MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • ಬೇರೆ ವಾಹಿನಿಯಲ್ಲಿ ನಟಿಸೋದಕ್ಕಾಗಿ ಎರಡೆರಡು ಸೀರಿಯಲ್’ಗಳಲ್ಲಿ ಪ್ರಾಣತ್ಯಾಗ ಮಾಡಿದ್ರ ಈ ನಟ!

ಬೇರೆ ವಾಹಿನಿಯಲ್ಲಿ ನಟಿಸೋದಕ್ಕಾಗಿ ಎರಡೆರಡು ಸೀರಿಯಲ್’ಗಳಲ್ಲಿ ಪ್ರಾಣತ್ಯಾಗ ಮಾಡಿದ್ರ ಈ ನಟ!

Hanumanthe Gowda: ಜೀ ಕನ್ನಡ ಬಿಟ್ಟಾಯ್ತು, ಈಗ ಕಲರ್ಸ್ ಕನ್ನಡ. ಬೇರೆ ವಾಹಿನಿಯಲ್ಲಿ ಅಪ್ಪ ಆಗಿ ನಟಿಸುವುದಕ್ಕಾಗಿಯೇ ಎರಡೆರಡು ಸಲ ಪ್ರಾಣ ತ್ಯಾಗ ಮಾಡಿದ್ರು ಈ ನಟ. ಹಿಂದೆ ಅಮೃತಧಾರೆ, ಈಗ ಭಾರ್ಗವಿ LLB. ಹಾಗಿದ್ರೆ ಮುಂದಿನ ಸೀರಿಯಲ್ ಯಾವುದು?

2 Min read
Author : Pavna Das
Published : Feb 08 2026, 03:33 PM IST
Share this Photo Gallery
  • FB
  • TW
  • Linkdin
  • Whatsapp
16
ಹನುಮಂತೇ ಗೌಡ
Image Credit : social media

ಹನುಮಂತೇ ಗೌಡ

ಹನುಮಂತೇ ಗೌಡ ಎನ್ನುವ ಹೆಸರನ್ನು ಕೇಳಿದ್ರೆ ಹೆಚ್ಚಿನ ಜನಕ್ಕೆ ಗೊತ್ತಾಗಲ್ಲ, ಆದರೆ ಇವರು ನಟಿಸಿದತಹ ಪಾತ್ರಗಳು, ಅದು ಟಿವಿಯೇ ಆಗಿರಲಿ ಅಥವಾ ಸಿನಿಮಾವೇ ಆಗಿರಲಿ, ಎಲ್ಲಾ ಪಾತ್ರಗಳು, ಅವರ ಡೈಲಾಗ್ ಡೆಲಿವರಿ ಎಲ್ಲವೂ ಅದ್ಭುತ, ಆದರೆ ಇವರು ಈಗ ಎಲ್ಲಾ ಧಾರಾವಾಹಿಗಳಲ್ಲೂ ಸಾಯುತ್ತಿದ್ದಾರಲ್ಲ ಯಾಕೆ?

26
ಬೇರೆ ಧಾರಾವಾಹಿಗಾಗಿ ಪ್ರಾಣತ್ಯಾಗ
Image Credit : social media

ಬೇರೆ ಧಾರಾವಾಹಿಗಾಗಿ ಪ್ರಾಣತ್ಯಾಗ

ಅಂದ ಹಾಗೆ ಹನುಮಂತೇ ಗೌಡ ಅಂದ್ರೆ, ‘ಭಾರ್ಗವಿ LLB’ ಧಾರಾವಾಹಿಯಲ್ಲಿ ಭಾರ್ಗವಿಯ ತಂದೆಯ ಪಾತ್ರದಲ್ಲಿ ನಟಿಸುತ್ತಿರುವ ನಟ. ಇವರು ಈ ಹಿಂದೆ ‘ಅಮೃತಧಾರೆ’ ಧಾರಾವಾಹಿಯಲ್ಲಿ ಮಲ್ಲಿಯ ತಂದೆಯಾಗಿಯೂ ನಟಿಸಿದ್ದರು. ಎರಡೂ ಧಾರಾವಾಹಿಗಳಲ್ಲೂ ನೆಗೆಟಿವ್ ಮತ್ತು ಪಾಸಿಟಿವ್ ಎರಡೂ ಪಾತ್ರಗಳ ಮೂಲಕ ಜನರಿಗೆ ಇಷ್ಟವಾಗಿದ್ದರು.

Related Articles

Related image1
ದುಡ್ಡಿಲ್ಲದೇ ಹೂವು ಮಾರ್ತಿದ್ದೆ: ಬಡತನದ ದಿನ ನೆನೆದು ವೇದಿಕೆ ಮೇಲೆ ಬಿಕ್ಕಿಬಿಕ್ಕಿ ಅತ್ತ Bhargavi LLB
Related image2
Mark ಚಿತ್ರದ 'ಮಸ್ತ್​ ಮಲೈಕಾ' ಹಾಡಿಗೆ Bhargavi LLB ಭಾರ್ಗವಿ-ಅರ್ಜುನ್​ ಭರ್ಜರಿ ಸ್ಟೆಪ್​​
36
ಅಮೃತಧಾರೆಯ ವಿಲನ್
Image Credit : social media

ಅಮೃತಧಾರೆಯ ವಿಲನ್

ಜೀ ಕನ್ನಡದಲ್ಲಿ ಅಮೃತಧಾರೆ ಧಾರಾವಾಹಿಯಲ್ಲಿ ವಿಲನ್ ಆಗಿ, ಗೌತಮ್ ದಿವಾನ್ ಜೀವನವನ್ನು ಹಾಳು ಮಾಡಲು ಬಂದು, ಕೊನೆಗೆ ತನ್ನ ಮಗಳು ಮಲ್ಲಿ ಜೀವನವನ್ನೇ ಕೈಯಾರೆ ಹಾಳು ಮಾಡಿಕೊಂಡರು. ಈ ಧಾರಾವಾಹಿಯಲ್ಲಿ ಕೊನೆಗೆ ಒಳ್ಳೆಯವರಾಗಿ ಬದಲಾಗಿ, ಎಲ್ಲವೂ ಒಳ್ಳೆಯದಾಗುತ್ತದೆ ಎನ್ನುವಾಗಲೇ ತಾನೇ ಶೂಟ್ ಮಾಡಿಕೊಂಡು ಜೀವನವನ್ನು ಕೊನೆ ಮಾಡಿದರು. ಅಲ್ಲಿಂದ ಕಲರ್ಸ್ ಕನ್ನಡಕ್ಕೆ ಹಾರಿದರು.

46
ಭಾರ್ಗವಿ LLB ಯಲ್ಲಿ ನಟನೆ
Image Credit : social media

ಭಾರ್ಗವಿ LLB ಯಲ್ಲಿ ನಟನೆ

ಜೀ ಕನ್ನಡದಲ್ಲಿ ಸತ್ತು ಕಲರ್ಸ್ ಕನ್ನಡಕ್ಕೆ ಹಾರಿದ ಹನುಮಂತೇ ಗೌಡ, ಅಲ್ಲಿ ಭಾರ್ಗವಿಯ ತಂದೆ ರವೀಂದ್ರ ಭಟ್ಕಳ್ ಪಾತ್ರದಲ್ಲಿ ನಟಿಸಿದರು. ತನ್ನ ಅಪ್ಪನಿಗೆ ಮೋಸ ಮಾಡಿ, ಅವರು ಲಾಯರ್ ಕೋಟ್ ಹಾಕದಂತೆ ಮಾಡಿದ ಜೆಪಿ ಪಾಟೀಲ್ ವಿರುದ್ಧ ಎದ್ದು ನಿಂತು, ಮತ್ತೆ ಅಪ್ಪ ಲಾಯರ್ ಆಗುವಂತೆ ಮಾಡುತ್ತೇನೆ ಎಂದು ಸವಾಲು ಹಾಕಿದ್ದ ಭಾರ್ಗವಿ, ಅದರಲ್ಲಿ ಗೆದ್ದು ಅಪ್ಪ ಮತ್ತೆ ಕಪ್ಪು ಕೋಟ್ ಧರಿಸಿ ಕೋರ್ಟ್ ಮೆಟ್ಟಿಲೇರುವಂತೆ ಮಾಡುತ್ತಾಳೆ. ಆದರೆ ಕೊನೆಗೆ ಇಲ್ಲೂ ಸಾವು.

56
ಕಲರ್ಸ್ ಕನ್ನಡಲ್ಲೂ ಸಾವು
Image Credit : social media

ಕಲರ್ಸ್ ಕನ್ನಡಲ್ಲೂ ಸಾವು

ಇದೀಗ ಕೋರ್ಟ್ ನಲ್ಲಿ ಜೆ,ಪಿ ಪಾಟೇಲ್ ವಿರುದ್ಧ ಗೆದ್ದ ಭಾರ್ಗವಿ ತಂದೆ ರವೀಂದ್ರ ಭಟ್ಕಳ್, ಯಾರೂ ಊಹಿಸಿರದ ಹೊತ್ತಿನಲ್ಲೆ ಸಾವನ್ನಪ್ಪಿದ್ದಾರೆ. ಆಕ್ಸಿಡೆಂಟ್ ನಲ್ಲಿ ಸಾವಾಗಿದೆ. ಆದರೆ ಈ ಸಾವು ಕೂಡ ಹನುಮಂತೇ ಗೌಡರು ಬೇರೆ ಸೀರಿಯಲ್ ಗೆ ಹಾರುವ ಮುನ್ಸೂಚನೆ ಎನ್ನುತ್ತಿದ್ದಾರೆ ವೀಕ್ಷಕರು. ಅವರು ಸದ್ಯದಲ್ಲೇ ಉದಯ ಟಿವಿಯಲ್ಲಿ ಪ್ರಸಾರವಾಗಲಿರುವ ಹೊಸ ಧಾರಾವಾಹಿಯಲ್ಲಿ ತಂದೆಯ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ ಎನ್ನುವ ಮಾಹಿತಿ ಇದೆ. ಅದಕ್ಕಾಗಿ ಈ ಧಾರಾವಾಹಿಯಲ್ಲಿ ಪ್ರಾಣತ್ಯಾಗ ಮಾಡಿದ್ರ ಹನುಮಂತೇ ಗೌಡರು.

66
ಹನುಮಂತೆ ಗೌಡರ ಕರಿಯರ್
Image Credit : social media

ಹನುಮಂತೆ ಗೌಡರ ಕರಿಯರ್

ತುಮಕೂರಿನ ಚಿಕ್ಕನಾಯಕನಹಳ್ಳಿಯಲ್ಲಿ ಜನಿಸಿದ ಹನುಮಂತೇ ಗೌಡರು, ಕೃಷಿ ಕುಟುಂಬದ ಹಿನ್ನಲೆಯಿಂದ ಬಂದು, ಬೆಂಗಳೂರಿನಲ್ಲಿ ಪದವಿ ಪಡೆಯುವಾಗ ನಾಟಕರಂಗದ ಸಂಪರ್ಕಕ್ಕೆ ಬಂದರು. 1999 ರಲ್ಲಿ `ಚಿತ್ತಾರದ ಬದುಕು' ಎಂಬ ಸೀರಿಯಲ್ ನಿಂದ ಕಿರುತೆರೆ ಪ್ರವೇಶಿಸಿದರು. `ಮುಕ್ತ ಮುಕ್ತ' ಧಾರಾವಾಹಿಯಿಂದ ಜನಪ್ರಿಯತೆ ಪಡೆದರು. 2003 ರಲ್ಲಿ ತೆರೆಕಂಡ `ನಮ್ಮ ಪ್ರೀತಿಯ ರಾಮು' ಚಿತ್ರದಲ್ಲಿ ಖಳನಾಯಕನಾಗಿ ಚಂದನವನಕ್ಕೆ ಎಂಟ್ರಿ ಕೊಟ್ಟು, ಅಲ್ಲಿಂದ ಇಲ್ಲಿವರೆಗೆ ಹಲವಾರು ಸಿನಿಮಾ, ಸೀರಿಯಲ್ ಗಳಲ್ಲಿ ನಟಿಸಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

