ಈ ದೇಶದಲ್ಲಿ ಒಂದೆರಡಲ್ಲ… ಬರೋಬ್ಬರಿ 72 ಋತುಗಳಿವೆ ಗೊತ್ತಾ?
ಸಾಮಾನ್ಯವಾಗಿ, ಜಗತ್ತಿನಲ್ಲಿ ಕೇವಲ 4 ಋತುಗಳಿವೆ, ಆದರೆ ನಮ್ಮ ದೇಶದಲ್ಲಿ ಸಹ ನಾವು ಸಾಮಾನ್ಯವಾಗಿ 6 ಋತುಗಳನ್ನು ಮಾತ್ರ ಪರಿಗಣಿಸಲಾಗುತ್ತೇವೆ ಅಲ್ವಾ? ಆದರೆ ವರ್ಷವಿಡೀ 72 ಋತುಗಳನ್ನು ಹೊಂದುವ ದೇಶದ ಬಗ್ಗೆ ಎಂದಾದರೂ ಕೇಳಿದ್ದೀರಾ? ಇಲ್ಲಿದೆ ಅದರ ಬಗ್ಗೆ ವಿವರಣೆ.
ಇಡೀ ಜಗತ್ತಿನಲ್ಲಿ ಮುಖ್ಯವಾಗಿ 4 ಋತುಗಳಿವೆ (4 season). ನಾವು ಅವುಗಳನ್ನು ಬೇಸಿಗೆ, ಚಳಿಗಾಲ, ಮಳೆ ಮತ್ತು ವಸಂತಕಾಲ ಎನ್ನುತ್ತೇವೆ ಅನ್ನೋದು ನಿಮಗೂ ಗೊತ್ತು. ಕೆಲವು ತಿಂಗಳುಗಳಲ್ಲಿ ಭೌಗೋಳಿಕ ಪರಿಸ್ಥಿತಿಯನ್ನು ಅವಲಂಬಿಸಿ ಇವು ಬದಲಾಗುತ್ತಲೇ ಇರುತ್ತವೆ. ಋತುಗಳ ಚಕ್ರವೂ ಇದೆ, ಅದು ಒಂದರ ನಂತರ ಒಂದರಂತೆ ಬರುತ್ತದೆ. ಭಾರತೀಯ ಋತುಗಳ ಬಗ್ಗೆ ಮಾತನಾಡುವುದಾದರೆ 6 -ಋತುಗಳಿವೆ ಎಂದು ಹೇಳಬಹುದು. ಅವುಗಳೆಂದರೆ ವಸಂತ, ಬೇಸಿಗೆ, ಮಳೆ, ಶರತ್ಕಾಲ, ಹೇಮಂತ ಮತ್ತು ಶಿಶಿರ. ಇನ್ನು, ಚೀನೀ ಕ್ಯಾಲೆಂಡರ್ನಲ್ಲಿ 24 ಋತುಗಳನ್ನು ಉಲ್ಲೇಖಿಸಲಾಗಿದೆ.
ಆದರೆ ವರ್ಷವಿಡೀ 72 ಋತುಗಳನ್ನು ಹೊಂದಿರುವ ದೇಶದ ಬಗ್ಗೆ ನೀವು ಯಾವತ್ತಾದರೂ ಕೇಳಿದ್ದೀರಾ? ಇಲ್ಲ ಅಂದ್ರೆ ಇಂದು ನಾವು ನಿಮಗೆ ಹೇಳುತ್ತೇವೆ. ಇಲ್ಲಿನ ಹವಾಮಾನವು ವರ್ಷಪೂರ್ತಿ ಬಣ್ಣವನ್ನು ಬದಲಾಯಿಸುತ್ತದೆ. ನಾವೀಗ ಹೇಳ್ತಾ ಇರೋ ದೇಶದ ಹೆಸರು ಜಪಾನ್.
ಜಪಾನ್ ತನ್ನ ತಂತ್ರಜ್ಞಾನ (technology) ಮತ್ತು ವ್ಯವಸ್ಥೆಗೆ ಹೆಸರುವಾಸಿ, ಆದರೆ ಇಲ್ಲಿ ಋತು ಚಕ್ರದ ಬಗ್ಗೆ ತಿಳಿದರೆ ನೀವು ಇನ್ನಷ್ಟು ಆಶ್ಚರ್ಯಚಕಿತರಾಗುವಿರಿ. ಯಾಕಂದರೆ ಇಲ್ಲಿ 10 -20 ಅಲ್ಲ ಬರೋಬ್ಬರಿ 72 ಋತುಗಳಿವೆ. ಅವುಗಳ ಬಗ್ಗೆ ತಿಳಿಯೋಣ.
ಜಪಾನ್ ನಲ್ಲಿ ವರ್ಷಕ್ಕೆ 72 ಋತುಗಳಿವೆ
ಸಾಮಾನ್ಯವಾಗಿ, ಜಪಾನ್ ಕ್ಯಾಲೆಂಡರ್‌ನಲ್ಲಿ ವರ್ಷಾದ್ಯಂತ ಇರುವಂತಹ ಅದೇ 4 ಋತುಗಳಿವೆ. ಈ ಋತುಗಳನ್ನು 6 ಭಾಗಗಳಾಗಿ ವಿಂಗಡಿಸಲಾಗಿದೆ, ಇದು ಒಟ್ಟಾಗಿ 24 ಸೆಕ್ಕಿಗಳನ್ನು ಮಾಡುತ್ತದೆ. ಈ ಸೆಕ್ಕಿ ಅಂದರೆ ಉಪ-ಋತುಗಳು 15 ದಿನಗಳವರೆಗೆ ಇರುತ್ತವೆ. ಈ ಸೆಕ್ಕಿಗಳನ್ನು 3 'ಕೋ' ಗಳಾಗಿ ವಿಭಾಗಿಸಿದರೆ, ಒಟ್ಟು 72 'ಕೋ' ಎಂದು ವಿಂಗಡಿಸಲಾಗಿದೆ.
'ಕೋ' ಅಂದರೆ ಮೈಕ್ರೋಸೀಸನ್. ಜಪಾನಿನ ಸೀಸನ್ ಗಳನ್ನು ಅಲ್ಲಿನ ಪರಿಸರದ ಬದಲಾವಣೆ ಮೇಲೆ ಹೆಸರಿಸಲಾಗಿದೆ. ಅವು ಗೋಧಿ ಮಾಗಿಸುವುದು, ಮೊಳಕೆಯೊಡೆಯುವುದು, ಬೆಳೆ, ಹೂಬಿಡುವಿಕೆಯಂತಹ ನೈಸರ್ಗಿಕ ವಿದ್ಯಮಾನಗಳಿಗೆ ತಕ್ಕಂತೆ 72 ಸೀಸನ್ ಗಳನ್ನು ವಿಂಗಡಿಸಲಾಗಿದೆ.
ಸಣ್ಣ ಋತುಗಳು ಹೇಗೆ ರೂಪುಗೊಂಡವು?
ಜಪಾನ್ ನ ಈ ಸಣ್ಣ ಋತುಗಳನ್ನು (microseason) ಆರನೇ ಶತಮಾನದಲ್ಲಿ ಮಧ್ಯ ಕೊರಿಯಾದಿಂದ ತೆಗೆದುಕೊಳ್ಳಲಾಗಿದೆ. ಸೀಸನ್ ಹೆಸರುಗಳನ್ನು ಉತ್ತರ ಚೀನಾದ ಹವಾಮಾನದಿಂದ ತೆಗೆದುಕೊಳ್ಳಲಾಗಿದೆ, ಇದನ್ನು 1685 ರಲ್ಲಿ ಶಿಬುಕಾವಾ ಶುಂಕೈ ಎಂಬ ಖಗೋಳಶಾಸ್ತ್ರಜ್ಞರು ಜಪಾನಿನ ಹವಾಮಾನಕ್ಕೆ ಅಳವಡಿಸಿಕೊಂಡರು. ಈ ಬದಲಾದ ಕ್ಯಾಲೆಂಡರ್ ಅನ್ನು 1873 ರವರೆಗೆ ಬಳಸಲಾಯಿತು
ಆಧುನೀಕರಣದ ಸಮಯದಲ್ಲಿ ಮೀಜಿ ಸರ್ಕಾರವು ಈ ಸಾಂಪ್ರದಾಯಿಕ ಕ್ಯಾಲೆಂಡರ್ ಅನ್ನು ಗ್ರೆಗೋರಿಯನ್ ಅಂದರೆ ಪಾಶ್ಚಾತ್ಯ ಕ್ಯಾಲೆಂಡರ್ನೊಂದಿಗೆ ಬದಲಾಯಿಸಿತು. ಇನ್ನೂ, ಕೆಲವು ಗ್ರಾಮೀಣ ಪ್ರದೇಶಗಳಲ್ಲಿ ಮತ್ತು ರೈತರು ಮತ್ತು ಮೀನುಗಾರರಲ್ಲಿ, ಹಳೆಯ 72-ಋತುವಿನ ಕ್ಯಾಲೆಂಡರ್ ಮಾನ್ಯವಾಗಿದೆ.
ಈ 24 ಋತುಗಳು ಯಾವುವು?
ಜಪಾನ್ 24 'ಸೆಕ್ಕಿ' ಋತುಗಳನ್ನು ಹೊಂದಿದೆ - ರಿಶುನ್, ಉಸುಯಿ, ಕೆಚಿಟ್ಸು, ಶುನ್ಬುನ್, ಸೆಮಿ, ಕೊಕು, ರಿಕ್ಕಾ, ಶೋಮನ್, ಬೋಶು, ಗೆಶಿ, ಶೋಶೋ (ಕಡಿಮೆ ಶಾಖ), ತೈಶೊ, ರಿಶು, ಶೋಶೋ (ಮೊದಲಿಗಿಂತ ಬಿಸಿ), ಹಕುರೊ, ಶುಬುನ್, ಕಾನ್ರೊ, ಸೊಕೊ, ರಿಟ್ಟೊ, ಶೋಸೆಟ್ಸು, ಟೇಸೆಟ್ಸು, ಟೋಜಿ, ಶೋಕನ್, ಡೈಕಾನ್. ಈ 24 ಋತುಗಳನ್ನು 3-3 ಭಾಗಗಳಾಗಿ ವಿಂಗಡಿಸಲಾಗಿದೆ. ಹಾಗಾಗಿ ಒಟ್ಟು 72 ಋತುಗಳು ರೂಪುಗೊಳ್ಳುತ್ತವೆ.