ಮೈಸೂರು ಮಹಾರಾಜರ ನೇತೃತ್ವದಲ್ಲಿ ನೇಪಾಳದಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸಿದ ಬಿಬಿಎಂಪಿ
ನೇಪಾಳದ ಪಶುಪತಿ ದೇವಾಲಯದಲ್ಲಿ ಮೈಸೂರು ಮಹಾರಾಜ ಯದುವೀರ ಕೃಷ್ಣದತ್ತ ಒಡೆಯರ್ ಅವರ ನೇತೃತ್ವದಲ್ಲಿ ಕನ್ನಡ ರಾಜ್ಯೋತ್ಸವವನ್ನು ಆಚರಣೆ ಮಾಡಲಾಯಿತು.
ಬೆಂಗಳೂರು (ನ.26): ಸುಮಾರು 2 ಸಾವಿರಕ್ಕೂ ಅಧಿಕ ವರ್ಷಗಳ ಇತಿಹಾಸ ಹೊಂದಿರುವ ಕನ್ನಡ ನಾಡು, ನುಡಿಯ ಉಳಿವಿಗಾಗಿ ಪ್ರತಿವರ್ಷ ನವೆಂಬರ್ 1 ರಂದು ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಗುತ್ತಿದೆ. ಈ ವರ್ಷ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳು ಹಾಗೂ ನೌಕರರ ಕ್ಷೇಮಾಭಿವೃದ್ಧಿ ಸಂಘದಿಂದ ಈ ವರ್ಷ ನೇಪಾಳದ ಪಶುಪತಿ ದೇವಾಲಯದಲ್ಲಿ ಮೈಸೂರು ಮಹಾರಾಜ ಯದುವೀರ ಕೃಷ್ಣದತ್ತ ಒಡೆಯರ್ ಅವರ ನೇತೃತ್ವದಲ್ಲಿ ಕನ್ನಡ ರಾಜ್ಯೋತ್ಸವವನ್ನು ಆಚರಣೆ ಮಾಡಲಾಯಿತು.
ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘದ ವತಿಯಿಂದ ನೇಪಾಳದ ಪಶುಪತಿನಾಥ ದೇವಾಲಯ ಸನ್ನಿಧಿಯಲ್ಲಿರುವ, ಆನಂದ ಪಶುಪತಿ ದೇವಾಲಯ ಅವರಣದಲ್ಲಿ ಶನಿವಾರ ಸಂಜೆ ಆಯೋಜನೆ ಮಾಡಲಾಗಿದ್ದ ಅಂತರಾಷ್ಟ್ರೀಯ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮವನ್ನು ಮೈಸೂರು ಸಾಮಪ್ರಾಜ್ಯದ ಒಡೆಯ ಶ್ರೀ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಉದ್ಘಾಟನೆ ಮಾಡಿದರು.ನಂತರ ಮಾತನಾಡಿದ ಅವರು ಕರ್ನಾಟಕ ಏಕೀಕರಣದ ರೂವಾರಿ ಕನ್ನಡ ಕುಲಪುರೋಹಿತ ಅಲೂರು ವೆಂಕಟರಾಯರು ಅವರು ಬರೆದ ಕರ್ನಾಟಕ ದತ್ತ ವೈಭವ ನಾಡಿನ ಇತಿಹಾಸ ದಾಖಲು ಮಾಡಿದ್ದಾರೆ. ನಾಡಿನ ಕನ್ನಡ ಭಾಷೆ, ಸಂಸ್ಕೃತಿ ಉಳಿಸಲು 1915ರಲ್ಲಿ ನಾಲ್ಮಡಿ ಕೃಷ್ಣರಾಜ್ ಒಡೆಯರು, ದಿವಾನರು ಹಾಗೂ ಹೆಚ್.ವಿ.ನಂಜುಡಯ್ಯ ಅವರು ಸೇರಿಕೊಂಡು ಕನ್ನಡ ಸಾಹಿತ್ಯ ಪರಿಷತ್ ಸ್ಥಾಪನೆ ಮಾಡಿದ್ದಾರೆ ಎಂದರು.
Mann Ki Baatನಲ್ಲಿ ಕರ್ನಾಟಕದ ಯುವತಿ ಹೆಸರು ಪ್ರಸ್ತಾಪಿಸಿದ ಪ್ರಧಾನಿ ಮೋದಿ: ವರ್ಷಾಗೆ ಮೆಚ್ಚುಗೆ
ಕನ್ನಡ ಭಾಷೆ ಮಾತನಾಡುವ ಪ್ರದೇಶಗಳಾದ ಕಿತ್ತೂರು ಕರ್ನಾಟಕ, ಕಲ್ಯಾಣ ಕರ್ನಾಟಕ, ಸೌತ್ ಕೆನರಾ, ನಾರ್ತ್ ಕೆನರಾ, ಕೊಡಗು ಪ್ರದೇಶವನ್ನು ಸೇರಿಸಲು ಬ್ರಿಟಿಷರು ಒಪ್ಪಲಿಲ್ಲ. ಸ್ವಾತಂತ್ರ್ಯ ಬಂದ ನಂತರ ಮಹಾರಾಜರ ಆಳ್ವಿಕೆ ಕೊನೆಗೊಂಡಿತು. ಜನರೇ ಆಳ್ವಿಕೆ ಮಾಡಲು ಸಿದ್ದರಾಗಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಗೆ ಜನರ ಆಳ್ವಿಕೆಗೆ ನನ್ನ ಸಂಪೂರ್ಣ ಬೆಂಬಲವಿದೆ. ಎಲ್ಲರೂ ಭಾರತೀಯ ಪರಂಪರೆ, ಕನ್ನಡ ಭಾಷೆ, ಸಂಸ್ಕೃತಿ ಉಳಿಸಲು ಕೈಜೋಡಿಸಬೇಕು ಎಂದು ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.
ಶಂಕರಚಾರ್ಯರು, ರಾಮಾನುಜಚಾರ್ಯ, ವೇದಾಂತ ದೇಶಿಕಚಾರ್ಯ, ಕ್ರಾಂತಿಯೋಗಿ ಶ್ರೀ ಬಸವೇಶ್ವರರು ನಾಡಿನ ಹಲವಾರು ವಿದ್ವಾಂಸರು ಕನ್ನಡ ಭಾಷೆಯಲ್ಲಿ ಭೋಧನೆ, ಪರಂಪರೆಯನ್ನು ಕನ್ನಡ ನಾಡಿನ ಮಣ್ಣಿನಲ್ಲಿ ಮುಂದುವರೆಸುತ್ತಾರೆ. ಕರ್ನಾಟಕ ಎಂಬ ನಾಮಕರಣವಾಗಿ 50ವರ್ಷವಾಗಿದೆ .ಭಾರತೀಯ ಎಂದರೆ ಕನ್ನಡಿಗ ಭಾರತೀಯ ಪರಂಪರೆ ಮತ್ತು ಕನ್ನಡ ಭಾಷೆ ಉಳಿಸಲು ಪ್ರತಿಯೊಬ್ಬರು ಸಹಕಾರ ನೀಡಬೇಕು ಎಂದು ಮೈಸೂರು ಸಂಸ್ಥಾನದ ಮಹಾರಾಜ ಯದುವೀರ ಕೃಷ್ಣದತ್ತ ಒಡೆಯರ್ ತಿಳಿಸಿರು.
ಹಿರಿಯ ಐಪಿಎಸ್ ಅಧಿಕಾರಿ ರೂಪಾ ಡಿ.ಮೌದ್ಗಿಲ್ ಮಾತನಾಡಿ, ಕನ್ನಡ ಭಾಷೆಗೆ 2000ಸಾವಿರ ವರ್ಷದ ಇತಿಹಾಸವಿದೆ. ದೂರದ ಕನ್ನಡ ನಾಡಿನಿಂದ ನೇಪಾಳದಲ್ಲಿ ಅಂತರಾಷ್ಟ್ರೀಯ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮ ಮಾಡುತ್ತಿರುವ ಸಾಹಸದ ಕೆಲಸ. ಕನ್ನಡ ಭಾಷೆ ಉಳಿಸಿ, ಬೆಳಸಬೇಕಾದರೆ ಪ್ರತಿನಿತ್ಯ ಕನ್ನಡ ಬಳಸುವ ಅಂದೋಲನವಾಗಬೇಕು. ಕನ್ನಡ ಭಾಷೆ ಸರಳ ಮತ್ತು ಸುಂದರ ಭಾಷೆಯಾಗಿದೆ. ಈ ಭಾಷೆ ಉಳಿಯಬೇಕು. ಹೀಗಾಗಿ, ಪ್ರತಿಯೊಬ್ಬರು ಕನ್ನಡ ಬಳಸಬೇಕು ಎಂದು ಹೇಳಿದರು.
ಡಿಕೆಶಿ ಕೇಸ್ ಹಿಂಪಡೆದು ಪ್ರಜಾಪ್ರಭುತ್ವದ ಕಗ್ಗೊಲೆ: ರೇಣುಕಾಚಾರ್ಯ
ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಎ.ಅಮೃತ್ ರಾಜ್ ಮಾತನಾಡಿ, ರಾಜ್ಯದ ಹೊರೆಗೆ ಕಾಶಿಯಲ್ಲಿ ರಾಜ್ಯೋತ್ಸವ ಅಚರಣೆ ನಡೆಸಲಾಗಿದೆ. ಇದೀಗ ಹೊರ ರಾಷ್ಟ್ರವಾದ ನೇಪಾಳದಲ್ಲಿ ಅಂತರಾಷ್ಟ್ರೀಯ ಕರ್ನಾಟಕ ರಾಜ್ಯೋತ್ಸವ ಅಚರಣೆ ಅಚರಿಸಲಾಗುತ್ತಿದೆ.ಕನ್ನಡ ಭಾಷೆ ಹೃದಯ ಶ್ರೀಮಂತ ಭಾಷೆ. ಕನ್ನಡಿಗರು ವಿಶಾಲ ಹೃದಯವುಳ್ಳವರು ಕನ್ನಡಿಗರು ಪ್ರಪಂಚದ ಎಲ್ಲ ದೇಶದಲ್ಲಿ ವಾಸವಿದ್ದಾರೆ. ಕನ್ನಡಿಗರು ಎಲ್ಲೆ ಇದ್ದರು ಎಲ್ಲರ ಮನಸ್ಸ ಗೆಲ್ಲುತ್ತಾರೆ .ಕನ್ನಡಿಗರು ವಿಶ್ವಮಾನ್ಯತೆ ಪಡೆದಿದ್ದಾರೆ. ಕನ್ನಡ ಭಾಷೆ ಉಳಿಸಿ, ಬೆಳಸಲು ನಮ್ಮ ಸಂಘವು ಕಟಿಬದ್ದವಾಗಿ ಶ್ರಮಿಸುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮೈಸೂರು ಮಹಾರಾಜರ ಧರ್ಮಪತ್ನಿ ತ್ರಿಶಿಕಾ ಕುಮಾರಿ ಒಡೆಯರ್, ಐಪಿಎಸ್ ಪೊಲೀಸ್ ಅಧಿಕಾರಿ ರೂಪ ಡಿ.ಮೌದ್ಗೀಲ್ ಮತ್ತು ವಿಶೇಷ ಅಹ್ವಾನಿತರಾಗಿ ಬಿಬಿಎಂಪಿ ಉಪ ಆಯುಕ್ತ ಡಾ.ಮಂಜುನಾಥ್ ಸ್ವಾಮಿ, ಜಂಟಿ ಆಯುಕ್ತೆ ಲಕ್ಷ್ಮಿದೇವಿ, ಹಿನ್ನಲೆ ಗಾಯಕಿ ಅನುರಾಧ ಭಟ್, ಹಿರಿಯ ವಕೀಲ ವಿ.ಶ್ರೀನಿವಾಸ್ ಮತ್ತಿತರರು ಉಪಸ್ಥಿತರಿದ್ದರು.