- Home
- Entertainment
- TV Talk
- Amruthadhaare ಮೂಲಕ ಮನಗೆದ್ದ ಭೂಮಿಕಾ ಪುತ್ರ, ರಿಯಲ್ ಅಪ್ಪನ ಜೊತೆ ಕ್ಯೂಟ್ ಫೋಟೋಶೂಟ್
Amruthadhaare ಮೂಲಕ ಮನಗೆದ್ದ ಭೂಮಿಕಾ ಪುತ್ರ, ರಿಯಲ್ ಅಪ್ಪನ ಜೊತೆ ಕ್ಯೂಟ್ ಫೋಟೋಶೂಟ್
'ಅಮೃತಧಾರೆ' ಸೀರಿಯಲ್‌ನ ಆಕಾಶ್ ಪಾತ್ರಧಾರಿ ದುಷ್ಯಂತ್ ಚಕ್ರವರ್ತಿ, ಅದೇ ಸೀರಿಯಲ್‌ನಲ್ಲಿ ನಟಿಸುತ್ತಿರುವ ಆನಂದ್ ಕುಮಾರ್ ಅವರ ನಿಜವಾದ ಮಗ. ದುಷ್ಯಂತ್ ಈಗಾಗಲೇ 'ಮದಗಜ' ಸಿನಿಮಾ, 'ನನ್ನಮ್ಮ ಸೂಪರ್‌ಸ್ಟಾರ್' ರಿಯಾಲಿಟಿ ಶೋ ಮೂಲಕ ಗುರುತಿಸಿಕೊಂಡಿದ್ದಾರೆ ನಟ ಆನಂದ್.

ತರ್ಲೆ ಆಕಾಶ್
ಅಮೃತಧಾರೆ (Amruthadhaare ) ಸೀರಿಯಲ್‌ನಲ್ಲಿ ಗೌತಮ್ ಮತ್ತು ಭೂಮಿಕಾ ಪುತ್ರ ತರ್ಲೆ ಆಕಾಶ್ ಎಲ್ಲರ ಗಮನ ಸೆಳೆಯುತ್ತಿದ್ದಾನೆ. ಅಷ್ಟಕ್ಕೂ ಈಗ ರಿಯಲ್ ಆಗಿ ಇದೇ ಸೀರಿಯಲ್‌ನ ಗೌತಮ್ ಸ್ನೇಹಿತ ಆನಂದ್ ಅವರ ರಿಯಲ್ ಪುತ್ರ ದುಷ್ಯಂತ್ ಚಕ್ರವರ್ತಿ. ಆನಂದ್ ಪಾತ್ರಧಾರಿಯಾಗಿರುವ ನಟನ ಹೆಸರು ರಿಯಲ್ ಆಗಿಯೂ ಆನಂದ್ ಕುಮಾರ್. ಇದೀಗ ರಿಯಲ್ ಅಪ್ಪ-ಮಗ ಕ್ಯೂಟ್ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ.
ಸೂಪರ್‌ಸ್ಟಾರ್ ದುಷ್ಯಂತ್
ಅಷ್ಟಕ್ಕೂ, ದುಷ್ಯಂತ್ ಇದಾಗಲೇ ಸೂಪರ್‌ಸ್ಟಾರ್ ಆಗಿದ್ದಾನೆ. ಇದಾಗಲೇ ಕೆಲವು ಸೀರಿಯಲ್‌ಗಳಲ್ಲಿ ಈತ ನಟಿಸಿದ್ದು, ಈಗಲೂ ನಟನಾ ವೃತ್ತಿ ಮುಂದುವರೆಸಿದ್ದಾನೆ. ಈ ಹಿಂದೆ ದುಷ್ಯಂತ್, ಶ್ರೀಮುರಳಿ ನಟನೆಯ ‘ಮದಗಜ’ ಸಿನಿಮಾದಲ್ಲಿ ಬಾಲನಟನಾಗಿ ದುಷ್ಯಂತ್ ನಟಿಸಿದ್ದ.
ಅಪ್ಪು ಜೊತೆಯೂ ಇದ್ದ ಬಾಲಕ
ಅಷ್ಟೇ ಅಲ್ಲದೆ ಪುನೀತ್ ರಾಜ್‌ಕುಮಾರ್ ನಟನೆಯ ‘ರಾಜಕುಮಾರ’ ಸೆಟ್‌ನಲ್ಲಿ ಅಪ್ಪು ಜೊತೆಗೆ ದುಷ್ಯಂತ್ ಒಂದಷ್ಟು ಸಮಯ ಕಳೆದಿದ್ದ. ಅದು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಸದ್ದು ಮಾಡಿತ್ತು. 'ನನ್ನಮ್ಮ ಸೂಪರ್‌ಸ್ಟಾರ್ ಸೀಸನ್ 3' ರಿಯಾಲಿಟಿ ಶೋನಲ್ಲಿ ದುಷ್ಯಂತ್ ರನ್ನರ್ ಅಪ್ ಸ್ಥಾನ ಗಳಿಸಿದ್ದಾನೆ. ಈಗ ಆತ, ದಿವ್ಯಾ ಉರುಡುಗ, ರಿತ್ವಿಕ್ ಮಠದ್ ನಟನೆಯ ‘ನಿನಗಾಗಿ’ ಧಾರಾವಾಹಿಯಲ್ಲಿ ನಟಿಸುತ್ತಿದ್ದಾನೆ.
ಸಿನಿಮಾದಲ್ಲಿಯೂ ನಟನೆ
ಈ ಹಿಂದೆ ದುಷ್ಯಂತ್, ಶ್ರೀಮುರಳಿ ನಟನೆಯ ‘ಮದಗಜ’ ಸಿನಿಮಾದಲ್ಲಿ ಬಾಲನಟನಾಗಿ ದುಷ್ಯಂತ್ ನಟಿಸಿದ್ದ. ಅಷ್ಟೇ ಅಲ್ಲದೆ ಪುನೀತ್ ರಾಜ್‌ಕುಮಾರ್ (Puneeth Rajkumar) ನಟನೆಯ ‘ರಾಜಕುಮಾರ’ ಸೆಟ್‌ನಲ್ಲಿ ಅಪ್ಪು ಜೊತೆಗೆ ದುಷ್ಯಂತ್ ಒಂದಷ್ಟು ಸಮಯ ಕಳೆದಿದ್ದ. ಅದು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಸದ್ದು ಮಾಡಿತ್ತು. 'ನನ್ನಮ್ಮ ಸೂಪರ್‌ಸ್ಟಾರ್ ಸೀಸನ್ 3' ರಿಯಾಲಿಟಿ ಶೋನಲ್ಲಿ (Nannamma Superstar reality show) ದುಷ್ಯಂತ್ ರನ್ನರ್ ಅಪ್ ಸ್ಥಾನ ಗಳಿಸಿದ್ದಾನೆ.
ಕಿರುತೆರೆಯಲ್ಲಿಯೂ ಫೇಮಸ್
ಈಗ ಆತ, ದಿವ್ಯಾ ಉರುಡುಗ, ರಿತ್ವಿಕ್ ಮಠದ್ ನಟನೆಯ ‘ನಿನಗಾಗಿ’ ಧಾರಾವಾಹಿಯಲ್ಲಿ ನಟಿಸುತ್ತಿದ್ದಾನೆ. ಇವನ ಸಂಭಾಷಣೆ ವೀಕ್ಷಕರಿಗೆ ತುಂಬ ಇಷ್ಟ ಆಗಿದೆ. ಮಕ್ಕಳ ಜೊತೆ ಶೂಟಿಂಗ್ ಮಾಡೋದು ಮತ್ತೊಂದು ಖುಷಿ ಎಂದು ದಿವ್ಯಾ ಉರುಡುಗ, ರಿತ್ವಿಕ್ ಮಠದ್ ಕೂಡ ಈ ಹಿಂದೆ ಹೇಳಿದ್ದರು. ದುಷ್ಯಂತ್ ಇದಾಗಲೇ ಅಪ್ಪ ಆನಂದ್ ಜೊತೆಗೂಡಿ ಹಲವು ರೀಲ್ಸ್‌ಗೆ ಸ್ಟೆಪ್ ಹಾಕಿದ್ದಾನೆ.
ನಟ ಆನಂದ್ ಕುರಿತು...
ಇನ್ನು ನಟ ಆನಂದ್ ಕುರಿತು ಹೇಳುವುದಾದರೆ, ಆನಂದ್ ಅವರು ಪತ್ನಿ ಚೈತ್ರಾ ಜೊತೆಗೆ 'ಜೋಡಿ ನಂ 1 ಸೀಸನ್ 2' ಶೋನಲ್ಲಿ ಭಾಗವಹಿಸಿದ್ದರು. ತೆರೆ ಮೇಲೆ ಎಲ್ಲರನ್ನೂ ಹಾಸ್ಯದ ಕಡಲಿನಲ್ಲಿ ತೇಲಿಸುವ ಅದೆಷ್ಟೋ ನಟರ ಬಾಳಲ್ಲಿ ನೋವಿನ ಸರಮಾಲೆಗಳೇ ಇರುತ್ತವೆ. ಎಷ್ಟೋ ನಟರು ಹಿಂದೊಮ್ಮೆ ತುತ್ತು ಅನ್ನಕ್ಕೂ ಪರದಾಡಿದ್ದು ಇದೆ. ಇನ್ನು ಕೆಲವರು ಬಾಲ್ಯದಿಂದಲೂ ನೋವನ್ನೇ ಹೊತ್ತು ಬಂದಿದ್ದರೆ, ಮತ್ತೆ ಕೆಲವರಿಗೆ ಕಹಿ ಘಟನೆಗಳಿಂದ ಜೀವನ ತತ್ತರಿಸಿ ಹೋಗಿರುವುದೂ ಉಂಟು.
ಏಳು-ಬೀಳುಗಳ ಬದುಕು
ಬಹುತೇಕ ಎಲ್ಲರ ಬಾಳಿನಲ್ಲಿಯೂ ಈ ಏಳು-ಬೀಳುಗಳು ಸಹಜವೇ. ಅದೇ ರೀತಿ ಎಲ್ಲರನ್ನೂ ನಗಿಸುವ ಆನಂದ್ ಅವರ ಜೀವನದಲ್ಲಿಯೂ ಬಹು ದೊಡ್ಡ ಆಘಾತವೇ ನಡೆದಿತ್ತು. ಪತ್ನಿ ಕೊರೋನಾ ಸಂದರ್ಭದಲ್ಲಿ ಸಾವು ಬದುಕಿನ ಬಗ್ಗೆ ಹೋರಾಟ ಮಾಡಿದ್ದರು. ಅದನ್ನು ಆನಂದ್ ಈ ಹಿಂದೆ ನೆನಪಿಸಿಕೊಂಡಿದ್ದರು. ಇದೇ ವೇಳೆ, ನಿಜ ಜೀವನದಲ್ಲಿ ಏಳುಬೀಳು ಕಂಡವರು ಆನಂದ್ ಮತ್ತು ಚೈತ್ರಾ.
ಮಕ್ಕಳಾಗಲ್ಲ ಎನ್ನಲಾಗಿತ್ತು
ಚೈತ್ರಾ ಅವರು ದಪ್ಪ ಇರುವ ಕಾರಣದಿಂದ ಅವರಿಗೆ ಮಕ್ಕಳಾಗುವುದಿಲ್ಲ ಎಂದು ಆನಂದ್ ಅವರ ಮನೆಯವರು ಮದುವೆಗೆ ಒಪ್ಪದಿದ್ದರೆ, ಅವರು ಕಲಾವಿದ ಎಂದು ತಮ್ಮ ಮನೆಯಲ್ಲಿ ಮದುವೆಗೆ ಒಪ್ಪದನ್ನು ನೆನೆದು ಚೈತ್ರಾ ಕಣ್ಣೀರು ಹಾಕಿದ್ದರು. ಅವರಿಗೆ ಈಗ ಕ್ಯೂಟ್ ಮಗ ಹುಟ್ಟಿದ್ದಾನೆ.