ಕರ್ನಾಟಕದ ಊರುಗಳ ಹೆಸರಿನ ಹಿಂದಿರೋ ಇತಿಹಾಸ ಇಂಟ್ರೆಸ್ಟಿಂಗ್ ಆಗಿದೆ… ನಿಮ್ಮೂರಿನ ಕಥೆನೂ ಕೇಳಿ…
ನಿಮ್ಮ ಊರಿಗೆ ಯಾಕೆ ಆ ಹೆಸರು ಬಂತು ಎಂದು ಯಾವತ್ತಾದ್ರೂ ಯೋಚನೆ ಮಾಡಿದ್ದೀರಿ? ಇಲ್ಲ ಅಂದ್ರೆ ಇಲ್ಲಿದೆ ನೋಡಿ ಊರುಗಳು ಹೆಸರಿನ ಹಿಂದಿರೋ ಕಥೆ.

ನಾವೀಗ ನಮ್ಮ ಊರನ್ನು ಯಾವ ಯಾವ ಹೆಸರಿನಿಂದ ಕರೆಯುತ್ತಿದ್ದೇವೋ? ಹಿಂದೆ ಆ ಹೆಸರು ಇಲ್ಲವಾಗಿತ್ತು. ಹಾಗಿದ್ರೆ, ನಮ್ಮ ಊರಿಗೆ ಆ ಹೆಸರು ಬರೋದಕ್ಕೆ ಕಾರಣ ಏನು? ಆ ಹೆಸರಿನ ಇತಿಹಾಸ ಏನು ತಿಳಿಯೋಣ.
ಬೆಂಗಳೂರು : ಬೆಂದ ಕಾಳೂರು ಹೆಸರು ಮುಂದೆ ಬೆಂಗಳೂರು (Bangalore)ಅಯ್ತು. ಹಸಿವಿನಿಂದ ಬಂದ ವ್ಯಕ್ತಿಗೆ ಹೆಂಗಸೊಬ್ಬಳು ಬೆಂದ ಕಾಳನ್ನು ತಿನ್ನೋದಕ್ಕೆ ನೀಡಿದ್ದರಿಂದ, ಆತ ಆ ಊರಿಗೆ ಬೆಂದ ಕಾಳೂರು ಎನ್ನುವ ಹೆಸರು ಕೊಟ್ಟಿದ್ದನಂತೆ.
ಯಾದಗಿರಿ : ಯಾದವರು ಆಳಿದ ಊರು ಮುಂದೆ ಯಾದಗಿರಿ ಆಯ್ತು.
ವಿಜಯನಗರ : ವಿಜಯನಗರ (Vijayanagara) ಸಾಮ್ರಾಜ್ಯ ಆಳಿದ ಊರು ವಿಜಯನಗರ
ಚಿಕ್ಕೋಡಿ : ಚಿಕ್ಕೋಡಿಯ ಅರ್ಥ ಚಿಕ್ಕ ಹಳ್ಳಿ. ಇದೊಂದು ಚಿಕ್ಕ ಗ್ರಾಮವಾಗಿದ್ದರಿಂದ ಚಿಕ್ಕೋಡಿ ಎನ್ನುವ ಹೆಸರು ಬಂತು.
ಮಂಡ್ಯ : ಮಾಂಡವ್ಯ ರಿಷಿಗಳಿಂದಾಗಿ ಮಂಡ್ಯ ಎನ್ನುವ ಹೆಸರು ಬಂತು
ಮೈಸೂರು : ಮಹಿಷನ ಊರು ಮುಂದೆ ಮೈಸೂರು ಆಯ್ತು.
ಚಿಕ್ಕ ಬಳ್ಳಾಪುರ : ಚಿಕ್ಕ ಅಂದ್ರೆ ಸಣ್ಣ, ಬಳ್ಳ ಅಂದ್ರೆ ಕಾಳುಗಳನ್ನು ಅಳೆಯುವ ಸಾಧನ… ಇವೆರಡು ಸೇರಿ ಈ ಊರಿಗೆ ಚಿಕ್ಕ ಬಳ್ಳಾಪುರ (Chikkaballapura) ಎನ್ನುವ ಹೆಸರು ಬಂತು.
ಕಾರವಾರ : ಈ ಹೆಸರು ಬಂದಿದ್ದು, ಕಡೇ ವಾಡ ಎನ್ನುವ ಕೊಂಕಣಿ ಪದದಿಂದ. ಕಡೆ ಅಂದ್ರೆ ಕೊನೆಯ, ವಾಡ ಅಂದ್ರೆ ಪ್ರದೇಶ. ಹಾಗಾಗಿ ಕಡೇವಾಡ ಕಾರವಾರವಾಯ್ತು.
ತುಮಕೂರು : ತುಂಬೆಗಿಡಗಳು ಹೆಚ್ಚಾಗಿ ಬೆಳೆಯುವ ಊರು ತುಮಕೂರು.
ಕುಂದಾಪುರ : ಕುಂದವರ್ಮ ಆಳ್ವಿಕೆ ಮಾಡಿದ ಊರು ಕುಂದಾಪುರ
ಭದ್ರಾವತಿ : ಭದ್ರಾ ನದಿ ಹರಿಯುವ ಊರು ಭದ್ರಾವತಿಯಾಯ್ತು.
