ಪಶ್ಚಿಮ ಬಂಗಾಳದ ಈ ಹಳ್ಳಿಯಲ್ಲಿ ಪ್ರತಿಯೊಬ್ಬರ ಹೆಸರೂ ‘ರಾಮ’... ಏನು ಇಲ್ಲಿನ ವಿಶೇಷತೆ!
ಪಶ್ಚಿಮ ಬಂಗಾಳದ ಬಂಕುರಾ ಜಿಲ್ಲೆಯ ಬಳಿಯ ರಾಮ್ಪಾಡಾ ಎಂಬ ವಿಶಿಷ್ಟವಾದ ಗ್ರಾಮ ಇದೆ, ಇಲ್ಲಿ ಪ್ರತಿಯೊಬ್ಬ ಮನುಷ್ಯನ ಹೆಸರು ರಾಮನೊಂದಿಗೆ ಸಂಬಂಧ ಹೊಂದಿದೆ, ಇದು ಮಾತ್ರವಲ್ಲ, ಇಲ್ಲಿ ಜನಿಸಿದ ಪ್ರತಿ ನವಜಾತ ಶಿಶುವನ್ನು ಸಹ ರಾಮ ಎಂದೇ ಕರೆಯಲಾಗುತ್ತದೆ. ಈ ಆಸಕ್ತಿದಾಯಕ ಹಳ್ಳಿಯ ಕಥೆ ತಿಳಿಯೋಣ.
ಚೈತ್ರ ನವರಾತ್ರಿ 2024 ರ ಕೊನೆಯ ದಿನ ರಾಮ ನವಮಿಯನ್ನು ಬಹಳ ಆಡಂಬರದಿಂದ ಆಚರಿಸಲಾಗಿದೆ. ಇಂದು ನಾವು ನಿಮಗೆ ಪ್ರತಿ ಮನೆಯಲ್ಲೂ ರಾಮ ವಾಸಿಸುವ (Rama in every households) ಹಳ್ಳಿಯ ಕಥೆಯನ್ನು ಹೇಳಲಿದ್ದೇವೆ. ಹೌದು, 250 ವರ್ಷಗಳಿಂದ ನಡೆಯುತ್ತಿರುವ ಈ ಸಂಪ್ರದಾಯದಲ್ಲಿ, ಶ್ರೀ ರಾಮನ ಹೆಸರು ಹಳ್ಳಿಯ ಪ್ರತಿಯೊಬ್ಬ ವ್ಯಕ್ತಿಯ ಹೆಸರಿನೊಂದಿಗೆ ಸಂಬಂಧ ಹೊಂದಿದೆ. ಈ ಗ್ರಾಮದ ಬಗ್ಗೆ ಮಾಹಿತಿ ತಿಳಿಯೋಣ.
ಈ ವಿಶಿಷ್ಟ ಹಳ್ಳಿ ಎಲ್ಲಿದೆ?
ಪಶ್ಚಿಮ ಬಂಗಾಳದ (West Bengal) ಬಂಕುರಾ ಜಿಲ್ಲೆಯ ಸನಾಬಂದ್ನ ರಾಮ್ಪಾಡಾ ಗ್ರಾಮವು ಬಹಳ ವಿಶಿಷ್ಟವಾದ ಗ್ರಾಮವಾಗಿದೆ. ಈ ಗ್ರಾಮಕ್ಕೆ ಭಗವಾನ್ ರಾಮನ ಆಗಮನದ ಬಗ್ಗೆ ಯಾವುದೇ ಕಥೆ ಇಲ್ಲ ಅಥವಾ ಈ ಗ್ರಾಮವು ರಾಮಾಯಣ ಅಥವಾ ಭಗವಾನ್ ರಾಮನಿಗೆ ಸಂಬಂಧಿಸಿದೆ ಎನ್ನುವ ಬಗ್ಗೆಯೂ ನಿಖರ ಮಾಹಿತಿ ಇಲ್ಲ. ಆದರೂ, ಈ ಹಳ್ಳಿಯಲ್ಲಿ ವಾಸಿಸುವ ಪ್ರತಿಯೊಬ್ಬ ವ್ಯಕ್ತಿಯ ಹೆಸರಿನಲ್ಲೂ ರಾಮ ಎನ್ನುವ ಹೆಸರು ಸೇರಿ ಹೋಗಿದೆ.
ಪ್ರತಿಯೊಬ್ಬ ವ್ಯಕ್ತಿಯ ಹೆಸರು ಶ್ರೀ ರಾಮ್
ರಾಮಪಾಡಾ ಗ್ರಾಮದ ಜನರು ಭಗವಾನ್ ಶ್ರೀ ರಾಮನನ್ನು ಮಾತ್ರ ನಂಬುತ್ತಾರೆ ಮತ್ತು ಪೂಜಿಸುತ್ತಾರೆ. ಇದು ಮಾತ್ರವಲ್ಲ, ಅವರು ಶ್ರೀರಾಮ (Shri Ram) ನಾಮವನ್ನು ತಮ್ಮ ದೈನಂದಿನ ಜೀವನದ ಒಂದು ಭಾಗವನ್ನಾಗಿ ಮಾಡಿಕೊಂಡಿದ್ದಾರೆ. ಈ ಹಳ್ಳಿಯಲ್ಲಿ ವಾಸಿಸುವ ಪ್ರತಿಯೊಬ್ಬ ವ್ಯಕ್ತಿಯ ಹೆಸರಿನೊಂದಿಗೆ, ಪ್ರತಿ ನವಜಾತ ಶಿಶುವಿನ ಹೆಸರಿನಲ್ಲಿ ಭಗವಾನ್ ರಾಮನ ಹೆಸರನ್ನು ಸಹ ಸೇರಿಸಲಾಗುತ್ತದೆ.
ಭಗವಾನ್ ರಾಮನ ಹೆಸರು ಇಲ್ಲಿನ ಜನರ ಮೊದಲ ಅಥವಾ ಎರಡನೇ ಹೆಸರಿನಲ್ಲಿ ಬರುತ್ತದೆ, ಅಂದರೆ ಮೊದಲ ಅಥವಾ ಮಧ್ಯದ ಹೆಸರು, ಉದಾಹರಣೆಗೆ ಕೋದಂಡ ರಾಮ, ರಾಮ ಗೋಮಾಲ... ಒಟ್ಟಿನಲ್ಲಿ ಹಳ್ಳಿಯ ಪ್ರತಿಯೊಬ್ಬ ಮನುಷ್ಯನು ಖಂಡಿತವಾಗಿಯೂ ರಾಮ ಎಂಬ ಹೆಸರನ್ನು ಹೊಂದಿದ್ದಾನೆ. ಕುತೂಹಲಕಾರಿ ಸಂಗತಿಯೆಂದರೆ, ಹಳ್ಳಿಯಲ್ಲಿ ಒಂದೇ ಒಂದು ಹೆಸರು ಪುನರಾವರ್ತನೆಯಾಗುವುದಿಲ್ಲ. ಈ ಸಂಪ್ರದಾಯವು ಕಳೆದ 250 ವರ್ಷಗಳಿಂದ ಈ ಗ್ರಾಮದಲ್ಲಿ ನಡೆಯುತ್ತಿದೆ ಎಂದು ಹೇಳಲಾಗುತ್ತದೆ.
