ಹಿಮಾಲಯ, ಪೆಸಿಫಿಕ್ ಮಹಾಸಾಗರದ ಮೇಲಿಂದ ವಿಮಾನ ಹಾರೋದೇ ಇಲ್ಲ! ಯಾಕ್ ಗೊತ್ತ?
ನಿಮ್ಮಲ್ಲಿ ಅನೇಕರು ವಿಮಾನದಲ್ಲಿ ಪ್ರಯಾಣಿಸುತ್ತೀರಿ, ಆದರೆ ಕೆಲವೇ ಜನರಿಗೆ ತಿಳಿದಿರುವ ಅನೇಕ ವಿಷಯಗಳಿವೆ. ಉದಾಹರಣೆಗೆ, ವಿಮಾನಗಳು ಪೆಸಿಫಿಕ್ ಮಹಾಸಾಗರದ ಮೇಲೆ ಹಾಗೂ ಹಿಮಾಲಯದ ಮೇಲೆ ಹಾರೋದೆ ಇಲ್ಲ. ಯಾಕೆ ಅನ್ನೋದು ಗೊತ್ತಾ?

ನೀವು ಕೂಡ ವಿಮಾನದಲ್ಲಿ ಟ್ರಾವೆಲ್ ಮಾಡುವವರೇ? ಹಾಗಿದ್ರೆ ನಿಮಗೆ ವಿಮಾನದ ಬಗ್ಗೆ ಎಲ್ಲಾನೂ ಗೊತ್ತಿದೆ ಎಂದು ನೀವು ಅಂದುಕೊಂಡಿರಬಹುದು ಅಲ್ವಾ? ಆದರೆ ನಿಮಗೆ ಗೊತ್ತಾ ಪೆಸಿಫಿಕ್ ಮಹಾಸಾಗರದ ಮೇಲೆ ಎಲ್ಲಾ ವಿಮಾನಗಳು ಹಾರೋದಿಲ್ಲ ಎಂದು.
ಹೌದು ಹೆಚ್ಚಿನ ವಿಮಾನಗಳು ಹಿಮಾಲಯ (Himalaya) ಮತ್ತು ಪೆಸಿಫಿಕ್ ಮಹಾಸಾಗರದ ಮೇಲೆ ಹಾರುವುದನ್ನು ತಪ್ಪಿಸುತ್ತವೆ ಏಕೆಂದರೆ ಇವು ಹಾರಾಟಕ್ಕೆ ಸೂಕ್ತವಾದ ಪ್ರದೇಶವೇ ಅಲ್ಲ. ಹಾಗಾಗಿ ಇಲ್ಲಿ ವಿಮಾನ ಹಾರಾಡೋದು ಕೂಡ ಕಡಿಮೆ, ಅಥವಾ ಇಲ್ವೇ ಇಲ್ಲ ಅಂತಾನೆ ಹೇಳಬಹುದು.
Himalayan Mountain
ಹಿಮಾಲಯ ಅಥವಾ ಪೆಸಿಫಿಕ್ ಮಹಾಸಾಗರದ (Pacific Ocean) ಮೇಲೆ ವಿಮಾನಗಳು ಏಕೆ ಹಾರುವುದಿಲ್ಲ ಎಂದು ನಿಮಗೂ ಈಗ ಅನಿಸಿರಬಹುದು ಅಲ್ವಾ? ಇದಕ್ಕೆ ವೈಜ್ಞಾನಿಕವಾದ ಕಾರಣ ಇದೆ. ಅದು ಏನು ಅನ್ನೋದನ್ನು ಇಲ್ಲಿ ತಿಳಿಸಿದ್ದೀವಿ ಮುಂದೆ ಓದಿ.
ಸಾಮಾನ್ಯವಾಗಿ, ಹವಾಮಾನದಲ್ಲಿನ ಬದಲಾವಣೆಗಳು ಅಥವಾ ಇತರ ಯಾವುದೇ ಅಹಿತಕರ ಘಟನೆಗಳನ್ನು ತಪ್ಪಿಸಲು ವಿಮಾನಗಳು 30,000 ಅಡಿ ಎತ್ತರದಲ್ಲಿ ಕಾರ್ಯನಿರ್ವಹಿಸುತ್ತವೆ. ಅಷ್ಟು ಎತ್ತರದಲ್ಲಿ ಸಮಸ್ಯೆಗಳು ಆಗೋದು ತುಂಬಾನೆ ಕಡಿಮೆ.
