ಅಮರನಾಥ ಯಾತ್ರೆಗೆ ತೆರಳುವಿರಾ? ಈ ತಪ್ಪು ಮಾಡ್ಲೇಬೇಡಿ
ಕರೋನವೈರಸ್ ಸಾಂಕ್ರಾಮಿಕ ರೋಗದಿಂದಾಗಿ ಸ್ಥಗಿತಗೊಂಡಿದ್ದ ಅಮರನಾಥ ಯಾತ್ರೆಯು ಪೂರ್ಣ ಎರಡು ವರ್ಷಗಳ ನಂತರ ಇದೀಗ ಆರಂಭವಾಗಿದೆ. ಅಮರನಾಥ ಯಾತ್ರೆಯು ಈ ವರ್ಷದ ಜೂನ್ 30 ರಂದು ಪ್ರಾರಂಭವಾಗಲಿದ್ದು, 43 ದಿನಗಳ ಕಾಲ ನಡೆಯಲಿದೆ. ಈ ಸಮಯದಲ್ಲಿ ಕೆಲವು ವಿಷಯಗಳ ಬಗ್ಗೆ ನೆನಪಿಟ್ಟುಕೊಂಡು, ತಪ್ಪುಗಳನ್ನು ಮಾಡದೇ ಇದ್ದರೆ ಉತ್ತಮ.
ಪ್ರತಿ ವರ್ಷ ಲಕ್ಷಾಂತರ ಜನರು ಬಾಬಾ ಬರ್ವಾನಿಯ ದರ್ಶನಕ್ಕೆ ತಪ್ಪದೇ ತೆರಳುತ್ತಾರೆ. ಕೊರೊನಾ ಸಾಂಕ್ರಾಮಿಕ ರೋಗದಿಂದಾಗಿ, ಅಮರನಾಥ ಯಾತ್ರೆಯನ್ನು ಕಳೆದ ಎರಡು ವರ್ಷಗಳಿಂದ ನಿಷೇಧಿಸಲಾಗಿತ್ತು, ಇದೀಗ ಕೊರೋನಾ ಸಮಸ್ಯೆ ಕಡಿಮೆಯಾಗಿರೋದ್ರಿಂದ ಈ ವರ್ಷ ಯಾತ್ರೆ ಮತ್ತೆ ಪ್ರಾರಂಭವಾಗುತ್ತಿದೆ. ಈ ವರ್ಷ ಅಮರನಾಥ ಯಾತ್ರೆ ಜೂನ್ 30 ರಿಂದ ಪ್ರಾರಂಭವಾಗಲಿದ್ದು, ಆಗಸ್ಟ್ 11, 2022 ರವರೆಗೆ ಮುಂದುವರಿಯಲಿದೆ.
ಅಮರನಾಥ ಯಾತ್ರೆಯು ಖಂಡಿತವಾಗಿಯೂ ಸುಲಭದ ಯಾತ್ರೆಯಲ್ಲ, ಇದು ಅತ್ಯಂತ ಕಷ್ಟಕರವಾದ ಚಾರಣಗಳಲ್ಲಿ (hardest trekking) ಒಂದಾಗಿದೆ. ಒಂದು ವೇಳೆ, ನೀವು ಈ ವರ್ಷ ಅಮರನಾಥ ಯಾತ್ರೆಗೆ ಹೋಗಲು ತಯಾರಿ ನಡೆಸುತ್ತಿದ್ದರೆ, ಕೆಲವು ನಿಯಮಗಳನ್ನು ಅನುಸರಿಸುವುದು ತುಂಬಾ ಮುಖ್ಯ. ಇಂದು ಅಮರನಾಥ ಯಾತ್ರೆಯ ಸಮಯದಲ್ಲಿ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂದು ನಾವು ನಿಮಗೆ ಹೇಳಲಿದ್ದೇವೆ.
ಅಮರನಾಥ ಯಾತ್ರೆಯ ಸಮಯದಲ್ಲಿ ಇದನ್ನು ಮಿಸ್ ಮಾಡದೆ ಮಾಡಿ
ಅಮರನಾಥ ಯಾತ್ರೆಗೆ ಹೋಗುವ ಮೊದಲು ನಿಮ್ಮ ದೈಹಿಕ ಸಾಮರ್ಥ್ಯದ ಬಗ್ಗೆ ಕಾಳಜಿ ವಹಿಸಿ. ಪ್ರವಾಸಕ್ಕೆ ಹೋಗುವ ಮೊದಲು ಪ್ರತಿದಿನ 4 ರಿಂದ 5 ಕಿಲೋಮೀಟರ್ ನಡೆಯಿರಿ. ಜಾಗಿಂಗ್ ಮಾಡಲು ಸಾಧ್ಯವಾದರೆ, ಪ್ರತಿದಿನ 30 ನಿಮಿಷಗಳ ಕಾಲ ಇದನ್ನು ಮಾಡಿ. ನೀವು ಪ್ರವಾಸಕ್ಕೆ ಹೋಗುವ ಒಂದು ತಿಂಗಳ ಮೊದಲೇ ಇದನ್ನೆಲ್ಲಾ ಆರಂಭಿಸಬೇಕು.
ಅಷ್ಟೇ ಅಲ್ಲ ದೈನಂದಿನ ದಿನಚರಿಯಲ್ಲಿ ಯೋಗ ಸೇರಿಸಿ, ವಿಶೇಷವಾಗಿ ಉಸಿರಾಟದ ವ್ಯಾಯಾಮಗಳು (exercise). ಅಮರನಾಥ ಯಾತ್ರೆಯ ಚಾರಣವು ಸಾಕಷ್ಟು ಕಷ್ಟವಾಗಿರುತ್ತೆ. ಈ ಯಾತ್ರೆಗೆ 13 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಮತ್ತು 75 ವರ್ಷಕ್ಕಿಂತ ಮೇಲ್ಪಟ್ಟ ವೃದ್ಧರನ್ನು ಕರೆದೊಯ್ಯಬಾರದು. ಅಲ್ಲದೆ, ಗರ್ಭಿಣಿಯರು ಮತ್ತು 6 ತಿಂಗಳಿಗಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಸಹ ಈ ಯಾತ್ರೆಗೆ ಕರೆದೊಯ್ಯಲು ಅನುಮತಿಸಲಾಗುವುದಿಲ್ಲ.
ಮಾನ್ಸೂನ್ (monsoon) ಸಮಯದಲ್ಲಿ ಅಮರನಾಥ ಯಾತ್ರೆ ಪ್ರಾರಂಭವಾಗುತ್ತದೆ. ಈ ಸಮಯದಲ್ಲಿ, ಇಲ್ಲಿನ ಹವಾಮಾನವು ಹೆಚ್ಚು ತಂಪಾಗಿರುತ್ತದೆ. ಇದಕ್ಕಾಗಿ, ಬೆಚ್ಚಗಿನ ಬಟ್ಟೆಗಳು ಮತ್ತು ಛತ್ರಿಗಳನ್ನು ತೆಗೆದುಕೊಳ್ಳೋದು ತುಂಬಾನೆ ಮುಖ್ಯ. ಫ್ಲ್ಯಾಶ್ ಲೈಟ್ ಗಳು, ವಾಟರ್ ಪ್ರೂಫ್ ಟ್ರೆಕ್ಕಿಂಗ್ ಶೂಗಳು, ರೇನ್ ಕೋಟ್ ಗಳನ್ನು ಒಯ್ಯಲು ಮರೆಯಬೇಡಿ.
ಅಮರನಾಥ ಯಾತ್ರೆಯ ಸಮಯದಲ್ಲಿ ಪೂರ್ಣ ಬಟ್ಟೆಗಳನ್ನು ಧರಿಸಿ. ಉದಾಹರಣೆಗೆ, ಸಲ್ವಾರ್ ಕಮೀಜ್, ಪ್ಯಾಂಟ್ ಶರ್ಟ್ ಅಥವಾ ಟ್ರ್ಯಾಕ್ ಸೂಟ್ ಧರಿಸಿ. ಸೀರೆಗಳನ್ನು ಧರಿಸುವುದನ್ನು ತಪ್ಪಿಸಿ, ಇಲ್ಲದಿದ್ದರೆ ಆರೋಹಣದ ಸಮಯದಲ್ಲಿ ನಿಮಗೆ ತುಂಬಾನೆ ಕಷ್ಟವಾಗಬಹುದು. ಅಲ್ಲದೆ, ಪ್ರಯಾಣಿಸುವಾಗ ಉತ್ತಮ ಟ್ರೆಕ್ಕಿಂಗ್ ಬೂಟ್ ಧರಿಸಿ. ಮಳೆಗಾಲದಲ್ಲಿ ರಸ್ತೆಗಳು ಸಾಕಷ್ಟು ಜಾರುವುದರಿಂದ ಚಪ್ಪಲಿಗಳನ್ನು ಧರಿಸುವ ತಪ್ಪನ್ನು ಮಾಡಬೇಡಿ.
ಯಾವಾಗಲೂ ನೀರಿನ ಬಾಟಲಿ ನಿಮ್ಮೊಂದಿಗೆ ಕೊಂಡೊಯ್ಯಿರಿ ಮತ್ತು ನಿಮ್ಮನ್ನು ನೀವು ಹೈಡ್ರೇಟ್ ಆಗಿರಿಸಿ. ಅಲ್ಲದೆ, ಅಮರನಾಥ ಯಾತ್ರೆಯ ಸಮಯದಲ್ಲಿ ನಿಮ್ಮ ಶಕ್ತಿ ಕಡಿಮೆಯಾಗದಂತೆ ನಿಮ್ಮೊಂದಿಗೆ ತಿಂಡಿಗಳನ್ನು ಒಯ್ಯಿರಿ. ಡ್ರೈ ಫ್ರುಟ್ಸ್ (dry fruits), ಗ್ಲುಕೋಸ್ ಬಿಸ್ಕತ್ತುಗಳು, ಬೆಲ್ಲ, ಡಾರ್ಕ್ ಚಾಕೊಲೇಟ್ ಇತ್ಯಾದಿ ನಿಮ್ಮ ಬಳಿ ಇರಲಿ.
ಟ್ರೆಕ್ಕಿಂಗ್ ಮಾಡುವಾಗ ಎಲ್ಲಾ ಸಮಯದಲ್ಲೂ ನಿಮ್ಮ ಗುಂಪಿನೊಂದಿಗೆ ಇರಿ.
ಅಮರನಾಥ ಯಾತ್ರೆಯ ಸಮಯದಲ್ಲಿ ನಿಮಗೆ ವೈದ್ಯಕೀಯ ಸೌಲಭ್ಯ (medical fecility) ನೀಡಲಾಗಿದ್ದರೂ, ತುರ್ತು ಪರಿಸ್ಥಿತಿಗಾಗಿ ನೀವು ಫಸ್ಟ್ ಏಡ್ ಕಿಟ್ ನಿಮ್ಮೊಂದಿಗೆ ಇಟ್ಟುಕೊಳ್ಳಬೇಕು.
ಅಮರನಾಥ ಯಾತ್ರೆಯ ಸಮಯದಲ್ಲಿ ಇದನ್ನ ಮಾಡಬೇಡಿ
ಅಮರನಾಥ ಯಾತ್ರೆಯು ತುಂಬಾನೆ ಕಷ್ಟಕರವಾದ ಚಾರಣವಾಗಿದೆ. ಆದ್ದರಿಂದ, ಎಚ್ಚರಿಕೆಯನ್ನು ವಿವಿಧ ಸ್ಥಳಗಳಲ್ಲಿ ಬರೆಯಲಾಗುತ್ತದೆ. ಪ್ರಯಾಣದ ಸಮಯದಲ್ಲಿ ನೀವು ನಿಯಮಗಳನ್ನು ಅನುಸರಿಸಬೇಕು ಮತ್ತು ಇದನ್ನು ನೆನಪಿನಲ್ಲಿಡಬೇಕು. ಈ ನಿಯಮಗಳನ್ನು ನಿರ್ಲಕ್ಷಿಸುವ ತಪ್ಪನ್ನು ಮಾಡ್ಬೇಡಿ.
ಗುಹೆಯನ್ನು ತಲುಪಲು ಯಾವುದೇ ಶಾರ್ಟ್ ಕಟ್ ಇಲ್ಲ. ಈ ಸಮಯದಲ್ಲಿ, ನೀವು ಶಾರ್ಟ್ ಕಟ್ (short cut)ತೆಗೆದುಕೊಳ್ಳುವ ಬಗ್ಗೆ ಯೋಚಿಸಿದರೆ, ಅದು ನಿಮ್ಮ ಜೀವಕ್ಕೆ ಅಪಾಯವನ್ನುಂಟು ಮಾಡಬಹುದು. ಆ ಯೋಚನೆ ಮಾಡಲೇಬೇಡಿ.
ಪ್ರವಾಸದ ಸಮಯದಲ್ಲಿ ನಿಮ್ಮ ಸುತ್ತಲಿನ ಸ್ಥಳ ಮತ್ತು ಪರಿಸರವನ್ನು ಸ್ವಚ್ಛವಾಗಿರಿಸಿ. ಪ್ಲಾಸ್ಟಿಕ್ ವಸ್ತುಗಳನ್ನು ಬಳಸಬೇಡಿ ಅಥವಾ ಸ್ಥಳವನ್ನು ಗಲೀಜು ಮಾಡಬೇಡಿ. ಅಮರನಾಥ ಯಾತ್ರೆಯನ್ನು ಪವಿತ್ರವೆಂದು ಪರಿಗಣಿಸಲಾಗಿದೆ, ಈ ಸಮಯದಲ್ಲಿ ಯಾವುದೇ ಮಾದಕ ವಸ್ತುಗಳು ಮತ್ತು ಮಾಂಸಾಹಾರದ ಸೇವನೆ ತಪ್ಪಿಸಿ. ಇದನ್ನು ಕಟ್ಟುನಿಟ್ಟಾಗಿ ನಿರ್ಬಂಧಿಸಲಾಗಿದೆ.