ಈ ಭವನದಲ್ಲಿ ರಾತ್ರಿ ಹೊತ್ತು ಕೇಳಿ ಬರುತ್ತೆ, ಅಳುವ ಧ್ವನಿ, ರಕ್ತದ ಹೆಜ್ಜೆ ಗುರುತು…
ನಮ್ಮ ಸುತ್ತ ಮುತ್ತಲು ಹಲವು ನಿಗೂಢ, ಭಯಾನಕ ತಾಣಗಳನ್ನು ನಾವು ಕಾಣಬಹುದು. ಅಂತದ್ದೇ ಒಂದು ಜಾಗ ಬಿಹಾರದಲ್ಲಿದೆ. ರಾತ್ರಿಯಲ್ಲಿ ಇಲ್ಲಿಂದ ಅಳುವ ಶಬ್ದ ಬರುತ್ತದೆ, ಮತ್ತು ಕಣ್ಣುಗಳು ತೆರೆದ ತಕ್ಷಣ, ಗೋಡೆಗಳ ಮೇಲೆ ಗುರುತುಗಳು ಕಾಣಿಸುತ್ತವೆ.
ಜನರು ತಮ್ಮ ಸಾಹಸಕ್ಕಾಗಿ ಏನು ಬೇಕಾದರೂ ಮಾಡೋದಕ್ಕೆ ರೆಡಿಯಾಗಿರ್ತಾರೆ ಅಲ್ವಾ? ಅವರ ಪ್ರಕಾರ, ಸಾಹಸ ಕಾರ್ಯಗಳಲ್ಲಿ ಹಾಂಟೆಡ್ ಸ್ಥಳಗಳೂ ಇವೆ, ಅವುಗಳ ಬಗ್ಗೆ ತಿಳಿದುಕೊಳ್ಳಲು, ಜನರಿಗೆ ಸಿಕ್ಕಾಪಟ್ಟೆ ಕುತೂಹಲ. ಹೆಚ್ಚಿನ ಜನರು ತಾವು ಹಾಂಟೆಡ್ ತಾಣಗಳಿಗೆ (Haunted places) ಹೋಗಿ ವಿಷಯಗಳನ್ನು ನೋಡಲು ಬಯಸುತ್ತಾರೆ. ಅಂತದ್ದೇ ಒಂದು ತಾಣದ ಬಗ್ಗೆ ನಾವಿಲ್ಲಿ ಹೇಳ್ತಿವಿ.
ಭಂಗರ್ ಕೋಟೆಯ (Bhangarh Fort) ಬಗ್ಗೆ ನೀವು ಸಾಕಷ್ಟು ತಿಳಿದಿರಬಹುದು, ರಾಜಸ್ಥಾನದ ಈ ಕೋಟೆಯಲ್ಲಿ ಆತ್ಮಗಳು ಇವೆ, ಹಾಗಾಗಿ ಅಲ್ಲಿ ರಾತ್ರಿ ಉಳಿಯೋದಕ್ಕೆ ಅವಕಾಶ ಇಲ್ಲ. ಆದರೆ ಬಿಹಾರದಲ್ಲಿ ಮತ್ತೊಂದು ಸ್ಥಳವಿದೆ, ಅದರ ಬಗ್ಗೆ ಜನರು ಹೆಚ್ಚು ತಿಳಿದುಕೊಳ್ಳಲು ಬಯಸುತ್ತಾರೆ. ಅದು ಜಮುಯಿಯ ಸಿಮಾಲ್ಟಾಲಾದಲ್ಲಿನ ದೆವ್ವದ ಮನೆ.
ಈ ಕೋಟೆ ಭಯಾನಕವಾಗಿದೆ
ಭಂಗರ್ ಮತ್ತು ಕುಲ್ಧಾರಾ ಗ್ರಾಮಗಳು ಸಾಕಷ್ಟು ಪ್ರಸಿದ್ಧವಾಗಿದ್ದರೂ, ಈವಾಗ ಹೇಳುತ್ತಿರುವ ಬಿಹಾರದ ಈ ತಾಣ ಜನರಿಗೆ ಭಯ ಹುಟ್ಟಿಸುವ ಮತ್ತೊಂದು ಪ್ರದೇಶ. ಇಲ್ಲಿನ ಕಥೆಗಳು ಸಹ ಬಹಳ ಜನಪ್ರಿಯವಾಗಿವೆ. ಇಲ್ಲಿಗೆ ಒಮ್ಮೆ ಹೋದ ಜನರು ಸಹ ಮತ್ತೆ ಅಲ್ಲಿಗೆ ಹೋಗೋದಕ್ಕೆ ಇಷ್ಟಪಡೋದಿಲ್ಲ.
ಅಂತರ್ಜಾಲದಲ್ಲಿ ಜನಪ್ರಿಯ
ಬಿಹಾರದ ಜಮುಯಿಯಲ್ಲಿ (Jumayi in Bihar) ನಿರ್ಮಿಸಲಾದ ಈ ಹಳೆ ಕಟ್ಟಡವು ದೆವ್ವದ ಸ್ಥಳ ಎಂದು ಪ್ರಸಿದ್ಧ. ನೀವು ಇಂಟರ್ನೆಟ್ ನಲ್ಲಿ ಈ ಸ್ಥಳದ ಬಗ್ಗೆ ಸಾಕಷ್ಟು ಮಾಹಿತಿ ತಿಳಿಯಬಹುದು. ಈ ಸ್ಥಳವು ಅತ್ಯಂತ ಹಾಂಟೆಡ್ ಸ್ಥಳಗಳಲ್ಲಿ ಒಂದಾಗಿದೆ.
ಮುಸ್ಸಂಜೆಯ ನಂತರ ಯಾರೂ ಹೋಗುವುದಿಲ್ಲ
ಜಮುಯಿ ಜುಲಾದ ಸಿಮುಲ್ತಾಲಾದಲ್ಲಿ ಅನೇಕ ಹಳೆಯ ಬಂಗಾಳಿ ಕೋತಿಗಳಿವೆ. ಅವುಗಳಲ್ಲಿ ಒಂದು ದುಲಾರಿ ಭವನ (Dulari Bhawan), ಇದು ಸಾಕಷ್ಟು ಭಯಾನಕವಾಗಿದೆ. ಅನೇಕ ಭಯಾನಕ ಕಥೆಗಳು ಇಲ್ಲಿವೆ, ಅವು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜನರಲ್ಲಿ ಎಷ್ಟೊಂದು ಭಯ ಹುಟ್ಟಿಸಿವೆ ಅಂದ್ರೆ ಇಲ್ಲಿನ ಜನರು ಮುಸ್ಸಂಜೆಯ ನಂತರವೂ ಅಲ್ಲಿಗೆ ಹೋಗಲು ಹೆದರುತ್ತಾರೆ.
ದುಲಾರಿ ಭವನದಲ್ಲಿ ಏನಾಗುತ್ತದೆ?
ದುಲಾರಿ ಭವನವನ್ನು ಕಳೆದ ಹಲವಾರು ವರ್ಷಗಳಿಂದ ಮುಚ್ಚಲಾಗಿದೆ, ಆದರೆ ಇಲ್ಲಿನ ಗೋಡೆಗಳ ಮೇಲೆ ಕೈ ಮತ್ತು ಉಲ್ಟಾ ಪಾದದ ಗುರುತುಗಳನ್ನು ಕಾಣಬಹುದು. ಇದೂ ರಕ್ತದ ಗುರುತುಗಳು ಎನ್ನೋದು ಮತ್ತಷ್ಟು ಭೀತಿ ಹುಟ್ಟಿಸುತ್ತದೆ.
ಅಷ್ಟೇ ಅಲ್ಲ ಸಂಜೆಯಾಗುತ್ತಿದ್ದಂತೆ ಈ ನಿಶ್ಯಬ್ಧ ಬಂಗಲೆಯಿಂದ, ಮಕ್ಕಳ ಕಿರುಚಾಟ ಮತ್ತು ಅಳುವ ಶಬ್ದ ಸಹ ಕೇಳಿ ಬರುತ್ತದೆ ಎಂದು ಸ್ಥಳೀಯರು ಹೇಳುತ್ತಾರೆ. ಹಾಗಾಗಿ ಸಂಜೆಯ ನಂತರ ಯಾರೂ ಆ ಕಡೆಗೆ ಹೋಗುವ ಧೈರ್ಯ ಕೂಡ ಮಾಡೋದಿಲ್ಲ. ನಿಮಗೆ ಧೈರ್ಯವಿದ್ರೆ, ಸಾಹಸ ಮಾಡೋ ಹುಚ್ಚು ಇದ್ರೆ, ಖಂಡಿತವಾಗಿಯೂ ದುಲಾರಿ ಭವನಕ್ಕೆ ಹೋಗಿ ನೋಡಿ ಬರಬಹುದು.