Photos: ನೀವೆಷ್ಟೇ ಲಕ್ಷ ಖರ್ಚು ಮಾಡಿದ್ರೂ, ಲಕ್ಷದ್ವೀಪದ ಸೌಂದರ್ಯ ನಿಮಗೆಲ್ಲೂ ಸಿಗದು..
ಪ್ರಧಾನಿ ಟ್ವೀಟ್ ಮಾಡುವವರೆಗೂ ಉತ್ತರ ಭಾರತದ ಮಂದಿಗೆ ಲಕ್ಷದ್ವೀಪ ಎನ್ನುವ ಪ್ರವಾಸಿ ಸ್ವರ್ಗದ ಬಗ್ಗೆ ಗೊತ್ತೇ ಇರಲಿಲ್ಲ. ನಮ್ಮ ಮಂಗಳೂರಿನಿಂದ ಕೇವಲ 380 ಕಿಲೋಮೀಟರ್ ದೂರದಲ್ಲಿರುವ ಲಕ್ಷದ್ವೀಪದ ಸೌಂದರ್ಯ ನೀವೆಷ್ಟೇ ಲಕ್ಷ ಖರ್ಚು ಮಾಡಿದ್ರೂ ಸಿಗೋದಿಲ್ಲ ಅನ್ನೋದಕ್ಕೆ ಸಾಕ್ಷಿ ಎನ್ನುವಂತಿಗೆ ಈ ಚಿತ್ರಗಳು..
ಬಹುಶಃ ಪ್ರಧಾನಿ ನರೇಂದ್ರ ಮೋದಿ ಅವರ ಟ್ವೀಟ್‌ಗಳನ್ನು ನೋಡಿದ ಬಳಿಕ ನೀವು ಲಕ್ಷದ್ವೀಪಕ್ಕೆ ಟ್ರಿಪ್‌ಗೆ ಹೋಗುವ ಪ್ಲ್ಯಾನ್ ಮಾಡುತ್ತಿರಬಹುದು. ಹಾಗಿದ್ದಲ್ಲಿ ನೀವು ಇಲ್ಲಿ ಕೊಟ್ಟಿರುವ ಮಾಹಿತಿಗಳ ಬಗ್ಗೆ ತಪ್ಪದೇ ತಿಳಿದುಕೊಳ್ಳಬೇಕು.
ಶ್ರೀಮಂತಿಕೆಯಲ್ಲಿ ಮಾಲ್ಡೀವ್ಸ್ ಮುನ್ನಡೆದಿರಬಹುದು. ಆದರೆ, ಭಾರತದ ಲಕ್ಷದ್ವೀಪ ಅದಾವುದಕ್ಕೂ ಕಮ್ಮಿ ಇಲ್ಲ ಅನ್ನೋದಕ್ಕೆ ಸಾಕ್ಷಿ ಎನ್ನುವಂತಿದೆ ಈ ಚಿತ್ರಗಳು. ಈಗಾಗಲೇ ಕೇಂದ್ರ ಸರ್ಕಾರದ ಅಭಿವೃದ್ಧಿ ಕಾರ್ಯಗಳು ಆರಂಭವಾಗಿದ್ದು, ಇದನ್ನು ದೇಶದ ಅತಿದೊಡ್ಡ ಪ್ರವಾಸಿ ತಾಣವನ್ನಾಗಿ ಮಾಡುವ ನಿಟ್ಟಿನಲ್ಲಿ ನಿಧಿ ಬಿಡುಗಡೆಯಾಗಿದೆ.
ಇಡೀ ದೇಶದಲ್ಲಿ ಅತ್ಯಂತ ಕಡಿಮೆ ಎಕ್ಸ್‌ಪ್ಲೋರ್ ಮಾಡಲಾಗಿರುವ ದ್ವೀಪ ಪ್ರದೇಶವಿದ್ದರೆ, ಅದು ಲಕ್ಷದ್ವೀಪ ಮಾತ್ರ. ನಗರ ಪ್ರದೇಶಗಳ ಗಿಜಿಗುಡುವ ವಾತಾವರಣದ ನಡುವೆ ಲಕ್ಷದ್ವೀಪದ ನೀಲಿ ನೆರಳ ಸಾಗರಗಳು ಕಣ್ಣಿಗೆ ಆಹ್ಲಾದತೆ ನೀಡುತ್ತದೆ. ಚಿಕ್ಕ ಬೋಟ್‌ನಲ್ಲಿ ಪ್ರಯಾಣಿಸಿ ಸ್ವಲ್ಪವೇ ದೂರ ಸಾಗಿದರೆ, ಕಡಲಿನಾಳದ ಸೌಂದರ್ಯವನ್ನು ಬರಿಗಣ್ಣಿನಲ್ಲೇ ನೋಡಬಹುದು.
ಇನ್ನು ಶ್ರೀಮಂತ ಕಡಲ ಜೀವನವನ್ನು ಇಲ್ಲಿ ಕಣ್ತುಂಬಿಕೊಳ್ಳಬಹುದು. ಸ್ನಾರ್ಕ್ಲಿಂಗ್ ಹಾಗೂ ಸ್ಕೂಬಾ ಡೈವಿಂಗ್‌ಗೆ ಇದು ಹೇಳಿ ಮಾಡಿಸಿದ ಜಾಗ, ವಿವಿಧ ಜಾತಿಯ ಕಡಲಜೀವಿಗಳು, ರೋಮಾಂಚಕ ಹವಳದ ತೋಟಗಳನ್ನು ನೀವು ನೋಡಬಹುದು.
ಲಕ್ಷದ್ವೀಪದ ಶ್ರೀಮಂತ ಸಾಂಸ್ಕೃತಿಕ ವೈವಿಧ್ಯತೆಯೊಳಗೆ ನೀವು ಮುಳುಗಬಹುದು. ಅರೇಬಿಯನ್, ಭಾರತೀಯ ಮತ್ತು ಸ್ಥಳೀಯ ಸಂಸ್ಕೃತಿಗಳ ಪ್ರಭಾವಗಳೊಂದಿಗೆ, ಸ್ಥಳೀಯ ಸಂಪ್ರದಾಯಗಳು, ಸಂಗೀತ ಮತ್ತು ನೃತ್ಯಗಳು ನಿಮ್ಮ ವಿಹಾರಕ್ಕೆ ಇನ್ನೆಲ್ಲೂ ಇಲ್ಲದ ಮೆರುಗು ನೀಡುತ್ತದೆ.
ನಿಸ್ಸಂಶಯವಾಗಿ ಲಕ್ಷದ್ವೀಪದ್ದು ಪರಿಸರ ಸ್ನೇಹಿ ಪ್ರವಾಸೋದ್ಯಮ. ಸ್ಥಳೀಯ ಸರ್ಕಾರ ಕೂಡ ಅದಕ್ಕೆ ಬದ್ಧವಾಗಿದೆ. ಇಲ್ಲಿನ ಎಲ್ಲಾ ದ್ವೀಪಗಳು ಪರಿಸರ ಸ್ನೇಹಿ ಅಭ್ಯಾಸಗಳಿಗೆ ಆದ್ಯತೆ ನೀಡುತ್ತವೆ.
ನಿಸ್ಸಂಶಯವಾಗಿ ಲಕ್ಷದ್ವೀಪದ್ದು ಪರಿಸರ ಸ್ನೇಹಿ ಪ್ರವಾಸೋದ್ಯಮ. ಸ್ಥಳೀಯ ಸರ್ಕಾರ ಕೂಡ ಅದಕ್ಕೆ ಬದ್ಧವಾಗಿದೆ. ಇಲ್ಲಿನ ಎಲ್ಲಾ ದ್ವೀಪಗಳು ಪರಿಸರ ಸ್ನೇಹಿ ಅಭ್ಯಾಸಗಳಿಗೆ ಆದ್ಯತೆ ನೀಡುತ್ತವೆ.
ಲಕ್ಷದ್ವೀಪ ಪ್ರವಾಸದ ವೇಳೆ ನೀವು ಅಗತ್ತಿ ದ್ವೀಪದ ಶುಭ್ರ ಬಿಳಿ ಮರಳಿನ ಮೇಲೆ ಬಿದ್ದು ಹೊರಳದೇ ಇದ್ದರೆ ಮನಸ್ಸಿಗೆ ನೆಮ್ಮದಿ ಇರೋದಿಲ್ಲ. ನೋಡಿದಷ್ಟು ವಿಶಾಲವಾಗಿ ಕಾಣುವ ಅಗತ್ತಿ ದ್ವೀಪದ ಕಡಲತೀರ ನಿಮಗಾಗಿಯೇ ಕಾದಿದ್ದವೇನೋ ಎಂದು ಅನಿಸದೇ ಇದ್ದರೆ ಕೇಳಿ.
ಕವರತ್ತಿಯ ಸಾಂಸ್ಕೃತಿಕ ಕೇಂದ್ರ ಕೂಡ ನಿಮ್ಮ ಗಮನ ಸೆಳೆಯಲಿದೆ. ಇಲ್ಲಿನ ವೈಬ್ರಂಟ್ ಮಾರುಕಟ್ಟೆಗಳು, ಐತಿಹಾಸಿಕ ತಾಣಗಳು ಮತ್ತು ಬೆರಗುಗೊಳಿಸುವ ಉಜ್ರಾ ಮಸೀದಿ ಇಲ್ಲಿ ಹೆಸರುವಾಸಿ.
ಈ ಕವರತ್ತಿ ದ್ವೀಪ ಲಕ್ಷದ್ವೀಪದ ರಾಜಧಾನಿ ಕೂಡ ಹೌದು, ಮೇಲೆ ನೋಡಿರುವ ವಿಮಾನ ನಿಲ್ದಾಣದ ರನ್‌ವೇ ಕೂಡ ಇರೋದು ಇಲ್ಲಿಯೇ. ಇದು ಸಂಪ್ರದಾಯ ಮತ್ತು ಆಧುನಿಕತೆಯ ಪರಿಪೂರ್ಣ ಮಿಶ್ರಣವಾಗಿದೆ.
