- Home
- Entertainment
- TV Talk
- Lakshmi Nivasa Serial: ಲಕ್ಷ್ಮೀ ಪಾತ್ರಕ್ಕೆ ಎಂಟ್ರಿ ಕೊಟ್ಟ ಕನ್ನಡ ಚಿತ್ರರಂಗದ ಖ್ಯಾತ ನಟಿ! ಯಾರದು?
Lakshmi Nivasa Serial: ಲಕ್ಷ್ಮೀ ಪಾತ್ರಕ್ಕೆ ಎಂಟ್ರಿ ಕೊಟ್ಟ ಕನ್ನಡ ಚಿತ್ರರಂಗದ ಖ್ಯಾತ ನಟಿ! ಯಾರದು?
ʼಲಕ್ಷ್ಮೀ ನಿವಾಸʼ ಧಾರಾವಾಹಿಯಲ್ಲಿ ಲಕ್ಷ್ಮೀ ಆಗಿ ನಟಿಸುತ್ತಿದ್ದ ಶ್ವೇತಾ ಅವರು ಸೀರಿಯಲ್‌ನಿಂದ ಹೊರಗಡೆ ಬಂದಿದ್ದಾರೆ. ತಾಯಿಯ ಅನಾರೋಗ್ಯ ಹಾಗೂ ವೈಯಕ್ತಿಕ ಕಾರಣಕ್ಕೆ ಅವರು ಧಾರಾವಾಹಿಯಿಂದ ಹೊರಗಡೆ ಬಂದಿದ್ದಾರೆ. ಹೀಗಾಗಿ ಇವರ ಪಾತ್ರಕ್ಕೆ ಹೊಸ ನಟಿ ಎಂಟ್ರಿ ಕೊಟ್ಟಿದ್ದಾರೆ.
16

Image Credit : shwetha instagram
ಕನ್ನಡದ ಅನೇಕ ಧಾರಾವಾಹಿ, ಸಿನಿಮಾಗಳಲ್ಲಿ ನಟಿಸಿದ್ದ ಮಾಧುರಿ ಈಗ ಲಕ್ಷ್ಮೀ ನಿವಾಸ ಧಾರಾವಾಹಿಗೆ ಲಕ್ಷ್ಮೀಯಾಗಿ ಎಂಟ್ರಿ ಕೊಡುತ್ತಿದ್ದಾರೆ.
26
Image Credit : shwetha instagram
ಹೌದು, ಕನ್ನಡ ಕಿರುತೆರೆಯಲ್ಲಿ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ನಟಿ ಮಾಧುರಿ ಅವರು ಲಕ್ಷ್ಮೀ ಪಾತ್ರದಲ್ಲಿ ನಟಿಸುತ್ತಿರೋದನ್ನು ಈ ಧಾರಾವಾಹಿಯ ನಟಿ ವಿಜಯಲಕ್ಷ್ಮೀ ಅವರೇ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
36
Image Credit : shwetha instagram
ನಟಿ ತಾರಾ, ಸೌಂದರ್ಯ, ಜಯಂತಿ ಹೀಗೆ ದೊಡ್ಡ ಕಲಾವಿದರ ಜೊತೆಗೆ ಕನ್ನಡ ನಟಿ ಮಾಧುರಿ ಅವರು ನಟಿಸಿದ್ದಾರೆ.
46
Image Credit : Instagram
ಅಮೃತವರ್ಷಿಣಿ, ಗೌತಮಿ, ಮಾಂಗಲ್ಯ ಮುಂತಾದ ಧಾರಾವಾಹಿಗಳಲ್ಲಿ ಮಾಧುರಿ ನಟಿಸಿದ್ದರು.
56
Image Credit : our own
ಇಂದು ಆಡಿಷನ್ ಕೊಡಿ ಅಂತ ಹಿರಿಯ ಕಲಾವಿದರಿಗೆ ಅವಮಾನ ಮಾಡ್ತಾರೆ, ಈ ಹಿಂದೆ ಆಡಿಷನ್ ಇರುತ್ತಿರಲಿಲ್ಲ, ಈಗ ಆಡಿಷನ್ ಕೊಡಬೇಕು ಅಂತ ನಟಿ ಮಾಧುರಿ ಅವರು ನಟನೆಯಿಂದ ದೂರ ಇದ್ದರು.
66
Image Credit : Instagram
ನಟಿ ಮಾಧುರಿ ಅವರಿಗೆ ಮೊದಲು ಆಕ್ಷನ್ ಕಟ್ ಹೇಳಿದ್ದೇ ನಟ ಉಪೇಂದ್ರ ಅವರು. ಅಜಾಗಜಾಂತರ ಸಿನಿಮಾದಲ್ಲಿ ಹೀರೋಯಿನ್ ಫ್ರೆಂಡ್ ಆಗಿ ಮಾಧುರಿ ನಟಿಸಿದ್ದರು.
Latest Videos