ವಿಮಾನದ ಕಿಟಕಿಗಳು ಚಿಕ್ಕದಾಗಿ ಮತ್ತು ದುಂಡಾಗಿರುವುದು ಏಕೆ?
1950ರ ದಶಕದ ಮೊದಲು, ವಿಮಾನಗಳು ಆಯತಾಕಾರದ ಕಿಟಕಿಗಳನ್ನು ಹೊಂದಿದ್ದವು, ಆದರೆ ಸುರಕ್ಷತಾ ಕಾರಣಗಳಿಗಾಗಿ ಅವುಗಳನ್ನು ದುಂಡಗಿನ ಆಕಾರಕ್ಕೆ ಬದಲಾಯಿಸಲಾಯಿತು. ದುಂಡಗಿನ ಕಿಟಕಿಗಳು ಒತ್ತಡವನ್ನು ಹೆಚ್ಚು ಸಮವಾಗಿ ವಿತರಿಸುತ್ತವೆ, ಇದು ಅವುಗಳ ಬಿರುಕು ಬೀಳುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ.
ಸಾಮಾನ್ಯವಾಗಿ ವಾಹನ ಮತ್ತು ರೈಲಿನ ಕಿಟಕಿಗಳ ವಿನ್ಯಾಸ ಬೇರೆ ಬೇರೆಯಾಗಿರುತ್ತದೆ. ಎಲ್ಲಾ ರೈಲುಗಳ ವಿನ್ಯಾಸ ಭಿನ್ನವಾಗಿರುತ್ತವೆ. ಆದ್ರೆ ವಿಮಾನದ ಕಿಟಕಿಗಳ ವಿನ್ಯಾಸ ಮಾತ್ರ ಒಂದೇಯಾಗಿರುತ್ತದೆ. ವಿಮಾನದ ಕಿಟಕಿಗಳ ವಿನ್ಯಾಸದ ಹಿಂದೆ ಇದೆ ವಿಶೇಷ ಕಾರಣ.
ವಿಮಾನದ ಕಿಟಕಿಗಳು ಏಕೆ ಚಿಕ್ಕದಾಗಿ ಮತ್ತು ದುಂಡಾಗಿರುತ್ತವೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ಈ ವಿನ್ಯಾಸವು ಕೇವಲ ಸೌಂದರ್ಯಕ್ಕಾಗಿ ಅಲ್ಲ. ಇದರ ಹಿಂದೆ ಹಲವು ಕಾರಣಗಳಿವೆ. ಇಂದು ಆ ಕಾರಣಗಳು ಏನು ಅಂತ ನೋಡೋಣ ಬನ್ನಿ.
ವಿಮಾನಗಳಲ್ಲಿ ಯಾವಾಗಲೂ ದುಂಡಗಿನ ಕಿಟಕಿ ಇರುತ್ತಿರಲಿಲ್ಲ. 1950ರ ದಶಕದ ಮೊದಲು, ಕಿಟಕಿಗಳು ಆಯತಾಕಾರದಲ್ಲಿದ್ದವು. ಇದರಲ್ಲಿ ಬದಲಾವಣೆಗೆ ಕೆಲವು ನಿರ್ದಿಷ್ಟ ಕಾರಣಗಳಿವೆ. ಇಂದು ದುಂಡು ಆಕಾರದಲ್ಲಿಯೇ ವಿಮಾನದ ಕಿಟಕಿಗಳನ್ನು ಕಾಣುತ್ತೇವೆ.
ವಿಮಾನದ ಕಿಟಕಿಗಳು ದುಂಡಾಗಿರುವುದಕ್ಕೆ ಒಂದು ಕಾರಣವಿದೆ. ಇದು ವಿಮಾನವನ್ನು ಸುರಕ್ಷಿತ ಮತ್ತು ಬಲಿಷ್ಠವಾಗಿಸಲು ಸಹಾಯ ಮಾಡುತ್ತದೆ. ದುಂಡಗಿನ ಕಿಟಕಿ ಒತ್ತಡವನ್ನು ಹರಡಲು ಸಹಾಯ ಮಾಡುತ್ತದೆ. ಹಾಗಾಗಿಯೇ ಕಿಟಕಿಗಳನ್ನು ದುಂಡಾಗಿ ವಿನ್ಯಾಸಗೊಳಿಸಲಾಗುತ್ತದೆ.
ದುಂಡಗಿನ ಆಕಾರದಿಂದಾಗಿ, ಕಿಟಕಿಗಳು ಬಿರುಕು ಬೀಳುವ ಸಾಧ್ಯತೆ ಕಡಿಮೆ. ವಿಮಾನವು ಹೆಚ್ಚಿನ ಎತ್ತರದಲ್ಲಿ ಹಾರುತ್ತಿರುವಾಗ ಇದು ಮುಖ್ಯವಾಗುತ್ತದೆ. ವಿಮಾನದ ಎತ್ತದಲ್ಲಿದ್ದಾಗ ಅದು ಒತ್ತಡದ ಪ್ರದೇಶದಲ್ಲಿರುತ್ತದೆ. ಕಿಟಕಿ ಆಯತಾಕಾರದಲ್ಲಿದ್ದರೆ, ಅದರ ಮೂಲೆಗಳ ಮೇಲೆ ಹೆಚ್ಚಿನ ಒತ್ತಡ ಬೀರುತ್ತದೆ. ಇದರಿಂದ ಗಾಜು ಒಡೆಯುತ್ತದೆ. 1953 ಮತ್ತು 1954 ಮೂರು ಅಪಘಾತಗಳಲ್ಲಿ ಇದು ಸಂಭವಿಸಿದೆ.
ಈ ಅಪಘಾತಗಳ ನಂತರ, ವಿಮಾನದ ಕಿಟಕಿಗಳ ಆಕಾರವನ್ನು ಆಯತಾಕಾರದಿಂದ ದುಂಡಗೆ ಬದಲಾಯಿಸಲಾಯಿತು. ದುಂಡಗಿನ ಕಿಟಕಿಗಳನ್ನು ಬಲಪಡಿಸುವುದು ಸುಲಭ. ಈ ಕಿಟಗಿಗಳು ಒತ್ತಡವನ್ನು ತಡೆದುಕೊಳ್ಳುವ ಸಾಮಾರ್ಥ್ಯವನ್ನು ಹೊಂದಿರುತ್ತವೆ.