MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Life
  • Travel
  • ಭಾರತದಲ್ಲೇ ಈ ಸುಂದರ ಪ್ರದೇಶಗಳಿರುವಾಗ ವಿದೇಶಕ್ಕೇಕೆ ಹೋಗ್ತೀರಿ?

ಭಾರತದಲ್ಲೇ ಈ ಸುಂದರ ಪ್ರದೇಶಗಳಿರುವಾಗ ವಿದೇಶಕ್ಕೇಕೆ ಹೋಗ್ತೀರಿ?

ಟ್ರಾವೆಲ್  (Travel) ಮಾಡೋದು ಎಂದರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ… ಅದರಲ್ಲೂ ಫಾರಿನ್ ಟೂರ್ (Foreign Tour) ಹೋಗೋದು ಎಂದರೆ ನಿಮಗೂ ಖಂಡಿತವಾಗಿಯೂ ಇಷ್ಟವಾಗಿರುತ್ತೆ ಅಲ್ವಾ? ವಿದೇಶಕ್ಕೆ ಪ್ರಯಾಣಿಸಲು ಎಲ್ಲರೂ ಕನಸು ಕಾಣುತ್ತಾರೆ.  ಆದರೆ ಕನಸುಗಳು ಮತ್ತು ಸತ್ಯದ ನಡುವಿನ ಅಂತರವು ಬಜೆಟ್ ನದ್ದಾಗಿದೆ. ನಿಮಗೂ ಅದೇ ಸಮಸ್ಯೆ ಅಲ್ವಾ? ಹೇಗಪ್ಪಾ ಆ ದೂರದ ಸುಂದರ ಜಾಗಗಳಿಗೆ ಹೋಗೋದು ಎಂದು ಯೋಚನೆ ಆಗಿದೆ ಅಲ್ವಾ? 

2 Min read
Suvarna News
Published : May 27 2022, 03:28 PM IST
Share this Photo Gallery
  • FB
  • TW
  • Linkdin
  • Whatsapp
17

ವಿದೇಶದಲ್ಲಿರುವ ಸುಂದರ ತಾಣಗಳಿಗೆ ಹೋಗೋಕ್ಕೆ ಆಗಲ್ಲ ಅಂತ ಚಿಂತೆ ಮಾಡ್ಬೇಡಿ. ಭಾರತದಲ್ಲಿ ಅನೇಕ ಅತ್ಯಂತ ಸುಂದರ ಸ್ಥಳಗಳಿವೆ, ಅವು ಎಲ್ಲವೂ ವಿದೇಶಗಳಿಗಿಂತ ಅದ್ಭುತ ಸೌಂದರ್ಯ ಹೊಂದಿದ್ದು, ನಾವು ಯಾವ ದೇಶಕ್ಕೂ ಕಮ್ಮಿ ಇಲ್ಲ ಅನ್ನೋದನ್ನು ತೋರಿಸುತ್ತೆ. ವಿದೇಶ ಟೂರ್ ಮಾಡಲು ಆಗದಿದ್ದರೆ ಪರವಾಗಿಲ್ಲ, ನಮ್ಮದೇ ದೇಶದ ಈ ಸುಂದರ ತಾಣಗಳಿಗೆ ಭೇಟಿ ನೀಡಿ. 

27

 ಕಳೆದ ಎರಡು ವರ್ಷಗಳಿಂದ ಕಣ್ಣಲ್ಲಿ ಕಣ್ಣಿಟ್ಟಿರುವ ಎಲ್ಲ ಕನಸುಗಳನ್ನು ಇನ್ನೂ ಸಹ ಹಾಗೇಯೇ ಬಚ್ಚಿಟ್ಟೀದ್ದೀರಾ ಅಲ್ವಾ? ಪ್ರತಿ ಬಾರಿ ನೀವು ಹೊಸ ಕೋವಿಡ್ ರೂಪಾಂತರದ (Corona Virus) ಸುದ್ದಿಯನ್ನು ಕೇಳಿದಾಗ, ಹೊರಹೋಗುವ ಭಯದಿಂದ ಮನಸ್ಥಿತಿಯು ಹದಗೆಡುತ್ತದೆ. ಆದಾಗ್ಯೂ, ಇದು ಹೀಗೆಯೇ ಮುಂದುವರಿದರೆ, ಆಗ ವಯಸ್ಸು ಕಳೆದು ಹೋಗುತ್ತದೆ ಮತ್ತು ಜವಾಬ್ದಾರಿಗಳು ಹೆಚ್ಚಾಗುತ್ತವೆ ಅನ್ನೋ ಬೇಜಾರು ನಿಮಗಿದ್ಯಾ? ಹಾಗಿದ್ರೆ ಈ ತಾಣಗಳಿಗೆ ಭೇಟಿ ನೀಡಿ

37

ವಿದೇಶ ಪ್ರವಾಸಗಳು  (abroad trip) ಎಷ್ಟು ದುಬಾರಿಯಾಗಿವೆಯೆಂದರೆ, ಅಂತಹ ಪ್ರವಾಸವನ್ನು ಪ್ರಾರಂಭಿಸಲು ಅಷ್ಟೊಂದು ಬಜೆಟ್ ನಮ್ಮ ಬಳಿ ಇರೋದಿಲ್ಲ. ಈ ಎಲ್ಲಾ ವಿಷಯಗಳ ಬಗ್ಗೆ ಯೋಚಿಸುವ ಮೂಲಕ ನೀವು ಸಹ ಬೇಜಾರ್ ಮಾಡ್ಕೊಂಡಿದ್ರೆ ನಿಮ್ಮ ದುಃಖವನ್ನು ಸ್ವಲ್ಪ ಉದ್ವೇಗವಾಗಿ ಪರಿವರ್ತಿಸಿ. ಇಂದು ನಾವು ನಿಮಗೆ ಭಾರತದಲ್ಲಿನ ಅಂತಹ ಸ್ಥಳಗಳ ಬಗ್ಗೆ ಹೇಳುತ್ತಿದ್ದೇವೆ, ಅಲ್ಲಿ ನೀವು ವಿದೇಶದಲ್ಲಿ ಇರೋವಂತಹ ಭಾವನೆಯನ್ನು ಅನುಭವಿಸೋದು ಖಂಡಿತಾ.

47
ಚಿತ್ರಕೋಟ್ ಜಲಪಾತ

ಚಿತ್ರಕೋಟ್ ಜಲಪಾತ

ಇದನ್ನು ಚಿತ್ರಕೂಟ ಅಥವಾ ಚಿತ್ರಕೋಟ್ ಜಲಪಾತ ಎಂದು ಕರೆಯಲಾಗುತ್ತದೆ. ಇದು ಭಾರತದ ಅತ್ಯಂತ ವಿಶಾಲವಾದ ಜಲಪಾತವಾಗಿದೆ. ಛತ್ತೀಸ್ ಗಢದಲ್ಲಿರುವ ಈ ಜಲಪಾತದ ವೇಗವನ್ನು ನೋಡಿದರೆ ನಿಮ್ಮ ಹೃದಯ ರೋಮಾಂಚನವಾಗೋದಂತು ನಿಜಾ. ಇದನ್ನು ಕೆನಡಾ ಮತ್ತು ಯುಎಸ್ ನಡುವಿನ ಗಡಿಯಲ್ಲಿರುವ ನಯಾಗರ ಜಲಪಾತಕ್ಕೆ (Niagara of India) ಹೋಲಿಸಲಾಗುತ್ತದೆ.
 

