2024ಕ್ಕೆ ಲಾಂಗ್ ವೀಕೆಂಡ್ಸ್ ಸುಮಾರು ಇವೆ, ಹೀಗ್ ಟ್ರಾವೆಲ್ ಪ್ಲ್ಯಾನ್ ಮಾಡಬಹುದು!
ಇನ್ನೇನು ಹೊಸ ವರ್ಷ ಬರೋದಿಕ್ಕೆ ಸ್ವಲ್ಪ ದಿನಾನೇ ಇರೋದು. ನೀವು ಸಹ ಹೊಸ ವರ್ಷಕ್ಕೆ ಕಾಯ್ತಾ ಇದ್ದೀರಾ? ಹೊಸ ವರ್ಷದ ರಜೆಗಳ ಲಿಸ್ಟ್ ಇಲ್ಲಿದೆ. ನೀವು ಟ್ರಾವೆಲ್ ಪ್ಲ್ಯಾನ್ ಮಾಡೋದಾದ್ರೆ ಇಲ್ಲಿದೆ ಲಿಸ್ಟ್.
ಹೊಸ ವರ್ಷ ಬರ್ತಾ (New Year Plan) ಇದೆ… ಮುಂದಿನ ವರ್ಷ ಯಾವ ರೀತಿ ಇರಬೇಕು? ಎಲ್ಲಿಗೆಲ್ಲಾ ಹೋಗಬೇಕು? ವಿಶ್ ಲಿಸ್ಟ್ ಏನು? ಎಲ್ಲವನ್ನೂ ನೀವು ಈಗಾಗಲೇ ಪ್ಲ್ಯಾನ್ ಮಾಡಿದ್ದೀರಾ? ಹೌದು ಅನ್ನೋದಾದ್ರೆ ಗುಡ್. ಒಂದು ವೇಳೆ ನೀವು ಟ್ರಾವೆಲ್ ಪ್ಲ್ಯಾನ್ ಮಾಡೋದಾದ್ರೆ ಮುಂದಿನ ವರ್ಷದ ರಜೆಗಳ ಸಂಪೂರ್ಣ ಗೈಡ್ ಜೊತೆಗೆ ಲಾಂಗ್ ವೀಕೆಂಡ್ ಪ್ಲ್ಯಾನ್ ಮಾಡೋಕೆ ಸಖತ್ ಆಗಿರೋ ಜಾಗಗಳ ಬಗ್ಗೆ ನಾವು ಮಾಹಿತಿ ನೀಡ್ತೀವಿ.
2024ರ ಜನವರಿಯಿಂದ ಹಿಡಿದು, ಡಿಸೆಂಬರ್ ವರೆಗೂ ಏನೆಲ್ಲಾ ವಿಶೇಷ ದಿನಗಳಿವೆ ಮತ್ತು ಯಾವೆಲ್ಲಾ ರಜೆಗಳಿವೆ, ನೀವು ಯಾವ ರೀತಿ ರಜೆ ಪ್ಲ್ಯಾನ್ ಮಾಡಬಹುದು. ಎಲ್ಲೆಲ್ಲಾ ಟೂರ್ ಮಾಡಬಹುದು? ಎಷ್ಟು ದಿನದ ಟೂರ್ ಮಾಡಬಹುದು ಅನ್ನೋದರ ಬಗ್ಗೆ ಸಂಪೂರ್ಣ ಪ್ಲ್ಯಾನಿಂಗ್ ಇಲ್ಲಿದೆ.
1 ಜನವರಿ-ಹೊಸ ವರ್ಷ
15-ಜನವರಿ - ಮಕರ ಸಂಕ್ರಾಂತಿ
26- ಜನವರಿ - ಗಣರಾಜ್ಯೋತ್ಸವ
8 ಮಾರ್ಚ್ - ಮಹಾ ಶಿವರಾತ್ರಿ
25-ಮಾರ್ಚ್ - ಹೋಳಿ
29- ಮಾರ್ಚ್ - ಗುಡ್ ಫ್ರೈಡೆ
9- ಏಪ್ರಿಲ್ - ಯುಗಾದಿ
10- ಏಪ್ರಿಲ್ - ಈದ್-ಉಲ್-ಫಿತರ್
17 ಏಪ್ರಿಲ್ - ರಾಮನವಮಿ
21 ಏಪ್ರಿಲ್ - ಮಹಾವೀರ ಜಯಂತಿ
ಮೇ 1- ಕಾರ್ಮಿಕ ದಿನ
23 ಮೇ - ಬುದ್ಧ ಪೂರ್ಣಿಮಾ
18-ಜೂನ್ ಬಕ್ರೀದ್ / ಈದ್ ಉಲ್-ಅಧಾ
17-ಜುಲೈ ಮೊಹರಂ
15 ಆಗಸ್ಟ್ - ಸ್ವಾತಂತ್ರ್ಯ ದಿನಾಚರಣೆ
19-ಆಗಸ್ಟ್ - ರಕ್ಷಾ ಬಂಧನ
7- ಸೆಪ್ಟೆಂಬರ್ ವಿನಾಯಕ ಚತುರ್ಥಿ
14- ಸೆಪ್ಟೆಂಬರ್ - ಓಣಂ
16- ಸೆಪ್ಟೆಂಬರ್ - ಮಿಲಾದ್ ಉನ್ ನಬಿ
26- ಸೆಪ್ಟೆಂಬರ್ - ಜನ್ಮಾಷ್ಟಮಿ
2 ಅಕ್ಟೋಬರ್ - ಮಹಾತ್ಮ ಗಾಂಧಿ ಜಯಂತಿ
13 ಅಕ್ಟೋಬರ್ - ದಸರಾ
1- ನವೆಂಬರ್ - ದೀಪಾವಳಿ / ಕನ್ನಡ ರಾಜ್ಯೋತ್ಸವ
15 ನವೆಂಬರ್ - ಗುರುನಾನಕ್ ಜನ್ಮದಿನ
25-ಡಿಸೆಂಬರ್ - ಕ್ರಿಸ್ಮಸ್(Christmas)
ಜನವರಿ 13, 14, 15 : ಗೋಕರ್ಣ : ಜನವರಿ 15 ಮಕರ ಸಂಕ್ರಾಂತಿ ರಜೆ. ಅದು ಸೋಮವಾರ ಬರುತ್ತೆ. ಹಾಗಾಗಿ ನೀವು ವೀಕೆಂಡ್ ಸೇರಿಸಿ, ಮೂರು ದಿನಗಳ ಕಾಲ ಹಾಯಾಗಿ ಗೋಕರ್ಣ (Gokarna) ಪ್ರವಾಸ ಮಾಡಿ ಬರಬಹುದು. ಗೋಕರ್ಣದಲ್ಲಿ ಬೀಚ್ ಸೇರಿ ಅದ್ಭುತ ಪ್ರವಾಸಿ ತಾಣಗಳಿವೆ.
ಜನವರಿ 26, 27, 28 : ಚಿಕ್ಕಮಗಳೂರು : ಜನವರಿ 26 ಗಣರಾಜ್ಯೋತ್ಸವ, ಇದು ಶುಕ್ರವಾರ ಬರುತ್ತೆ. ಹಾಗಾಗಿ ಶನಿವಾರ, ಭಾನುವಾರ ಸೇರಿ ಮೂರು ದಿನ ಚಿಕ್ಕಮಗಳೂರು (Chikmagaluru) ಟ್ರಾವೆಲ್ ಮಾಡ್ಕೊಂಡು ಬರಬಹುದು. ಇಲ್ಲಿನ ಗಿರಿಧಾಮಗಳು, ಫಾಲ್ಸ್ ಕಣ್ಣಿಗಳಿಗೆ ಹಬ್ಬ.
