ಕೆಲವೇ ವರ್ಷಗಳಲ್ಲಿ ವಿಶ್ವ ನಕ್ಷೆಯಿಂದ ಕಣ್ಮರೆಯಾಗಲಿವೆ ಈ ತಾಣಗಳು… ಭಾರತವೂ ಈ ಲಿಸ್ಟಲ್ಲಿದೆ
ಮುಂಬರುವ ಸಮಯದಲ್ಲಿ ವಿಶ್ವ ನಕ್ಷೆಯಿಂದ ಕಣ್ಮರೆಯಾಗಲಿದೆ ಎಂದು ಹೇಳಲಾಗುವ ಅನೇಕ ಸ್ಥಳಗಳು ವಿಶ್ವದಾದ್ಯಂತ ಇವೆ. ಅರ್ಧದಷ್ಟು ಜನಸಂಖ್ಯೆಯನ್ನು ಸಮುದ್ರದಲ್ಲಿ ಹೂಳಬಹುದಾದ ಈ ಸ್ಥಳಗಳ ಬಗ್ಗೆ ತಿಳಿದುಕೊಳ್ಳಿ. ಇದರಲ್ಲಿ ಭಾರತವೂ ಸೇರಿದೆ ಎಂದರೆ ನೀವು ನಂಬಲೇಬೇಕು.
ಜಗತ್ತಿನಲ್ಲಿ ಜಾಗತಿಕ ತಾಪಮಾನ (global warming) ಏರಿಕೆಯಿಂದಾಗಿ ಅನೇಕ ಸಮಸ್ಯೆಗಳು ಉಂಟಾಗುತ್ತಿವೆ. ಬೇಸಿಗೆಯಲ್ಲಿ ಎಲ್ಲೋ ಹಿಮ ಬೀಳುತ್ತಿದೆ, ಮತ್ತು ಚಳಿಗಾಲದಲ್ಲಿ ಎಲ್ಲೋ ಭಾರಿ ಮಳೆಯಾಗುತ್ತದೆ. ಮತ್ತೊಂದೆಡೆ, ನಾವು ಬೇಸಿಗೆಯ ಬಗ್ಗೆ ಮಾತನಾಡಿದರೆ, ಏಪ್ರಿಲ್ ತಿಂಗಳಲ್ಲಿ, ಸುಡುವ ಶಾಖವಿದೆ. ಹವಾಮಾನವು ಬದಲಾಗುತ್ತಿರುವ ಕಾರಣ ವಿಶ್ವದ ಅನೇಕ ಸ್ಥಳಗಳು ಇನ್ನೇನು ಕೆಲವೇ ವರ್ಷದಲ್ಲಿ ನಾಶವಾಗುತ್ತವೆ.ಜಗತ್ತಿನಲ್ಲಿ ಅನೇಕ ಸ್ಥಳಗಳಿವೆ, ಅವು ನೀರಿನಲ್ಲಿ ಮುಳುಗುವ ಅಂಚನ್ನು ತಲುಪಿವೆ. ಇದರ ಪ್ರಕಾರ ಬದಲಾವಣೆಗಳು ಮುಂದುವರಿದರೆ, ಈ ನಗರಗಳು 2100 ರ ವೇಳೆಗೆ ಮುಳುಗುತ್ತವೆ.
ಮಾಲೆ, ಮಾಲ್ಡೀವ್ಸ್ (Male, Maldives)
ನ್ಯಾಷನಲ್ ಓಷಿಯಾನಿಕ್ ಅಂಡ್ ಅಟ್ಮಾಸ್ಫಿಯರ್ ಅಡ್ಮಿನಿಸ್ಟ್ರೇಷನ್ ಪ್ರಕಾರ, ಇಲ್ಲಿನ ಸಮುದ್ರ ಮಟ್ಟವು 2000 ದಲ್ಲಿ 1.4 ಮಿಲಿಮೀಟರ್ ಇದ್ದದ್ದು, ಇದೀಗ ವೇಗವಾಗಿ ಏರಿದ್ದು, ಇದು 2015 ರ ವೇಳೆಗೆ 3.6 ಮಿಲಿಮೀಟರ್ ಗೆ ಏರಿದೆ. ಈ ದೇಶವು ಮುಳುಗುವ ದೇಶಗಳಲ್ಲಿ ಮೊದಲ ಸ್ಥಾನದಲ್ಲಿದೆ. ಈ ದೇಶದ ಎಪ್ಪತ್ತೇಳು ಪ್ರತಿಶತದಷ್ಟು ಭಾಗ ಕಣ್ಮರೆಯಾಗುತ್ತದೆ.
ಕಿರಿಬಾಟಿ, ಓಷಿಯಾನಿಯಾ (Kiribati, Oceania)
ಓಷಿಯಾನಿಯಾ ಕಿರಿಬಾಟಿ, ಈ ದೇಶದ ಜನಸಂಖ್ಯೆ 1 ಲಕ್ಷ 20 ಸಾವಿರ, ಈ ದೇಶವು ತನ್ನ ಮೂರನೇ ಎರಡರಷ್ಟು ಪಾಲನ್ನು ಕಳೆದುಕೊಳ್ಳುತ್ತದೆ ಎಂದು ವರದಿಯೊಂದು ತಿಳಿಸಿದೆ. ಅಂದರೆ 2100ರ ವೇಳೆಗೆ ಈ ದೇಶದ ಮುಕ್ಕಾಲು ಭಾಗವೇ ಇರೋದಿಲ್ಲ.
ಚೀನಾ (China)
ಹೆಚ್ಚುತ್ತಿರುವ ಸಮುದ್ರ ಮಟ್ಟದಿಂದಾಗಿ, ಚೀನಾ ಕೂಡ ಭವಿಷ್ಯದಲ್ಲಿ ಸಾಕಷ್ಟು ತೊಂದರೆ ಅನುಭವಿಸಲಿದೆ. ಚೀನಾದಲ್ಲಿ ಸುಮಾರು 43 ಮಿಲಿಯನ್ ಜನರು ಸಮುದ್ರ ತೀರದಲ್ಲಿ ವಾಸಿಸುತ್ತಿದ್ದಾರೆ, ಇದರಿಂದಾಗಿ ಅವರು ಸಾಕಷ್ಟು ತೊಂದರೆ ಅನುಭವಿಸಬಹುದು.
ಢಾಕಾ, ಬಾಂಗ್ಲಾದೇಶ (Dhaka, Bangladesh)
ಬಾಂಗ್ಲಾದೇಶವೂ ಸಹ ನಾಶವಾಗುವ ಅಂಚಿನಲ್ಲಿದೆ. ಮುಂಬರುವ ಸಮಯದಲ್ಲಿ ಬಾಂಗ್ಲಾದೇಶದ ಢಾಕಾ ಕೂಡ ಮುಳುಗಡೆಯಾಗಬಹುದು ಎಂದು ರಿಸರ್ಚ್ ತಿಳಿಸಿದೆ. ಇದರಿಂದಾಗಿ 32 ಮಿಲಿಯನ್ ಜನರ ಮನೆಗಳು ನಾಶವಾಗುತ್ತವೆ.
ಈ ಪಟ್ಟಿಯಲ್ಲಿ ಭಾರತವೂ ಸೇರಿದೆ
ಇನ್ನು ಭಯಪಡುವಂತಹ ವಿಷಯ ಅಂದ್ರೆ ಈ ಲಿಸ್ಟ್ ನಲ್ಲಿ ಭಾರತ ಸಹ ಸೇರಿದೆ. ಯುರೋಪಿಯನ್ ಯೂನಿಯನ್ ಫಂಡೆಡ್ ಲೈಫ್ ಅಡಾಪ್ಶನ್ ಪ್ರಾಜೆಕ್ಟ್ ಪ್ರಕಾರ, ಮುಂಬರುವ ಸಮಯದಲ್ಲಿ, ದೇಶದ 27 ಮಿಲಿಯನ್ ಜನರ ಭೂಮಿ ಸಮುದ್ರದಲ್ಲಿ ಮುಳುಗಬಹುದು.
ಬ್ಯಾಂಕಾಕ್, ಥೈಲ್ಯಾಂಡ್ (Bangkok, Thailand)
ಥೈಲ್ಯಾಂಡ್ ಕೂಡ ಹೆಚ್ಚಿನ ಕಡೆ ನೀರಿನಿಂದಲೇ ಆಅವೃತವಾಗಿರುವ ಸುಂದರ ತಾಣ. ಆದರೆ ವಿಶ್ವ ಆರ್ಥಿಕ ವೇದಿಕೆಯ ವರದಿಯ ಪ್ರಕಾರ, ಮುಂಬರುವ ಸಮಯದಲ್ಲಿ ಥೈಲ್ಯಾಂಡ್ ಕೂಡ ನೀರಿನಲ್ಲಿ ಮುಳುಗಬಹುದು ಎಂದು ಎಚ್ಚರಿಸಿದೆ.