- Home
- Life
- Relationship
- ಡಿವೋರ್ಸ್ ಬಗ್ಗೆ ಮೊದಲ ಬಾರಿ ಸತ್ಯ ಬಾಯ್ಬಿಟ್ಟ Niveditha Gowda: ಕಾರಣ ಯಾರೆಂದು ರಿವೀಲ್ ಮಾಡಿದ ನಟಿ
ಡಿವೋರ್ಸ್ ಬಗ್ಗೆ ಮೊದಲ ಬಾರಿ ಸತ್ಯ ಬಾಯ್ಬಿಟ್ಟ Niveditha Gowda: ಕಾರಣ ಯಾರೆಂದು ರಿವೀಲ್ ಮಾಡಿದ ನಟಿ
ಚಂದನ್ ಶೆಟ್ಟಿ ಅವರಿಂದ ವಿಚ್ಛೇದನ ಪಡೆದ ನಂತರ, ನಿವೇದಿತಾ ಗೌಡ ಸಂದರ್ಶನವೊಂದರಲ್ಲಿ ತಮ್ಮ ಮದುವೆಯ ಹಿಂದಿನ ಸತ್ಯವನ್ನು ಬಹಿರಂಗಪಡಿಸಿದ್ದಾರೆ. ಬಿಗ್‌ಬಾಸ್ ನಂತರ ಸಾರ್ವಜನಿಕರು ಮತ್ತು ಸಾಮಾಜಿಕ ಜಾಲತಾಣದ ಪ್ರಭಾವದಿಂದ ಮದುವೆಯಾದೆವು, ಆದರೆ ನಮ್ಮಿಬ್ಬರ ನಡುವೆ ಹೊಂದಾಣಿಕೆ ಇರಲಿಲ್ಲ ಎಂದು ಹೇಳಿದ್ದಾರೆ.

ಬಿಗ್ಬಾಸ್ನಿಂದ ಖ್ಯಾತಿ
Bigg Bossನಿಂದ ಫೇಮಸ್ ಆಗಿರೋ ನಿವೇದಿತಾ ಗೌಡ (Niveditha Gowda) ಅವರ ಲೆವೆಲ್ಲೇ ಈಗ ಬೇರೆಯಾಗಿದೆ. ಚಂದನ್ ಶೆಟ್ಟಿ ಅವರಿಂದ ಡಿವೋರ್ಸ್ ಪಡೆದ ಬಳಿಕ, ಫಾರಿನ್ ಟೂರ್ ಹೆಚ್ಚಾಗಿದೆ, ಜೊತೆಗೆ ತುಂಡುಡುಗೆ ಕುಣಿತವೂ ಅಷ್ಟೇ ಜೋರಾಗಿದೆ. ವಾಣಿ ಎನ್ನುವ ಸ್ನೇಹಿತೆಯ ಜೊತೆ ಟ್ರೋಲ್ ಆಗುವಂಥ ರೀಲ್ಸ್ ಮಾಡುತ್ತಾ ಅಷ್ಟೇ ಖ್ಯಾತಿಯನ್ನೂ ಗಳಿಸುತ್ತಿದ್ದಾರೆ. ಟ್ರೋಲ್ ಆದಷ್ಟೂ ಹೆಚ್ಚು ಹೆಚ್ಚು ಫೇಮಸ್ ಆಗುತ್ತಾ, ಹೆಚ್ಚಿಗೆ ದುಡಿಯುತ್ತಿದ್ದಾರೆ.
ಸೈಲೆಂಟಾಗಿ ಡಿವೋರ್ಸ್
ಅದೇನೇ ಇದ್ದರೂ ಬೇರೆ ಕೆಲವು ನಟ-ನಟಿಯರ ರೀತಿಯಲ್ಲಿ ಗಲಾಟೆ ಗದ್ದಲ ಮಾಡದೇ ಸೈಲೆಂಟ್ ಆಗಿ ಡಿವೋರ್ಸ್ ಆಗಿ ಈ ಜೋಡಿ ಸಾಕಷ್ಟು ಹೆಸರು ಮಾಡಿದೆ. ಈಗಲೇ ಚಂದನ್ ಶೆಟ್ಟಿ ಅವರು ನಿವೇದಿತಾ ಗೌಡ ಮೇಲೆ ಒಂದು ಚೂರೂ ಆರೋಪ ಮಾಡಲ್ಲ. ಅವರದ್ದು ಸ್ವಲ್ಪ ದುಬಾರಿ ಲೈಫ್ ಎಂದು ಹೇಳಿದ್ದು ಬಿಟ್ಟರೆ ಯಾವುದೇ ಕೆಟ್ಟ ಕಮೆಂಟ್ಸ್ ಮಾಡಿಲ್ಲ. ನಿವೇದಿತಾ ಗೌಡ (Niveditha Gowda) ಕೂಡ ಏನೂ ಆರೋಪ ಮಾಡಲಿಲ್ಲ.
ಬಹುದೊಡ್ಡ ಗುಟ್ಟು ರಟ್ಟು
ಆದರೆ ಇದೀಗ ಸಂದರ್ಶನವೊಂದಕ್ಕೆ ಇಲ್ಲಿಯವರೆಗೆ ಹೇಳದ ಬಹುದೊಡ್ಡ ಗುಟ್ಟನ್ನು ರಿವೀಲ್ ಮಾಡಿದ್ದಾರೆ ನಿವ್ವಿ. ತಮ್ಮ ಮದುವೆಗೆ ಕಾರಣವಾದದ್ದು ಯಾರು, ಹೊಂದಾಣಿಕೆಯೇ ಇಲ್ಲದ ತಮ್ಮ ಲೈಫ್ನಲ್ಲಿ ಮದುವೆ ಎನ್ನುವುದು ಹೇಗೆ ಮುಳುವಾಯ್ತು ಎನ್ನುವ ಅರ್ಥದಲ್ಲಿ ನಟಿ ಮಾತನಾಡಿದ್ದಾರೆ. ಚೆನ್ನಾಗಿರ್ತೀವಿ ಅಂತಲೇ ಎಲ್ಲರೂ ಮದುವೆ ಆಗುವುದು. ನಾವೂ ಸಹ ಹಾಗೆಯೇ ಅಂದುಕೊಂಡಿದ್ದೆವು. ಆದರೆ ನಮ್ಮಿಬ್ಬರಿಗೂ ಹೊಂದಾಣಿಕೆ ಇರಲಿಲ್ಲ ಎಂದಿರೋ ನಟಿ ಆ ಒಂದು ಗುಟ್ಟನ್ನು ತೆರೆದಿಟ್ಟಿದ್ದಾರೆ.
ಪ್ರಭಾವಕ್ಕೆ ಒಳಗಾದೆವು
ಅಷ್ಟಕ್ಕೂ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಅವರ ಲವ್ ಶುರುವಾದದ್ದು ಬಿಗ್ಬಾಸ್ನಿಂದ. ಅಲ್ಲಿಯೇ ಅವರನ್ನು ಜೋಡಿ ಎಂದು ಬ್ರ್ಯಾಂಡ್ ಮಾಡಲಾಗಿತ್ತು. ಇದೇ ತಮ್ಮ ಬದುಕಿಗೆ ಮುಳ್ಳಾಯಿತು ಎಂದಿದ್ದಾರೆ ನಿವೇದಿತಾ. ನಮ್ಮ ಮದುವೆಯ ಮೇಲೆ ಸಾಮಾಜಿಕ ಜಾಲತಾಣದ ಪ್ರಭಾವ ಹೆಚ್ಚಾಗಿತ್ತು. ನಾವು ಬಿಗ್ಬಾಸ್ಗೆ ಹೋಗಿದ್ದಕ್ಕೆ ಅಲ್ಲಿಯೇ ನಮ್ಮನ್ನು ‘ಜೋಡಿ’ ಎಂದು ಬ್ರ್ಯಾಂಡ್ ಮಾಡಿದ್ದರು. ಸಾಮಾಜಿಕ ಜಾಲತಾಣದಲ್ಲೂ ಅದೇ ತುಂಬಿತ್ತು, ಹೋದಲ್ಲೆಲ್ಲ ನೀವು ಮದುವೆ ಆಗಬೇಕು ಎಂದು ಹೇಳುತ್ತಿದ್ದರು. ನಾವು ಆ ಪ್ರಭಾವಕ್ಕೆ ಒಳಗಾದೆವು. ಮದುವೆ ಆದೆವು, ಆದರೆ ನಮ್ಮ ನಡುವೆ ಹೊಂದಾಣಿಕೆಯೇ ಇರಲಿಲ್ಲ ಎಂದಿದ್ದಾರೆ.
ಅತಿರೇಕದ ಅಭಿಮಾನ
ಅಲ್ಲಿಗೆ ಒಂದು ಜೋಡಿ ಬಿಗ್ಬಾಸ್ನಲ್ಲೋ ಅಥವಾ ಸೀರಿಯಲ್ಗಳಲ್ಲಿಯೋ ಹಿಟ್ ಆದರೆ ನೀವು ಮದುವೆಯಾಗಬೇಕು ಎಂದು ಅತಿರೇಕದಿಂದ ಅಭಿಮಾನಿಗಳು ವರ್ತಿಸುವುದು ಒಂದು ಲೈಫ್ ಅನ್ನು ಯಾವ ಮಟ್ಟಿಗೆ ಕೊಂಡೊಯ್ಯಬಹುದು ಎನ್ನುವುದಕ್ಕೆ ಈ ಜೋಡಿದ ಲೈಫೇ ಉದಾಹರಣೆಯಾಗಿದೆ.
ಪರಸ್ಪರ ಗೌರವ ಇದೆ
ಅಷ್ಟಕ್ಕೂ ಇವರು ಡಿವೋರ್ಸ್ ಕೊಟ್ಟಿದ್ದು ಕೂಡ ಗೊತ್ತಾಗ್ತಾ ಇರಲಿಲ್ಲ. ಆದರೆ ಫ್ಯಾಮಿಲಿ ಕೋರ್ಟ್ಗೆ ಹೋದಾಗ ಅಲ್ಲಿ ಯಾರೋ ಈ ವಿಷ್ಯ ಲೀಕ್ ಮಾಡಿದ್ದರು. ಇಲ್ಲದಿದ್ದರೆ ಅಷ್ಟು ಗುಟ್ಟಾಗಿ ವಿಚ್ಛೇದನ ಮಾಡಿಕೊಳ್ಳುವ ತಯಾರಿ ನಡೆಸಿತ್ತು ಜೋಡಿ. ಈ ಬಗ್ಗೆ ಮಾತನಾಡಿರುವ ನಿವೇದಿತಾ, ನಮ್ಮಿಬ್ಬರ ನಡುವೆ ಪರಸ್ಪರ ಗೌರವ ಇದೆ. ಬೇರೆಯವರ ಖಾಸಗಿ ಜೀವನದ ಗೌರವಿಸೋ ಕಾರಣಕ್ಕೆ ಡಿವೋರ್ಸ್ ಬಗ್ಗೆ ನಾವು ಮಾತನಾಡಿಲ್ಲ. ಅದು ಅನಗತ್ಯ ಸಹ, ನನ್ನ ಹತ್ತಿರದವರಿಗೆ ಗೊತ್ತಾದರೆ ಸಾಕು, ಎಲ್ಲರಿಗೂ ಗೊತ್ತಾಗುವ ಅಗತ್ಯ ಇಲ್ಲ. ಜನರು ಅವರಿಗೆ ಏನು ಬೇಕೋ ಅದನ್ನು ನಂಬುತ್ತಾರೆ. ಅದು ಅವರಿಗೆ ಬಿಟ್ಟಿದ್ದು, ಎಲ್ಲರನ್ನೂ ಕನ್ವಿನ್ಸ್ ಮಾಡೋಕೆ ಆಗಲ್ಲ ಎಂದಿದ್ದಾರೆ.
ಡಿವೋರ್ಸ್ ಬಗ್ಗೆ ನಾನು ಹೇಳಲ್ಲ
ಡಿವೋರ್ಸ್ ಏಕೆ ಆಯಿತು ಎಂದು ಕಾರಣ ಹೇಳೋಕೆ ನಾನು ಹೋಗುವುದಿಲ್ಲ. ಅದು ನಮ್ಮಿಬ್ಬರ ವೈಯಕ್ತಿಕ ವಿಷಯ. ಆದರೆ ವಿಚ್ಛೇದನದ ಬಳಿಕ ಸಂಬಂಧ ಇಲ್ಲದೋರೆಲ್ಲ ಬಂದು ಏನೇನೋ ಹೇಳೋಕೆ ಶುರು ಮಾಡಿದರು. ಎಲ್ಲದಕ್ಕೂ ಫುಲ್ಸಸ್ಟಾಪ್ ಇಡಬೇಕೆಂದು ನಾವು ಸುದ್ದಿಗೋಷ್ಠಿ ನಡೆಸಿದ್ದೆವು’ ಎಂದೂ ಅಂದು ನಡೆದ ಘಟನೆ ಕುರಿತು ವಿವರಣೆ ನೀಡಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

