- Home
- Entertainment
- TV Talk
- ನಟನೆಗೂ ಸೈ, ರೀಲ್ಸ್ಗೂ ಜೈ... ಅಪ್ಪು ಚಿತ್ರದ ಹಾಡಿಗೆ ಪುಟಾಣಿ ರಾಣಿಯ ಸ್ಟೆಪ್: ಫ್ಯಾನ್ಸ್ ಫಿದಾ
ನಟನೆಗೂ ಸೈ, ರೀಲ್ಸ್ಗೂ ಜೈ... ಅಪ್ಪು ಚಿತ್ರದ ಹಾಡಿಗೆ ಪುಟಾಣಿ ರಾಣಿಯ ಸ್ಟೆಪ್: ಫ್ಯಾನ್ಸ್ ಫಿದಾ
ಕಲರ್ಸ್ ಕನ್ನಡದ 'ರಾಣಿ' ಧಾರಾವಾಹಿ ಮೂಲಕ ಮನೆಮಾತಾಗಿರುವ ಬಾಲನಟಿ ಧನ್ವಿ, ತನ್ನ ಪ್ರಬುದ್ಧ ನಟನೆಯಿಂದ ಗಮನ ಸೆಳೆದಿದ್ದಾಳೆ. ಜೈಲಲ್ಲಿ ಹುಟ್ಟಿದ ಕುಸುಮರಾಣಿ ಪಾತ್ರಕ್ಕೆ ಜೀವ ತುಂಬಿರುವ ಈಕೆ, ಈ ಹಿಂದೆ 'ವಧು' ಧಾರಾವಾಹಿ, ಸಿನಿಮಾಗಳಲ್ಲಿ ನಟಿಸಿ ಜೀ ಪ್ರಶಸ್ತಿಯನ್ನೂ ಪಡೆದಿದ್ದಾಳೆ.

ಜೈಲಲ್ಲಿ ಹುಟ್ಟಿದ ಕುಸುಮ
ರಾಣಿ ಎಂದರೆ ಸಾಕು, ಕಲರ್ಸ್ ಕನ್ನಡ ವೀಕ್ಷಕರಿಗೆ ರಾಣಿ ಸೀರಿಯಲ್ನ ಆ ಮುಗ್ಧ ಮುಖ ಕಣ್ಣೆದುರು ಬರುತ್ತದೆ. ಅಮ್ಮನ ಗರ್ಭದಲ್ಲಿ ಇರುವಾಗಲೇ ಜೈಲು ಸೇರಿದ ಪುಟಾಣಿ ರಾಣಿ, ಜೈಲಿನಲ್ಲಿಯೇ ಹುಟ್ಟಿ ಬೆಳೆದು ಈಗ ಜೈಲಿನ ನಿಮಯದಂತೆ ಹೊರಗಡೆ ಬಂದು ಮಾಮನ ಆಶ್ರಯದಲ್ಲಿ ಇದ್ದಾಳೆ.

ಈ ರಾಣಿಯ ಮುಗ್ಧತೆಗೆ ಫ್ಯಾನ್ಸ್ ಫಿದಾ
ಈ ರಾಣಿಯ ಮುಗ್ಧತೆ, ಆಕೆಯ ಪ್ರಬುದ್ಧತೆ, ಅತ್ತೆಯಿಂದ ಹಾಗೂ ಅವಳ ಮಗಳಿಂದ ಸೇರಿದಂತೆ ಜೈಲಿನಲ್ಲಿ ಇರುವಾಕೆಯ ಮಗಳು ಎನ್ನುವ ಕಾರಣಕ್ಕೆ ಎದುರಾಗುವ ಚುಚ್ಚು ಮಾತುಗಳ ನಡುವೆಯೇ ಅದೇ ನಗುಮೊಗ ಹೊತ್ತು ಎಲ್ಲವನ್ನೂ ನಿಭಾಯಿಸಿಕೊಂಡು ಹೋಗುವ ರಾಣಿ ಪಾತ್ರದಲ್ಲಿ ಮಿಂಚುತ್ತಿರುವ ಪುಟಾಣಿಯ ಹೆಸರು ಧನ್ವಿ.
ಪ್ರಬುದ್ಧ ನಟನೆ
ಅಳು, ನಗು, ಭಾವುಕ ಸನ್ನಿವೇಶ ಎಲ್ಲದಕ್ಕೂ ಈ ಬಾಲಕಿಯದ್ದು ಎತ್ತಿದ ಕೈ. ರಾಣಿ ಪಾತ್ರಕ್ಕೆ ಹೇಳಿ ಮಾಡಿಸಿದ ನಟನೆ ಈಕೆಯದ್ದು. ಕೆಲವೊಮ್ಮೆ ಇಷ್ಟು ಚಿಕ್ಕ ವಯಸ್ಸಿನಲ್ಲಿ ಇಷ್ಟು ಪ್ರಬುದ್ಧತೆ ಎಲ್ಲಿಂದ ಬರುತ್ತದೆ ಎಂದು ಅಚ್ಚರಿ ಪಡುವಂಥ ನಟನೆ ಮಾಡುತ್ತಿದ್ದಾಳೆ ಬಾಲೆ ಧನ್ವಿ.
ಏನೆಂದು ಹೆಸರಿಡಲಿ ಹಾಡಿಗೆ ರೀಲ್ಸ್
ಸೋಷಿಯಲ್ ಮೀಡಿಯಾದಲ್ಲಿಯೂ ಆ್ಯಕ್ಟೀವ್ ಆಗಿರುವ ಧನ್ವಿ, ಆಗ್ಗಾಗ್ಗೆ ರೀಲ್ಸ್ ಮಾಡುತ್ತಿರುತ್ತಾಳೆ. ಇದೀಗ ಬಾಲಕಿ ಪುನೀತ್ ರಾಜ್ ಅವರ ಅಣ್ಣಾ ಬಾಂಡ್ ಚಿತ್ರದ ಏನೆಂದು ಹೆಸರಿಡಲಿ, ಈ ಚಂದ ಅನುಭವಕೆ ಹಾಡಿಗೆ ರೀಲ್ಸ್ ಮಾಡಿದ್ದಾಳೆ. ಇದಕ್ಕೆ ಅಭಿಮಾನಿಗಳು ಶುಭ ಹಾರೈಸುತ್ತಿದ್ದಾರೆ.
ಜೀ ಅವಾರ್ಡ್ ವಿನ್ನರ್
ಅಂದಹಾಗೆ ಧನ್ವಿ, ನಟನೆಗೆ ಬಂದು ಕೆಲವು ವರ್ಷಗಳೇ ಕಳೆದಿವೆ. ಕನ್ನಡದಲ್ಲಿ ಎರಡು ಸಿನಿಮಾ, ಜೀ ತಮಿಳು ವಾಹಿನಿಯಲ್ಲಿ ಧಾರಾವಾಹಿ, ಜೊತೆಗೆ ಜೀ ಅವಾರ್ಡ್ ಕೂಡ ಪಡೆದಿದ್ದಾಳೆ.
ವಧು ಸೀರಿಯಲ್ನಲ್ಲಿಯೂ ನಟನೆ
ಧನ್ವಿ, ಅಲ್ಲಿಂದ ಬಿಗ್ ಬಾಸ್ ಖ್ಯಾತಿಯ ಅಭಿಷೇಕ್ ಶ್ರೀಕಾಂತ್ ನಾಯಕನಾಗಿದ್ದ ‘ವಧು’ ಧಾರಾವಾಹಿಯಲ್ಲಿ ನಟಿಸಿದ್ದಾಳೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

