ಟ್ರಾವೆಲ್ ಪ್ರಿಯರು ನೀವಾಗಿದ್ರೆ, ಬಸ್ ಸ್ಟಾಂಡ್ ಬಳಿ ಸಿಗೋ ದೇಸಿ ಫುಡ್ ಮಿಸ್ ಮಾಡಲೇಬೇಡಿ
ನೀವು ಟ್ರಾವೆಲ್ ಪ್ರಿಯರಾಗಿದ್ದು, ಬೇರೆ ಬೇರೆ ರಾಜ್ಯಗಳಿಗೆ ಹೋಗುವವರು ಆಗಿದ್ರೆ, ಆ ರಾಜ್ಯಗಳಲ್ಲಿ ಬಸ್ ಸ್ಟಾಂಡ್ ಗಳಲ್ಲಿ ನೀವು ಟ್ರೈ ಮಾಡಲೇಬೇಕಾದ ಬಾಯಿ ಚಪ್ಪರಿಸಿ ತಿನ್ನುವಂತೆ ಮಾಡುವ ಆಹಾರಗಳ ಕುರಿತು ಮಾಹಿತಿ ಇಲ್ಲಿದೆ.

ಬಸ್ ನಿಲ್ದಾಣಗಳು ಕೇವಲ ನಿಮ್ಮ ಬಸ್ ಗಾಗಿ ಕಾಯುವ ಸ್ಥಳ ಮಾತ್ರ ಅಲ್ಲ. ಅವು ಸ್ಥಳೀಯ ರುಚಿಗಳನ್ನು ಅನುಭವಿಸಲು ಅತ್ಯುತ್ತಮ ಸ್ಥಳಗಳಾಗಿವೆ. ಭಾರತದಾದ್ಯಂತ, ಈ ಬಸ್ ಸ್ಟ್ಯಾಂಡ್ ಗಳು ಬಾಯಲ್ಲಿ ನೀರೂರಿಸುವ ತಿಂಡಿಗಳ ಲಿಸ್ಟ್ ನೀಡುತ್ತವೆ, ಅದು ಪ್ರದೇಶಗಳಷ್ಟೇ ವೈವಿಧ್ಯಮಯವಾಗಿದೆ. ನೀವು ಅವಸರದಲ್ಲಿರಲಿ ಅಥವಾ ಹೊಸದನ್ನು ಪ್ರಯತ್ನಿಸಲು ಬಯಸುತ್ತಿರಲಿ, ಈ ದೇಸಿ ಆಹಾರಗಳು (desi foods)ನಿಮಗೆ ಸ್ಥಳೀಯ ಸಂಸ್ಕೃತಿಯ ನಿಜವಾದ ರುಚಿಯನ್ನು ನೀಡುತ್ತದೆ. ಬಸ್ ನಿಲ್ದಾಣಗಳಲ್ಲಿ ನೀವು ಟ್ರೈ ಮಾಡಲೇಬೇಕಾದ ಒಂದಿಷ್ಟು ಉತ್ತಮ ಆಹಾರಗಳ ಲಿಸ್ಟ್ ಇಲ್ಲಿದೆ. ನೀವು ಬಾಯಿ ಚಪ್ಪರಿಸಿ ತಿನ್ನೋದು ಖಚಿತಾ.
ಚೋಲೆ ಭತುರೆ
ನೀವು ಉತ್ತರ ಭಾರತದಲ್ಲಿದ್ದರೆ, ಅಲ್ಲಿನ ಬೀದಿಗಳಲ್ಲಿ ನೀವು ಚೋಲೆ ಭತುರೆ (chole bhature) ಸವಿಯಬಹುದು. ಮಸಾಲೆಯುಕ್ತ ಕಡಲೆಯೊಂದಿಗೆ , ಗರಿಗರಿಯಾದ ಭತುರೆ ತಿಂದ್ರೆ ಆಹಾ ಎಂದು ಹೇಳದೇ ಇರಲಾರಿರಿ. ಇದರಿಂದ ಹೊಟ್ಟೆಯೂ ತುಂಬುತ್ತೆ, ಬಾಯಿ ರುಚಿಯನ್ನು ಹೆಚ್ಚಿಸುತ್ತೆ, ಅಷ್ಟೇ ಅಲ್ಲ ನಿಮಗೆ ಟ್ರಾವೆಲ್ ಮಾಡಲು ಬೇಕಾದ ಶಕ್ತಿಯನ್ನು ಸಹ ನೀಡುತ್ತೆ.
ಪಾವ್ ಭಾಜಿ
ಮುಂಬೈ ಸ್ಟ್ರೀಟ್ ಫುಡ್ ಕ್ಲಾಸಿಕ್, ಪಾವ್ ಭಾಜಿ ಜಜ್ಜಿದ ತರಕಾರಿಗಳು, ಬೆಣ್ಣೆ ಮತ್ತು ಮಸಾಲೆಗಳ ಪರಿಮಳಯುಕ್ತ ಮಿಶ್ರಣವಾಗಿದ್ದು, ಮೃದುವಾದ ಪಾವ್ (ಬ್ರೆಡ್ ರೋಲ್ಸ್) ನೊಂದಿಗೆ ಸರ್ವ್ ಮಾಡಲಾಗುತ್ತೆ. ಇದು ಮಸಾಲೆ ಹಾಗೂ ಪಾವ್ ಸವಿಯೋದೆ ಚೆಂದ, ಮುಂಬೈಗೆ ಹೋದ್ರೆ, ಅಲ್ಲಿನ ಬಸ್ ಸ್ಟ್ಯಾಂಡ್ ಗಳಲ್ಲಿ ಪಾವ್ ಭಾಜಿ (pav bhaji) ಟ್ರೈ ಮಾಡೋದನ್ನು ಮರಿಬೇಡಿ.
ಸಮೋಸಾ
ಮಸಾಲೆಯುಕ್ತ ಆಲೂಗಡ್ಡೆ, ಬಟಾಣಿ ಮತ್ತು ಕೆಲವೊಮ್ಮೆ ಚಿಕನ್ ತುಂಬಿ ಮಾಡಲಾಗುವ ತ್ರಿಕೋನಾಕಾರದ ಈ ರುಚಿಕರವಾದ ಆಹಾರ ಎಲ್ಲೆಡೆ ಬಸ್ ನಿಲ್ದಾಣದ ಅಚ್ಚುಮೆಚ್ಚಿನ ಆಹಾರ ಅಂದ್ರೆ ತಪ್ಪಾಗಲ್ಲ. ಹೊರಭಾಗದಲ್ಲಿ ಕ್ರಂಚಿಯಾಗಿ, ಮತ್ತು ಒಳಭಾಗದಲ್ಲಿ ಪರಿಮಳಯುಕ್ತ ಮಸಾಲೆಗಳಿಂದ ತುಂಬಿರುವ ಸಮೋಸಾಗಳು ನಿಮ್ಮ ಅವಸರದ ಜರ್ನಿಗೆ ಸೂಕ್ತವಾಗಿದೆ. ಜೊತೆಗೆ ಇವು ಬಾಯಿಗೆ ರುಚಿಯನ್ನು ಕೂಡ ನೀಡುತ್ತೆ.
ಭೇಲ್ ಪುರಿ
ನೀವು ಲೈಟ್ ಆಗಿರುವ ಮತ್ತು ಸ್ವಾಧ ತುಂಬಿದ ಏನನ್ನಾದರೂ ಬಯಸುತ್ತಿದ್ದರೆ, ಭೇಲ್ ಪುರಿ ಖಂಡಿತವಾಗಿಯೂ ಟ್ರೈ ಮಾಡಬೇಕು. ಪಫ್ಡ್ ರೈಸ್, ಸೇವ್, ಕಡಲೆಕಾಯಿ ಮತ್ತು ಟ್ಯಾಂಗಿ ಚಟ್ನಿಗಳ ಈ ಮಿಶ್ರಣವು ಪ್ರತಿ ಬೈಟ್ ನಲ್ಲೂ ವಿಭಿನ್ನ ರುಚಿ ನೀಡುತ್ತೆ. ಟ್ರಾವೆಲ್ ಮಾಡೋವಾಗ ತಿನ್ನೋದಕ್ಕೆ ಇದು ಸೂಕ್ತವಾಗಿದೆ, ಇದು ರೆಫ್ರೆಶಿಂಗ್(refreshing) ಆಗಿಯೂ ಇರುತ್ತೆ, ತೃಪ್ತಿಯನ್ನೂ ನೀಡುತ್ತೆ.
ಆಲೂ ಟಿಕ್ಕಿ
ರುಚಿಕರವಾದ ತಿಂಡಿಗಾಗಿ, ಆಲೂ ಟಿಕ್ಕಿ ಉತ್ತಮ ಆಯ್ಕೆಯಾಗಿದೆ. ಹುಣಸೆ ಚಟ್ನಿ ಮತ್ತು ಮೊಸರಿನ ಜೊತೆಗೆ ಖಾರವಾದ ಆಲೂ ತಿಕ್ಕಿ ತಿನ್ನುತ್ತಿದ್ದರೆ, ವಾವ್, ಹೇಳೋವಾಗ್ಲೆ ಬಾಯಲ್ಲಿ ನೀರೂರುತ್ತೆ. ಉತ್ತರ ಭಾರತದ ಕಡೆಗೆ ನೀವು ಹೋದ್ರೆ, ಖಂಡಿತವಾಗಿಯೂ ಇದನ್ನ ಟ್ರೈ ಮಾಡಲು ಮರೆಯಬೇಡಿ.
ದೋಸೆಗಳು
ನೀವು ಬಸ್ ನಿಲ್ದಾಣದಲ್ಲಿ ಅಥವಾ ಹತ್ತಿರದ ರೆಸ್ಟೋರೆಂಟ್ ಗಳಲ್ಲಿ ವಿವಿಧ ರೀತಿಯ ದೋಸೆಗಳನ್ನೂ ಟ್ರೈ ಮಾಡಬಹುದು. ಕರ್ನಾಟಕದಲ್ಲಿ ಒಂದೊಂದು ಊರಲ್ಲಿ ಒಂದೊಂದು ರೀತಿ ದೋಸೆಗಳಿವೆ. ಆ ಊರಿಗೆ ಹೋದಾಗ, ಚಟ್ನಿ, ಸಾಂಬಾರ್ ಜೊತೆ ಆ ದೋಸೆಯನ್ನು ತಿನ್ನೋದನ್ನು ಮರಿಬೇಡಿ.
ಪಾನಿ ಪುರಿ
ಬೋಲ್ಡ್ ಫ್ಲೇವರ್ ಗಳನ್ನು (bold flavours) ಇಷ್ಟಪಡುವವರು, ಪಾನಿ ಪುರಿ ಟ್ರೈ ಮಾಡದೇ ಇದ್ದರೆ ಹೇಗೆ?. ಮಸಾಲೆಯುಕ್ತ ನೀರು, ಹುಣಸೆ ಚಟ್ನಿ ಮತ್ತು ಆಲೂಗಡ್ಡೆಯಿಂದ ತುಂಬಿದ ಈ ಟೊಳ್ಳಾದ ಪೂರಿಗಳು ತಿನ್ನಲು ಸಖತ್ತಾಗಿರುತ್ತೆ, ಜೊತೆಗೆ ಖಾರ, ಹುಳಿ, ಉಪ್ಪು ಜೊತೆ ಸೇರಿ ಬಾಯಿ ಚಪ್ಪರಿಸುವಂತೆ ಮಾಡುತ್ತೆ. ದೀರ್ಘ ಪ್ರಯಾಣದ ಮೊದಲು ನಿಮ್ಮ ನಾಲಿಗೆಯನ್ನು ರಿಫ್ರೆಶ್ ಮಾಡಲು ಇದು ಬೆಸ್ಟ್ ಆಯ್ಕೆ.
ಕಚೋರಿ
ರಾಜಸ್ಥಾನ, ಉತ್ತರ ಪ್ರದೇಶ ಅಥವಾ ಉತ್ತರ ಭಾರತದ ಇತರ ಭಾಗಗಳಿಗೆ ನೀವು ಹೋದ್ರೆ, ಕಚೋರಿ ಜನಪ್ರಿಯ ಆಯ್ಕೆಯಾಗಿದೆ. ಈ ಡೀಪ್-ಫ್ರೈಡ್ ಪೇಸ್ಟ್ರಿ ಪಾಕೆಟ್ ಗಳು ಸಾಮಾನ್ಯವಾಗಿ ಮಸಾಲೆಯುಕ್ತ ಬೇಳೆ ಅಥವಾ ಬಟಾಣಿಗಳಿಂದ ತುಂಬಿರುತ್ತವೆ, ಇದು ಪ್ರತಿ ಬೈಟ್ ನಲ್ಲೂ ಸ್ವಾಧವನ್ನು ನೀಡುತ್ತದೆ. ಟ್ಯಾಂಗಿ ಚಟ್ನಿಗಳೊಂದಿಗೆ ತಿಂದ್ರೆ ಇನ್ನೂ ಮಜವಾಗಿರುತ್ತೆ.
Image: Freepik
ಮೊಮೊಸ್
ಈಶಾನ್ಯ ಮತ್ತು ದೆಹಲಿಯ ಕೆಲವು ಭಾಗಗಳಲ್ಲಿ ಜನ ಹೆಚ್ಚಾಗಿ ತಿನ್ನೋದೇ ಈ ಮೋಮೋಸ್ ಗಳನ್ನು. ಹೆಚ್ಚಾಗಿ ತರಕಾರಿಗಳು ಅಥವಾ ಮಾಂಸದಿಂದ ತುಂಬಿದ ಈ ಡಂಪ್ಲಿಂಗ್ ಗಳನ್ನು ಹಬೆಯಲ್ಲಿ ಬೇಯಿಸಿ, ಬಿಸಿ ಬಿಸ್ಯಾಗಿ , ತುಂಬಾನೇ ಖಾರವಾದ ಕೆಂಪು ಚಟ್ನಿಯೊಂದಿಗೆ ಸರ್ವ್ ಮಾಡಲಾಗುತ್ತೆ. ಇದನ್ನು ತಿಂದ್ರೆ ಮತ್ತೆ ಮತ್ತೆ ಬೇಕು ಅನಿಸದೇ ಇರದು.
ವಡಾ ಪಾವ್
ಈ ಸಿಂಪಲ್ ಹಾಗೂ ತೃಪ್ತಿ ನೀಡುವ ಆಹಾರ ವಡಾ ಪಾವ್, ಪಾವ್ ಅಂದ್ರೆ ಬ್ರೆಡ್ ಜೊತೆಗೆ, ಒಳಗೆ ಮಸಾಲೆಯುಕ್ತ ಆಲೂಗಡ್ಡೆ ಪ್ಯಾಟಿಯನ್ನು ಅಥವಾ ಆಲೂ ಬೋಂಡಾವನ್ನು ಇಡಲಾಗುತ್ತೆ, ಇದನ್ನು ಸಾಮಾನ್ಯವಾಗಿ ಟ್ಯಾಂಗಿ ಚಟ್ನಿಗಳೊಂದಿಗೆ ಸರ್ವ್ ಮಾಡಲಾಗುತ್ತೆ. ಮುಂಬೈ ಮೊದಲಾದ ತಾಣಗಳಿಗೆ ಟ್ರಾವೆಲ್ ಮಾಡಿದ್ರೆ, ಇದನ್ನು ಮಿಸ್ ಮಾಡದೇ ತಿನ್ನಿ.