PD
Pavna Das
ಮೂಲತಃ ಮಂಗಳೂರಿನವಳು. ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ . ಕಳೆದ 12 ವರ್ಷಗಳಿಂದ ಪತ್ರಿಕೆ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಕೆಲಸ . ಸುದ್ದಿ ಬಿಡುಗಡೆ, ಗಲ್ಫ್ ಕನ್ನಡಿಗ, ಈ ಟಿವಿ ಭಾರತ್, ಕನ್ನಡ ನ್ಯೂಸ್ ನೌ, ವಿಜಯಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ. ಈಗ ಏಷ್ಯಾನೆಟ್ ಸುವರ್ಣದಲ್ಲಿ ಫ್ರೀಲಾನ್ಸರ್ . ಮನೋರಂಜನೆ, ಲೈಫ್ ಸ್ಟೈಲ್, ಟ್ರಾವೆಲ್ ಬರವಣಿಗೆ ಇಷ್ಟ.
ಜೀ ಕನ್ನಡ
ಕನ್ನಡ ಧಾರಾವಾಹಿ
ಕನ್ನಡ ಧಾರಾವಾಹಿಗಳ ಟಿಆರ್‌ಪಿ
ಮನರಂಜನಾ ಸುದ್ದಿ

Latest Videos
Recommended Stories
Recommended image1
Bhagyalakshmi Serial: ಅತ್ತು ಕರೆದು, ತಾಂಡವ್ ಕಾಲು ಹಿಡ್ಕೊಂಡ್ರೂ ಇದೇ ಕಾರಣಕ್ಕೆ ಕ್ಷಮಿಸಲ್ಲ ಎಂದ ಭಾಗ್ಯ
Recommended image2
Aadi Lakshmi Purana: ತಾಳಿ ಕಟ್ಟುವಾಗ ಅಪ್ಪಿತಪ್ಪಿ 3 ಗಂಟು ಹಾಕಿಬಿಟ್ರೆ ಎನ್ನೋ ಭಯ ಇತ್ತು: ಆ ಘಟನೆ ನೆನೆದ ನಟಿ
Recommended image3
Karna Serial: ಕುತಂತ್ರಿಗಳ ಅಟ್ಟಹಾಸಕ್ಕೆ ಜಯ; ನಿಧಿ ಬಾಳಿಗೆ ಕೊನೆಗೂ ಕೊಳ್ಳಿ ಇಟ್ಟ ಸಂಜಯ್!‌ ಛೇ...!
Related Stories
Recommended image1
ದುಡ್ಡಿಲ್ಲದೇ ಹೂವು ಮಾರ್ತಿದ್ದೆ: ಬಡತನದ ದಿನ ನೆನೆದು ವೇದಿಕೆ ಮೇಲೆ ಬಿಕ್ಕಿಬಿಕ್ಕಿ ಅತ್ತ Bhargavi LLB
Recommended image2
Mark ಚಿತ್ರದ 'ಮಸ್ತ್​ ಮಲೈಕಾ' ಹಾಡಿಗೆ Bhargavi LLB ಭಾರ್ಗವಿ-ಅರ್ಜುನ್​ ಭರ್ಜರಿ ಸ್ಟೆಪ್​​
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved