Amruthadhaare: ಪ್ರೀತಿಯಲ್ಲಿ ಬಿದ್ದ ಗಂಡಸರೇ ಹಾಗೆ ಅಲ್ವಾ? ತಮ್ಮ ಪ್ರೇಯಸಿ ಅಥವಾ ಹೆಂಡ್ತಿಗೆ ಏನೇ ಆದ್ರೂ ತಮ್ಮ ಪ್ರಾಣ ಒತ್ತೆ ಇಟ್ಟಾದ್ರೂ ಅವರನ್ನು ಕಾಪಾಡಿಕೊಳ್ಳುತ್ತಾರೆ. ಈಗ ಅದನ್ನೇ ಮಾಡಿದ್ದಾರೆ ಗೌತಮ್ ದಿವಾನ್. ಕ್ಯಾನ್ಸರ್ ನಿಂದ ಬಳಲುತ್ತಿರುವ ಭೂಮಿಯನ್ನು ಉಳಿಸಿಕೊಳ್ಳಲು ಗೌತಮ್ ಮಾಡಿದ್ದೇನು?

ಭೂಮಿಕಾಗಾಗಿ ತನ್ನ ಪ್ರಾಣ ಒತ್ತೆ ಇಟ್ಟ ಗೌತಮ್ ದಿವಾನ್

‘ಅಮೃತಧಾರೆ’ ಧಾರಾವಾಹಿಯಲ್ಲಿ ಸದ್ಯ ಭೂಮಿಕಾ ತಮ್ಮ ಸ್ತನ ಕ್ಯಾನ್ಸರ್ ಗೆ ಈಗಾಗಲೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೆಂಡ್ತಿ ಮುಂದೆ ತಾನು ಸ್ಟ್ರಾಂಗ್ ಇದ್ದೇನೆ ಎಂದು ತೋರಿಸುತ್ತಾ, ಆಕೆಗೆ ಸ್ಪೂರ್ತಿ ತುಂಬಿ ಚಿಕಿತ್ಸೆ ಪಡೆದುಕೊಳ್ಳುವಂತೆ ಮಾಡಿರುವ ಗೌತಮ್ ದಿವಾನ್, ಪತ್ನಿಗಾಗಿ ಪ್ರಾಣ ಒತ್ತೆ ಇಡಲು ಕೂಡ ರೆಡಿಯಾಗಿದ್ದಾಳೆ. ಈಗ ಮಾಡಿದ್ದು ಅದೇ.

ಪತ್ನಿಯ ಆರೋಗ್ಯಕ್ಕಾಗಿ ಕೆಂಡ ತುಳಿದ ಗೌತಮ್ ದಿವಾನ್

ಗೌತಮ್ ದಿವಾನ್, ಭೂಮಿಕಾ ಬೇಗನೆ ಕ್ಯಾನ್ಸರ್ ನಿಂದ ಮುಕ್ತಿ ಪಡೆಯಬೇಕು ಎಂದು ದೇವಸ್ಥಾನಕ್ಕೆ ಹೋಗಿ ಕೆಂಡ ಸೇವೆ ಮಾಡಿ ಬಂದಿದ್ದಾರೆ. ಭೂಮಿಕಾಗೆ ಗೊತ್ತಾದ್ರೆ ಎಲ್ಲಿ ನೊಂದುಕೊಳ್ಳುತ್ತಾಳೆ ಎಂದು ಆನಂದ್ ಕರೆದ ಎಂದು ಅರ್ಜೆಂಟ್ ಆಗಿ ಚಪ್ಪಲ್ ಕೂಡ ಹಾಕದೇ ವಾಕಿಂಗ್ ಹೋಗಿ ಬಂದಿರುವುದಾಗಿ ಹೇಳಿ, ಭೂಮಿಕಾ ಎದುರು ನಿಲ್ಲದೇ ಕಾಲು ಕುಂಟುತ್ತಾ, ರೂಮಿಗೆ ಹೋಗುತ್ತಾನೆ. ಇನ್ನೊಂದು ಕಡೆ ಆನಂದ್ ನಿಂದ ವಿಷಯ ತಿಳಿದ ಪಾರ್ಥ, ಇದನ್ನು ಮಲ್ಲಿ ಬಳಿ ಹೇಳುವಾಗ, ಭೂಮಿಕಾ ಕೇಳಿ ಶಾಕ್ ಆಗುತ್ತಾಳೆ. ನನಗಾಗಿ ನನ್ನ ಗಂಡ ಇಷ್ಟೊಂದೆಲ್ಲಾ ಕಷ್ಟಗಳನ್ನು ಎದುರಿಸಬೇಕಾಗಿ ಬಂತಲ್ಲ ಎಂದು ಶಾಕ್ ಆಗಿ, ಕಣ್ಣೀರಿಡುತ್ತಾಳೆ ಭೂಮಿಕಾ.

