ಒಂದೆಡೆ ವಿಶ್ವದಲ್ಲಿ ಜನಸಂಖ್ಯೆ ಏರ್ತಾ ಇದೆ..ಆದ್ರೆ ಈ ದೇಶಗಳಲ್ಲಿ ಜನರೇ ಕಡಿಮೆಯಂತೆ
ಇಂದಿನ ದಿನಗಳಲ್ಲಿ ವಿಶ್ವದ ಜನಸಂಖ್ಯೆ 8 ಬಿಲಿಯನ್ ತಲುಪಿದೆ, ಮತ್ತು ಜನಸಂಖ್ಯೆಯು ಹೆಚ್ಚುತ್ತಿರುವ ವೇಗವನ್ನು ನೋಡಿದರೆ, ಮುಂಬರುವ ದಿನಗಳಲ್ಲಿ ಅದನ್ನು ಲೆಕ್ಕ ಹಾಕುವುದು ಕಷ್ಟ ಎಂದು ತೋರುತ್ತದೆ. ಆದರೆ ಪ್ರಪಂಚದಲ್ಲಿ ಕೆಲವು ದೇಶಗಳಿವೆ, ಅವುಗಳ ಜನಸಂಖ್ಯೆ ಬಹುತೇಕ ತುಂಬಾನೆ ಕಡಿಮೆ ಇದೆ. ವಿರಳ ಜನಸಂಖ್ಯೆಯಿರುವ ಆ ದೇಶಗಳ ಬಗ್ಗೆ ತಿಳಿದುಕೊಳ್ಳೋಣ.
ವಿಶ್ವಸಂಸ್ಥೆಯ ವರದಿಯ ಪ್ರಕಾರ, 2030ರ ವೇಳೆಗೆ ಜಾಗತಿಕ ಜನಸಂಖ್ಯೆ ಸುಮಾರು 8.5 ಬಿಲಿಯನ್ ತಲುಪಲಿದೆ ಎಂದು ಹೊಸ ಅಂದಾಜುಗಳು ತೋರಿಸಿವೆ. 2050ರ ವೇಳೆಗೆ ವಿಶ್ವದ ಜನಸಂಖ್ಯೆ 9.7 ಬಿಲಿಯನ್ ಮತ್ತು 2100ರ ವೇಳೆಗೆ 10.4 ಬಿಲಿಯನ್ ಎಂದು ವಿಶ್ವಸಂಸ್ಥೆ ಲೆಕ್ಕಹಾಕಿದೆ. ಭಾರತವು ಮುಂದಿನ ವರ್ಷ ಜನಸಂಖ್ಯೆಯಲ್ಲಿ ನಂಬರ್ 1 ಸ್ಥಾನದಲ್ಲಿರಲಿದೆ ಎಂದು ಸಹ ಹೇಳಲಾಗುತ್ತೆ. ಜನಸಂಖ್ಯೆಯು ಹೆಚ್ಚುತ್ತಿರುವ ರೀತಿಯಲ್ಲಿ, ಜನರು ಪ್ರಯಾಣಿಸುವ ವಿಧಾನದಲ್ಲಿಯೂ ಸಹ ಬದಲಾವಣೆ ಉಂಟಾಗುತ್ತದೆ ಎಂದು ಅಂದಾಜಿಸಲಾಗಿದೆ.
ಜನರಿಗೆ ಟ್ರಾವೆಲ್ ಮಾಡೋದಂದ್ರೆ ತುಂಬಾನೆ ಇಷ್ಟ. ಆದರೆ ಯಾವಾಗಲೂ ಜನಸಂದಣಿಯ ನಡುವೆ ಇದ್ದು, ಇದ್ದು ಈಗ ಜನರು ಜನಸಂದಣಿಯನ್ನು ತಪ್ಪಿಸಲು ಕಡಿಮೆ ಜನಸಂಖ್ಯೆಯ ಮತ್ತು ಶಾಂತ ಸ್ಥಳವನ್ನು ನೋಡಲು ಬಯಸುತ್ತಾರೆ. ಕಡಿಮೆ ಜನಸಂಖ್ಯೆಯನ್ನು (least population) ಹೊಂದಿರುವ ಸ್ಥಳಗಳ ವಿಷಯಕ್ಕೆ ಬಂದಾಗ, ಕೆಲವು ಸುಂದರ ದೇಶಗಳ ಬಗ್ಗೆ ಒಂದಿಷ್ಟು ಮಾಹಿತಿ ನೀಡುತ್ತೇವೆ. ಈ ದೇಶಗಳಿಂದ ನಾವು ಜನಸಂಖ್ಯೆ ನಿಯಂತ್ರಣದ ಬಗ್ಗೆ ಸಾಕಷ್ಟು ಕಲಿಯಬೇಕಾಗಿದೆ.
ನಮೀಬಿಯಾ - Namibia
ಈ ತಾಣವು ವನ್ಯಜೀವಿ ಪ್ರಿಯರಿಗೆ ಸ್ವರ್ಗವಾಗಿದೆ, ದಟ್ಟವಾದ ಕಾಡುಗಳ ನಡುವೆ ಸಫಾರಿ ಆನಂದಿಸುವಾಗ ನೀವು ಸುಂದರವಾದ ಸೂರ್ಯಾಸ್ತವನ್ನು ಆನಂದಿಸಬಹುದು. ಇಷ್ಟೇ ಅಲ್ಲ, ನಮೀಬಿಯಾದ ಜಂಗಲ್ ಸಫಾರಿ ಪ್ರಪಂಚದಾದ್ಯಂತ ಎಷ್ಟು ಪ್ರಸಿದ್ಧವಾಗಿದೆ ಎಂದು ನಿಮಗೆ ತಿಳಿದಿದೆಯೇ? ಹೌದು, ಇಲ್ಲಿ ಅನೇಕ ರೆಸಾರ್ಟ್ ಗಳಿವೆ, ಅಲ್ಲಿಂದ ನೀವು ಎಲ್ಲಾ ರೀತಿಯ ಪ್ರಾಣಿಗಳನ್ನು ನೋಡಬಹುದು. ನೀವು ಈ ದೇಶಕ್ಕೆ ಭೇಟಿ ನೀಡಲು ಪ್ಲ್ಯಾನ್ ಮಾಡಿದ್ರೆ, ಒಮ್ಮೆ ಜಂಗಲ್ ಸಫಾರಿ ಮಾಡಿ. ಈ ದೇಶವು ಕೆಲವು ವಾಸ್ತುಶಿಲ್ಪಗಳಿಗೆ ನೆಲೆಯಾಗಿದೆ.
ಐಸ್ ಲ್ಯಾಂಡ್ - Iceland
ಐಸ್ ಲ್ಯಾಂಡ್ ಗೆ ಯಾವುದೇ ಪರಿಚಯದ ಅಗತ್ಯವಿಲ್ಲ, ಮತ್ತು ಇದು ಹೆಚ್ಚು ಭೇಟಿ ನೀಡುವ ಪ್ರವಾಸಿ ಸ್ಥಳಗಳಲ್ಲಿ ಒಂದಾಗಿದೆ. ಸೌಂದರ್ಯ ಮತ್ತು ಕಡಿಮೆ ಜನಸಂಖ್ಯೆಯೊಂದಿಗೆ, ಐಸ್ಲ್ಯಾಂಡ್ ವಿಶ್ವದ ಅತ್ಯಂತ ಜ್ವಾಲಾಮುಖಿ ಸಕ್ರಿಯ ಪ್ರದೇಶಗಳಲ್ಲಿ ಒಂದಾಗಿದೆ. ಬೆಚ್ಚಗಿನ ಜಲಪಾತಗಳು, ಹಿಮಪರ್ವತಗಳು, ಹಿಮನದಿಗಳು ಈ ಸ್ಥಳವನ್ನು ಇನ್ನೂ ಹೆಚ್ಚು ನೋಡಲು ಯೋಗ್ಯವಾಗಿಸಿವೆ.
ಸುರಿನಾಮ್ - Suriname
ದಕ್ಷಿಣ ಅಮೆರಿಕಾದ ಅತ್ಯಂತ ಚಿಕ್ಕ ದೇಶವಾದ ಸುರಿನಾಮ್ ಪ್ರತಿಯೊಂದು ವಿಷ್ಯದಲ್ಲೂ ತುಂಬಾ ಸುಂದರವಾಗಿದೆ. ನದಿಗಳು ಮತ್ತು ಸೊಂಪಾದ ಹಸಿರು ಕಾಡುಗಳಿಂದ ತುಂಬಿರುವ ಇಲ್ಲಿ ನೀವು ಸಫಾರಿ ಮೂಲಕ ಕಾಡುಗಳ ಕೆಲವು ಅತ್ಯದ್ಭುತ ದೃಶ್ಯಗಳನ್ನು ನೋಡುವ ಅವಕಾಶವನ್ನು ಪಡೆಯುತ್ತೀರಿ. ಇಲ್ಲಿ ಅನೇಕ ನೈಸರ್ಗಿಕ ಅದ್ಭುತಗಳಿವೆ, ಅವುಗಳನ್ನು ಪ್ರವಾಸಿಗರು ಎಕ್ಸ್ ಪ್ಲೋರ್ ಮಾಡಬೇಕು.. ಅಲ್ಲದೆ, ಈ ಸ್ಥಳವು ಆಹಾರ ಮತ್ತು ಪಾರ್ಟಿ ಸೆಂಟಾರ್ ಆಗಿ ಹೆಸರುವಾಸಿಯಾಗಿದೆ.
ಮಂಗೋಲಿಯಾ- Mongolia
ಪ್ರಾಚೀನ ಸರೋವರಗಳು, ಸಂಸ್ಕೃತಿ, ಸುಂದರವಾದ ಗ್ರಾಮೀಣ ಪ್ರದೇಶಗಳು ಮತ್ತು ಒರಟಾದ ಪರ್ವತಗಳು ಈ ಸ್ಥಳದ ಕೆಲವು ಪ್ರಮುಖ ಆಕರ್ಷಣೆಗಳಾಗಿವೆ, ಅವು ನಿಮಗೆ ಒಂದು ಕ್ಷಣವೂ ಬೋರಿಂಗ್ ಅನಿಸೋಕೆ ಬಿಡೋದಿಲ್ಲ. ವಿದೇಶೀಯರಿಗೆ, ಈ ಸ್ಥಳವು ಸಂಪೂರ್ಣವಾಗಿ ಹೊಸ ಸ್ಥಳದಂತೆ ಕಾಣುತ್ತದೆ, ಯಾಕೆಂದರೆ ಹಿಂದೆಂದೂ ನೋಡದ ಸುಂದರ ಸ್ಥಳಗಳನ್ನು ಇಲ್ಲಿ ಕಾಣಬಹುದು.
ಗ್ರೀನ್ ಲ್ಯಾಂಡ್ - Green land
ಇದು ಸುಂದರವಾದ ಮತ್ತು ಕಡಿಮೆ ಜನ ಸಂಖ್ಯೆ ಹೊಂದಿರೋ ಸ್ಥಳಗಳಲ್ಲಿ ಒಂದಾಗಿದೆ, ಅಲ್ಲಿ ನೀವು ಖಂಡಿತವಾಗಿಯೂ ದೋಣಿ ಅಥವಾ ಹೆಲಿಕಾಪ್ಟರ್ ಸವಾರಿ ಮಾಡಬಹುದು. ವಿಶ್ವದ ಅತ್ಯಂತ ವಿರಳ ಜನಸಂಖ್ಯೆಯೊಂದಿಗೆ, ಈ ಸ್ಥಳವು ಆಕರ್ಷಕವಾದ ಹಿಮನದಿಗಳು, ಹಿಮಪರ್ವತಗಳನ್ನು ಒಳಗೊಂಡಿದೆ. ಈ ತಾಣವು ಮಂತ್ರಮುಗ್ಧಗೊಳಿಸುವ ಭೂ ದೃಶ್ಯಗಳನ್ನು ಹೊಂದಿದೆ. ನೀವು ಇಲ್ಲಿಗೆ ಭೇಟಿ ನೀಡಿದರೆ, ನೀವು ರಾಕ್ ಕ್ಲೈಂಬಿಂಗ್, ಸೀ ಕಯಾಕಿಂಗ್ ಮತ್ತು ಮೀನುಗಾರಿಕೆಯಂತಹ ಚಟುವಟಿಕೆಗಳಲ್ಲಿ ತೊಡಗಬಹುದು.
ಫ್ರೆಂಚ್ ಗಯಾನಾ - French Guiana
ದಕ್ಷಿಣ ಅಮೆರಿಕಾದ ಮೂಲೆಯಲ್ಲಿರುವ ಈ ತಾಣವು ವಿರಳವಾದ ಜನಸಂಖ್ಯೆಯನ್ನು ಹೊಂದಿರುವುದಲ್ಲದೆ, ಬೃಹತ್ ಕಾಡುಗಳು ಮತ್ತು ಮಳೆ ಕಾಡುಗಳಿಂದ ತುಂಬಿದೆ. ಇಲ್ಲಿನ ಕಟ್ಟಡಗಳು ವಸಾಹತುಶಾಹಿ ವಾಸ್ತುಶಿಲ್ಪದಲ್ಲಿ ನಿರ್ಮಿಸಲಾಗಿದೆ, ಇದನ್ನು ನೋಡಿದ್ರೆ ಅವುಗಳನ್ನು ಇತ್ತೀಚೆಗೆ ನಿರ್ಮಿಸಲಾಗಿದೆ ಎಂದು ತೋರುತ್ತದೆ.