57
ಆಲಪ್ಪುಝ

ಆಲಪ್ಪುಝ

ಇದನ್ನು ಅಲೆಪ್ಪಿ (alleppey) ಎಂದೂ ಕರೆಯುತ್ತಾರೆ. ಕೇರಳ (Kerala) ರಾಜ್ಯದಲ್ಲಿರುವ ಈ ಸ್ಥಳವು ವೆನಿಸ್ ನಗರವನ್ನು ನೆನಪಿಸುತ್ತೆ. ಇಟಾಲಿಯನ್ ನಗರವಾದ ವೆನಿಸ್ (Venice)ಗೆ ಹೋಗಲು ನಿಮಗೆ ಸಾಧ್ಯವಾಗದಿದ್ದರೆ, ನೀವು ದೇಶದ ದಕ್ಷಿಣ ಭಾಗವನ್ನು ತಲುಪಬಹುದು. ಇದು ನಿಮಗೆ ಸೇಮ್ ಟು ಸೇಮ್ ವೆನಿಸ್ ಫೀಲಿಂಗ್ ನೀಡುತ್ತೆ. 

67
ಕೂರ್ಗ್

ಕೂರ್ಗ್

ಇದನ್ನು ಕೊಡಗು ಎಂದೂ ಕರೆಯುತ್ತಾರೆ. ಇದಲ್ಲದೆ, ಈ ಸ್ಥಳವನ್ನು ಭಾರತದ ಸ್ಕಾಟ್ಲೆಂಡ್ (scotland of india) ಎಂದು ಕರೆಯಲಾಗುತ್ತದೆ. ಅತಿಯಾದ ಮಳೆಯ ಹೊರತಾಗಿ, ಕೂರ್ಗ್ ಹೆಚ್ಚು ಕಾಫಿಯನ್ನು ಉತ್ಪಾದಿಸುತ್ತದೆ. ಈ ಗಿರಿಧಾಮಕ್ಕೆ ಹೋಗುವ ಬಗ್ಗೆಯೂ ಯೋಚಿಸಬಹುದು. ಇದು ಸುಂದರವಾದ ಹಸಿರು ಸಿರಿಯಿಂದ ಕೂಡಿದ, ಗಿರಿ, ಜಲಪಾತಗಳು (Falls), ನದಿಗಳಿಂದ ತುಂಬಿರುವಂತಹ ಸುಂದರವಾದ ತಾಣ ಇದಾಗಿದೆ. 
 

77
ಅಂಡಮಾನ್ ಮತ್ತು ನಿಕೋಬಾರ್

ಅಂಡಮಾನ್ ಮತ್ತು ನಿಕೋಬಾರ್

ನೀವು ಥೈಲ್ಯಾಂಡ್ (Thailand) ನಂತಹ ಸಮುದ್ರದ ಲುಕ್ ಅನ್ನು ಭಾರತದಲ್ಲಿಯೇ ಪಡೆಯಬಹುದು ಎಂದು ನಾವು ಹೇಳಿದರೆ, ನಿಮ್ಮ ಮನಸ್ಸು ಬಹುಶಃ ತುಂಬಾನೇ ಖುಷಿ ಪಡಬಹುದು. ಇದನ್ನು ಎಂಜಾಯ್ ಮಾಡಲು ನೀವು ಅಂಡಮಾನ್ ಮತ್ತು ನಿಕೋಬಾರ್ ಗೆ (Andaman and Nicobar) ಭೇಟಿ ನೀಡಿ. ಇಲ್ಲಿ ನಡೆಯುವ ಸಾಹಸ ಚಟುವಟಿಕೆಗಳು ನಿಮ್ಮ ಪ್ರವಾಸದ ಉತ್ಸಾಹವನ್ನು ದ್ವಿಗುಣಗೊಳಿಸುತ್ತವೆ. ನಿಮಗೆ ಡಬಲ್ ಮಜಾ ನೀಡೋದು ಖಚಿತ. 

About the Author

SN
Suvarna News
ಪ್ರವಾಸ
ಪ್ರವಾಸೋದ್ಯಮ

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved