ವಿಶ್ವ ಯೋಗ ದಿನದಂದು ಯೋಗ ಪ್ರಸಿದ್ಧ ಈ ತಾಣಗಳಿಗೆ ಭೇಟಿ ನೀಡಿ
ನೀವು ಯೋಗದಲ್ಲಿ ಆಸಕ್ತಿ ಹೊಂದಿದ್ದರೆ ಮತ್ತು ಯೋಗಾಭ್ಯಾಸದೊಂದಿಗೆ ಪ್ರಕೃತಿಯೊಂದಿಗೆ (yoga with nature) ನಿಮ್ಮನ್ನು ಕನೆಕ್ಟ್ ಮಾಡೋ ಸ್ಥಳದಲ್ಲಿ ಯೋಗ ದಿನದಂದು ಯೋಗ ಮಾಡಲು ಬಯಸಿದರೆ ನಿಮಗಾಗಿ ಸುಂದರ ಸ್ಥಳಗಳ ಬಗ್ಗೆ ಮಾಹಿತಿ ಇಲ್ಲಿದೆ. ಈ ಯೋಗ ದಿನದಂದು ನೀವು ಈ ಸ್ಥಳಗಳಿಗೆ ಭೇಟಿ ನೀಡಲು ಪ್ಲ್ಯಾನ್ ಮಾಡಬಹುದು. ಈ ಸ್ಥಳಗಳು ನಿಮಗೆ ಯೋಗದ ಅತ್ಯುತ್ತಮ ಅನುಭವವನ್ನು ನೀಡುತ್ತವೆ, ನಂತರ ಅದೇ ಸಮಯದಲ್ಲಿ, ನೀವು ನಿಮ್ಮ ಬೇಸಿಗೆ ರಜೆಯನ್ನು ಸಹ ಮೆಮೊರೇಬಲ್ ಆಗಿಸಬಹುದು.
ಯೋಗಕ್ಕಾಗಿ ನೀವು ಮನೆ, ಉದ್ಯಾನವನ, ಬಾಲ್ಕನಿ ಮತ್ತು ಅಂಗಳದಂತಹ ಯಾವುದೇ ಸ್ಥಳವನ್ನು ಬೇಕಾದರೂ ಆಯ್ಕೆ ಮಾಡಬಹುದು. ಆದರೆ ಯೋಗ ಮಾಡಲು ವಿಶೇಷ ಶಾಂತಿಯುತ ಸ್ಥಳಕ್ಕೆ ಹೋಗಲು ಬಯಸುವ ಸಾಕಷ್ಟು ಜನರೂ ಇದ್ದಾರೆ. ಏಕೆಂದರೆ ಅವರು ಯೋಗದ ಸಮಯದಲ್ಲಿ ಆಧ್ಯಾತ್ಮಿಕತೆ (spiritual) ಮತ್ತು ಪ್ರಕೃತಿಯೊಂದಿಗೆ ಸಂಪರ್ಕ ಸಾಧಿಸಲು ಬಯಸುತ್ತಾರೆ. ಅದಕ್ಕಾಗಿ ದೂರ ದೂರ ಪ್ರದೇಶಗಳಿಗೆ ಟ್ರಾವೆಲ್ ಮಾಡುತ್ತಾರೆ.
ನೀವು ನೋಡುತ್ತಾ ಹೋದರೆ, ದೇಶದಲ್ಲಿ ಅನೇಕ ಯೋಗ ಕೇಂದ್ರಗಳಿವೆ (yoga centre), ಅಲ್ಲಿ ನೀವು ಧ್ಯಾನ ಮತ್ತು ಯೋಗ ಭಂಗಿಗಳನ್ನು ಶಾಂತಿಯುತ ಮತ್ತು ಸುಂದರ ವಾತಾವರಣದಲ್ಲಿ ಮಾಡಬಹುದು. ಇಲ್ಲಿ ದೇಶದ ಕೆಲವು ಸ್ಥಳಗಳ ಬಗ್ಗೆ ಮಾಹಿತಿ ನೀಡಲಾಗಿದೆ, ಅಲ್ಲಿ ನೀವು ಮರಗಳು ಮತ್ತು ಹೂವುಗಳ ಸುತ್ತ, ಸಮುದ್ರ ಮತ್ತು ನದಿಗಳ ದಡಗಳಲ್ಲಿ ಯೋಗವನ್ನು ಆನಂದಿಸಲು ಸಾಧ್ಯವಾಗುತ್ತೆ. ಅದೇ ಸಮಯದಲ್ಲಿ, ಈ ಬೇಸಿಗೆ ರಜಾದಿನಗಳಲ್ಲಿ, ನೀವು ಈ ನಗರಗಳಲ್ಲಿರುವ ಸುಂದರ ಮತ್ತು ಪ್ರಸಿದ್ಧ ಸ್ಥಳಗಳಿಗೆ ಭೇಟಿ ನೀಡಲು ಸಾಧ್ಯವಾಗುತ್ತದೆ. ಆ ಸ್ಥಳಗಳು ಯಾವುವು ತಿಳಿಯೋಣ.
ಯೋಗ ದಿನದಂದು ನೀವು ಈ ಸ್ಥಳಗಳಿಗೆ ಭೇಟಿ ನೀಡಬಹುದು.
ತಮಿಳುನಾಡು, ಕೊಯಮತ್ತೂರು
ಯೋಗಾಭ್ಯಾಸದ ಜೊತೆಗೆ, ಪರ್ವತಗಳ ಸೌಂದರ್ಯ ಸವಿಯಲು ನೀವು ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಈಶ ಯೋಗ ಕೇಂದ್ರಕ್ಕೆ (Esha yoga center) ಭೇಟಿ ನೀಡಬಹುದು. ಈ ಯೋಗ ಕೇಂದ್ರವು ವೆಲ್ಲನ್ ಗಿರಿ ಪರ್ವತಗಳ ತಪ್ಪಲಿನಲ್ಲಿದೆ. ಯೋಗ ಕೇಂದ್ರದ ಮುಖ್ಯ ಕೇಂದ್ರ ಬಿಂದುವೆಂದರೆ ಧ್ಯಾನ.
ಯೋಗಕ್ಕೆ ಸಂಬಂಧಿಸಿದ ಹೊಸ ಅನುಭವಗಳನ್ನು ಅನುಭವಿಸಲು ನಿಮಗೆ ಸಾಧ್ಯವಾಗುವ ಒಂದು ಅದ್ಭುತವಾದ ತಾಣ ಇಲ್ಲಿದೆ. ಮತ್ತೊಂದೆಡೆ, ನೀವು ಅಲ್ಲಿ ನಡೆಸಲಾಗುವ ಆರಾಧ್ಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು (cultural programme) ಆನಂದಿಸಲು ಸಹ ಸಾಧ್ಯವಾಗುತ್ತೆ. ಇಷ್ಟೇ ಅಲ್ಲ, ಇಲ್ಲಿ ಇರುವ ಆದಿಯೋಗಿ ಶಿವನ ಆರಾಧ್ಯ ಪ್ರತಿಮೆಯನ್ನು ಸಹ ನೀವು ನೋಡಬಹುದು.
ಮೈಸೂರು
ಮೈಸೂರಿಗೆ ಭೇಟಿ ನೀಡುವ ಮೂಲಕ ಯೋಗದಲ್ಲಿನ ನಿಮ್ಮ ಆಸಕ್ತಿ ಮತ್ತು ಯೋಗಾಭ್ಯಾಸದ ಬಯಕೆಯನ್ನು ಪೂರೈಸಬಹುದು. ಭಾರತದ ಅಗ್ರ 24 ಯೋಗ ಶಾಲೆಗಳಲ್ಲಿ (yoga school) ಒಂದಾದ ಮಾಂಡ್ಲಾ ಯೋಗ ಶಾಲೆಯಲ್ಲಿ ನೀವು ಹೊಸ ಯೋಗ ಅನುಭವಗಳನ್ನು ಅನುಭವಿಸಲು ಸಾಧ್ಯವಾಗುತ್ತೆ. ಅದೇ ಸಮಯದಲ್ಲಿ, ನೀವು ಮೈಸೂರು ಅರಮನೆ, ಬೃಂದಾವನ ಗಾರ್ಡನ್ ಮತ್ತು ರೈಲ್ವೆ ಮ್ಯೂಸಿಯಂ ಗೆ ಭೇಟಿ ನೀಡಲು ಮತ್ತು ಸೋಮನಾಥಪುರ ದೇವಾಲಯ ಮತ್ತು ಚಾಮುಂಡೇಶ್ವರಿ ದೇವಾಲಯಕ್ಕೆ ಭೇಟಿ ನೀಡಬಹುದು.
ತಿರುವನಂತಪುರಂ, ಕೇರಳ
ಕೇರಳದ ತಿರುವನಂತಪುರದಲ್ಲಿ (ತಿರುವನಂತಪುರಂ ಎಂದೂ ಸಹ ಕರೆಯಲಾಗುತ್ತದೆ) ಅನೇಕ ಯೋಗ ಆಶ್ರಮಗಳಿವೆ. ಈ ಯೋಗ ದಿನದ ಸಂದರ್ಭದಲ್ಲಿ ನೀವು ಈ ಸುಂದರಾ ತಾಣಕ್ಕೆ ಭೇಟಿ ನೀಡಬಹುದು. ಇಲ್ಲಿನ ಶಾಂತಿಯುತ ತಾಣಗಳು ಆಂತರಿಕ ಶಾಂತಿ ಮತ್ತು ಆಧ್ಯಾತ್ಮಿಕತೆಯನ್ನು ಸಾಧಿಸಲು ಸಹಾಯ ಮಾಡುತ್ತದೆ.
ಇಷ್ಟೇ ಅಲ್ಲ, ಬೇಸಿಗೆ ರಜೆಯನ್ನು ಸ್ಮರಣೀಯವಾಗಿಸಲು, ನೀವು ಪೊವಾರ್ ದ್ವೀಪ, ಕನಕುನ್ನು ಅರಮನೆ, ತಿರುವನಂತಪುರಂನ ಹ್ಯಾಪಿ ಲ್ಯಾಂಡ್ ವಾಟರ್ ಥೀಮ್ ಪಾರ್ಕ್ ನಂತಹ (Water Theme Park) ಸ್ಥಳಗಳಿಗೆ ಭೇಟಿ ನೀಡಬಹುದು. ಅಟುಕಲ್ ಭಗವತಿ ದೇವಾಲಯ, ಅಜಿಮಾಲಾ ಶಿವ ದೇವಾಲಯ, ಕರಿಕಾಕಂ ಚಾಮುಂಡಿ ದೇವಿ ದೇವಾಲಯ ಮತ್ತು ಪಳವಂಗಡಿ ಗಣಪತಿ ದೇವಾಲಯಗಳಿಗೆ ಭೇಟಿ ನೀಡಬಹುದು.
ಉತ್ತರಾಖಂಡ್, ಉತ್ತರ ಕಾಶಿ
ಯೋಗ ಮತ್ತು ನಡಿಗೆ ಬಗ್ಗೆ ನೀವು ಹೆಚ್ಚಿನ ಗಮನ ಹರಿಸೋದಾದ್ರೆ ಉತ್ತರಾಖಂಡದ ಉತ್ತರಕಾಶಿಗೆ ಪ್ರಯಾಣಿಸಬಹುದು. ಇಲ್ಲಿನ ಯೋಗ ಆಶ್ರಮಗಳಲ್ಲಿ ಅತ್ಯುತ್ತಮ ಯೋಗ ತರಬೇತುದಾರರು ಇದ್ದಾರೆ. ಇಲ್ಲಿಯವರೆಗೆ ಸಾವಿರಾರು ಯೋಗ ಶಿಕ್ಷಕರನ್ನು (yoga teacher) ಸೃಷ್ಟಿಸಿದ ತಾಣ ಇದಾಗಿದೆ.
ಉತ್ತರಾಖಂಡ್ ನಲ್ಲಿ ಹಿಮದಿಂದ ತುಂಬಿದ ಪರ್ವತಗಳು, ಸುಂದರವಾದ ಕಣಿವೆಗಳು ಮತ್ತು ಜಲಪಾತಗಳು ಬೇಸಿಗೆಯಲ್ಲಿ ಚಳಿಗಾಲವನ್ನು ಅನುಭವಿಸಲು ಸಾಕು. ಇಷ್ಟೇ ಅಲ್ಲ, ಇಲ್ಲಿ ನೀವು ಮನೇರಿ ಅಣೆಕಟ್ಟು, ತಪೋವನ, ಖೇಡಿ ಜಲಪಾತ, ನಚಿಕೇತ ತಾಲ್ ಸರೋವರ ಮತ್ತು ಶಿವಾನಂದ ಕುಟೀರದಂತಹ ಸ್ಥಳಗಳಿಗೆ ಭೇಟಿ ನೀಡಬಹುದು.