ಭಾರತದಲ್ಲಿ ಹರಿಯುವ ಏಕೈಕ ಗಂಡು ನದಿ ಯಾವುದು ಗೊತ್ತಾ?
ನದಿಗಳು ನೀರನ್ನು ನೀಡುವ ಸಾಧನ ಮಾತ್ರವಲ್ಲ, ಹಿಂದೂ ಧರ್ಮದಲ್ಲಿ, ನದಿಗಳನ್ನು ತಾಯಂದಿರೆಂದು ಪರಿಗಣಿಸಲಾಗುತ್ತದೆ. ಭಾರತದಲ್ಲಿ ತಂದೆ ಎಂದು ಕರೆಯಲ್ಪಡುವ ಒಂದು ನದಿ ಇದೆ ಎಂದು ನಿಮಗೆ ತಿಳಿದಿದೆಯೇ? ಬನ್ನಿ ಅದರ ಬಗ್ಗೆ ತಿಳಿಯೋಣ

ಭಾರತವು ನದಿಗಳ ನೆಲ. ಇಲ್ಲಿ ಹಲವಾರು ನದಿಗಳು ಹರಿಯುತ್ತವೆ. ಭಾರತದಲ್ಲಿ ಹೆಣ್ಣಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡೋದರಿಂದ, ಹರಿಯುವ ಹೆಚ್ಚಿನ ನದಿಗಳನ್ನು ತಾಯಿಯೆಂದೇ ಪರಿಗಣಿಸಲಾಗುತ್ತೆ.

ಗಂಗಾ, ಯಮುನಾ, ನರ್ಮದಾ ಮತ್ತು ಗೋದಾವರಿಯಂತಹ ನದಿಗಳನ್ನು ಸಹ ಹೆಣ್ಣು ಎಂದೇ ಪರಿಗಣಿಸಲಾಗುತ್ತೆ. ಹಾಗಾಗಿಯೆ ಈ ನಡಿಗಳನ್ನು ತಾಯಂದಿರು ಎಂದು ಕರೆಯಲಾಗುತ್ತದೆ. ಉದಾಹರಣೆ ಗಂಗಾ ಮಾತೆ, ತಾಯಿ ಗಂಗೆ ಎಂದೇ ಕರೆಯುತ್ತಾರೆ.
ಹಿಂದೂ ಧರ್ಮದಲ್ಲಿ ಈ ನದಿಗಳ ಬಗ್ಗೆ ಗಮನಾರ್ಹ ಮತ್ತು ಆಳವಾದ ನಂಬಿಕೆ ಇದೆ. ನದಿಗಳನ್ನು ದೇವರಿಗೆ ಸಮಾನವೆಂದು ಪೂಜಿಸಲಾಗುತ್ತದೆ. ನದಿಗಳಲ್ಲಿ ಸ್ನಾನ ಮಾಡಿದರೆ ಪಾಪ ಕಳೆದು ಹೋಗುತ್ತೆ ಅಂತಾನೂ ಹೇಳುತ್ತಾರೆ.
ಆದರೆ ಈ ನದಿಗಳನ್ನು ಹೆಣ್ಣು ಎಂದು ಪೂಜಿಸುವ ಈ ನಾಡಿನಲ್ಲೂ ಕೂಡ ಒಂದು ಅಚ್ಚರಿ ಇದೆ. ಅದೇನೆಂದರೆ ಭಾರತದಲ್ಲಿ ತಂದೆ ಎಂದು ಪರಿಗಣಿಸಲ್ಪಡುವ ಒಂದು ನದಿ ಇದೆ ಎಂದು ನಿಮಗೆ ತಿಳಿದಿದೆಯೇ?
ಈ ನದಿ ಬೇರೆ ಯಾವುದೂ ಅಲ್ಲ ಬ್ರಹ್ಮಪುತ್ರ ನದಿ (Brahmaputra river), ಇದನ್ನು ಭಾರತದ ಏಕೈಕ ಪುರುಷ ನದಿ ಎಂದು ಕರೆಯಲಾಗುತ್ತದೆ. ಯಾಕಂದ್ರೆ ಇದು ಬ್ರಹ್ಮ ದೇವನ ಮಗನಾಗಿದೆ ಎನ್ನುವ ನಂಬಿಕೆ ಇದೆ.
ಧಾರ್ಮಿಕ ನಂಬಿಕೆಯ ಪ್ರಕಾರ, ಬ್ರಹ್ಮಪುತ್ರ ನದಿಯನ್ನು ಬ್ರಹ್ಮ ದೇವರ ಮಗ ಎಂದು ಪರಿಗಣಿಸಲಾಗುತ್ತದೆ, ಅದಕ್ಕಾಗಿಯೇ ಇದನ್ನು ಪುರುಷ ನದಿ ಎಂದು ಕರೆಯಲಾಗುತ್ತದೆ. ಉಳಿದ ನದುಗಳನ್ನು ಹೆಣ್ಣು ಎಂದು ಪೂಜಿಸಿದರೆ, ಈ ನದಿಗೆ ಗಂಡಿನ ಸ್ಥಾನ ನೀಡಲಾಗುತ್ತೆ.
ಹಿಮಪರ್ವತಗಳಲ್ಲಿ ಹುಟ್ಟುವ ಈ ನದಿಯನ್ನು ಪವಿತ್ರ ನದಿ ಎಂದು ಸಹ ಪೂಜಿಸಲಾಗುತ್ತೆ. ಅಸ್ಸಾಂ ಮತ್ತು ಅರುಣಾಚಲ ಪ್ರದೇಶದಲ್ಲಿ ಬ್ರಹ್ಮಪುತ್ರ ನದಿಯನ್ನು ವಿಶೇಷವಾಗಿ ಪೂಜಿಸಲಾಗುತ್ತದೆ.
ಈ ಬ್ರಹ್ಮಪುತ್ರ ನದಿಯ ಉದ್ದವು ಸರಿಸುಮಾರು 2900 ಕಿಲೋಮೀಟರ್ ಆಗಿದ್ದು, ಇದು ಟಿಬೆಟ್ನ ಮಾನಸ ಸರೋವರದ ಬಳಿಯ ಚೆಮಾಯುಂಗ್ಡುಂಗ್ ಹಿಮನದಿಯಿಂದ ಹುಟ್ಟುತ್ತದೆ. ಹಾಗಾಗಿಯೇ ಅಲ್ಲಿನ ಜನರು ಈ ನದಿಯನ್ನು ಪೂಜಿಸುತ್ತಾರೆ.