ವರದಿಯ ಪ್ರಕಾರ, ಹಿಮಾಲಯದ ಎಲ್ಲಾ ಶಿಖರಗಳ ಎತ್ತರವು ಸಾಮಾನ್ಯವಾಗಿ 20,000 ಅಡಿಗಳಿಗಿಂತ ಹೆಚ್ಚಾಗಿದೆ, ಇದರಿಂದಾಗಿ ಅವು ಹಾರಾಟಕ್ಕೆ ಸೂಕ್ತವಲ್ಲ. ಭೂಮಿಯಿಂದ ಸಾಮಾನ್ಯವಾಗಿ 30000 ಅಡಿ ಅಂತರ ಕಾಯುವ ವಿಮಾನವು, ಹಿಮಾಲಯದ ಶಿಖರಗಳ ಹತ್ತಿರದಿಂದ ಹಾರೋದಕ್ಕೆ ಇಷ್ಟ ಪಡೋದಿಲ್ಲ.
ಹಿಮಾಲಯದಲ್ಲಿ ಗಾಳಿಯ ವೇಗವೂ ಅಸಹಜವಾಗಿದೆ ಮತ್ತು ಆಮ್ಲಜನಕವೂ ಕಡಿಮೆಯಾಗಿದೆ, ಆದ್ದರಿಂದ ಪ್ರಯಾಣಿಕರು ಸಹ ಸಮಸ್ಯೆಗಳನ್ನು ಎದುರಿಸಬೇಕಾಗಿ ಬರುತ್ತೆ. ಹವಾಮಾನವೂ ಇಲ್ಲಿ ವೇಗವಾಗಿ ಬದಲಾಗುತ್ತದೆ ಮತ್ತು ಯಾವುದೇ ಸಮಯದಲ್ಲಿ ತುರ್ತು ಪರಿಸ್ಥಿತಿ ಸಂಭವಿಸಬಹುದು.
ಪೆಸಿಫಿಕ್ ಮಹಾಸಾಗರವು ವಿಶಾಲವಾದ ಜಲರಾಶಿಯಾಗಿದ್ದು, ಅದರ ಮೇಲೆ ಹಾರಲು ಹೆಚ್ಚಿನ ಪ್ರಮಾಣದ ಇಂಧನದ ಅಗತ್ಯವಿರುತ್ತದೆ. ಪೆಸಿಫಿಕ್ ಮಹಾಸಾಗರದ ಮೂಲಕ ನೇರವಾಗಿ ಹಾರುವ ಬದಲು, ಹೆಚ್ಚಿನ ವಾಣಿಜ್ಯ ವಿಮಾನಗಳು ವೈಂಡಿಂಗ್ ಮಾರ್ಗವನ್ನು ತೆಗೆದುಕೊಳ್ಳುತ್ತವೆ, ಇದರಿಂದ ಬೇಗನೆ ತಲುಪುವ ಮಾರ್ಗವನ್ನು ಕ್ರಮಿಸಬಹುದು.
ಮತ್ತೊಂದು ಕಾರಣವೆಂದರೆ ವಿಮಾನಗಳು ಯಾವಾಗಲೂ ಸಮತಟ್ಟಾದ ಮೇಲ್ಮೈಗಳಲ್ಲಿ ತುರ್ತು ಲ್ಯಾಂಡಿಂಗ್ ಮಾಡುತ್ತವೆ. ಗರಿಷ್ಠ ಸಂಖ್ಯೆಯ ವಿಮಾನ ನಿಲ್ದಾಣಗಳು ಇರುವ ಮಾರ್ಗಗಳಲ್ಲಿ ವಿಮಾನವನ್ನು ಹಾರಿಸುವುದು ಸೂಕ್ತವೆಂದು ಪೈಲಟ್ಗಳು ಪರಿಗಣಿಸುತ್ತಾರೆ, ಇದರಿಂದಾಗಿ ತುರ್ತು ಸಂದರ್ಭದಲ್ಲಿ ವಿಮಾನವನ್ನು ಸುಲಭವಾಗಿ ಇಳಿಸಬಹುದು. ಹಾಗಾಗಿಯೇ ಪೆಸಿಫಿಕ್ ಮಹಾಸಾಗರದ ಮೇಲಿಂದ ವಿಮಾನ ಹಾರಾಟ ನಡೆಸೋದಿಲ್ಲ.