ಏನು ನಡೆದಿದೆ ಎಂದು ಸುನೀಲ್‌ಗೆ ಗೊತ್ತಾಗಿದೆ. ಅವನು ಮಲ್ಲಿ ಜೀವನದಲ್ಲಿ ನಡೆದ ಘಟನೆ ಬಗ್ಗೆ ಬೇಸರ ಹೊರಹಾಕಿದ್ದಾನೆ. ಜಯದೇವ್‌ ಹೇಳಿದಂತೆ ಮಲ್ಲಿಯನ್ನು ಅವನ ಲವ್‌ನಲ್ಲಿ ಬೀಳಿಸಿಕೊಳ್ಳೋದು ಪ್ಲ್ಯಾನ್‌ ಆಗಿತ್ತು. ಆದರೆ ಮಲ್ಲಿ ಜೀವನವನ್ನು ಹಾಳು ಮಾಡಿದವನು ಜಯದೇವ್‌ ಎಂದು ಅವನಿಗೆ ಗೊತ್ತಾಗಿಲ್ಲ.

45
ಸುನೀಲ್‌ ಲವ್‌ ಒಪ್ಪುತ್ತಾಳಾ ಮಲ್ಲಿ?
Image Credit : zee kannada

ಸುನೀಲ್‌ ಲವ್‌ ಒಪ್ಪುತ್ತಾಳಾ ಮಲ್ಲಿ?

ಇನ್ನೊಂದು ಕಡೆ ಮಲ್ಲಿಗೆ ಸುನೀಲ್‌ ಪ್ರೇಮ ನಿವೇದನೆ ಮಾಡಿದ್ದಾನೆ. ಸುನೀಲ್‌ ಹಾಗೂ ಮಲ್ಲಿ ಸ್ನೇಹ ಶುರುವಾಗಿದೆ. ಆದರೆ ಇದು ಪರಸ್ಪರರ ಒಪ್ಪಿಗೆ ಮೇರೆಗೆ ಲವ್‌ಗೆ ತಿರುಗಲಿದೆಯಾ ಎಂಬ ಪ್ರಶ್ನೆ ಎದ್ದಿದೆ. ಸುನೀಲ್‌ಗೆ ಮೊದಲಿನಿಂದಲೂ ಮಲ್ಲಿ ಮೇಲೆ ಲವ್‌ ಇದೆ. ಮಲ್ಲಿ ಈಗ ಲವ್‌ ಒಪ್ಪಬೇಕು, ಅಷ್ಟೇ. 

55
ಮಲ್ಲಿ ನಿರ್ಧಾರ ಏನು?
Image Credit : zee kannada

ಮಲ್ಲಿ ನಿರ್ಧಾರ ಏನು?

ನೋಡಲು ಮಾತ್ರ ಮಲ್ಲಿಗಿಂತ ಸುನೀಲ್‌ ಚಿಕ್ಕವನು ಎಂದು ಕಾಣುತ್ತದೆ. ತನಗಿಂತ ಚಿಕ್ಕವನ ಪ್ರೀತಿಯನ್ನು ಮಲ್ಲಿ ಒಪ್ಪುತ್ತಾಳಾ? ಎರಡನೇ ಮದುವೆ ಆಗ್ತಾಳಾ ಎಂಬ ಪ್ರಶ್ನೆ ಇದೆ. ವಯಸ್ಸಿನಲ್ಲಿ ಚಿಕ್ಕವರಾದವರನ್ನು ಹುಡುಗಿ ಮದುವೆಯಾದರೆ ಪ್ರಪಂಚ ಪ್ರಶ್ನೆ ಮಾಡುವುದು. ಈ ಹಿಂದೆ ಪ್ರಸಾರ ಆಗುತ್ತಿದ್ದ ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಶಾಲಿನಿಯು ತನಗಿಂತ ಐದು ವರ್ಷ ಚಿಕ್ಕವನನ್ನು ಮದುವೆ ಆಗಿದ್ದಳು. ಆ ಕಥೆ ರೀತಿ ಈ ಕಥೆ ಸಾಗಲಿದೆಯಾ ಎಂಬ ಪ್ರಶ್ನೆ ಮೂಡಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

PB
Padmashree Bhat
ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.
ಮನರಂಜನಾ ಸುದ್ದಿ
ಅಮೃತಧಾರೆ
ಜೀ ಕನ್ನಡ
ಕನ್ನಡ ಧಾರಾವಾಹಿ

Latest Videos
Recommended Stories
Recommended image1
ಮಾರಕ ರೋಗ ಬಿಡಲಿಲ್ಲ, ಚಿಕಿತ್ಸೆಗೆ ಹಣ ಸಾಕಾಗಲಿಲ್ಲ; ದುರಂತ ಅಂತ್ಯ ಕಂಡ ಧಾರಾವಾಹಿ ನಟಿ!
Recommended image2
ಭಾರತೀಯರಿಗೆ ಸಿಗೋ ಅಪರೂಪದ ಆಫರ್‌ ಮಿಸ್‌ ಮಾಡ್ಕೊಂಡ Bigg Boss ರಜತ್;‌ ಹಣೆಬರಹಕ್ಕೆ ಹೊಣೆ ಯಾರು ಎಂದಂಗಾಯ್ತು!
Recommended image3
129 ವರ್ಷದ ಹಳೆಯ ಮೈಸೂರಿನ ಪಾರಂಪರಿಕ ಕಟ್ಟಡದಲ್ಲಿ ಎಡವಟ್ಟು ಮಾಡ್ಕೊಂಡ Bigg Boss ರಜತ್;‌ ಹೊಸ ವಿವಾದ ಎಳ್ಕೊಂಡ್ರು
Related Stories
Recommended image1
Amruthadhaare Serial: ಅಮೃತಧಾರೆಯ ಪುಟ್ ಮಗು ಲಚ್ಚಿ ಹೊಸ ಲುಕ್‌ ನೋಡಿದ್ರಾ!
Recommended image2
Amruthadhaare Serial: 18 ವರ್ಷಗಳ ಹಿಂದೆ ರಾಧಿಕಾ ಪಂಡಿತ್‌ಗೆ ಹೇಳಿದ್ದನ್ನು‌ ಮತ್ತೆ ರಿಪೀಟ್‌ ಮಾಡಿದ ಗೌತಮ್!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved