MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Life
  • Travel
  • ಒಂದು ರೈಲು ಯಾತ್ರೆ, ಕೋಟಿ ಕೋಟಿ ಪುಣ್ಯ; ಕರ್ನಾಟಕ ಸರ್ಕಾರದಿಂದ ವಿಶೇಷ ಪ್ಯಾಕೇಜ್!

ಒಂದು ರೈಲು ಯಾತ್ರೆ, ಕೋಟಿ ಕೋಟಿ ಪುಣ್ಯ; ಕರ್ನಾಟಕ ಸರ್ಕಾರದಿಂದ ವಿಶೇಷ ಪ್ಯಾಕೇಜ್!

KARNATAKA BHARAT GAURAV DAKSHINA YATRA: ಹಿರಿಯ ನಾಗರಿಕರಿಗೆ ರೈಲಿನಲ್ಲಿ ದಕ್ಷಿಣ ಭಾರತದ ಧಾರ್ಮಿಕ ಕ್ಷೇತ್ರಗಳ ದರ್ಶನಕ್ಕೆ ವಿಶೇಷ ಪ್ಯಾಕೇಜ್ ಲಭ್ಯ. ಕರ್ನಾಟಕ ಸರ್ಕಾರ, ಧರ್ಮಾದಾಯ ಇಲಾಖೆ ಮತ್ತು ಐಆರ್‌ಸಿಟಿಸಿ ಸಹಯೋಗದಲ್ಲಿ ಈ ಯೋಜನೆ ಜಾರಿಗೆ ಬಂದಿದ್ದು, 5 ಸಾವಿರ ರೂಪಾಯಿ ಸಹಾಯಧನವೂ ಲಭ್ಯ.

1 Min read
Mahmad Rafik
Published : Jun 05 2025, 01:29 PM IST
Share this Photo Gallery
  • FB
  • TW
  • Linkdin
  • Whatsapp
17
Image Credit : IRCTC

ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಬೇಕು ಅನ್ನೋದು ಬಹುತೇಕ ಎಲ್ಲರ ಆಸೆಯಾಗಿರುತ್ತದೆ. ಆದರೆ ದೂರದ ಬಸ್ ಪ್ರಯಾಣದಿಂದ ಹಿರಿಯ ನಾಗರೀಕರು ಹಿಂದೇಟು ಹಾಕುತ್ತಿರುತ್ತಾರೆ. ಇದೀಗ ರೈಲಿನ ಮೂಲಕವೇ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಬಹುದಾಗಿದೆ. ಇದಕ್ಕಾಗಿರುವ ವಿಶೇಷ ಪ್ಯಾಕೇಜ್‌ನ ಮಾಹಿತಿಯನ್ನು ಈ ಲೇಖನ ಒಳಗೊಂಡಿದೆ.

27
Image Credit : AI Generated Photo

ಕರ್ನಾಟಕ ಭಾರತ ಗೌರವ ದಕ್ಷಿಣ ಯಾತ್ರೆ

ಕರ್ನಾಟಕ ಭಾರತ ಗೌರವ ದಕ್ಷಿಣ ಯಾತ್ರೆಯ ಪ್ಯಾಕೇಜ್‌ ಬಗ್ಗೆ ತಿಳಿದಿರಲ್ಲ. ಈ ವಿಶೇಷ ಪ್ಯಾಕೇಜ್‌ನ್ನು ಕರ್ನಾಟಕ ಸರ್ಕಾರ, ಧರ್ಮಾದಾಯ ಇಲಾಖೆ ಮತ್ತು ಐಆರ್‌ಸಿಟಿಸಿ ಸಹಯೋಗದಲ್ಲಿ ಆರಂಭಿಸಲಾಗಿದೆ. ಈ ಪ್ಯಾಕೇಜ್ ಲಾಭ ಪಡೆದು ತೀರ್ಥಯಾತ್ರೆ ಮಾಡಹುದಾಗಿದೆ.

Related Articles

Related image1
Indian Railways: ನಿಮ್ಮ ಟಿಕೆಟ್‌ನಲ್ಲಿರುವ H1, H2 ಮತ್ತು A1 ಕೋಚ್‌ ಮಾರ್ಕಿಂಗ್‌ನ ಅರ್ಥವೇನು?
Related image2
Indian Railway ಬದಲಾಗಿ ಯಾಕೆ Indian Railways ಅಂತಾರೆ ? ಇದು UPSC ಲೆವಲ್ ಪ್ರಶ್ನೆ
37
Image Credit : iSTOCK

ಈ ವಿಶೇಷ ರೈಲು ಪ್ಯಾಕೇಜ್, ಪೌರಾಣಿಕ ಮತ್ತು ಧಾರ್ಮಿಕ ಪ್ರಾಮುಖ್ಯತೆ ಹೊಂದಿರುವ ಸ್ಥಳಗಳನ್ನು ಒಳಗೊಂಡಿದೆ. ಎಸ್‌ಎಂವಿಟಿ ಬೆಂಗಳೂರು, ತುಮಕೂರು, ಬೀರೂರು, ದಾವಣಗೆರೆಮ, ಹಾವೇರಿ, ಹುಬ್ಬಳ್ಳಿ ಮತ್ತು ಬೆಳಗಾವಿ ನಿಲ್ದಾಣದಿಂದ ಈ ರೈಲನ್ನು ಹತ್ತಬಹುದಾಗಿದೆ. ಕರ್ನಾಟಕದ ನಿವಾಸಿ ಪ್ರಯಾಣಿಕರಿಗೆ ರಾಜ್ಯ ಸರ್ಕಾರ 5 ಸಾವಿರ ರೂಪಾಯಿ ಸಹಾಯಧನವನ್ನು ಸಹ ನೀಡುತ್ತದೆ.

47
Image Credit : iSTOCK

ಯಾತ್ರೆಯ ಮುಖ್ಯ ದರ್ಶನ ಸ್ಥಳಗಳು ಹೀಗಿವೆ

  1. ಮೀನಾಕ್ಷಿ ದೇವಾಲಯ, ಮದುರೈ
  2. ಪದ್ಮನಾಭಸ್ವಾಮಿ ದೇವಾಲಯ,ತಿರುವನಂತಪುರ
  3. ಭಗವತಿ ದೇವಿ ಮತ್ತು ವಿವೇಕಾನಂದ ಶಿಲಾ ಸ್ಮಾರಕ: ಕನ್ಯಾಕುಮಾರಿ
  4. ರಾಮನಾಥಸ್ವಾಮಿ: ರಾಮೇಶ್ವರಂ
57
Image Credit : social media

ಯಾತ್ರೆಯ ಪ್ರಮುಖ ವೈಶಿಷ್ಟ್ಯಗಳು

ಪ್ರಯಾಣಿಕರಿಗೆ ಎಸಿ 3ಟೈರ್ ಪ್ರಯಾಣ ಸಿಗಲಿದೆ. ಪ್ರವಾಸದ ಅವಧಿಯಲ್ಲಿ ಸಸ್ಯಹಾರ ಊಟ ನೀಡಲಾಗುತ್ತದೆ. ಪ್ರತಿ ಕೋಚ್‌ಗೂ ಮಾರ್ಗದರ್ಶಕರು ಇರಲಿದ್ದಾರೆ. ಪ್ರಯಾಣ ವಿಮೆ, ರೈಲಿನಲ್ಲಿ ಭದ್ರತಾ ವ್ಯವಸ್ಥೆಯನ್ನು ಹೊಂದಿರಲಿದೆ. ಸ್ಥಳ ವೀಕ್ಷಣೆಗೆ ಹವಾನಿಯಂತ್ರಿತವಲ್ಲದ ಬಸ್ ಸೇವೆ, ಕನ್ಯಾಕುಮಾರಿ/ರಾಮೇಶ್ವರಂನಲ್ಲಿ ಹವಾನಿಯಂತ್ರಣವಿಲ್ಲದ ಕೊಠಡಿಗಳಲ್ಲಿ ಇಬ್ಬರು ಅಥವಾ ಮೂವರು ಕೋಣೆಯನ್ನು ಶೇರ್ ಮಾಡಿಕೊಳ್ಳುವ ಆಯ್ಕೆಯನ್ನು ಪ್ರಯಾಣಿಕರಿಗೆ ನೀಡಲಾಗುತ್ತದೆ. ಇನ್ನುಳಿದಂತೆ ಅನ್ವಯವಾಗುವ ತೆರಿಗೆಗಳು ಈ ಪ್ಯಾಕೇಜ್‌ನಲ್ಲಿ ಸೇರಿವೆ.

67
Image Credit : our own

ಇತರೆ ಮಾಹಿತಿ

  1. ಪ್ರವಾಸ ದರ: 15,000 ರೂಪಾಯಿ
  2. ಪ್ರವಾಸ ದಿನಾಂಕ: ಜೂನ್ 25 ರಿಂದ ಜೂನ್ 30 ಒಟ್ಟು 6 ದಿನಗಳು
77
Image Credit : Google

ಟಿಕೆಟ್ ಬುಕಿಂಗ್ ಹೇಗೆ ಮಾಡೋದು?

  • ಬೆಂಗಳೂರು: 9363488229/90031400708/9003140710/8595931290
  • ಮೈಸೂರು: 8595931294/9731641611
  • ಹುಬ್ಬಳ್ಳಿ: 8595931293/859531291
  • ಹೆಚ್ಚಿನ ಮಾಹಿತಿಗಾಗಿ https://www.irctctourism.com/ ವೆಬ್‌ಸೈಟ್‌ಗೆ ಭೇಟಿ ನೀಡಬಹುದು.

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಭಾರತ ಸುದ್ದಿ
ಭಾರತೀಯ ರೈಲ್ವೆ
ಐಆರ್‌ಸಿಟಿಸಿ
ಕರ್ನಾಟಕ ಸರ್ಕಾರ
ಪ್ರವಾಸ

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved