- Home
- Entertainment
- TV Talk
- Amruthadhaare Serial: ರವಿಚಂದ್ರನ್ ಸಿನಿಮಾದಂತೆಯೇ ಮಾಡಿದ್ರು..ತಾಯಿಯನ್ನೇ ಹೊರಹಾಕಿದ ಮಗ ಜೆಡಿ ಅಲ್ಲ ಕೇಡಿ!
Amruthadhaare Serial: ರವಿಚಂದ್ರನ್ ಸಿನಿಮಾದಂತೆಯೇ ಮಾಡಿದ್ರು..ತಾಯಿಯನ್ನೇ ಹೊರಹಾಕಿದ ಮಗ ಜೆಡಿ ಅಲ್ಲ ಕೇಡಿ!
Amruthadhaare Kannada Serial Episode Update: ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್ ದಿವಾನ್ ಒಂದು ಕಡೆ ಸಾಮ್ರಾಜ್ಯ ಕಟ್ಟಲು ರೆಡಿಯಾಗುತ್ತಿದ್ದರೆ, ಇನ್ನೊಂದು ಜಯದೇವ್ ದಿವಾನ್ ಅಟ್ಟಹಾಸ ಹೆಚ್ಚಾಗುತ್ತಿದೆ. ಈಗ ರವಿಚಂದ್ರನ್ ಅವರ ಸಿನಿಮಾ ಥರ ಚಿತ್ರಕಥೆ ಮೂಡಿ ಬರುತ್ತಿದೆ. ಏನದು?

ಹೊಸ ಕಂಪೆನಿ ಹುಟ್ಟುಹಾಕಿರೋ ಜಯದೇವ್
ಹೌದು, ಗೌತಮ್ ದಿವಾನ್ ಆಸ್ತಿಯೆಲ್ಲವನ್ನು ಜಯದೇವ್ ಕಬಳಿಸಿಕೊಂಡಿದ್ದಾನೆ. ಇದಕ್ಕೆ ಅವನು ಸಿಕ್ಕಾಪಟ್ಟೆ ಕುತಂತ್ರ ಮಾಡಿದ್ದನು. ಎಲ್ಲ ಆಸ್ತಿಯನ್ನು ಬಿಟ್ಟು ಬಂದಿದ್ದ ಗೌತಮ್, ತನ್ನ ಪ್ರತಿಭೆಯಿಂದ ಹೊಸ ಕಂಪೆನಿ ಹುಟ್ಟುಹಾಕಿ, ಅವನ ಜೀವನವನ್ನು ನಡೆಸುತ್ತಿದ್ದಾನೆ. ಆದರೂ ಜಯದೇವ್ ಸುಮ್ಮನೆ ಕೂತಿಲ್ಲ, ಏನಾದರೊಂದು ತೊಂದರೆ ಮಾಡುತ್ತಿದ್ದಾನೆ.
ಶಕುಂತಲಾಗೆ ಇದೇ ಗತಿ ಆಗಬೇಕು
ಶಕುಂತಲಾಗೆ ಜೂಜಿನ ಹುಚ್ಚು. ಈ ಹಿಂದೆಯೂ ಅವಳು ಜೂಜು ಆಡಿ ಹಣ ಕಳೆದುಕೊಂಡಿದ್ದಳು. ಈಗ ಮೂರು ಕೋಟಿ ರೂಪಾಯಿ ಕಳೆದುಕೊಂಡಿದ್ದು, ಜೆಡಿ ಬಳಿ ಬಂದು ಮೂರು ಕೋಟಿ ರೂಪಾಯಿ ಚೆಕ್‌ಗೆ ಸಹಿ ಹಾಕು ಎಂದು ಹೇಳಿದ್ದಾಳೆ. ಮೂರು ಕೋಟಿಯನ್ನು ಮೂರು ಸಾವಿರ ಅಂತ ಹೇಳ್ತೀಯಲ್ಲ.. ಎಂದು ಜೆಡಿ ಅವಾಜ್ ಹಾಕಿದ್ದಾನೆ, ಆಗ ಅವಳು ನಿನಗೂ ಗೌತಮ್‌ಗೂ ಎಷ್ಟು ವ್ಯತ್ಯಾಸ ನೋಡು, ಮೂರು ಕೋಟಿಯನ್ನು ಮೂರು ಸಾವಿರ ಅಂತಿದ್ಯಲಾ ಎಂದು ಹೇಳಿದ್ದಾನೆ. ನನ್ನ ಮುಂದೆ ನನ್ನ ಶತ್ರುವನ್ನು ಹೊಗಳಿದ ಎಂದು ಅವನು ತಾಯಿಯ ಜುಟ್ಟು ಹಿಡದು ಮನೆಯಿಂದ ಹೊರಗಡೆ ಹಾಕಿದ್ದಾನೆ.
ಇದು ಅಣ್ಣಯ್ಯ ಸಿನಿಮಾ ಕಥೆ ಅಲ್ವೇ?
ರವಿಚಂದ್ರನ್ ಹಾಗೂ ಮಧು ಅವರ ಅಣ್ಣಯ್ಯ ಸಿನಿಮಾದಲ್ಲಿ ಕೂಡ ಮಲತಾಯಿ ಆರಂಭದಿಂದ ಕೊನೇವರೆಗೂ ಮಲಮಗನ ಮುಂದೆ ನಾಟಕ ಮಾಡುತ್ತಾಳೆ. ಆಮೇಲೆ ಅವನ ಆಸ್ತಿಯನ್ನು ಕಬಳಿಸುತ್ತಾಳೆ. ಕೊನೆಗೆ ಅವಳು ಜನ್ಮ ಕೊಟ್ಟ ಮಗನೇ ಅವಳಿಗೆ ತೊಂದರೆ ಕೊಡ್ತಾನೆ, ಮನೆಯಿಂದ ಹೊರ ಹಾಕ್ತಾನೆ. ಇದೇ ಚಿತ್ರಕಥೆ ಇಲ್ಲಿಯೂ ಪ್ರಸಾರ ಆಗ್ತಿದೆ.
ಶಕುಂತಲಾಗೆ ಯಾರು ಗತಿ?
ಮೂರು ಕೋಟಿ ರೂಪಾಯಿ ಕಳೆದುಕೊಂಡ ಶಕುಂತಲಾಗೆ ಈಗ ಅಷ್ಟೊಂದು ಹಣವನ್ನು ಯಾರು ಕೊಡ್ತಾರೆ? ಎಲ್ಲ ಆಸ್ತಿಯೂ ಈಗ ಜೆಡಿ ಹೆಸರಿನಲ್ಲಿದೆ. ಹೀಗಾಗಿ ಅವಳು ಗತಿ ಇಲ್ಲದೆ ಗೌತಮ್ ಮನೆಗೆ ಹೋಗಬೇಕು, ಗೌತಮ್ ಈಗ ಅವಳನ್ನು ನೋಡಿಕೊಳ್ಳಬಹುದು.
ತಾನು ಜನ್ಮ ಕೊಟ್ಟ ಮಗನಿಗಿಂತ ಜಾಸ್ತಿ, ಮಲಮಗನೇ ನನ್ನ ಮಗನ ಥರ ಇದ್ದಾನೆ, ಅವನು ಹಾಗೆ ಬದುಕಿದ ಎಂದು ಶಕುಂತಲಾಗೆ ಜ್ಞಾನೋದಯ ಆಗಲೂಬಹುದು. ಒಟ್ಟಿನಲ್ಲಿ ಮುಂಬರುವ ಎಪಿಸೋಡ್‌ಗಳು ಭಾರೀ ಕುತೂಹಲದಿಂದ ಕೂಡಿವೆ.
ಮುಂದೆ ಏನಾಗಬಹುದು?
ದಿವಾನ್ ಕಂಪೆನಿ ಹೆಸರು ಗೌತಮ್ ಹೆಸರಿನಲ್ಲಿ ರಿಜಿಸ್ಟರ್ ಆಗಿದೆ. ಇದು ಜೆಡಿಗೆ ತೊಂದರೆ ಕೊಟ್ಟಿದೆ. ಇನ್ನೊಂದು ಕಡೆ ಅನೈತಿಕ, ಕಾನೂನು ಬಾಹಿರವಾಗಿ ಅವನು ಉದ್ಯಮ ಮಾಡುತ್ತಿದ್ದಾನೆ. ಇದು ಅವನಿಗೆ ತೊಂದರೆ ಕೊಡಲಿದೆ. ಈಗಾಗಲೇ ಜಯದೇವ್ ಅಧಪತನ ಶುರುವಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