ಶ್ರೀ ರಾಮನ ಹೆಸರು ಎಲ್ಲರ ಹೆಸರಿನಲ್ಲಿದೆ
ಈ ಹಳ್ಳಿಯಲ್ಲಿ, ಒಬ್ಬರ ಹೆಸರು ರಾಮಕಾನೈ, ನಂತರ ಯಾರೋ ರಮಾಕಾಂತ್, ಇನ್ನೊಬ್ಬರು ರಾಮದುಲಾಲ್, ಮತ್ತೊಬ್ಬರು ರಾಮಕೃಷ್ಣ. ಇಲ್ಲಿ ಪ್ರತಿಯೊಬ್ಬ ಮನುಷ್ಯನ ಹೆಸರಿನ ಜೊತೆ ರಾಮನ ಹೆಸರು ಏಕೆ ಸೇರಿಸಲಾಗಿದೆ? ಎಂದು ನಿಮಗೂ ಅಚ್ಚರಿಯಾಗಬಹುದು ಅಲ್ವಾ? ವಿಷಯ ಏನೆಂದರೆ ಹಲವಾರು ವರ್ಷಗಳ ಹಿಂದೆ ಹಳ್ಳಿಯ ನಿವಾಸಿ ರಾಮಬದನ್ ಮುಖರ್ಜಿ ಅವರ ಪೂರ್ವಜರಿಗೆ ಒಂದು ದಿನ ಕನಸಿನಲ್ಲಿ ಭಗವಾನ್ ಶ್ರೀ ರಾಮನು ತಮ್ಮ ಗ್ರಾಮದಲ್ಲಿ ದೇವಾಲಯವನ್ನು ನಿರ್ಮಿಸಲು ಮತ್ತು ಗ್ರಾಮದ ಕುಲದೇವತೆಯನ್ನು ಆಚರಿಸಲು ಆದೇಶಿಸಿದನಂತೆ. ಅಂದಿನಿಂದ, ಪ್ರತಿ ಮನೆಯಲ್ಲಿ ಜನಿಸಿದ ಮಗುವಿನ ಹೆಸರಿನ ಜೊತೆ ರಾಮ ಹೆಸರನ್ನು ಸೇರಿಸಲಾಗುತ್ತದೆ.
ಬಂಕುರಾವನ್ನು ತಲುಪುವುದು ಹೇಗೆ?
ವಾಯುಮಾರ್ಗದ ಮೂಲಕ: ಬಂಕುರಾ ಕೊಲ್ಕತ್ತಾದ ನೇತಾಜಿ ಸುಭಾಷ್ ಚಂದ್ರ ಬೋಸ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (International Airport) ಅತ್ಯ೦ತ ಸನಿಹದಲ್ಲಿರುವ ವಿಮಾನ ನಿಲ್ದಾಣವಾಗಿದ್ದು, ಇದು ಬಂಕುರಾದಿಂದ ಸುಮಾರು 212 ಕಿ.ಮೀ. ಅಲ್ಲಿಂದ ನೀವು ಬಂಕುರಾಗೆ ಕ್ಯಾಬ್, ಬಸ್ ಅಥವಾ ರೈಲು ತೆಗೆದುಕೊಳ್ಳಬಹುದು. ಇಲ್ಲಿಗೆ ಬಂದ ನಂತರ, ನೀವು ಹಳ್ಳಿಗೆ ಬಸ್ ತೆಗೆದುಕೊಳ್ಳಬಹುದು.
ರೈಲು ಮೂಲಕ: ಕೊಲ್ಕತ್ತಾದಿಂದ ಬಂಕುರಾಗೆ ರೈಲು ದೂರವು 233 ಕಿ.ಮೀ. ಕೊಲ್ಕತ್ತಾದಿಂದ ಬಂಕುರಾಗೆ ನಿಯಮಿತವಾಗಿ ರೈಲುಗಳು ಚಲಿಸುತ್ತವೆ. ಇಲ್ಲಿಗೆ ಬಂದ ನಂತರ, ನೀವು ಹಳ್ಳಿಗೆ ಟ್ಯಾಕ್ಸಿ ತೆಗೆದುಕೊಳ್ಳಬಹುದು.
ರಸ್ತೆಯ ಮೂಲಕ: ಇದು ಕೊಲ್ಕತ್ತಾ ಮತ್ತು ಹತ್ತಿರದ ನಗರಗಳಾದ ಅಸನ್ಸೋಲ್, ದುರ್ಗಾಪುರ್, ಬುರ್ದ್ವಾನ್, ಪನಗರ್ ಮತ್ತು ರಾಜ್ಯದ ಇತರ ಭಾಗಗಳಿಗೆ ರಸ್ತೆ ಮೂಲಕ ಉತ್ತಮ ಸಂಪರ್ಕ ಹೊಂದಿದೆ. ಇಲ್ಲಿಂದ ನೀವು ಹಳ್ಳಿಗೆ ಬಸ್ ತೆಗೆದುಕೊಳ್ಳಬಹುದು.