- Home
- Entertainment
- TV Talk
- Amruthadhaare: ಅಖಿಲಾಂಡೇಶ್ವರಿ ಹುಡುಕುವ ಮಗಳೇ ಗೌತಮ್‌ಗೆ ಕಂಟಕ ಆಗ್ತಾಳಾ? ಜೈದೇವ್ ಮಾಸ್ಟರ್ ಪ್ಲ್ಯಾನ್ ಏನು
Amruthadhaare: ಅಖಿಲಾಂಡೇಶ್ವರಿ ಹುಡುಕುವ ಮಗಳೇ ಗೌತಮ್‌ಗೆ ಕಂಟಕ ಆಗ್ತಾಳಾ? ಜೈದೇವ್ ಮಾಸ್ಟರ್ ಪ್ಲ್ಯಾನ್ ಏನು
ಅಮೃತಧಾರೆ ಧಾರಾವಾಹಿಯಲ್ಲಿ ಜೈದೇವ್, ಶಕುನಿ ಮಾಮನ ಸಹಾಯದಿಂದ ಜೈಲಿನಿಂದ ಬಿಡುಗಡೆಯಾಗಿದ್ದಾನೆ. ಗೌತಮ್ ಜೀವಕ್ಕೆ ಸ್ವಂತ ಮಗಳಿಂದಲೇ ಅಪಾಯವಿದೆ ಎಂಬ ಜ್ಯೋತಿಷಿಗಳ ಭವಿಷ್ಯದಂತೆ, ಜೈದೇವ್ ಗೌತಮ್-ಭೂಮಿಕಾರ ಕಾಣೆಯಾದ ಮಗಳನ್ನು ಹುಡುಕಿ, ಆಕೆಯ ಮೂಲಕವೇ ಗೌತಮ್‌ಗೆ ಕಂಟಕ ತರುವ ಸಾಧ್ಯತೆ ದಟ್ಟವಾಗಿದೆ.

ಜೈದೇವ್ಗೆ ಜೈಲಿನ ಸಹವಾಸ
ಅಮೃತಧಾರೆ ಸೀರಿಯಲ್ (Amruthadhaare Serial) ಸದ್ಯ ರೋಚಕ ಹಂತ ತಲುಪಿದೆ. ಜೈದೇವ ಜೈಲುಪಾಲಾಗಿದ್ದಾನೆ. ಜೈಲಲ್ಲಿ ಆತನಿಗೆ ಎಲ್ಲಾ ಬಗೆಯ ಶಿಕ್ಷೆಯನ್ನು ಇದಾಗಲೇ ಪೊಲೀಸರು ನೀಡಿಯಾಗಿದೆ. ಏಳೇಳು ಜನ್ಮಕ್ಕಾಗುವಷ್ಟು ಟಾರ್ಚರ್ ಜೈಯಲ್ಲಿ ಅನುಭವಿಸಿದ್ದಾನೆ ಜೈದೇವ್.

ಬಂದೇ ಬಿಟ್ಟ ಶಕುನಿ ಮಾಮಾ
ಇದೇ ಹೊತ್ತಿನಲ್ಲಿ ಕುತೂಹಲ ಎನ್ನುವಂತೆ ಶಕುನಿ ಮಾಮಾ ಜೈದೇವನ ರಕ್ಷಣೆಗೆ ಬಂದಿದ್ದಾನೆ. ಅವನನ್ನು ಜೈಲಿನಿಂದ ಬಿಡಿಸಿಕೊಂಡು ಹೋಗಲು ಬಂದಾಗ, ನಿಮ್ಮ ಯಾರ ಸಹವಾಸ ನನಗೆ ಬೇಡ ಎಂದಿದ್ದಾನೆ ಜೈದೇವ್. ಕೊನೆಗೆ ಪೊಲೀಸರು ಧಮ್ಕಿ ಕೊಟ್ಟ ಮೇಲೆ ಹೋಗಲು ಒಪ್ಪಿಕೊಂಡಿದ್ದಾನೆ.
ಶಕುನಿ ಮಾಮಾ ಡಬಲ್ ಗೇಮ್?
ಶಕುನಿ ಮಾಮಾ ಡಬಲ್ ಗೇಮ್ ಆಡ್ತಿದ್ದಾನಾ, ಅಥವಾ ಗೌತಮ್ ಅಣತಿಯಂತೆ ಜೈದೇವನನ್ನು ಬಿಡಿಸಿಕೊಂಡು ಹೋಗಲು ಬಂದಿದ್ದಾನಾ ಎನ್ನುವುದು ಇನ್ನಷ್ಟೇ ತಿಳಿಯಬೇಕಿದೆ. ಆದರೆ ಜೈಲಿನಿಂದ ಬಿಡುಗಡೆ ಹೊಂದುವ ಜೈದೇವ ಅಂತೂ ಸುಮ್ಮನೇ ಇರಲ್ಲ. ಅದು ಹುಟ್ಟುಗುಣ, ಎಲ್ಲಿ ಬಿಡುತ್ತಾನೆ ಹೇಳಿ.
ಜ್ಯೋತಿಷಿಗಳ ಮಾತು
ಇದಾಗಲೇ ಹೆತ್ತ ಮಗಳಿಂದ ಗೌತಮ್ ಜೀವಕ್ಕೆ ಅಪಾಯ ಇದೆ ಎಂದು ಜ್ಯೋತಿಷಿಗಳು ಹೇಳಿಯಾಗಿದೆ. ನಿಜ ಜೀವನದಲ್ಲಿ ಜ್ಯೋತಿಷಿಗಳ ಮಾತು ಎಷ್ಟು ನಿಜವಾಗುತ್ತೋ ಬಿಡುತ್ತೋ, ಆದರೆ ಸೀರಿಯಲ್ಗಳಲ್ಲಂತೂ ಅದು ನಿಜವಾಗುತ್ತದೆ. ಅವರ ಪ್ರಕಾರ ಭೂಮಿಕಾ ಮತ್ತೊಮ್ಮೆ ಗರ್ಭಿಣಿಯಾಗುತ್ತಾಳೆ ಎನ್ನುವುದು. ಆದರೆ ಈಗ ಮಿಸ್ ಆಗಿರುವ ಮಗಳೇ ಗೌತಮ್ ಪಾಲಿಗೆ ವಿಲನ್ ಆಗುತ್ತಾಳಾ ಎನ್ನುವುದು ಸಂದೇಹ.
ಅಖಿಲಾಂಡೇಶ್ವರಿ ಜವಾಬ್ದಾರಿ
ಅಖಿಲಾಂಡೇಶ್ವರಿ ಇದಾಗಲೇ ಗೌತಮ್ ಮತ್ತು ಭೂಮಿಕಾಗೆ ಮಗಳನ್ನು ಹುಡುಕಿ ಕೊಡುವ ಜವಾಬ್ದಾರಿ ಹೊತ್ತಿದ್ದಾಳೆ. ತಮ್ಮ ಎನ್ಜಿಒದಿಂದ ಇದನ್ನು ಬಗೆಹರಿಸುವುದಾಗಿ ಹೇಳಿದ್ದಾಳೆ. ಅಲ್ಲಿಗೆ ಗೌತಮ್ ರಿಯಲ್ ಮಗಳು ಸಿಗುವುದು ಪಕ್ಕಾ ಆದಂತಿದೆ.
ಮಗಳಿಗೆ ಕೆಟ್ಟ ಬುದ್ಧಿ ತುಂಬ್ತಾನಾ?
ಒಂದೆಡೆ ಜೈಲಿನಿಂದ ಬಿಡುಗಡೆಯಾದ ಜೈದೇವ್, ಇನ್ನೊಂದು ಗೌತಮ್‌ಗೆ ಮಗಳಿಂದ ಕಂಟಕ ಇವೆರಡೂ ತಾಳೆ ಹಾಕಿನೋಡಿದರೆ, ಗೌತಮ್- ಭೂಮಿಕಾ ರಿಯಲ್ ಮಗಳ ತಲೆಗೆ ಜೈದೇವ್ ಏನೇನೋ ತುಂಬಿ ಅವಳನ್ನು ವಿಲನ್ ಮಾಡುವ ಸಾಧ್ಯತೆ ಇದೆ. ಒಟ್ಟಿನಲ್ಲಿ ಸದ್ಯ ಸೀರಿಯಲ್ ಏನಾಗುತ್ತದೆಯೋ ನೋಡಬೇಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

