- Home
- Entertainment
- TV Talk
- Amruthadhaare Serial: ಮುಗೀತು ಜಯದೇವ್ ಅಧ್ಯಾಯ; ಹೆತ್ತ ತಾಯಿಗೆ ಕಣ್ಣೀರು ಹಾಕಿಸಿದೋರು ಉಳಿದ ಚರಿತ್ರೆ ಇದ್ಯಾ?
Amruthadhaare Serial: ಮುಗೀತು ಜಯದೇವ್ ಅಧ್ಯಾಯ; ಹೆತ್ತ ತಾಯಿಗೆ ಕಣ್ಣೀರು ಹಾಕಿಸಿದೋರು ಉಳಿದ ಚರಿತ್ರೆ ಇದ್ಯಾ?
Amruthadhaare Kannada Serial Episode: ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್ ದಿವಾನ್ ಈಗ ತನ್ನ ಹಳೆಯ ಸಾಮ್ರಾಜ್ಯವನ್ನು ಮರಳಿ ಪಡೆದಿದ್ದಾನೆ. ಜಯದೇವ್ ಎಲ್ಲ ಆಸ್ತಿಯನ್ನು ಕಳೆದುಕೊಳ್ಳುವ ಸಮಯ ತಂದುಕೊಂಡಿದ್ದನು. ಹೀಗಾಗಿ ಹರಾಜಿನಲ್ಲಿ ಗೌತಮ್ ಅದನ್ನೆಲ್ಲವನ್ನು ಮರಳಿ ಪಡೆದಿದ್ದಾನೆ.

ಆಸ್ತಿ ಖರೀದಿ ಮಾಡಿದ ಗೌತಮ್
ತಂದೆ ಕಟ್ಟಿದ ಮನೆ, ಅಪ್ಪನ ಪ್ರೀತಿಯ ಕಂಪೆನಿ, ದಿವಾನ್ ಸಾಮ್ರಾಜ್ಯವನ್ನು ಬೇರೆಯವರಿಗೆ ಕೊಡೋದು ಅವನಿಗೆ ಇಷ್ಟವೇ ಇರಲಿಲ್ಲ. ಹೀಗಾಗಿ ಅವನು ಅರಸನಕೋಟೆ ಅಖಿಲಾಂಡೇಶ್ವರಿಯ ಸಹಾಯದಿಂದ ಹಣ ಪಡೆದು, ಹರಾಜಿನಲ್ಲಿ ತನ್ನ ಆಸ್ತಿಯನ್ನು ಖರೀದಿ ಮಾಡಿದ್ದಾನೆ.
ಕಪಾಳ ಮೋಕ್ಷ ಮಾಡಿದ ಗೌತಮ್
ಗೌತಮ್ ದಿವಾನ್ ಈ ರೀತಿ ಆಸ್ತಿ ಖರೀದಿ ಮಾಡಿದ್ದು ಜಯದೇವ್‌ಗೆ ಆಶ್ಚರ್ಯ ಆಗಿದೆ. ಇಷ್ಟೆಲ್ಲ ಹಣವನ್ನು ಅವನು ಹೇಗೆ ತಂದನು ಎಂದು ಯೋಚನೆ ಮಾಡುತ್ತಿರುವಾಗಲೇ, ಗೌತಮ್ ದಿವಾನ್ ಅವನನ್ನು ಮನೆಯಿಂದ ಹೊರಗಡೆ ಹಾಕಿದ್ದಾನೆ. ತನ್ನ ಮಗಳನ್ನು ಕಿಡ್ನ್ಯಾಪ್ ಮಾಡಿದ್ದು, ನನ್ನ ಕುಟುಂಬಸ್ಥರಿಗೆ ತೊಂದರೆ ಕೊಟ್ಟಿದ್ದು, ನನ್ನನ್ನು ಮನೆಯಿಂದ ಹೊರಗಡೆ ಹೋಗುವ ಹಾಗೆ ಮಾಡಿದ್ದು, ಅಷ್ಟೇ ಅಲ್ಲದೆ ಮಲ್ಲಿ ಜೀವನ ಹಾಳು ಮಾಡಿದ್ದು ಎಲ್ಲದಕ್ಕೆ ಲೆಕ್ಕ ಚುಕ್ತ ಆಗುವ ಹಾಗೆ ಕಪಾಳ ಮೋಕ್ಷ ಮಾಡಿದ್ದನು.
ಓಡಿಹೋದ ದಿಯಾ
ಗೌತಮ್ ದಿವಾನ್ ಈಗ ಜಯದೇವ್‌ನನ್ನು ಮನೆಯಿಂದ ಹೊರಗಡೆ ಹಾಕಿದಮೇಲೂ ಕೂಡ ಅವನಿಗೆ ಬುದ್ಧಿಯೇ ಬಂದಿಲ್ಲ. ಇನ್ನೊಂದು ಕಡೆ ದಿಯಾ ಕೂಡ ಅವನಿಗೆ ಚಳ್ಳೆಹಣ್ಣು ತಿನ್ನಿಸಿ ಓಡಿ ಹೋಗಿದ್ದಾಳೆ. ಈಗ ಅವನು ಬರಿಗೈಯಲ್ಲಿ ತಿರುಗುವ ಹಾಗೆ ಆಗಿದೆ. ಆದರೆ ಮುಂದೆ ಏನು ಮಾಡುತ್ತಾನೆ ಎಂದು ಕಾದು ನೋಡಬೇಕಿದೆ.
ಮುಂದೆ ಏನಾಗಬಹುದು?
ಮುಂದೆ ಜಯದೇವ್, ಗೌತಮ್ ಕುಟುಂಬಕ್ಕೆ ತೊಂದರೆ ಕೊಡ್ತಾನಾ? ಅಥವಾ ಶಕುಂತಲಾ, ಜಯದೇವ್ ಆಡಿದ ನಾಟಕವೇ ಎಂಬ ಪ್ರಶ್ನೆ ಬಂದಿದೆ. ಮುಂದೆ ಇವರಿಬ್ಬರು ಒಂದಾದರೂ ಆಶ್ಚರ್ಯವಿಲ್ಲ.
ವೀಕ್ಷಕರು ಏನು ಹೇಳ್ತಾರೆ?
- ಯಾರಿಗ್ ಕಣ್ಣೇರು ಹಾಕಿಸಿದ್ರೂ, ಹೆತ್ತ ತಾಯಿಗೆ ಕಣ್ಣೇರು ಹಾಕಿಸಿದವರಿಗೆ ಉಳಿಗಾಲ ಇಲ್ಲಾ.
- ತಾಯಿಯನ್ನ ಹೊರಹಾಕಿದ ನಂತರವೇ ಎಲ್ಲಾ ತಲೆ ಕೆಳಗಾಯ್ತು
- ಏನೇ ಆದ್ರೂ ಜೈ ಕೊಬ್ಬು ಕರಗುವ ಮಾತೆ ಇಲ್ಲ
- ಇಷ್ಟೆಲ್ಲಾ ಆದ್ರೂ ಜೆಡಿ ಕೊಬ್ಬು ನೋಡ್ರಪಾ ಅಬ್ಬಬಾ ಒಂದು ಚೂರು ಭಯ ಅನ್ನೋದೇ ಇಲ್ಲ
- ಜೈದೇವ್ ಸರ್ ಆಕ್ಟಿಂಗ್ ಸೂಪರ್ ರಿಯಲ್ ಆಗಿರೋ ಪ್ರಾಬ್ಲಮ್ ಗಿಂತಲೂ ತುಂಬಾ ಚೆನ್ನಾಗಿದೆ ಆಕ್ಟಿಂಗ್ ಮಾಡ್ತಾ ಇದ್ದೀರಾ? ಸೂಪರ್ ಸರ್ ನಿಮ್ಮನ್ನು ನೋಡ್ತಾ ಇದ್ರೆ ಆಕ್ಟಿಂಗ್ ಅನ್ನುಸ್ತಾ ಇಲ್ಲ ನಿಜ ಜೀವನದಲ್ಲಿ ನಡೆದಿದೆ ಏನೋ ಅನಿಸುತ್ತಿದೆ ವಿಲನ್ ಕ್ಯಾರೆಕ್ಟರ್ ಸೂಪರ್
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

