- Home
- Entertainment
- TV Talk
- Amruthadhaare Serial: ಎಲ್ಲ ಸತ್ಯ ಹೊರಬಿತ್ತು; ತ್ರಿಶೂಲದ ಗುಟ್ಟು ಗೊತ್ತಾಯ್ತು, ಸೀರಿಯಲ್ ಮುಗೀತಾ?
Amruthadhaare Serial: ಎಲ್ಲ ಸತ್ಯ ಹೊರಬಿತ್ತು; ತ್ರಿಶೂಲದ ಗುಟ್ಟು ಗೊತ್ತಾಯ್ತು, ಸೀರಿಯಲ್ ಮುಗೀತಾ?
Amruthadhaare Serial Episode: ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್ ದಿವಾನ್‌ಗೆ ಸ್ವಂತ ಮಗಳನ್ನು ಹುಡುಕೋ ಸಮಸ್ಯೆ ಒಂದುಕಡೆಯಾದರೆ, ಮನೆಯಲ್ಲಿರುವ ಮಿಂಚುಳನ್ನು ಉಳಿಸಿಕೊಳ್ಳಬೇಕಿದೆ. ಇದೊಂದು ಟಾಸ್ಕ್ ಆಗಿದೆ. ಹೀಗಿರುವಾಗ ಕರ್ಣ ಧಾರಾವಾಹಿ ಕರ್ಣನ ಆಗಮನದಿಂದ ಎಲ್ಲ ಗೊಂದಲ ಬಗೆಹರಿದಿದೆ.

ಡಿಎನ್‌ಎ ಟೆಸ್ಟ್ ಮಾಡಿದ್ರು
ಮಿಂಚು ತಮ್ಮ ಮಗಳು ಎಂದು ಒಂದು ದಂಪತಿ ಬಂದಿದ್ದರು. ಮಿಂಚು ನನ್ನ ಮಗಳು ಎಂದು ಕಾಣುತ್ತದೆ ಹೇಳಿ ಡಿಎನ್‌ಎ ಟೆಸ್ಟ್ ಮಾಡಿ ಎಂದು ಗೌತಮ್ ಹೇಳಿದ್ದನು. ಅದರಂತೆ ಡಿಎನ್‌ಎ ಟೆಸ್ಟ್ ಮಾಡಲಾಗಿದ್ದು, ಅದರಲ್ಲಿ ಗೌತಮ್ ಮಗಳಲ್ಲ ಎಂದು ದೃಢಪಟ್ಟಿತ್ತು. ಆದರೆ ಅಸಲಿ ವಿಷಯ ಬೇರೆ ಇತ್ತು.
ಕರ್ಣ ಕೂಡ ಸತ್ಯವನ್ನೇ ಹೇಳಿದ
ಇನ್ನೊಂದು ಕಡೆ ಕರ್ಣ ಧಾರಾವಾಹಿ ಕರ್ಣ ಕೂಡ ಬಂದಿದ್ದನು. ಈ ಹಿಂದೆ ಅವನು, ಅಣ್ಣಯ್ಯ ಧಾರಾವಾಹಿ ಪಾರು ಸೇರಿಕೊಂಡು ಭೂಮಿಕಾ ಹೆರಿಗೆ ಮಾಡಿಸಿದ್ದರು. ಈಗ ಕರ್ಣ ಆ ಮಗುವಿನ ಅಸಲಿ ಡಿಎನ್‌ಎ ಟೆಸ್ಟ್ ಮಾಡಿಸಿರೋ ಡಾಕ್ಯುಮೆಂಟ್ ತಂದಿದ್ದನು. ಅವನು ಗೌತಮ್‌ಗೆ ನಿಮ್ಮ ಮಗಳ ಕೈಯಲ್ಲಿ ತ್ರಿಶೂಲದ ಮಚ್ಚೆ ಇತ್ತು ಎಂದು ಹೇಳಿದ್ದನು. ಅದರಂತೆ ಮಿಂಚು ಕೈಯಲ್ಲಿ ಕೂಡ ಆ ಮಚ್ಚೆ ಇತ್ತು.
ತಪ್ಪಿಸಿಕೊಂಡು ಬಂದ ಲಕ್ಷ್ಮೀಕಾಂತ್ ಮಾವ
ಮಿಂಚುಳೇ ಗೌತಮ್ ಮಗಳು ಎನ್ನೋ ಸತ್ಯ ಮಾವ ಲಕ್ಷ್ಮೀಕಾಂತ್‌ಗೆ ಗೊತ್ತಿತ್ತು. ಅವನನ್ನು ಜೆಡಿ ಕಿಡ್ನ್ಯಾಪ್ ಮಾಡಿಟ್ಟಿದ್ದನು. ಈಗ ಅವನು ಉಪಾಯದಿಂದ ಅಲ್ಲಿಂದ ಹೊರಗಡೆ ಬಂದಿದ್ದಾನೆ. ಅವನು ನೇರವಾಗಿ ಗೌತಮ್ ಮನೆಗೆ ಬಂದು ಮಿಂಚುಳೇ ನಿನ್ನ ಮಗಳು, ಅಖಿಲಾಂಡೇಶ್ವರಿ ಫೋನ್ ಮಾಡಿ ಎಲ್ಲ ಹೇಳಿದ್ದಳು ಎಂದು ಅವನು ಹೇಳಿದ್ದಾನೆ. ಅಲ್ಲಿಗೆ ಗೌತಮ್, ಭೂಮಿಗೆ ಮಿಂಚುಳೇ ನಮ್ಮ ಮಗಳು ಎನ್ನೋ ಸತ್ಯ ಗೊತ್ತಾಗಿದೆ.
ಮುಂದೆ ಏನಾಗಲಿದೆ?
ಒಟ್ಟಿನಲ್ಲಿ ಗೌತಮ್‌ಗೆ ಸತ್ಯ ಗೊತ್ತಾಗಿದೆ, ಜೆಡಿ ಅಸಲಿ ಕಥೆ ಗೊತ್ತಾದರೆ ಈ ಸೀರಿಯಲ್ ಕಂಟೆಂಟ್ ಮುಗಿದಂತೆ. ಈಗ ಇರುವ ಎಲ್ಲ ಗೊಂದಲಕ್ಕೆ ತೆರೆ ಬಿದ್ದಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಯಾವ ರೀತಿಯ ಕಥೆ ಮಾಡಲಿದ್ದಾರೆ ಎಂದು ಗೊತ್ತಾಗಲಿದೆ.
ಪಾತ್ರಧಾರಿಗಳು
ಗೌತಮ್ ದಿವಾನ್- ರಾಜೇಶ್ ನಟರಂಗ
ಭೂಮಿಕಾ ಸದಾಶಿವ- ಛಾಯಾ ಸಿಂಗ್
ಕರ್ಣ- ಕಿರಣ್ ರಾಜ್
ಲಕ್ಷ್ಮೀಕಾಂತ್- ಕೃಷ್ಣಮೂರ್ತಿ ಕವತ್ತಾರ್
ಜೆಡಿ- ರಾಣವ್ ಗೌಡ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