ಅನ್ವೇಷಣೆ ಮಾಡಲು ಹಲವಾರು ದ್ವೀಪಗಳು ಇರುವ ಕಾರಣ ಪ್ರತಿ ದ್ವೀಪಗಳು ತನ್ನದೇ ಆದ ಮೋಡಿಯಿಂದಾಗಿ ನಿಮ್ಮನ್ನು ಸೆಳೆಯುತ್ತದೆ. ಹೋಪಿಂಗ್ ಅಡ್ವೆಂಚರ್ ಅಂದರೆ, ಸಮುದ್ರಕ್ಕಿಳಿಯುವ ಸಾಹಸಗಳಲ್ಲಿಯೂ ಭಾಗಿಯಾಗಬಹುದು.
ಕಯಾಕಿಂಗ್‌ನಿಂದ ವಿಂಡ್‌ಸರ್ಫಿಂಗ್‌ವರೆಗೆ, ಲಕ್ಷದ್ವೀಪವು ಜಲಕ್ರೀಡೆಗಳ ಸಮೃದ್ಧಿಯನ್ನು ನೀಡುತ್ತದೆ. ಶಾಂತವಾದ ಸಮುದ್ರ ತೀರಗಳು ವಾಟರ್ ಸ್ಪೋರ್ಟ್ಸ್ ಉತ್ಸಾಹಿಗಳನ್ನು ಕೈಬೀಸಿ ಕರೆಯಲಿದೆ.
ಕಣ್ಣೀರಿನ ಆಕಾರದಲ್ಲಿರುವ ಬಂಗಾರಂ ದ್ವೀಪ ಮೋಡಿ ಮಾಡುವಷ್ಟು ಸುಂದರವಾಗಿದೆ. ಅಲೆಗಳ ಶಾಂತ ಶಬ್ದಗಳನ್ನು ಅಲಿಸುತ್ತಾ, ಸಮುದ್ರ ನಿಮಗೆ ಹೇಳುತ್ತಿರುವ ಮಾತುಗಳನ್ನು ಇಲ್ಲಿ ಕೇಳಬಹುದು.
ಹವಳದ ದ್ವೀಪಗಳಿಗೆ ಕ್ರೂಸ್ ಪ್ರಯಾಣ. ಇದು ನಿಮಗೆ ಮಾಲ್ಡೀವ್ಸ್‌ನಲ್ಲಿಯೂ ಸಿಗದ ವಿಶೇಷತೆ. ಲಕ್ಷದ್ವೀಪ ಈಗಾಗಲೇ ನೌಕಾಪಡೆಯ ಪ್ರಮುಖ ಪ್ರದೇಶ. ಆ ಕಾರಣದಿಂದ ಕೇರಳದಿಂದ ಸಾಕಷ್ಟು ಹಡಗುಗಳು ಇಲ್ಲಿಗೆ ಪ್ರಯಾಣ ಮಾಡುತ್ತದೆ. ವಿಹಾರ ನೌಕೆಗಳು ತಿರುಗಾಡುತ್ತದೆ.
ಜಹಾಧೋನಿ ಬೋಟ್ ರೇಸ್ ಕೂಡ ಗಮನಸೆಳೆಯಲಿದೆ. ಮಿನಿಕಾಯ್ ದೋಣಿ ನಿರ್ಮಾಣ ಸಂಪ್ರದಾಯಕ್ಕೆ ಈ ದ್ವೀಪ ಹೆಸರುವಾಸಿಯಾಗಿದೆ. ಜಹಾಧೋನಿ, ವರ್ಣರಂಜಿತ ಮತ್ತು ಸೊಗಸಾದ ದೋಣಿ ಓಟದ ಸ್ಪರ್ಧೆ. ರಾಷ್ಟ್ರೀಯ ಮಿನಿಕಾಯ್ ಫೆಸ್ಟ್ 13 ರ ಭಾಗವಾಗಿ ವಾರ್ಷಿಕ ಜಹಾಧೋನಿ ದೋಣಿ ಓಟವನ್ನು ಸಹ ನಡೆಸಲಾಗುತ್ತದೆ.
ಹಣಕಾಸಿನ ಲೆಕ್ಕಾಚಾರದಲ್ಲಿ ನೋಡುವುದಾದರೆ, ಮಾಲ್ಡೀವ್ಸ್‌ನಲ್ಲಿ ಖರ್ಚು ಮಾಡಿದ್ದಕ್ಕಿಂತ ಐದು ಪಟ್ಟು ಕಡಿಮೆ ಹಣ ಲಕ್ಷದ್ವೀಪ ಟ್ರಿಪ್‌ಗೆ ಖರ್ಚಾಗಲಿದೆ. ಮಾಲ್ಡೀವ್ಸ್‌ನಲ್ಲಿ ಸಿಗುವ ಎಲ್ಲಾ ಐಷಾರಾಮಿ ಅನುಭವಗಳು ನಿಮಗೆ ಇಲ್ಲಿಯೂ ಸಿಗಲಿದೆ.