MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Life
  • Travel
  • ಮಾನ್ಸೂನ್: ತಪ್ಪದೇ ಈ ಬ್ಯೂಟಿಫುಲ್ ತಾಣಗಳಿಗೆ ಭೇಟಿ ನೀಡಿ!

ಮಾನ್ಸೂನ್: ತಪ್ಪದೇ ಈ ಬ್ಯೂಟಿಫುಲ್ ತಾಣಗಳಿಗೆ ಭೇಟಿ ನೀಡಿ!

ಈಗಾಗಲೇ ಮಾನ್ಸೂನ್ ಪ್ರಾರಂಭವಾಗಿದೆ. ಈಗ ಸ್ವಲ್ಪ ಮಳೆ ಬರುತ್ತಿದ್ದರೂ ಮಾನ್ಸೂನ್ ಆರಂಭವಾದ ಹಿನ್ನೆಲೆಯಲ್ಲಿ ಇನ್ನು ಸ್ವಲ್ಪ ಸಮಯದಲ್ಲೇ ಭಾರಿ ಮಳೆಯಾಗಲಿದೆ. ಹವಾಮಾನ ಇಲಾಖೆಯ ಪ್ರಕಾರ, ಮಾನ್ಸೂನ್ ಮುಂದಿನ ವಾರದೊಳಗೆ ಅಂದರೆ ಜೂನ್ 15ರೊಳಗೆ ದೇಶದ ಅನೇಕ ಭಾಗಗಳನ್ನು ತಲುಪಲಿದೆಯಂತೆ. ವಾವ್ ಮಳೆಗಾಲ ಎಂದರೆ ಎಷ್ಟು ಚೆನ್ನಾಗಿರುತ್ತೆ ಅಲ್ವಾ? ಅದರಲ್ಲೂ ಈ ಟೈಮ್ ಟ್ರಾವೆಲ್ ಮಾಡಲು ಬೆಸ್ಟ್ ಏನಂತೀರಿ?

2 Min read
Suvarna News
Published : Jun 11 2022, 05:30 PM IST
Share this Photo Gallery
  • FB
  • TW
  • Linkdin
  • Whatsapp
19

ಮಾನ್ಸೂನ್(Monsoon) ಆಗಮನವು ಜನರಿಗೆ ತುಂಬಾ ಖುಷಿ ತರುತ್ತದೆ. ಆದರೆ, ಅತಿಯಾದ ಮಳೆಯು ದೇಶದ ಅನೇಕ ರಾಜ್ಯಗಳಲ್ಲಿ ಪ್ರವಾಹದ ಅಪಾಯ ಹೆಚ್ಚಿಸುತ್ತದೆ. ಅದೇ ಸಮಯದಲ್ಲಿ, ಮಳೆಗಾಲದಲ್ಲಿ ಸುಂದರವಾಗಿ ಕಾಣುವಂತಹ ಅನೇಕ ತಾಣಗಳೂ ಇವೆ. ಪ್ರವಾಸಿಗರು ಮಳೆಯನ್ನು ಆನಂದಿಸಲು ಕೆಲವು ಟೂರಿಸ್ಟ್ ಸ್ಥಳಕ್ಕೆ ಹೋಗುತ್ತಾರೆ. ನೀವು ಸಹ ಮಳೆಗಾಲದಲ್ಲಿ ಟ್ರಾವೆಲ್ ಮಾಡಲು ಬಯಸಿದ್ರೆ, ಹಾಗೇನಾದರೂ ಪ್ಲ್ಯಾನ್ ಇದ್ರೆ ನಿಮಗೆ ನಾವು ಸಹಾಯ ಮಾಡ್ತೀವಿ. ಹೌದು, ಇಲ್ಲಿದೆ ನೋಡಿ ಸುಂದರವಾದ ಮಾನ್ಸೂನ್ ತಾಣಗಳ ಬಗ್ಗೆ ಇಲ್ಲಿ ಮಾಹಿತಿ ನೀಡಿದ್ದೇವೆ. 
 

29
ಚಿರಾಪುಂಜಿ(Cherrapunji), ಮೇಘಾಲಯ

ಚಿರಾಪುಂಜಿ(Cherrapunji), ಮೇಘಾಲಯ

ಈಗ ಮಸಿನ್ರಾಮ್ ದೇಶದಲ್ಲಿ ಅತ್ಯಧಿಕ ಮಳೆ ಪಡೆಯುವ ತಾಣ. ಈ ಮೊದಲು, ಚಿರಾಪುಂಜಿಯು ಹೆಚ್ಚು ಮಳೆ ಪಡೆಯುತ್ತಿತ್ತು. ನೀವು ಮಳೆ ಎಂಜಾಯ್ ಮಾಡುವವರಾದರೆ, ಖಂಡಿತವಾಗಿಯೂ ಚಿರಾಪುಂಜಿಗೆ ಹೋಗಿ ಬನ್ನಿ. ಮಳೆಗಾಲದ ದಿನಗಳಲ್ಲಿ, ಚಿರಾಪುಂಜಿಯ ಸೌಂದರ್ಯ ನೋಡಲು ಎರಡು ಕಣ್ಣು ಸಾಲದು. ಇಲ್ಲಿ ನೀವು ಮಳೆಗಾಲ ಸಂಪೂರ್ಣವಾಗಿ ಎಂಜಾಯ್ ಮಾಡಬಹುದು.

39
ಮಹಾಬಲೇಶ್ವರ(Mahabaleshwara), ಮಹಾರಾಷ್ಟ್ರ

ಮಹಾಬಲೇಶ್ವರ(Mahabaleshwara), ಮಹಾರಾಷ್ಟ್ರ

ಮಹಾಬಲೇಶ್ವರವನ್ನು ರೊಮ್ಯಾಂಟಿಕ್ ಗೇಟ್ ವೇ ಎಂದೂ ಕರೆಯಲಾಗುತ್ತದೆ. ಮಳೆಗಾಲದ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಮಹಾಬಲೇಶ್ವರಕ್ಕೆ ಬರುತ್ತಾರೆ. ಮಾನ್ಸೂನ್ ಟ್ರೆಕ್ಕಿಂಗ್ ಗೆ ಇದು ಅತ್ಯುತ್ತಮ ತಾಣ. ಇಲ್ಲಿ ಕಣಿವೆಯ ಸೌಂದರ್ಯ ನೋಡಲು ಸೂಪರ್ ಆಗಿರುತ್ತೆ. ನೀವು ಮಳೆಗಾಲದಲ್ಲಿ ಟ್ರಾವೆಲ್ ಮಾಡಲು ಬಯಸಿದ್ರೆ, ಮಹಾಬಲೇಶ್ವರವು ಅತ್ಯುತ್ತಮ ತಾಣವಾಗಿದೆ.

49
ಗೋವಾ(Goa)

ಗೋವಾ(Goa)

ಚಿರಾಪುಂಜಿ ಮತ್ತು ಮಸಿನ್ರಾಮ್ ನಂತೆ ಕೊಂಕಣದಲ್ಲಿ ಭಾರಿ ಮಳೆಯಾಗುತ್ತೆ. ಇದಕ್ಕಾಗಿ, ನೀವು ಗೋವಾಕ್ಕೆ ಒಮ್ಮೆ ಭೇಟಿ ನೀಡಿ. ಗೋವಾವು ತನ್ನ ಸುಂದರವಾದ ಕಡಲವತೀರಕ್ಕೆ ಹೆಸರುವಾಸಿ. ಇದಲ್ಲದೆ, ಅನೇಕ ಐತಿಹಾಸಿಕ ತಾಣಗಳು ಸಹ ಇವೆ. ಒಟ್ಟಾರೆಯಾಗಿ ಹೇಳೋದಾದ್ರೆ, ಗೋವಾವು ಟೂರ್ ಗೆ ಪರ್ಫೆಕ್ಟ್ ಪ್ಯಾಕೇಜ್. 
 

59
ಕೇರಳ (Kerala)

ಕೇರಳ (Kerala)

ಕೇರಳ ದೇವರ ನಾಡು, ಇದು ತನ್ನ ನೈಸರ್ಗಿಕ ಸೌಂದರ್ಯಕ್ಕೆ ಹೆಸರುವಾಸಿ. ಹವಾಮಾನ ಇಲಾಖೆಯ ಪ್ರಕಾರ, ಮಾನ್ಸೂನ್ ಮೊದಲು ಪ್ರವೇಶವಾಗೋದು ಕೇರಳ ಕರಾವಳಿಯನ್ನು. ಇದರ ನಂತರ, ಇದು ಕ್ರಮೇಣ ಭಾರತದಾದ್ಯಂತ ಹರಡುತ್ತದೆ. ಇದಕ್ಕಾಗಿ, ಜೂನ್ ಎರಡನೇ ವಾರದಲ್ಲಿ ನೀವು ಕೇರಳಕ್ಕೆ ಭೇಟಿ ನೀಡಬಹುದು. 

69

ಪ್ರವಾಸಿಗರು ಯಾವುದೇ ಸೀಸನ್ ನಲ್ಲೂ ಸಹ ಕೇರಳದ ಸೌಂದರ್ಯ ನೋಡಲು ಹೋಗಬಹುದು. ಅತಿರಪಳ್ಳಿ ಜಲಪಾತವು(Athirapally waterfalls) ಕೇರಳದ ಕೊಚ್ಚಿಯಿಂದ ಕೇವಲ 73 ಕಿಲೋಮೀಟರ್ ದೂರದಲ್ಲಿದೆ. ನೀವು ಅತಿರಪಳ್ಳಿ ಜಲಪಾತಕ್ಕೂ ಭೇಟಿ ನೀಡಬಹುದು. ಅಲ್ಲದೇ ಕೇರಳದ ಯಾವುದೇ ತಾಣಗಳಿಗೂ ನೀವು ಭೇಟಿ ನೀಡಬಹುದು. ಈ ತಾಣಗಳು ಖಂಡಿತವಾಗಿಯೂ ನಿಮಗೆ ಇಷ್ಟವಾಗುತ್ತೆ. 

79
ಶಿಲ್ಲಾಂಗ್ (Shillong)

ಶಿಲ್ಲಾಂಗ್ (Shillong)

ಮಾನ್ಸೂನ್ ನಲ್ಲಿ ಭೇಟಿ ನೀಡಲು ಅತ್ಯುತ್ತಮ ಸ್ಥಳಗಳಲ್ಲಿ ಶಿಲ್ಲಾಂಗ್ ಕೂಡ ಒಂದು. ಇದನ್ನು 'ಪೂರ್ವದ ಸ್ಕಾಟ್ಲೆಂಡ್' ಎಂದೂ ಕರೆಯಲಾಗುತ್ತದೆ, ಈ ಸೀಸನ್‌ನಲ್ಲಿ ನೀವು ಭೇಟಿ ನೀಡಬಹುದಾದ ಭಾರತದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ಇಡೀ ಗುಡ್ಡಗಾಡು ಪಟ್ಟಣವು ಮಳೆಯಲ್ಲಿ ಒದ್ದೆಯಾದಾಗ ಇದರ ಮನಮೋಹಕ ಸೌಂದರ್ಯವು ಇನ್ನಷ್ಟು ಮಂತ್ರಮುಗ್ಧಗೊಳಿಸುತ್ತದೆ.  ನೀವಿದನ್ನು ಖಂಡಿತಾ ಇಷ್ಟಪಡುವಿರಿ. 

89
ಕೂರ್ಗ್ : (Coorg)

ಕೂರ್ಗ್ : (Coorg)

ದಟ್ಟವಾದ ಅರಣ್ಯ, ವೈವಿಧ್ಯಮಯ ಸಸ್ಯ ಮತ್ತು ಪ್ರಾಣಿಗಳಿಂದ ಆವೃತವಾಗಿರುವ ಸುಂದರ ತಾಣ ಮಡಿಕೇರಿ. ಇದು ಮಾನ್ಸೂನ್ ಸಮಯದಲ್ಲಿ ಇದನ್ನು ಇನ್ನಷ್ಟು ರಮಣೀಯವಾಗಿರುತ್ತೆ. ಇಲ್ಲಿನ ಮನಮೋಹಕ ಜಲಪಾತಗಳು, ಸರೋವರಗಳು, ವಿಶಾಲವಾದ ಕಾಫಿ ತೋಟಗಳು ನಿಮಗೆ ತುಂಬಾನೆ ಇಷ್ಟವಾಗೋದಂತೂ ಖಂಡಿತಾ. 
 

99

ಸ್ಪಿಟಿ ಕಣಿವೆಯು ಮಾನ್ಸೂನ್ ಸಮಯದಲ್ಲಿ ಭೇಟಿ ನೀಡಬಹುದಾದ ಭಾರತದ ಅತ್ಯಂತ ಅಸಾಮಾನ್ಯ ಸ್ಥಳಗಳಲ್ಲಿ ಒಂದಾಗಿದೆ. ಈ "ಲಿಟಲ್ ಟಿಬೆಟ್" ನ(Little Tibet) ಶಾಂತ ಮತ್ತು ಸುಂದರ ತಾಣವನ್ನು ಜನರು ತುಂಬಾ ಇಷ್ಟಪಡ್ತಾರೆ. ಖಂಡಿತವಾಗಿಯೂ ಕ್ಯಾಂಪಿಂಗ್ ಮತ್ತು ವನ್ಯಜೀವಿ ವೀಕ್ಷಣೆಗೆ ಉತ್ತಮ ಸ್ಥಳ, ಮತ್ತು ಮಳೆ ಎಲ್ಲವೂ ನಿಮಗೆ ಮಾಂತ್ರಿಕ ಕ್ಷಣಗಳನ್ನು ನೀಡುತ್ತೆ. 

About the Author

SN
Suvarna News
ಮಾನ್ಸೂನ್
ಪ್ರವಾಸ
ಕೇರಳ
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved