- Home
- Entertainment
- TV Talk
- Bigg Boss ಜಾಹ್ನವಿ ಈಗ ರಾಜಕಾರಣಿ: ಜೆಡಿಎಸ್ ಸೇರುತ್ತಲೇ ವಧು ಲುಕ್ನಲ್ಲಿ ಮಿಂಚಿಂಗ್- ವಿಡಿಯೋ ವೈರಲ್
Bigg Boss ಜಾಹ್ನವಿ ಈಗ ರಾಜಕಾರಣಿ: ಜೆಡಿಎಸ್ ಸೇರುತ್ತಲೇ ವಧು ಲುಕ್ನಲ್ಲಿ ಮಿಂಚಿಂಗ್- ವಿಡಿಯೋ ವೈರಲ್
ಬಿಗ್ ಬಾಸ್ ಖ್ಯಾತಿಯ ನಟಿ ಮತ್ತು ನಿರೂಪಕಿ ಜಾಹ್ನವಿ ಇದೀಗ ರಾಜಕೀಯಕ್ಕೆ ಪ್ರವೇಶಿಸಿದ್ದಾರೆ. ಅವರು ಎಚ್.ಡಿ. ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದು, ಈ ಬೆಳವಣಿಗೆಯ ಜೊತೆಗೆ ಅವರ ವಿಡಿಯೋ ವೈರಲ್ ಆಗ್ತಿದೆ.

ಬಿಗ್‌ಬಾಸ್ ಜಾಹ್ನವಿ ಈಗ ರಾಜಕಾರಣಿ
ಖ್ಯಾತ ಆ್ಯಂಕರ್ ಆಗಿಯೂ ನಟಿಯಾಗಿಯೂ ಗುರುತಿಸಿಕೊಂಡಿರೋ ಜಾಹ್ನವಿ (Bigg Boss Jhanvi) ಅವರು ಬಿಗ್‌ಬಾಸ್ 12ಕ್ಕೆ ಹೋಗಿ ಬಂದ ಮೇಲೆ ಬಿಗ್‌ಬಾಸ್ ಜಾಹ್ನವಿಯಾಗಿದ್ದಾರೆ. ಬಿಗ್ಬಾಸ್ನಿಂದ ಬಂದ ಮೇಲೆ ಸಹಜವಾಗಿ ಅವರಿಗೆ ಅಭಿಮಾನಿಗಳ ಸಂಖ್ಯೆ ಹೆಚ್ಚಾಗಿರುವುದರ ಜೊತೆಜೊತೆಗೆನೇ ಒಳ್ಳೆಯ ಆಫರ್ಸ್ಗಳೂ ಬರುತ್ತಿವೆ.

ಜೆಡಿಎಸ್ ಪಕ್ಷಕ್ಕೆ ಸೇರ್ಪಡೆ
ನಟಿ, ನಿರೂಪಕಿಯಾಗಿ ಇಲ್ಲಿಯವರೆಗೆ ಗುರುತಿಸಿಕೊಂಡಿದ್ದ ಜಾಹ್ನವಿ ಇದೀಗ ರಾಜಕಾರಣಿಯಾಗಿದ್ದಾರೆ. ನಿನ್ನೆಯಷ್ಟೇ ಅವರು ಜೆಡಿಎಸ್ ಪಕ್ಷವನ್ನು ಸೇರಿದ್ದಾರೆ. ಎಚ್ಜಿಎಸ್ ನಾಯಕ, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ನಟಿ ಪಕ್ಷವನ್ನು ಸೇರಿದರು.
ಕ್ಯೂಟ್ ವಿಡಿಯೋ ವೈರಲ್
ಇದರ ಬೆನ್ನಲ್ಲೇ ನಟಿಯ ಕ್ಯೂಟ್ ವಿಡಿಯೋ ವೈರಲ್ ಆಗುತ್ತಿದೆ. ಕೆಲವು ದಿನಗಳ ಹಿಂದೆ ಈ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ ಜಾಹ್ನವಿ. ಅದರಲ್ಲಿ ಮದುಮಗಳಂತೆ ಮಿಂಚಿದ್ದಾರೆ ಜಾಹ್ನವಿ.
ಡ್ರೆಸ್ ಸೆನ್ಸ್
ಅಷ್ಟಕ್ಕೂ ಜಾಹ್ನವಿ ಡ್ರೆಸ್ ಸೆನ್ಸ್ಗೆ ಸಕತ್ ಫೇಮಸ್ ಆಗಿದ್ದಾರೆ. ಮನೆಯಲ್ಲಿದ್ದ ಅವಧಿಯಲ್ಲಿ ತಮ್ಮ ಡ್ರೆಸ್ ಹಾಗೂ ಮೇಕಪ್‌ಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದಾಗಿ ಬಹಿರಂಗಪಡಿಸಿದ್ದಾರೆ. ತಮ್ಮ ಬಿಗ್ ಬಾಸ್ ಸಂಭಾವನೆಗಿಂತ ಬಟ್ಟೆಗೆ ಮಾಡಿರೋ ಖರ್ಚು ಹೆಚ್ಚಾಗಿದೆ ಎಂದು ಅವರು ಹೇಳಿದ್ದಾರೆ.
ಜಗಳದಿಂದ ಫೇಮಸ್
ಅಂದಹಾಗೆ ಜಾಹ್ನವಿ ಅವರು ಬಿಗ್ಬಾಸ್ನಲ್ಲಿ ಇದ್ದ ಸಂದರ್ಭದಲ್ಲಿ ಜಗಳದಿಂದಲೇ ಫೇಮಸ್ ಆಗಿದ್ದರು. ಒಂದು ಸ್ಪರ್ಧೆ ಎಂದು ಬಂದಾಗ ಎಲ್ಲವೂ ಅನಿವಾರ್ಯ ಆಗುವ ಕಾರಣದಿಂದ ಅವರು, ಸಹಜವಾಗಿ ಜಗಳ ಮಾಡಿದ್ದರು. ಅವರು ಮನೆಯೊಳಕ್ಕೆ ಇದ್ದಾಗ, ಹೊರಗಡೆಯಲ್ಲಿ ಅವರ ಮಾಜಿ ಪತಿ ನೀಡ್ತಿದ್ದ ಹೇಳಿಕೆಯಿಂದಾಗಿ ಇವರಿಬ್ಬರ ಡಿವೋರ್ಸ್ ವಿಷ್ಯ ವಿವಿಧ ರೂಪಗಳನ್ನು ಪಡೆದಿತ್ತು. ಇದೀಗ ಜಾಹ್ನವಿ ಅವರು ತಮಗೆ 2ನೇ ಮದುವೆಯ ಯೋಚನೆಯೇ ಇಲ್ಲ, ಮಗನೇ ಎಲ್ಲಾ ಎಂದು ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

