ಪ್ರಪಂಚದ ವಿವಿಧ ದೇಶಗಳಲ್ಲಿವೆ ವಿಚಿತ್ರ ರೀತಿಯಲ್ಲಿ ಸ್ವಾಗತಿಸೋ ಸಂಪ್ರದಾಯ
ನೀವು ಅನೇಕ ದೇಶಗಳ ಸಂಸ್ಕೃತಿಯನ್ನು ನೋಡಿರಬಹುದು, ಅಲ್ಲಿ ಒಬ್ಬರಿಗೊಬ್ಬರು ವಿಶ್ ಮಾಡುವ ವಿಧಾನವನ್ನು ಸಹ ನೀವುಇಷ್ಟಪಟ್ಟಿರಬಹುದು, ಆದರೆ ಕೆಲವು ದೇಶಗಳಿವೆ, ಅಲ್ಲಿಯ ವಿಚಿತ್ರ ರೀತಿಯ ಸ್ವಾಗತವು ಖಂಡಿತವಾಗಿಯೂ ನಿಮಗೆ ಅಚ್ಚರಿಯನ್ನುಂಟು ಮಾಡುತ್ತೆ, ಆದರೆ ಪ್ರತಿಯೊಂದು ದೇಶವು ತನ್ನದೇ ಆದ ಸಂಸ್ಕೃತಿಯನ್ನು ಹೊಂದಿದೆ.
ನಮ್ಮ ದೇಶದಲ್ಲಿ ಜನರು ಕೈಮುಗಿದು ನಮಸ್ಕರಿಸುವುದನ್ನು ಮತ್ತು ಜನರನ್ನು ಸ್ವಾಗತಿಸುವುದನ್ನು ನೀವು ನೋಡಿರಬಹುದು. ಆದರೆ ನೀವು ಎಂದಾದರೂ ಇತರ ದೇಶಗಳಲ್ಲಿ ಜನರನ್ನು ಹೇಗೆ ಸ್ವಾಗತಿಸಲಾಗುತ್ತದೆ? ಅನ್ನೋದನ್ನು ನೋಡಿದ್ದೀರಾ? ಎಲ್ಲೋ ಜನರು ತಮ್ಮ ತಲೆಗಳನ್ನು ಬಾಗಿಸಿ ಒಬ್ಬರಿಗೊಬ್ಬರು ನಮಸ್ಕರಿಸುತ್ತಾರೆ, ಮತ್ತು ಎಲ್ಲೋ ಅವರು ತಮ್ಮ ಮೂಗನ್ನು ಪರಸ್ಪರ ತಾಗಿಸುವ ಮೂಲಕ ಶುಭಾಶಯ ಕೋರುತ್ತಾರೆ. ಜನರು ಸ್ವಾಗತಿಸುವ ವಿಧಾನವು ತುಂಬಾ ಅನನ್ಯವಾಗಿರುವ ಪ್ರಪಂಚದ ವಿವಿಧ ದೇಶಗಳ ಬಗ್ಗೆಯೂ ಇಲ್ಲಿದೆ ಮಾಹಿತಿ.
ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ (United States of America)
ಹ್ಯಾಂಡ್ ಶೇಕ್ ಎಂಬ ಪದವು ಅಮೆರಿಕದಲ್ಲಿ ಇಬ್ಬರು ವ್ಯಕ್ತಿಗಳ ನಡುವಿನ ಹಸ್ತಲಾಘವದ ಶುಭಾಶಯವನ್ನು ಸೂಚಿಸುತ್ತದೆ. ಇಲ್ಲಿ ನೀವು ಬಲದಿಂದ ಮತ್ತು ಎಡದಿಂದ ಸಹ ಕೈಕುಲುಕಬಹುದು. ಇಲ್ಲಿ ಕೈಯನ್ನು ಮುಂದೆ ಇಡದೆ ಸ್ವಲ್ಪ ಕೆಳಮುಖವಾಗಿ ಇರಿಸಲಾಗುತ್ತದೆ. ಆ ಮೂಲಕ ವಿಶ್ ಮಾಡುತ್ತಾರೆ.
ಫಿಲಿಪೈನ್ಸ್ (Philippines)
ಫಿಲಿಪೈನ್ಸ್ ನ ಜನರು ಹಿರಿಯರಿಗೆ ಗೌರವ ಸಲ್ಲಿಸಲು ಎದುರಿಗಿರುವ ವ್ಯಕ್ತಿಯನ್ನು "ಮನೋ" ಎಂದು ಸ್ವಾಗತಿಸುತ್ತಾರೆ. ಇದರಲ್ಲಿ, ಹಿರಿಯರ ಕೈಯನ್ನು ತೆಗೆದುಕೊಂಡು ಅವರ ಹಣೆಯನ್ನು ಅವರ ಅಂಗೈಯ ಮೇಲೆ ಇರಿಸಿ ಮನೋ ಎಂದು ಹೇಳುತ್ತಾರೆ. ಇದು ಗೌರವ ಸೂಚಿಸುವ ಒಂದು ವಿಧಾನವಾಗಿದೆ.