‘Men in Love’ ಅಂದ್ರೆ ಹೀಗೆನೆ ಅಲ್ವಾ

ಗಂಡ-ಹೆಂಡತಿಯರ ಸಂಬಂಧದ ಈ ಭಾವನಾತ್ಮಕ ಕ್ಷಣಗಳನ್ನು ನೋಡಿ ವೀಕ್ಷಕರು ಕಣ್ಣಿರಿಟ್ಟಿದ್ದಾರೆ. ಜೊತೆಗೆ ಕಾಮೆಂಟ್ ಮಾಡಿ ಅತಿಯಾದ ಪ್ರೀತಿ ಒಳ್ಳೇದಲ್ಲ.... ಅತಿಯಾಗದಿದ್ರೆ ಅದು ಪ್ರೀತಿಯೇ ಅಲ್ಲ.., Men in Love ಅಂದ್ರೆ ಇದೇ ಅಲ್ವಾ? ಗೌತಮ್ ಪ್ರೀತಿ ಭೂಮಿಕಾನ ಖಂಡಿತವಾಗಿಯೂ ಕಾಪಾಡುತ್ತದೆ. ಭೂಮಿಕ ಟೀಚರ್, ತನ್ನ ಪ್ರಾಣ ಒತ್ತೆ ಇಟ್ಟು ನಿಮ್ಮನ್ನ ಉಳ್ಸ್ಕೊತಾರೆ ನಮ್ಮ ಗುಂಡು ಸರ್ ಧೈರ್ಯವಾಗಿರಿ, ನಿಮ್ಮ ಪ್ರೀತಿ ಭಾಗ್ಯವಂತರು ಸಿನಿಮಾದ ಅಣ್ಣಾ ವರ ಆಕ್ಟಿಂಗ್ ತರಹ ಇತ್ತು, ನಮ್ಮ ಗುಂಡು ಈ ಹಿಂದೆ ಭೂಮಿ ಜೀವಕ್ಕೆ ಅಪಾಯ ಇದೆ ಅಂದಾಗ ಉರುಳುಸೇವೆ ಮಾಡಿದ್ರು, ಇವಾಗ ಭೂಮಿನಾ ಉಳಿಸಿಕೊಳ್ಳೋಕೆ ಕೆಂಡ ತುಳಿದಿದ್ದಾರೆ ಹೆಂಡತಿ ಗೋಸ್ಕರ ಏನು ಬೇಕಾದರೂ ಮಾಡ್ತಾರೆ ಎನ್ನುತ್ತಾ ಗೌತಮ್ ದಿವಾನ್ ರನ್ನು ಹಾಡಿ ಹೊಗಳಿದ್ದಾರೆ ಜನ.

ಕ್ಯಾನ್ಸರ್ ಗೆದ್ದು ಬರ್ತಾಳ ಭೂಮಿಕಾ?

ಭೂಮಿಕಾಗೆ ಕ್ಯಾನ್ಸರ್ ಫೈನಲ್ ಹಂತದಲ್ಲಿದೆ ಎಂದಿದ್ದಾರೆ. ಆದರೆ ಸರಿಯಾದ ಚಿಕಿತ್ಸೆ ಪಡೆದರೆ ಯಾವುದೂ ಕೂಡ ಅಸಾಧ್ಯ ಅಲ್ಲ ಅಂತಾನೂ ವೈದ್ಯರು ತಿಳಿಸಿದ್ದಾರೆ. ಇದೀಗ ಭೂಮಿಕಾ ಚಿಕಿತ್ಸೆ ಪಡೆಯುತ್ತಿದ್ದು, ಗೌತಮ್ ಭೂಮಿಯ ಬೆನ್ನೆಲುಬಾಗಿ ನಿಂತು, ಆಕೆಗಾಗಿ ಪ್ರಾಣ ಒತ್ತೆ ಇಟ್ಟು ಎಲ್ಲವನ್ನು ಮಾಡಲು ರೆಡಿಯಾಗಿದ್ದಾರೆ. ಹಾಗಾಗಿ ಕೊನೆಗೆ ಭೂಮಿಕಾ ಕ್ಯಾನ್ಸರ್ ಗೆದ್ದು ಬರುತ್ತಾಳೆಯೇ? ಅಥವಾ ಕೊನೆಗೆ ಏನಾಗಲಿದೆ? ಎಂಬುದನ್ನು ಕಾದು ನೋಡಬೇಕು.