ಮಾರ್ಚ್ 29, 30, 31 ಕೂರ್ಗ್ : ಇನ್ನು ಮಾರ್ಚ್ ತಿಂಗಳ ಕೊನೆಯಲ್ಲಿ ನೀವು ಮೂರು ದಿನ ರಜೆಯಲ್ಲಿ ಕೂರ್ಗ್ (Coorg) ಪ್ರವಾಸ ಮಾಡಬಹುದು. ಕರ್ನಾಟಕದ ಸ್ವಿಡ್ಜರ್ ಲ್ಯಾಂಡ್ ಎಂದೇ ಹೆಸರುವಾಸಿಯಾಗಿರುವ ಈ ತಾಣದಲ್ಲಿ ನೀವು ಎಂಜಾಯ್ ಮಾಡಬಹುದು.
ಏಪ್ರಿಲ್ 6, 7, 8, 9 ವಯನಾಡು : ಕೇರಳ ಹೇಳಿ ಕೇಳಿ ದೇವರ ನಾಡು. ಅದರಲ್ಲೂ ವಯನಾಡು (Wayanadu) ಪ್ರಕೃತಿ ಸೌಂದರ್ಯಕ್ಕೆ ಹೆಸರುವಾಗಿಯಾಗಿರುವ ತಾಣ. ಇಲ್ಲಿಯೂ ನೀವು ಹಲವಾರು ತಾಣಗಳನ್ನು ಎಕ್ಸ್ ಪ್ಲೋರ್ ಮಾಡುತ್ತಾ ಎಂಜಾಯ್ ಮಾಡಬಹುದು.
ಜೂನ್ 15, 16, 17, 18 ಕೊಡೈಕೆನಲ್ : ತಮಿಳುನಾಡಿನ ಕೊಡೈಕೆನಲ್ (Kodaikenal) ಸಹ ರಮಣೀಯ ತಾಣ. ಇಲ್ಲಿ ನೀವು ಪ್ರಕೃತಿ, ನೀರು, ಗಿರಿಧಾಮ, ಚಳಿ ಎಲ್ಲವನ್ನೂ ಸಖತ್ತಾಗಿಯೇ ಎಂಜಾಯ್ ಮಾಡಬಹುದು.
ಆಗಸ್ಟ್ 15, 16, 17, 18 ಮುನ್ನಾರ್ : ಸ್ವಾತಂತ್ರ್ಯ ದಿನಾಚರಣೆಗೆ ಮತ್ತೆರಡು ದಿನ ಸೇರಿಸಿ ಮುನ್ನಾರ್ ಗೆ (Munnar) ಟೂರ್ ಮಾಡಿ. ಪ್ರಕೃತಿಯನ್ನು ಸಂಪೂರ್ಣವಾಗಿ ಸವಿಯಲು ಈ ತಾಣ ಬೆಸ್ಟ್. ನಾಲ್ಕು ದಿನಗಳಲ್ಲಿ ಮುನ್ನಾರ್ ನ ಮೂಲೆ ಮೂಲೆ ಎಂಜಾಯ್ ಮಾಡಬಹುದು.
ಸೆಪ್ಟೆಂಬರ್ 14, 15, 16 ಹಂಪಿ : ಹಂಪಿ (Hampi) ಬಗ್ಗೆ ನಿಮಗೆ ಗೊತ್ತಿರದೇ ಇರೋದೆ? ವಿಜಯನಗರ ಸಾಮ್ರಾಜ್ಯದ ಭವ್ಯ ಪರಂಪರೆಯನ್ನು ಇಂಚು ಇಂಚಾಗಿ ತಿಳಿಯಲು ಮೂರು ದಿನ ಹಂಪಿಯಲ್ಲಿ ಕಳೆಯೋದು ಬೆಸ್ಟ್.
ನವಂಬರ್ 1, 2, 3 ಊಟಿ : ಕರ್ನಾಟಕ ರಾಜ್ಯೋತ್ಸವ ದೀಪಾವಳಿ ರಜೆ ಜೊತೆ ಜೊತೆಗೆ ಬಂದಿರೋದ್ರಿಂದ ನೀವು ಊಟಿಗೆ (Ooty) ಮೂರು ದಿನಗಳ ಟ್ರಾವೆಲ್ ಮಾಡಿ, ಪ್ರಕೃತಿಯಲ್ಲಿ ಕಳೆದು ಹೋಗೋದು ಬೆಸ್ಟ್.