Intersting Facts: ಈ ದೇಶಗಳಲ್ಲಿ ಜೋರಾಗಿ ನಗೋದು ತಪ್ಪು, ಪ್ರಶ್ನೆ ಮಾಡೋದು ತಪ್ಪು!
ಪ್ರಶ್ನೆ ಕೇಳೊದನ್ನು ಅಥವಾ ಜೋರಾಗಿ ನಗೋದನ್ನು ಯಾರದ್ರೂ ಯಾವತ್ತಾದ್ರೂ ಪ್ರಶ್ನಿಸಿದ್ದಾರ ಅಥವಾ ನಿಷೇಧ ಮಾಡಿದ್ದಾರ? ಇದು ನಿಷೇಧ ಮಾಡುವ ವಿಷಯ ಅಲ್ಲ ಅನ್ನೋದು ನಿಮಗೆ ಗೊತ್ತಿದೆ. ಆದರೆ ಇದನ್ನೆಲ್ಲಾ ನಿಷೇಧ ಮಾಡುವ ಕೆಲವು ದೇಶಗಳಿವೆ ಗೊತ್ತಾ?
ಪ್ರತಿಯೊಂದು ಪ್ರದೇಶ, ಜಾತಿ, ಧರ್ಮವು ತಮ್ಮದೇ ಆದ ವಿಭಿನ್ನ ಪದ್ಧತಿಯನ್ನು ಹೊಂದಿದೆ. ನಾವು ಅನೇಕ ಪದ್ಧತಿಗಳನ್ನು (customs) ನೋಡಲು ಇಷ್ಟಪಡುತ್ತೇವೆ ಮತ್ತು ಅನೇಕ ಪದ್ಧತಿಗಳನ್ನು ನೋಡಿದ ನಂತರ, ಈ ಪದ್ಧತಿಗಳನ್ನುಯಾವೆ ಇವೆ ಎಂದು ನಮಗೆ ಅನಿಸುತ್ತದೆ. ಅಂತಹ ಕೆಲವು ವಿಚಿತ್ರ ಪದ್ಧತಿಗಳ ಬಗ್ಗೆ ತಿಳಿಯೋಣ.
ಹೌದು, ಇಂದು ಅಂತಹ ಕೆಲವು ವಿಚಿತ್ರ ಪದ್ಧತಿಗಳ ಬಗ್ಗೆ ತಿಳಿಯೋಣ,ಈ ವಿಚಿತ್ರ ಪದ್ಧತಿ ಬಗ್ಗೆ ಕೇಳಿದ್ರೆ ನಿಮಗೆ ಅಚ್ಚರಿಯಾಗಬಹುದು. ಹೌದು, ಪ್ರಪಂಚದ ಕೆಲವು ಭಾಗಗಳಲ್ಲಿ ಪ್ರಶ್ನೆ ಕೇಲೋದು, ಬಾಯಿ ತೆರೆದು ನಗುವುದು ಅಥವಾ ಎಡಗೈಯನ್ನು ಬಳಸುವುದು ಅಸಭ್ಯ ಮತ್ತು ಅಗೌರವವೆಂದು ಪರಿಗಣಿಸಲಾಗುತ್ತದೆ.
ಬಿಸಿನೆಸ್ ಇನ್ಸೈಡರ್ ಇತ್ತೀಚೆಗೆ ವಿವಿಧ ದೇಶಗಳಲ್ಲಿ ತಪ್ಪು ಎಂದು ಪರಿಗಣಿಸಲಾದ ಕೆಲವು ಪದ್ಧತಿಗಳ ಬಗ್ಗೆ ಹೇಳಿದೆ. ಆದ್ದರಿಂದ ರಜೆಗೆ ಈ ತಾಣಗಳಿಗೆ ಹೋಗುವ ಮೊದಲು, ಈ ಪದ್ಧತಿಗಳ ಬಗ್ಗೆ ತಿಳಿದುಕೊಳ್ಳಲು ಮರೆಯದಿರಿ, ಇದರಿಂದ ನೀವು ನಂತರ ಯಾವುದೇ ರೀತಿಯ ಮುಜುಗರ ಎದುರಿಸಬೇಕಾಗಿಲ್ಲ.
ಟ್ಯಾಕ್ಸಿಯ ಮುಂಭಾಗದ ಸೀಟಿನಲ್ಲಿ ಕುಳಿತುಕೊಳ್ಳುವುದು ತಪ್ಪು: ಟ್ಯಾಕ್ಸಿಯ ಮುಂಭಾಗದ ಸೀಟಿನಲ್ಲಿ (sitting front seat of taxi) ಕುಳಿತುಕೊಳ್ಳುವುದು ತಪ್ಪು ಎಂದು ನೀವು ಎಂದಾದರೂ ಕೇಳಿದ್ದೀರಾ? ಆಸ್ಟ್ರೇಲಿಯಾ, ಐರ್ಲೆಂಡ್, ಸ್ಕಾಟ್ಲೆಂಡ್ ಮತ್ತು ನೆದರ್ಲ್ಯಾಂಡ್ಸ್ನ ಕೆಲವು ಭಾಗಗಳಲ್ಲಿ, ಟಾಕ್ಸಿಯ ಮುಂಭಾಗದ ಸೀಟ್ ನಲ್ಲಿ ಕುಳಿತುಕೊಳ್ಳುವುದು ಅಸಭ್ಯವೆಂದು ಪರಿಗಣಿಸಲಾಗುತ್ತದೆ. ಯುಎಸ್ನಲ್ಲಿ ಕ್ಯಾಬ್ನ ಹಿಂದಿನ ಸೀಟಿನಲ್ಲಿ ಕುಳಿತುಕೊಳ್ಳುವುದು ಸಾಮಾನ್ಯವಾದರೂ, ಡ್ರೈವರ್ ಸೀಟ್ನಲ್ಲಿ ಕುಳಿತುಕೊಳ್ಳುವುದು ತಪ್ಪು.
ಬಾಯಿ ತೆರೆದು ಜೋರಾಗಿ ನಗೋದು ತಪ್ಪು: ಹುಡುಗಿಯರು ಜೋರಾಗಿ ನಗಬಾರದು (laughing loudly). ಕಡಿಮೆ ಧ್ವನಿಯಲ್ಲಿ ಮಾತನಾಡಬೇಕು... ಅನ್ನೋದನ್ನೆಲ್ಲಾ ಕೇಳಿರುತ್ತೀರಿ. ಆದರೆ ಒಂದು ದೇಶದಲ್ಲಿ ಹುಡುಗ ಆಗಲಿ, ಹುಡುಗಿ ಆಗಲಿ ಬಾಯಿ ತೆರೆದು ನಗುವುದೇ ತಪ್ಪಂತೆ. ಹೀಗೂ ಇದ್ಯಾ?
ಜಪಾನ್ನಲ್ಲಿ ಇದನ್ನು ನೆನಪಿನಲ್ಲಿಡಲೇಬೇಕು, ಏಕೆಂದರೆ ಇಲ್ಲಿ ಬಹಿರಂಗವಾಗಿ ನಗುವುದು ತಪ್ಪು ಎನ್ನಲಾಗುತ್ತೆ. ಅಲ್ಲದೆ, ಜಪಾನ್ನಲ್ಲಿ, ನಿಮ್ಮ ಮುತ್ತಿನಂತಹ ಬಿಳಿ ಹಲ್ಲನ್ನು ತೋರಿಸುವುದು ಸಹ ಒರಟು ಎಂದು ಪರಿಗಣಿಸಲಾಗುತ್ತದೆ ಮತ್ತು ಬಾಯಿಯನ್ನು ದೊಡ್ಡದಾಗಿ ತೆರೆದು ತಿನ್ನೋದು ಸಹ ತಪ್ಪು.
ರೆಸ್ಟೋರೆಂಟಲ್ಲಿ ಟಿಪ್ ಕೊಡೋದು ತಪ್ಪಂತೆ: ಯಾವುದೇ ರೆಸ್ಟೋರೆಂಟ್ ಗೆ ಹೋಗಿ ಆಹಾರ ಸೇವಿಸಿದಾಗಲೆಲ್ಲಾ, ನಾವು ಖಂಡಿತವಾಗಿಯೂ ಸರ್ವೆಂಟ್ ಗೆ ಸಂತೋಷದಿಂದ ಟಿಪ್ ನೀಡುತ್ತೇವೆ, ಆದರೆ ನೀವು ಇದನ್ನು ಜಪಾನ್ ಅಥವಾ ಕೊರಿಯಾದಲ್ಲಿ ಮಾಡಿದರೆ, ತಪ್ಪಾಗುತ್ತೆ.. ಹೌದು, ನೀವು ಸರಿಯಾಗಿ ಕೇಳಿದ್ದೀರಿ, ಆಹಾರವನ್ನು ಸೇವಿಸಿದ ನಂತರ ಟಿಪ್ ನೀಡೋದು ಇಲ್ಲಿ ತಪ್ಪೆಂದು ಹೇಳಲಾಗುತ್ತೆ. ಸರ್ವೆಂಟ್ ಕಷ್ಟಪಟ್ಟು ದುಡಿಯೋದಕ್ಕೆ ಅವರಿಗೆ ಹಣ ನೀಡುವಾಗ, ಅವರಿಗೆ ಟಿಪ್ ನೀಡೋದು ತಪ್ಪು ಎಂದು ಪರಿಗಣಿಸಲಾಗುತ್ತೆ.
ಪ್ರಶ್ನೆಗಳನ್ನು ಕೇಳುವುದು ತಪ್ಪು: ಯಾರ ಬಳಿಯಾದರು ಪ್ರಶ್ನೆ ಕೇಳೋದು (questioning) ತಪ್ಪಾಗುತ್ತೆ. ಹೌದು ನೆದರ್ ಲ್ಯಾಂಡಲ್ಲಿ ಜನರ ಬಳಿ ಪ್ರಶ್ನೆಯನ್ನೇ ಕೇಳುವಂತಿಲ್ಲ. ಇಲ್ಲಿನ ಜನರು ಇದು ಅವರಿಗೆ ಮೋಸ ಮಾಡುವ ಮಾರ್ಗ ಎಂದು ಭಾವಿಸುತ್ತಾರೆ ಎಂದು ಅಲ್ಲಿನ ಜನರು ಭಾವಿಸುತ್ತಾರೆ. ನೀವು ಎಲ್ಲಿ ಕೆಲಸ ಮಾಡುತ್ತೀರಿ? ನಿಮ್ಮ ಮನೆ ಎಲ್ಲಿ? ಹೀಗೆ ಯಾವುದೇ ಪ್ರಶ್ನೆಯನ್ನೂ ಕೇಳುವ ಹಾಗಿಲ್ಲ.