- Home
- Entertainment
- TV Talk
- Amruthadhaare: ಪ್ಲೀಸ್ ಪೊಲೀಸ್ರೇ ಸೀರಿಯಲ್ ನೋಡಿ, ಜೈದೇವ್ನ ಬಿಟ್ಟುಬಿಡಿ: ಗೋಳಾಡ್ತಿದ್ದಾರೆ ಜೈ ಫ್ಯಾನ್ಸ್
Amruthadhaare: ಪ್ಲೀಸ್ ಪೊಲೀಸ್ರೇ ಸೀರಿಯಲ್ ನೋಡಿ, ಜೈದೇವ್ನ ಬಿಟ್ಟುಬಿಡಿ: ಗೋಳಾಡ್ತಿದ್ದಾರೆ ಜೈ ಫ್ಯಾನ್ಸ್
ಅಮೃತಧಾರೆ ಸೀರಿಯಲ್‌ನಲ್ಲಿ ದಿಯಾಳಿಂದಾಗಿ ಜೈಲು ಪಾಲಾದ ಜೈದೇವ್, ಸಹಾಯಕ್ಕಾಗಿ ತನ್ನ ತಾಯಿ ಶಕುಂತಲಾಗೆ ಕರೆ ಮಾಡುತ್ತಾನೆ. ಆದರೆ, ಮಗನಿಂದಾದ ಅವಮಾನವನ್ನು ನೆನೆದು ಶಕುಂತಲಾ, ಅವನು ಯಾರೆಂದು ನನಗೆ ಗೊತ್ತಿಲ್ಲ ಎಂದು ಹೇಳಿ ಪೊಲೀಸರಿಗೆ ಅವನನ್ನು ಥಳಿಸಲು ಹೇಳುತ್ತಾಳೆ.

ಜೈದೇವ್ ಸ್ಥಿತಿ ದೇವರಿಗೇ ಪ್ರೀತಿ
ಅಮೃತಧಾರೆ (Amruthadhaare Serial) ಸದ್ಯ ಜೈದೇವನ ಸ್ಥಿತಿ ಯಾರಿಂದಲೂ ನೋಡಲು ಆಗುತ್ತಿಲ್ಲ. ಅದರಲ್ಲಿಯೂ ಅವರ ಫ್ಯಾನ್ಸ್ ಅಂತೂ ಪ್ಲೀಸ್ ಹಾಗೆ ಮಾಡಬೇಡಿ, ಬಿಟ್ಟುಬಿಡಿ ಅವರನ್ನು ಎನ್ನುತ್ತಿದ್ದಾರೆ. ಏಕೆಂದರೆ ಅಂಥ ಸ್ಥಿತಿ ಜೈದೇವ್‌ಗೆ ಬಂದಿದೆ.
ಬುದ್ಧಿ ಕಲಿಸಿದ ದಿಯಾ
ಬೇಬಿ ಬೇಬಿ ಎಂದು ದಿಯಾಳ ಹಿಂದೆ ತಿರುಗುತ್ತಿದ್ದ ಜೈದೇವ್‌ಗೆ ಆಕೆ ಸರಿಯಾದ ಬುದ್ಧಿ ಕಲಿಸಿ ಪೊಲೀಸರನ್ನು ಕರೆಸಿದ್ದಾಳೆ. ಅವನು ಜೈಲುಪಾಲಾಗಿದ್ದಾನೆ.
ಶಕುಂತಲಾಗೆ ಕಾಲ್
ಹೇಗಾದರೂ ಜೈಲಿನಿಂದ ತಪ್ಪಿಸಿಕೊಳ್ಳಲು ನಾನು ಜೈದೇವ್ ದಿವಾನ್. ಬೇಕಿದ್ದರೆ ನನ್ನ ಅಮ್ಮನಿಗೆ ಕಾಲ್ ಮಾಡಿ ಎಂದು ಹೇಳಿದ್ದಾನೆ ಜೈದೇವ. ಪೊಲೀಸರು ಶಕುಂತಲಗೆ ಕಾಲ್ ಮಾಡಿದಾಗ ಫೋನ್ ಕಸಿದುಕೊಂಡ ಜೈದೇವ್, ಅಮ್ಮಾ ಪ್ಲೀಸ್ ನೀನು ನನ್ನ ಅಮ್ಮ ಎಂದು ಹೇಳು. ಇಲ್ಲಿ ಸಿಕ್ಕಾಪಟ್ಟೆ ತೊಂದರೆ ಕೊಡುತ್ತಿದ್ದಾರೆ ಎಂದಿದ್ದಾನೆ.
ಯಾರೋ ಗೊತ್ತಿಲ್ಲ ಎಂದ ಅಮ್ಮ
ಆದರೆ, ತನ್ನನ್ನು ಬೀದಿಗೆ ತಂದು ಬಾಯಿಗೆ ಬಂದ ಹಾಗೆ ಬಯ್ದಿರೋ ಮಗನ ಎಲ್ಲಾ ಸೀನ್ ನೆನಪಿಸಿಕೊಂಡ ಶಕುಂತಲಾ ಪೊಲೀಸರ ಬಳಿ, ಅವನು ಯಾರೆಂದೇ ನನಗೆ ಗೊತ್ತಿಲ್ಲ, ಚೆನ್ನಾಗಿ ರುಬ್ಬಿ ಎಂದಿದ್ದಾಳೆ.
ಸೀರಿಯಲ್ ನೋಡಿ ಪ್ಲೀಸ್
ಇಷ್ಟು ಹೇಳುತ್ತಿದ್ದಂತೆಯೇ ಪೊಲೀಸರು ಜೈದೇವನ ಅಂಗಿ ಎಲ್ಲಾ ಬಿಚ್ಚಿಸಿ ಚೆನ್ನಾಗಿ ಬಾರಿಸಿದ್ದಾರೆ. ಮೈಯೆಲ್ಲಾ ಬರೆ ಬಂದಿದೆ. ಇದನ್ನು ನೋಡಿದ ಜೈದೇವ್ ಫ್ಯಾನ್ಸ್ ತುಂಬಾ ನೊಂದುಕೊಳ್ಳುತ್ತಿದ್ದಾರೆ. ಪ್ಲೀಸ್ ಹಾಗೆಲ್ಲಾ ಮಾಡಬೇಡಿ. ಸೀರಿಯಲ್ ನೋಡಿ, ಅವನೇ ಶಕುಂತಲಾ ಮಗ ಎನ್ನುತ್ತಿದ್ದಾರೆ.
ನೆಕ್ಟ್ ಲೆವೆಲ್ ಆ್ಯಕ್ಟಿಂಗ್
ಜೈದೇವ್ ಉರ್ಫ್ ನಟ ರಾಣವ್ ಗೌಡ ಅವರ ಆ್ಯಕ್ಟಿಂಗ್ ನೆಕ್ಟ್ ಲೆವೆಲ್ ಎಂದು ಹಲವರು ಶ್ಲಾಘಿಸುತ್ತಿದ್ದಾರೆ. ಇವರು ವಿಲನ್ ಅಲ್ಲ, ಹೀರೋ ಆಗಿ ಮಿಂಚಬೇಕು ಎನ್ನುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