ಬಳ್ಳಾರಿ : ಬಲ್ಲರಿ ಎನ್ನುವ ದೇವಿಯಿಂದಾಗಿ ಆ ಊರಿಗೆ ಬಳ್ಳಾರಿ ಎನ್ನುವ ಹೆಸರು ಬಂತು.
ಹರಿಹರ : ಹರಿ ಅಂದ್ರೆ ವಿಷ್ಣು ಮತ್ತು ಹರ ಅಂದ್ರೆ ಶಿವ, ಹರಿಹರ ದೇವಾಲಯವುಳ್ಳ ಊರು ಹರಿಹರವಾಯ್ತು.
ಬೀದರ್ : ಬೈದರ್ ಎನ್ನುವ ಪರ್ಷಿಯನ್ ಪದದಿಂದ ಬೀದರ್ ಎನ್ನುವ ಹೆಸರು ಬಂತು. ಬೈದರ್ ಅಂದ್ರೆ ಎಚ್ಚರಿಕೆಯಿಂದ ಇರೋದು.
ಚಾಮರಾಜನಗರ : ಚಾಮರಾಜ ಒಡೆಯರು ಹುಟ್ಟಿದ ಸ್ಥಳ ಚಾಮರಾಜ (Chamarajanagara) ನಗರವಾಯ್ತು.
ತಿಪಟೂರು : ತಿಪಟೂರು ಎನ್ನುವ ಹೆಸರು ಬಂದಿದುದ್, ತಿಪಟಾಲದಿಂದ ತಿಪಟಾಲ ಅಂದ್ರೆ ಒಣಗಿದ ತೆಂಗು ಎಂದು ಅರ್ಥ.
ಕೊಪ್ಪಳ : ಈ ಹೆಸರು ಬಂದಿರೋದು ಕೋಪನ ನಗರದಿಂದ.
ಶಿವಮೊಗ್ಗ : ಶಿವಪ್ಪ ನಾಯಕ ಆಳಿದ ಊರು. ಸಿಹಿಯಾದ ನೀರು ಹರಿಯುವ ತುಂಗಾ ನದಿ ಇದ್ದಿದುದರಿಂದ ಇದನ್ನು ಸಿಹಿ ಮೊಗ್ಗೆ ಎನ್ನಲಾಗುತ್ತಿತ್ತು, ಮುಂದೆ ಇದು ಶಿವಮೊಗ್ಗವಾಯಿತು.
ಹುಬ್ಬಳ್ಳಿ : ಈ ಹೆಸರು ಬಂದಿರೋದು ಹೂವಿನ ಬಳ್ಳಿಯಿಂದಾಗಿ.
ಮಂಗಳೂರು : ಮಂಗಳಾದೇವಿ ನೆಲೆಸಿರುವಂತಹ ಊರು ಮಂಗಳೂರು. (Mangalore)
ದಾವಣಗೆರೆ : ದೇವನಗರಿ ಎನ್ನುವ ಮೂಲ ಹೆಸರಿನಿಂದ ಆ ಊರಿಗೆ ದಾವಣಗೆರೆ ಎನ್ನುವ ಹೆಸರು ಬಂತು.
ಕೂಡಲ ಸಂಗಮ : ನದಿಗಳ ಸಂಗಮವೇ ಕೂಡಲಸಂಗಮ. ಇದರ ಮೂದಲ ಹೆಸರು ಕಪ್ಪಡಿ ಸಂಗಮ ಕಪ್ಪಡಿ ಎಂದರೆ ಕಲ್ಲುಗಳ ಪಡಿ ನದಿಗಳ ಸಂಗಮದಿಂದ ಸಂಗಮ ಎಂಬ ಹೆಸರು ಬಂದಿದೆ. ಸದ್ಯ ಇದು ಕೂಡಲಸಂಗಮ ಎಂಬ ಹೆಸರಿನಿಂದ ಪ್ರಸಿದ್ಧವಾಗಿದೆ.
ವಿಜಯಪುರ : ವಿಜಯ ಅಂದ್ರೆ ಜಯ, ಗೆಲುವು, ಪುರ ಅಂದ್ರೆ ಊರು. ಜಯಗಳಿಸಿದ ಊರು ವಿಜಯಪುರವಾಯ್ತು.
ಕೋಲಾರ : ಕೋಲಾರ ಎನ್ನುವ ಹೆಸರು ಬಂದಿದ್ದು, ಕೋಲಾಹಲ ಪುರದಿಂದ. ಕೋಲಾಹಲ ಅಂದ್ರೆ ಯುದ್ಧ ಭೂಮಿ ಎಮ್ದು ಅರ್ಥ.
ಚಿಕ್ಕಮಗಳೂರು : ಚಿಕ್ಕ ಮಗಳ ಊರು. ಸಕಾರಾಯ ರಾಜ ತನ್ನ ಕೊನೆಯ ಅಂದ್ರೆ ಚಿಕ್ಕ ಮಗಳನ್ನು ಮದುವೆ ಮಾಡಿಕೊಟ್ಟ ಊರು ಚಿಕ್ಕಮಗಳೂರು (Chikamagaluru) ಎಂದೇ ಪ್ರಸಿದ್ಧವಾಯ್ತು.