- Home
- Entertainment
- TV Talk
- ಐಶ್ವರ್ಯಗೆ ಅಂಗಡಿಯವ ಸೆರಗು ಹಾಕಿದಾಗ ಶಿಶಿರ್ ಅಂಥದ್ದೇನು ಹೇಳಿದ್ರು? ಛೀ ಛೀ ಎಂದು ನಾಚಿ ನೀರಾದ ನಟಿ
ಐಶ್ವರ್ಯಗೆ ಅಂಗಡಿಯವ ಸೆರಗು ಹಾಕಿದಾಗ ಶಿಶಿರ್ ಅಂಥದ್ದೇನು ಹೇಳಿದ್ರು? ಛೀ ಛೀ ಎಂದು ನಾಚಿ ನೀರಾದ ನಟಿ
ಬಿಗ್ ಬಾಸ್ ಜೋಡಿ ಐಶ್ವರ್ಯ ಸಿಂಧೋಗಿ ಮತ್ತು ಶಿಶಿರ್ ಶಾಸ್ತ್ರಿ ಅವರ ಸೀರೆ ಮಳಿಗೆಯ ಪ್ರಮೋಷನಲ್ ವಿಡಿಯೋ ವೈರಲ್ ಆಗಿದೆ. ಶಿಶಿರ್ ಆಡಿದ ಮಾತಿಗೆ ಐಶ್ವರ್ಯ ನಾಚಿ ನೀರಾಗಿದ್ದು, ಈ ಜೋಡಿ ತಮ್ಮಿಬ್ಬರ ನಡುವೆ ಇರುವುದು ಸ್ನೇಹವಷ್ಟೇ, ಮದುವೆಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಐಶ್ವರ್ಯ-ಶಿಶಿರ್ ವಿಡಿಯೋ ವೈರಲ್
ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಬಿಗ್‌ಬಾಸ್ ಜೋಡಿ ಐಶ್ವರ್ಯ ಸಿಂಧೋಗಿ ಮತ್ತು ಶಿಶಿರ್ ಶಾಸ್ತ್ರಿ ವಿಡಿಯೋಗಳು ಸಕತ್ ವೈರಲ್ ಆಗುತ್ತಿವೆ. ಸೀರೆ ಮಳಿಗೆಯೊಂದರ ಪ್ರಮೋಷನ್ ಸಲುವಾಗಿ ಈ ಜೋಡಿ ಕಾಣಿಸಿಕೊಂಡಿದ್ದು, ಈ ಕ್ಯೂಟ್ ಜೋಡಿಯ ಬಗ್ಗೆ ಬಗೆಬಗೆ ರೀತಿಯಲ್ಲಿ ಸುದ್ದಿಗಳು ಸದ್ದು ಮಾಡುತ್ತಿವೆ.
ಭರ್ಜರಿ ಬಾಂಡಿಂಗ್
ಅಷ್ಟಕ್ಕೂ ಬಿಗ್‌ಬಾಸ್ ಮನೆಯಲ್ಲಿ ಲವ್, ರೊಮಾನ್ಸ್ ಮಾಮೂಲು. ಅಲ್ಲಿಂದ ಹೊರಕ್ಕೆ ಬರುತ್ತಿದ್ದಂತೆಯೇ ಕಿತ್ತಾಟ, ನಾನ್ಯಾರೋ ನೀನ್ಯಾರೋ ಎಂದುಕೊಳ್ಳುವುದೆಲ್ಲ ಸರ್ವೇ ಸಾಮಾನ್ಯ. ಆದರೆ ಹಾಗೆ ಮಾಡದೇ ʼಬಿಗ್ ಬಾಸ್ ಕನ್ನಡ ಸೀಸನ್ 11 ರಿಂದ ಹೊರಕ್ಕೆ ಬಂದ ಮೇಲೂ ಅದೇ ರೀತಿ ಫ್ರೆಂಡ್‌ಷಿಪ್ ಉಳಿಸಿಕೊಂಡವರು ಐಶ್ವರ್ಯ ಸಿಂಧೋಗಿ (Aishwarya Sindhogi) ಮತ್ತು ಶಿಶಿರ್ ಶಾಸ್ತ್ರಿ (Shishir Shastry). ಇಂದಿಗೂ ಇವರಿಬ್ಬರೂ ಕ್ಯೂಟ್ ಕಪಲ್ ಆಗಿದ್ದಾರೆ.
ಸೆರಗು ತೊಡಿಸಿದ ಅಂಗಡಿ ಮಾಲೀಕ
ಇದೀಗ ಸೀರೆ ಮಳಿಗೆಯೊಂದರಲ್ಲಿ ಅಂಗಡಿಯವ ಕಪ್ಪು ಬಣ್ಣದ ಸೀರೆಯನ್ನು ಐಶ್ವರ್ಯ ಅವರಿಗೆ ಸೆರಗಿನ ರೀತಿಯಲ್ಲಿ ತೊಡಿಸಿದ್ದಾರೆ. ಆ ಸಮಯದಲ್ಲಿ ಅಂಗಡಿಯವ ಹಾಲೇನಾದ್ರೂ ತಗೋತೀರಾ ಎಂದೋ ಅಥವಾ ಇನ್ನೇನು ಕೇಳಿದ್ದಾರೋ ಗೊತ್ತಿಲ್ಲ. ಆದರೆ ಅವೆಲ್ಲ ವಿಡಿಯೋ ಕಟ್ ಆಗಿದ್ದು, ಶಿಶಿರ್ ಅವರು ಇಲ್ಲಿ ಹಾಲು ಕುಡಿಯೋರು ಯಾರೂ ಇಲ್ಲ ಎಂದಿದ್ದಾರೆ.
ನಾಚಿ ನೀರಾದ ಬಿಗ್‌ಬಾಸ್ ಬೆಡಗಿ
ಐಶ್ವರ್ಯ ಅವರಿಗೆ ಸೆರಗು ಹಾಕುವ ಸಮಯದಲ್ಲಿಯೇ ಈ ಮಾತನ್ನು ಹೇಳಿದ್ದರಿಂದ ಐಶ್ವರ್ಯ ಸಿಂಧೋಗಿ ದೊಡ್ಡದಾಗಿ ಬಾಯಿ ತೆರೆದು ಛೀ ಛೀ ಎಂದು ನಾಚಿ ನೀರಾಗಿದ್ದಾರೆ. ಇದರ ವಿಡಿಯೋ ಅಷ್ಟೇ ವೈರಲ್ ಆಗಿದ್ದು, ಥಹರೇವಾರಿ ಕಮೆಂಟ್ಸ್ ಸುರಿಮಳೆಯಾಗುತ್ತಿದೆ.
ಮೈ ಚಳಿ ಬಿಟ್ಟು ಸ್ಟೆಪ್ಟ್
ತಾವು ಬರೀ ಸ್ನೇಹಿತರು ಎಂದು ಹೇಳಿಕೊಂಡಿರೋ ಜೋಡಿ, ಇದಾಗಲೇ ಹಲವು ಬಾರಿ ಒಟ್ಟಿಗೇ ಕಾಣಿಸಿಕೊಂಡಿದ್ದಿದೆ. ಮೈ ಚಳಿ ಬಿಟ್ಟು ಸ್ಟೆಪ್ ಹಾಕಿದ್ದು ಇದೆ. ಇದೀಗ ಈ ಜೋಡಿಯ ಮತ್ತೊಂದು ಫೋಟೋಶೂಟ್ ವೈರಲ್ ಆಗುತ್ತಿದ್ದು, ಇದನ್ನು ನೋಡಿದ ಮೇಲೂ ಏನಿಲ್ಲ, ಏನಿಲ್ಲ ಹೇಳ್ತೀರಾ ಎಂದು ಅಭಿಮಾನಿಗಳು ಕೇಳ್ತಿದ್ದಾರೆ.
ಮದ್ವೆ ಬಗ್ಗೆ ಹೇಳಿದ್ದೇನು?
ಆದರೆ ಇದುವರೆಗೂ ಅವರು ತಮ್ಮ ಮದುವೆಯ ಬಗ್ಗೆ ಮಾತನಾಡಿರಲಿಲ್ಲ. ಮದುವೆಯ ಬಗ್ಗೆ ಪ್ರಶ್ನೆ ಕೇಳಿದ್ದ ಸಂದರ್ಭದಲ್ಲಿ, ಅವರು, ನಮಗಿಬ್ಬರಿಗೂ ಸಾಕಷ್ಟು ಮದುವೆ ಪ್ರಪೋಸಲ್ ಬಂದಿವೆ. ನಾವಿಬ್ಬರೂ ಬ್ಯುಸಿನೆಸ್ ಪಾರ್ಟನರ್ ಆಗಬಹುದು ಅಷ್ಟೇ, ಆದರೆ ಸಂಗಾತಿಗಳಾಗಲ್ಲ ಎಂದು ಸ್ಪಷ್ಟನೆ ನೀಡಿದ್ದರು. ಹೀಗಾಗಿ ಈ ಮೂಲಕ ನಾವು ಪ್ರೇಮಿಗಳಲ್ಲ, ಮದುವೆ ಆಗಲ್ಲ ಎಂದಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

