- Home
- Entertainment
- TV Talk
- Amruthadhaare Serial: ಮತ್ತೆ ಭೂಮಿಕಾ ಪ್ರಗ್ನೆಂಟ್; ಮಗಳಿಂದಲೇ ಗೌತಮ್ ದಿವಾನ್‌ಗೆ ಅಪಾಯ; ಸುಳಿವು ಸಿಕ್ತು
Amruthadhaare Serial: ಮತ್ತೆ ಭೂಮಿಕಾ ಪ್ರಗ್ನೆಂಟ್; ಮಗಳಿಂದಲೇ ಗೌತಮ್ ದಿವಾನ್‌ಗೆ ಅಪಾಯ; ಸುಳಿವು ಸಿಕ್ತು
Zee Kannada Amruthadhaare Serial: ಅಮೃತಧಾರೆ ಧಾರಾವಾಹಿಯಲ್ಲಿ ಜಯದೇವ್ ಮಾಡಿದ ಸಾಲದಿಂದ ದಿವಾನ್ ಸಾಮ್ರಾಜ್ಯವನ್ನು ಹರಾಜಿಗೆ ಹಾಕಲಾಯ್ತು. ಆ ಬಳಿಕ ಅರಸನಕೋಟೆಯ ಅಖಿಲಾಂಡೇಶ್ವರಿ ಸಹಾಯ ಪಡೆದು ಅವನು ಎಲ್ಲ ಆಸ್ತಿಯನ್ನು ಮರಳಿ ಪಡೆದನು. ಈಗ ಹಳೆ ಮನೆಗೆ ಹೋಗಲು ರೆಡಿ ಆಗಿದ್ದಾನೆ. ಆದರೆ ಅಪಾಯ ಶುರು.

ಹಳೆ ಮನೆಗೆ ಹೋಗ್ತಾರೆ
ಹೌದು, ದಿವಾನ್ ಸಾಮ್ರಾಜ್ಯವನ್ನು ಅವನು ಮರಳಿ ಪಡೆದಿದ್ದಾನೆ. ಆ ಮನೆಯಲ್ಲಿ ನೂರಾರು ನೆನಪಿದೆ. ಈಗ ಇಡೀ ಕುಟುಂಬ ಒಳ್ಳೆಯ ಮುಹೂರ್ತ ನೋಡಿಕೊಂಡು ಆ ಮನೆಗೆ ಕಾಲಿಡಲು ರೆಡಿ ಆಗಿದ್ದಾರೆ. ಅಲ್ಲೇ ಸಮಸ್ಯೆ ಶುರುವಾಗಿದೆ.
ಪೂಜೆ ಮಾಡ್ತಾರಂತೆ
ಬೇರೆ ಬೇರೆ ಪೂಜೆ ಮಾಡಿಕೊಂಡು ಅವರು ಆ ಮನೆಗೆ ಹೋಗಲು ರೆಡಿ ಆಗಿದ್ದಾರೆ. ಆದರೆ ಮತ್ತೊಂದು ಅಪಾಯದ ಸೂಚನೆ ಸಿಕ್ಕಿದೆ. ಇದು ಗೌತಮ್‌ಗೆ ಬೇಸರ ಮೂಡಿಸಿದೆ.
ಮತ್ತೊಂದು ಮಗು ಆಗಲಿದ್ಯಂತೆ
ಜ್ಯೋತಿಷಿ ಮಾತ್ರ ಗೌತಮ್ ದಿವಾನ್ ಜಾತಕ ನೋಡಿ, ಇನ್ನೊಂದು ಮಗು ಆಗುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. ಇದನ್ನು ಕೇಳಿ ಭಾಗ್ಯ ಮಾತ್ರ ಫುಲ್ ಖುಷಿ ಆಗಿದ್ದಾಳೆ. ಆದರೆ ಗೌತಮ್ ಮಾತ್ರ ಮಗಳನ್ನು ಕಳೆದುಕೊಂಡ ಬೇಸರದಲ್ಲಿದ್ದಾನೆ. ಜಯದೇವ್‌ನಿಂದ ಕಳೆದ ಹೋದ ಮಗಳು ಇನ್ನೂ ಸಿಕ್ಕಿಲ್ಲ. ಇನ್ನೂ ಅವನು ದುಃಖದಲ್ಲಿದ್ದಾನೆ.
ಮಗಳಿಂದಲೇ ಅಪಾಯ
ಗೌತಮ್‌ಗೆ ಜನಿಸಿದ ಮಗಳಿಂದಲೇ ಅಪಾಯ ಇದೆ ಎಂದು ಜ್ಯೋತಿಷಿ ಹೇಳಿದ್ದಾರೆ. ಈ ಮಾತು ಕೇಳಿ ಗೌತಮ್ ಕೂಡ ವಿಚಲಿತನಾಗಿದ್ದಾನೆ, ಇನ್ನೊಂದು ಕಡೆ ಭೂಮಿಕಾ ಕೂಡ ಭಯಪಟ್ಟಿದ್ದಾಳೆ. ಈಗಾಗಲೇ ಹುಟ್ಟಿರುವ ಮಗಳಿಂದ ಅಪಾಯ ಇದೆಯೋ ಅಥವಾ ಇನ್ನು ಮುಂದೆ ಹುಟ್ಟಲಿರುವ ಮಗುವಿಂದ ಅಪಾಯ ಇದೆಯೋ ಗೊತ್ತಿಲ್ಲ.
ಏನಾಗಬಹುದು?
ಈಗಾಗಲೇ ಹುಟ್ಟಿರುವ ಮಗಳು ಯಾರು ಎಂದು ಗೌತಮ್ ಹುಡುಕಾಟ ಮಾಡ್ತಿಲ್ಲ, ಬೇರೆ ಚಿಂತೆಯ ಮಧ್ಯೆ ಅವನು ಈ ವಿಷಯವನ್ನು ಮರೆತುಬಿಟ್ಟಿದ್ದಾನೆ. ಇನ್ನೊಂದು ಕಡೆ ಜಯದೇವ್ ಕೂಡ ಸುಮ್ಮನೆ ಇರೋದಿಲ್ಲ, ಇನ್ನೊಂದೇನಾದರೂ ಪ್ಲ್ಯಾನ್ ಮಾಡಲೂಬಹುದು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