ಸೌದಿ ಅರೇಬಿಯಾ (Saudi Arabia)
ಸೌದಿ ಅರೇಬಿಯಾದಲ್ಲಿ ಜನರು ಕೈಕುಲುಕಿ "ಅಸ್-ಸಲಾಮು ಅಲೈಕುಮ್" ಎಂದು ಹೇಳುತ್ತಾರೆ. ಇದರ ನಂತರ, ಅವರು ಪರಸ್ಪರರ ಮೂಗಿನ ಮೇಲೆ ಮೂಗನ್ನು ಇರಿಸುತ್ತಾರೆ ಮತ್ತು ಒಂದು ಕೈಯನ್ನು ಇನ್ನೊಬ್ಬರ ಭುಜದ ಮೇಲೆ ಇರಿಸುತ್ತಾರೆ.
ಟಿಬೆಟ್ (Tibet)
ಟಿಬೆಟಿನಲ್ಲಿ ಜನರು ಪರಸ್ಪರ ಭೇಟಿಯಾದಾಗ ಅಥವಾ ಅಲ್ಲಿನ ಜನರು ತಮ್ಮ ಮುಂದೆ ಇರುವ ವ್ಯಕ್ತಿಯನ್ನು ತಮ್ಮ ನಾಲಿಗೆಯಿಂದ ಸ್ವಾಗತಿಸುತ್ತಾರೆ. ಹೆಚ್ಚಾಗಿ ಬೌದ್ಧ ಭಿಕ್ಷುಗಳು ಇದನ್ನು ಮಾಡುತ್ತಾರೆ. ಇದು ನಿಮಗೆ ವಿಚಿತ್ರ ಎನಿಸಬಹುದು, ಆದರೆ ಇದು ಅವರ ಸಂಪ್ರದಾಯವಾಗಿದೆ. ಇದರ ಜೊತೆಗೆ ಅವರು ಎರದು ಕೈಗಳನ್ನು ಕಟ್ಟಿ ಎದೆ ಮೇಲೆ ಇಡುತ್ತಾರೆ. ಇದರ ಅರ್ಥ ಅವರು ಶಾಂತಿ ತರುವವರು ಎಂದು.
ಫ್ರಾನ್ಸ್ (France)
ಫ್ರಾನ್ಸ್ ನಲ್ಲಿ, ಜನರು ಪರಸ್ಪರ ಭೇಟಿಯಾದಾಗ, ಅವರು ಕೆನ್ನೆಯ ಒಂದು ಬದಿಯಲ್ಲಿ ಚುಂಬಿಸುವ ಮೂಲಕ ಸ್ವಾಗತಿಸುತ್ತಾರೆ. ಜೊತೆಗೆ ಹಗ್ ಕೂಡ ಮಾಡುತ್ತಾರೆ. ಈ ಸಂಪ್ರದಾಯವನ್ನು ನೀವು ಸಾಮಾನ್ಯವಾಗಿ ವಿವಿಧ ದೇಶಗಳಲ್ಲಿ ಕಾಣಬಹುದು.
ಜಪಾನ್ (Japan)
ಜಪಾನ್ ನಲ್ಲಿ ಎದುರಿದ್ದ ವ್ಯಕ್ತಿಯನ್ನು ಗ್ರೀಟ್ ಮಾಡಲು ಜನರು ಭಾಗುತ್ತಾರೆ. ಎದುರಿಗಿರುವ ವ್ಯಕ್ತಿಯೂ ಯಾವ ಸ್ಥಾನದಲ್ಲಿದ್ದಾರೆ ಎಂಬುದರ ಆಧಾರದ ಮೇಲೆ ಜನರು ಭಾಗುವ ಪೊಸಿಷನ್, ಆಂಗಲ್ ವಿಭಿನ್ನವಾಗಿರುತ್ತೆ.
ಮಲೇಷ್ಯಾ (Malesia)
ಇಲ್ಲಿನ ಜನ ಭೇಟಿಯಾದಾಗ ಎರಡೂ ಕೈಗಳಿಂದ ಎದುರಿಗಿರುವರ ಎರಡೂ ಕೈಗಳ ಬೆರಳ ತುದಿಯನ್ನು ಮುಟ್ಟುತ್ತಾರೆ. ನಂತರ ತಮ್ಮ ಕೈಗಳನ್ನು ಎದೆಯ ಬಳಿ ತರುತ್ತಾರೆ. ಇದರ ಅರ್ಥ ತಾವು ಹೃದಯದಿಂದ ನಿಮ್ಮನ್ನು ಸ್ವಾಗತಿಸುತ್ತೇವೆ ಎಂದು.
ನ್ಯೂಝಿಲ್ಯಾಂಡ್ (New Zealand)
ನ್ಯೂಝಿಲಾಂಡ್ ನಲ್ಲಿ ಪರಸ್ಪರ ಶುಭ ಕೋರುವ ಈ ಪದ್ಧತಿಯನ್ನು ಹೋಂಗಿ ಎಂದು ಕರೆಯಲಾಗುತ್ತೆ. ಈ ಸಂಪ್ರದಾಯದಲ್ಲಿ ಪರಸ್ಪರ ಭೇಟಿಯಾದಾಗ ಮೂಗಿಗೆ ಮೂಗು ತಾಗಿಸುತ್ತಾರೆ, ಜೊತೆಗೆ ಹಣೆಯನ್ನು ಸಹ ಪರಸ್ಪರ ಪ್ರೆಸ್ ಮಾಡುತ್ತಾರೆ.