ಕರ್ನಾಟಕದಲ್ಲಿ ಹಿಂದೂಗಳ ಸಂಖ್ಯೆಯೇ ಹೆಚ್ಚು… ಇನ್ನಿತರ ಧರ್ಮದವರೆಷ್ಟು ಜನರಿದ್ದಾರೆ?
ವಿವಿಧ ಜಾತಿ, ಧರ್ಮಗಳ ತವರೂರಾಗಿರುವ ಕರ್ನಾಟಕದಲ್ಲಿ ಹಿಂದೂಗಳ ಜೊತೆಗೆ ಯಾವ ಯಾವ ಧರ್ಮದ ಜನರು ಎಷ್ಟು ಸಂಖ್ಯೆಯಲ್ಲಿದ್ದಾರೆ ಅನ್ನೋದನ್ನು ನೋಡೋಣ.

ನಮ್ಮ ಕರ್ನಾಟಕ ರಾಜ್ಯ ವಿವಿಧ ಸಂಸ್ಕೃತಿ, ಆಚರಣೆ, ಜಾತಿ ಅಷ್ಟೇ ಅಲ್ಲ, ವಿವಿಧ ಧರ್ಮಗಳ ತವರೂರು ಕೂಡ ಹೌದು. ಇಲ್ಲಿ ಹಲವು ಧರ್ಮಗಳ ಜನರು ಜೊತೆಯಾಗಿ ಸೆರಿ ಬದುಕುತ್ತಿದ್ದಾರೆ. ಕರ್ನಾಟಕದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಹಿಂದೂಗಳೇ ಇರೋದು. ಇವರ ಜೊತೆಗೆ ಇನ್ನಿತರ ಧರ್ಮಗಳ (religions) ಜನರೆಷ್ಟು ಪ್ರಮಾಣದಲ್ಲಿದ್ದಾರೆ ನೋಡೋಣ.
ಧರ್ಮಗಳ ಜನರ ದಾಖಲೆಯನ್ನು ರಾಜ್ಯದಲ್ಲಿ ನೆಲೆಸಿರುವ ಜನರ ಆಧಾರದ ಮೇಲೆ ನಿರ್ಧಾರ ಮಾಡಲಾಗಿದೆ. ಅಂದ ಹಾಗೇ ಕರ್ನಾಟಕದಲ್ಲಿ 5ನೇ ಸ್ಥಾನದಲ್ಲಿರುವ ಜಿಲ್ಲೆ ಬೌಧ ಧರ್ಮ (Buddism). ಇಲ್ಲಿ ಬೌಧ ಧರ್ಮದ ಜನರು 0.16% ಜನರಿದ್ದಾರೆ. ಅಂದ್ರೆ ಅತಿ ಕಡಿಮೆ ಪ್ರಮಾಣದಲ್ಲಿ ಈ ಧರ್ಮದ ಜನರಿದ್ದಾರೆ. ಮುಖ್ಯವಾಗಿ ಕುಶಾಲನಗರದಲ್ಲಿ ಹೆಚ್ಚಿನ ಪ್ರಮಾಣದ ಭೌಧ ಧರ್ಮೀಯರನ್ನು ನಾವು ಕಾಣಬಹುದು.
ಇನ್ನು ನಾಲ್ಕನೇ ಸ್ಥಾನದಲ್ಲಿ ಜೈನ (Jainism) ಧರ್ಮದವರಿದ್ದಾರೆ. ಈ ಧರ್ಮದ ಜನರು ಕರ್ನಾಟಕದಲ್ಲಿ 0.72 % ನಷ್ಟು ಮಾತ್ರ ಇದ್ದಾರೆ. ರಾಜ್ಯದ ಹಲವೆಡೆ ಜೈನ ಧರ್ಮಕ್ಕೆ ಸಂಬಂಧಿಸಿದ ಐತಿಹಾಸಿಕ ಕಟ್ಟಡಗಳನ್ನು ಕಾಣಬಹುದು. ಮೂಡಬಿದಿರೆಯನ್ನು ಜೈನ ಕಾಶಿ ಅಂತ ಕರೆಯುತ್ತಾರೆ, ಇಲ್ಲಿ ಸಾವಿರ ಕಂಬದ ಬಸದಿಯನ್ನು ಕಾಣಬಹುದು.
ಇದಲ್ಲದೇ ಕರ್ನಾಟಕದಲ್ಲಿ ಮೂರನೇ ಸ್ಥಾನದಲ್ಲಿರುವ ಧರ್ಮ ಕ್ರಿಶ್ಚಿಯನ್ (Christianity). ಹೌದು, ನಮ್ಮ ಕರ್ನಾಟಕದಲ್ಲಿ ಕ್ರಿಶ್ಚಿಯನ್ನರ ಸಂಖ್ಯೆ 1.87 % ದಷ್ಟಿದೆ. ಅಂದ್ರೆ 1,009,164 ಜನರಿದ್ದಾರೆ. ಇವರು ಕರ್ನಾಟಕದ ದಕ್ಷಿಣ ಕನ್ನಡ, ಉಡುಪಿ, ಬೆಂಗಳೂರು, ಬೀದರ್, ಮೈಸೂರು, ಕೋಲಾರ ಮೊದಲಾದ ಕಡೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.
Namaz
ಇನ್ನು ಎರಡನೇ ಸ್ಥಾನದಲ್ಲಿ ಇಸ್ಲಾಂ (Islam) ಧರ್ಮವಿದ್ದು, ಇವರ ಸಂಖ್ಯೆ 12.92% ದಷ್ಟಿದೆ. ಅಂದ್ರೆ ಸುಮಾರು 60 ಲಕ್ಷದಷ್ಟು ಜನರು ಇಸ್ಲಾಂ ಧರ್ಮಕ್ಕೆ ಸೇರಿದವರಾಗಿದ್ದಾರೆ. ರಾಜ್ಯದ ವಿವಿಧ ಭಾಗಗಳಲ್ಲಿ ಇಸ್ಲಾಂ ಧರ್ಮ ಹರಡಿದೆ.
ಮೊದಲನೇ ಸ್ಥಾನದ ಬಗ್ಗೆ ಹೇಳುವ ಅವಶ್ಯಕತೆ ಇಲ್ಲ. ಯಾಕಂದ್ರೆ ಮೊದಲನೇ ಸ್ಥಾನದಲ್ಲಿ ಹಿಂದೂ ಧರ್ಮ ಇದೆ. ಕರ್ನಾಟಕದಲ್ಲಿ ಹಿಂದೂಗಳ (Hindu) ಸಂಖ್ಯೆ 84%ದಷ್ಟಿದೆ. ಕರ್ನಾಟಕವನ್ನು ದೇವಾಲಯಗಳ ತವರೂರು ಅಂತಾನೆ ಹೇಳಬಹುದು. ಇದು ಅನಾದಿ ಕಾಲದಿಂದಲೂ ರಾಜ್ಯದಲ್ಲಿ ಹಿಂದೂ ಆಳ್ವಿಕೆಯ ಸಂಕೇತವಾಗಿದೆ.
ಇದಲ್ಲದೇ ರಾಜ್ಯದಲ್ಲಿ ಸಿಖ್ಖರೂ ಇದ್ದಾರೆ, ಇವರ ಜೊತೆ ಇನ್ನೂ ಕೆಲವು ಧರ್ಮದ ಜನರು ಸಹ ಇದ್ದಾರೆ ಎಂದು ವರದಿಗಳು ಸೂಚಿಸಿವೆ.