160 ಕಿಮೀ ಸಾಮರ್ಥ್ಯದ ವಂದೇ ಭಾರತ್ ರೈಲು ಕಡಿಮೆ ವೇಗದಲ್ಲಿ ಚಲಿಸೋದ್ಯಾಕೆ?
ಭಾರತೀಯ ರೈಲ್ವೆಯಲ್ಲಿ ಕ್ರಾಂತಿಯುಂಟು ಮಾಡಿರುವ ವಂದೇ ಭಾರತ್ ರೈಲು, ತನ್ನ ಸಾಮರ್ಥ್ಯಕ್ಕಿಂತ ಕಡಿಮೆ ವೇಗದಲ್ಲಿ ಚಲಿಸುತ್ತಿದೆ. ಹಳಿಗಳ ಗುಣಮಟ್ಟ ಮತ್ತು ಮೂಲಸೌಕರ್ಯದ ಕೊರತೆಯಿಂದಾಗಿ ರೈಲಿನ ವೇಗ ಕಡಿಮೆಯಾಗಿದೆ ಎಂದು ರೈಲ್ವೆ ಸಚಿವರು ತಿಳಿಸಿದ್ದಾರೆ.

ಭಾರತೀಯ ರೈಲ್ವೆಯಲ್ಲಿ ಹೊಸ ಕ್ರಾಂತಿಯನ್ನುಂಟು ಮಾಡಿರುವ ವಂದೇ ಭಾರತ್ ರೈಲು ತನ್ನ ಸಾಮರ್ಥ್ಯಕ್ಕಿಂತ ಕಡಿಮೆ ವೇಗದಲ್ಲಿ ಚಲಿಸುತ್ತದೆ. ವಂದೇ ಭಾರತ್ ಎಕ್ಸ್‌ಪ್ರೆಸ್ ಗಂಟೆಗೆ 160 ಕಿಮೀ ಸಾಮರ್ಥ್ಯದಲ್ಲಿ ಚಲಿಸುವ ಸಾಮರ್ಥ್ಯವನ್ನು ಹೊಂದಿದೆ.
ವಂದೇ ಭಾರತ್ ರೈಲು ದಿನದಿಂದ ದಿನಕ್ಕೆ ಜನಪ್ರಿಯತೆಯನ್ನು ಪಡೆದುಕೊಳ್ಳುತ್ತಿದ್ದು, ಪ್ರಯಾಣಿಕರಿಗೆ ಐಷಾರಾಮಿಯ ಅನುಭವವನ್ನು ನೀಡುತ್ತಿದೆ. ಆದ್ರೆ ಇತರೆ ಎಕ್ಸ್‌ಪ್ರೆಸ್ ರೈಲುಗಳ ವೇಗದಲ್ಲಿಯೇ ವಂದೇ ಭಾರತ್ ಚಲಿಸುತ್ತಿರೋದು ಪ್ರಯಾಣಿಕರ ಬೇಸರಕ್ಕೆ ಕಾರಣವಾಗಿದೆ.
ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ವಂದೇ ಭಾರತ್ ಕಾರ್ಯಚರಣೆಯ ಕುರಿತ ಸಂಬಂಧ ವಿವರಣೆ ನೀಡುವಾಗ ವೇಗದ ಬಗ್ಗೆಯೂ ಮಾತನಾಡಿದ್ದಾರೆ. ಹಾಗೆಯೇ ವಂದೇ ಭಾರತ್ ಎಕ್ಸ್‌ಪ್ರೆಸ್ ವೇಗ ಹೆಚ್ಚಿಸಲು ಸರ್ಕಾರ ತೆಗೆದುಕೊಂಡ ಕ್ರಮಗಳ ಬಗ್ಗೆಯೂ ಅಶ್ವಿನಿ ವೈಷ್ಣವ್ ಮಾತನಾಡಿದ್ದಾರೆ.
ರೈಲುಗಳ ವೇಗವನ್ನು ಹಳಿಗಳ ರಚನೆಯಾಧಾರದ ಮೇಲೆ ನಿರ್ಧರಿಸಲಾಗುತ್ತದೆ. ರೈಲಿನ ಮೂಲಸೌಕರ್ಯ ಸೇರಿದಂತೆ ಇತರೆ ಅಂಶಗಳ ಮೇಲೆ ರೈಲುಗಳ ವೇಗ ನಿರ್ಧರಿತವಾಗುತ್ತದೆ. ಸದ್ಯ ವಂದೇ ಭಾರತ್ 110 ಕಿಮೀ ವೇಗದಲ್ಲಿ ಚಲಿಸುತ್ತಿದೆ.
Vande Bharath
2014ರಲ್ಲಿ ರೈಲು 110 ಕಿಮೀ ವೇಗದಲ್ಲಿ ಚಲಿಸಬೇಕಾದ್ರೆ ಅದಕ್ಕೆ ಸೂಕ್ತವಾದ ಹಳಿಯ ಮಾರ್ಗ ಕೇವಲ 31,000 ಕಿಮೀ ಆಗಿತ್ತು. ಇದೀಗ ಈ ಮಾರ್ಗ 80,000 ಕಿಮೀಗೆ ವಿಸ್ತರಣೆಯಾಗಿದೆ. ಈ ಮಾರ್ಗದಲ್ಲಿ ವಂದೇ ಭಾರತ್ ಸೇರಿದಂತೆ ಇತರೆ ಎಕ್ಸ್‌ಪ್ರೆಸ್ ರೈಲುಗಳು 110 ಕಿಮೀ ವೇಗದಲ್ಲಿ ಚಲಿಸುತ್ತವೆ. ಇನ್ನುಳಿದ ಮಾರ್ಗದಲ್ಲಿ ವೇಗವನ್ನು ಕಡಿಮೆ ಮಾಡಿಕೊಳ್ಳುತ್ತವೆ ಎಂದು ಅಶ್ವಿನಿ ವೈಷ್ಣವ್ ಹೇಳಿದ್ದಾರೆ.
ವಂದೇ ಭಾರತ್ ರೈಲು ಚಲಿಸಲು ಅಗತ್ಯವಾದ ಹಳಿಗಳು ಇಲ್ಲದಿರೋದಕ್ಕೆ ಕಡಿಮೆ ವೇಗದಲ್ಲಿ ಚಲಿಸುತ್ತಿವೆ. ಪ್ರಯಾಣಿಕರು ಜನಶತಾಬ್ದಿ ಸೇರಿದಂತೆ ಇನ್ನಿತರ ಎಕ್ಸ್‌ಪ್ರೆಸ್‌ಗಳ ವೇಗಕ್ಕೆ ವಂದೇ ಭಾರತ್ ಹೋಲಿಕೆ ಮಾಡುತ್ತಿರುತ್ತಾರೆ. ಚೆನ್ನೈನಲ್ಲಿ ವಂದೇ ಭಾರತ್ ರೈಲಿನ ಕೋಚ್‌ಗಳ ತಯಾರಿಕೆ ನಡೆಯುತ್ತಿರುತ್ತ
2019 ಫೆಬ್ರವರಿ 15ರಂದು ಭಾರತದಲ್ಲಿ ವಂದೇ ಭಾರತ್ ರೈಲುಗಳಿಗೆ ಚಾಲನೆ ನೀಡಲಾಗಿದೆ. ಇಂದು ಹಂತಹಂತವಾಗಿ ದೇಶದ ಎಲ್ಲಾ ಪ್ರಮುಖ ನಗರಗಳಿಗೆ ವಂದೇ ಭಾರತ್ ವಿಸ್ತರಣೆ ಮಾಡಲಾಗುತ್ತಿದೆ. ಸದ್ಯ ಭಾರತದಲ್ಲಿ 136 ವಂದೇ ಭಾರತ್ ರೈಲುಗಳು ಚಲಿಸುತ್ತಿದ್ದು, ಶೀಘ್ರದಲ್ಲಿಯೇ ಈ ಸಂಖ್ಯೆ ಏರಿಕೆಯಾಗಲಿದೆ ಎಂದು ಭಾರತ ಸರ್ಕಾರ ಹೇಳಿದೆ.