MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ಬಿಗ್ ಬಾಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Life
  • Travel
  • ಬಲ್ಗೇರಿಯಾದಲ್ಲಿ ವಧು ಮಾರಾಟಕ್ಕಿದೆ ಮಾರುಕಟ್ಟೆ, ಹುಡುಗಿ ಸಿಗದವರು ಹೋಗಬಹುದಾ?

ಬಲ್ಗೇರಿಯಾದಲ್ಲಿ ವಧು ಮಾರಾಟಕ್ಕಿದೆ ಮಾರುಕಟ್ಟೆ, ಹುಡುಗಿ ಸಿಗದವರು ಹೋಗಬಹುದಾ?

ವಧುವಿನ ಕುಟುಂಬದಿಂದ ವರದಕ್ಷಿಣೆ ತೆಗೆದುಕೊಂಡು ಮದುವೆಯಾಗೋ ಸಂಪ್ರದಾಯದ ಬಗ್ಗೆ ನೀವು ಕೇಳಿರಬಹುದು. ಆದರೆ ಹದಿಹರೆಯದ ಹುಡುಗಿಯರನ್ನು ಬಿಡ್ಡಿಂಗ್ ಮೂಲಕ ಮದುವೆಯಾಗುವ ಮಾರುಕಟ್ಟೆಯನ್ನು ನೀವು ಎಂದಾದರೂ ನೋಡಿದ್ದೀರಾ?  

3 Min read
Suvarna News
Published : Sep 07 2023, 10:16 AM IST| Updated : Sep 07 2023, 12:21 PM IST
Share this Photo Gallery
  • FB
  • TW
  • Linkdin
  • Whatsapp
111

ಪ್ರಪಂಚದಾದ್ಯಂತ ಅನೇಕ ರೀತಿಯ ಪದ್ಧತಿಗಳಿವೆ. ಅವುಗಳ ಬಗ್ಗೆ ಕೇಳಿ ಜನರು ಶಾಕ್ ಆಗ್ತಾರೆ. ಭಾರತದಲ್ಲಿಯೂ ಇಂಥ ಅನೇಕ ಪದ್ಧತಿಗಳ ಬಗ್ಗೆ ನೀವು ಕೇಳಿರಬಹುದು. ಅದರಲ್ಲೂ ವಿಚಿತ್ರ ಮದುವೆ ಸಂಪ್ರದಾಯಗಳ (wedding tradition) ಬಗ್ಗೆಯೂ ತಿಳಿದಿರಬಹುದು ಅಲ್ವಾ? ವಿಶ್ವದ ಅನೇಕ ದೇಶಗಳಲ್ಲಿ ಮಹಿಳೆಯರಿಗಾಗಿ ಬಹಳ ಸಂಪ್ರದಾಯವಾದಿ ಪದ್ಧತಿಗಳಿವೆ. ಅದರ ಬಗ್ಗೆ ಕೇಳಿದರೆ ನಿಮಗೆ ಆಘಾತವಾಗಬಹುದು. ಈ ಪದ್ಧತಿಗಳ ಬಗ್ಗೆ ಎಲ್ಲರಿಗೂ ತಿಳಿದಿದೆ, ಆದರೆ ಅವುಗಳನ್ನು ನಿಲ್ಲಿಸಲಾಗುವುದಿಲ್ಲ ಅಥವಾ ಯಾರೂ ಅದರ ಬಗ್ಗೆ ತಪ್ಪಾಗಿ ಯೋಚಿಸೋದೂ ಇಲ್ಲ. . 

211

ವಿಚಿತ್ರ ಮದುವೆಯ ಒಂದು ಪದ್ಧತಿ ಬಲ್ಗೇರಿಯಾದಲ್ಲಿದೆ, ಅಲ್ಲಿ ವಧುಗಳನ್ನು ಮಾರಲಾಗುತ್ತದೆ. ಈ ಪದ್ಧತಿಯು ಸುಮಾರು 3000 ವರ್ಷಗಳಷ್ಟು ಹಳೆಯದಾಗಿದ್ದು, ಇದು ಇಲ್ಲಿನ ನಗರಗಳಲ್ಲಿ ಇಂದಿಗೂ ನಡೆಯುತ್ತೆ . 20 ವರ್ಷದೊಳಗಿನ ಹುಡುಗಿಯರನ್ನು ಇಲ್ಲಿ ಬಿಡ್ ಮಾಡಲಾಗುತ್ತದೆ ಮತ್ತು ಹುಡುಗಿಯರನ್ನು ಅವರ ಕುಟುಂಬದ ಸದಸ್ಯರೇ ಬಿಡ್ (bid of bride) ಮಾಡ್ತಾರೆ ಅಂದ್ರೆ ನೀವು ನಂಬಲೇಬೇಕು. 

311

ಒಂದು ನಿರ್ದಿಷ್ಟ ಸಮುದಾಯದ ಪದ್ಧತಿ
ಈ ಪದ್ಧತಿಯನ್ನು ಅನುಸರಿಸುವ ಕಲೈಡ್ಝಿ ಸಮುದಾಯವಿದೆ. ಅವರು ಈ ಪದ್ಧತಿಯ ಬಗ್ಗೆ ತುಂಬಾ ಹೆಮ್ಮೆಪಡುತ್ತದೆ. ಈ ಸಮುದಾಯವು ಮೂಲತಃ ತಾಮ್ರ ಮತ್ತು ಹಿತ್ತಾಳೆ ಶಿಲ್ಪಗಳನ್ನು ತಯಾರಿಸುವ ಕೆಲಸ ಮಾಡ್ತಾರೆ. ಅವರ ಪ್ರಕಾರ, ಈ ಪದ್ಧತಿಯು ಹುಡುಗರು ಮತ್ತು ಹುಡುಗಿಯರು ಇಬ್ಬರಿಗೂ ಪ್ರಯೋಜನಕಾರಿ. ಈ ಪದ್ಧತಿ ಮೂಲಕ, ಬಡ ಕುಟುಂಬಗಳ ಜನರು ತಮ್ಮ ಮಕ್ಕಳನ್ನು ಚೆನ್ನಾಗಿ ಮದುವೆಯಾಗಬಹುದು. 

411

ಈ ಸಂಪ್ರದಾಯವನ್ನು ಅನುಸರಿಸುವ ಜನರನ್ನು ಬಲ್ಗೇರಿಯಾದ ರೋಮಾ ಜನರು ಎಂದೂ ಕರೆಯುತ್ತಾರೆ. ಈ ಸಮುದಾಯವು 12 ರಿಂದ 14ನೇ ಶತಮಾನಗಳಲ್ಲಿ ಬಲ್ಗೇರಿಯಾಕ್ಕೆ (Gypsy Bride Market) ವಲಸೆ ಬಂದಿತು. ಇನ್ನು ಹುಡುಗಿಯರನ್ನು ಸುಮ್ಮನೆ ಮಾರುವುದಿಲ್ಲ. ಹುಡುಗಿಯರನ್ನು ಮಾರಲು  ತುಂಬಾ ಕಟ್ಟುನಿಟ್ಟಾದ ನಿಯಮಗಳಿವೆ.

511

ಹುಡುಗಿಯರಿಗಾಗಿ ಮಾಡಿದ ಕೆಲವು ನಿಯಮಗಳು ಇಲ್ಲಿವೆ, ಅವುಗಳನ್ನು ಈಗ ಪ್ರಪಂಚದಾದ್ಯಂತ ಸಂಪ್ರದಾಯವಾದಿ ಎಂದು ಪರಿಗಣಿಸಲಾಗುತ್ತದೆ. ಅವುಗಳ ಬಗ್ಗೆ ನೋಡೋಣ. 

ಹುಡುಗಿಯರು ಯಾರೊಂದಿಗೂ ಡೇಟಿಂಗ್ ಮಾಡಬಾರದು.
12-13 ವರ್ಷದ ಬಾಲಕಿಯರನ್ನು ಶಾಲೆಯಿಂದ ಬಿಡಿಸಲಾಗುತ್ತದೆ. ಈಗ ಆ ವಯಸ್ಸನ್ನು ಸ್ವಲ್ಪ ಹೆಚ್ಚಿಸಲಾಗಿದೆ..
ಕುಟುಂಬ ಸದಸ್ಯರಿಲ್ಲದೆ ಹುಡುಗಿಯರು ಎಲ್ಲಿಯಾದರೂ ಹೋಗುವುದು ತಪ್ಪು ಎಂದು ಪರಿಗಣಿಸಲಾಗುತ್ತದೆ.
ಯಾವುದೇ ಪುರುಷನೊಂದಿಗೆ ಸಂವಹನವನ್ನು (communication) ಹೆಚ್ಚಿಸಲು ಸಾಧ್ಯವಿಲ್ಲ.
 

611

ಸ್ವಂತ ಸಮುದಾಯವನ್ನು ಹೊರತುಪಡಿಸಿ ಬೇರೆ ಯಾವುದೇ ಸಮುದಾಯದ ಹುಡುಗನನ್ನು ಭೇಟಿಯಾಗಲು ಸಾಧ್ಯವಿಲ್ಲ.
ಪ್ರೇಮ ವಿವಾಹಗಳನ್ನು ಮಾಡಿಕೊಂಡಿರುವ ಹುಡುಗಿಯರನ್ನು ಬಹಿಷ್ಕರಿಸಲಾಗುತ್ತದೆ 
ಹುಡುಗಿಯರು ತಮ್ಮ ಆಯ್ಕೆಯ ವರನನ್ನು ಆಯ್ಕೆ ಮಾಡದಂತೆ ಮತ್ತು ಅವರ ಕನ್ಯತ್ವಕ್ಕೆ ಯಾವುದೇ ಅಪಾಯವಾಗದಂತೆ ಇಂತಹ ನಿಯಮಗಳನ್ನು ಮಾಡಲಾಗಿದೆ. ಬಲ್ಗೇರಿಯಾದ ಈ ಸಮುದಾಯದಲ್ಲಿ, ಹುಡುಗಿಯರು ಕನ್ಯೆಯರಲ್ಲದಿದ್ದರೆ, ಅವರ ಮದುವೆ ಸರಿಯಾಗಿ ನಡೆಯುವುದಿಲ್ಲ ಮತ್ತು ಅವರ ಬೆಲೆ ಕಡಿಮೆ ಇರುತ್ತದೆ ಎಂದು ನಂಬಲಾಗಿದೆ.  
 

711

ಸುಂದರ ಹುಡುಗಿಯರಿಗೆ ಲಕ್ಷಾಂತರ ವೆಚ್ಚವಾಗುತ್ತದೆ 
ಈ ಮಾರುಕಟ್ಟೆಯಲ್ಲಿ, ಹುಡುಗಿಯರನ್ನು ಅವರ ವಯಸ್ಸು, ನೋಟ ಮತ್ತು ಆಕರ್ಷಣೆಯನ್ನು ನೋಡಿ ಬಿಡ್ ಮಾಡಲಾಗುತ್ತದೆ. ಅವರು ತುಂಬಾ ಹೆವಿ ಮೇಕಪ್ (Heavy Makeup Look) ಧರಿಸಬೇಕು ಮತ್ತು ಅವರ ಆಕಾರವನ್ನು ಉತ್ತಮವಾಗಿ ಕಾಣುವಂತೆ ಮಾಡುವ ಬಟ್ಟೆ ಧರಿಸಬೇಕು ಮತ್ತು ಅವರು ವರರನ್ನು ತಮ್ಮತ್ತ ಆಕರ್ಷಿಸಬಹುದು. ಅನೇಕ ಹುಡುಗಿಯರು ಇಲ್ಲಿ ವಿವಿಧ ರೀತಿಯ ವರ್ಣರಂಜಿತ ಮೇಕಪ್‌ನಲ್ಲಿ ಕಾಣಿಸಿಕೊಳ್ಳುತ್ತಾರೆ.  

811

ಮಾರುಕಟ್ಟೆ ಉತ್ತಮವಾಗಿರಲಿ ಅಥವಾ ಇಲ್ಲದಿರಲಿ, ಆದರೆ ಸುಂದರ ಹುಡುಗಿಯರಿದ್ದರೆ, ಅವರಿಗೆ ಉತ್ತಮ ಬೆಲೆ ವಿಧಿಸಲಾಗುತ್ತದೆ. ಹುಡುಗನು ಹುಡುಗಿಯನ್ನು ಇಷ್ಟಪಟ್ಟ ನಂತರ, ಹುಡುಗಿಯ ಕುಟುಂಬವು ಹುಡುಗನ ಕುಟುಂಬ ಸದಸ್ಯರೊಂದಿಗೆ ಮಾತುಕತೆ ನಡೆಸುತ್ತದೆ.  
 

911

ಈ ವಧುವಿನ ಮಾರುಕಟ್ಟೆಯನ್ನು ವರ್ಷಕ್ಕೆ ನಾಲ್ಕು ಬಾರಿ ನಡೆಸಲಾಗುತ್ತದೆ. 
ಬಲ್ಗೇರಿಯಾದ ಸ್ಟಾರಾ ಜಾಗೋರಾ ನಗರದಲ್ಲಿ, ಈ ಮಾರುಕಟ್ಟೆಯನ್ನು ವರ್ಷಕ್ಕೆ ನಾಲ್ಕು ಬಾರಿ ಶನಿವಾರದಂದು (Saturday Market) ಮಾಡಲಾಗುತ್ತೆ. ಇದಲ್ಲದೆ, ಹುಡುಗರು ಮತ್ತು ಹುಡುಗಿಯರ ಹೊಂದಾಣಿಕೆ ಈಗ ಇಂಟರ್ನೆಟ್ ಮೂಲಕ ನಡೆಯುತ್ತಿದೆ.  ಈ ಮಾರುಕಟ್ಟೆಯನ್ನು ಆರ್ಥೊಡಾಕ್ಸ್ ಹಬ್ಬ ಕ್ರಿಶ್ಚಿಯನ್ ಲೆಂಟ್ ನ ಮೊದಲ ಶನಿವಾರದಂದು ಸ್ಥಾಪಿಸಲಾಗುತ್ತದೆ. ಇದು ಒಂದು ರೀತಿಯ ಕ್ರಿಶ್ಚಿಯನ್ ಹಬ್ಬವಾಗಿದ್ದು, ಇದರಲ್ಲಿ ಜನರು ಪ್ರಾರ್ಥಿಸುತ್ತಾರೆ ಮತ್ತು ಉಪವಾಸ ಮಾಡುತ್ತಾರೆ. ಇದನ್ನು ಗ್ರೇಟ್ ಲೆಂಟ್ ಎಂದೂ ಕರೆಯುತ್ತಾರೆ. ಈ ಹಬ್ಬವು 40 ದಿನಗಳವರೆಗೆ ಇರುತ್ತದೆ ಮತ್ತು ಈಸ್ಟರ್ ಮೊದಲು ಆಚರಿಸಲಾಗುತ್ತದೆ.  

1011

ಈ ಜಿಪ್ಸಿ ವಧು ಮಾರುಕಟ್ಟೆಯಲ್ಲಿ (Gypsy bride market) ವಿವಿಧ ರೀತಿಯ ಸ್ಪರ್ಧೆಗಳು ಸಹ ಇರುತ್ತವೆ, ಅಲ್ಲಿ ಜನರು ನೃತ್ಯ (Dance), ಪಾನೀಯ (Drinks) ಮತ್ತು ಆಹಾರದ ಜಾತ್ರೆ (Food Fair) ಕೂಡ ನಡೆಯುತ್ತೆ. ಆದಾಗ್ಯೂ, ಹುಡುಗರು ಮತ್ತು ಹುಡುಗಿಯರಿಗೆ ಈ ಸ್ಥಳದಲ್ಲಿ ಭೇಟಿಯಾಗಲು ಅವಕಾಶವಿದ್ದರೂ, ಅವರು ಕುಟುಂಬದ ಮುಂದೆಯೇ ಭೇಟಿಯಾಗಬೇಕಾಗಿದೆ. ಅವರು ಪ್ರತ್ಯೇಕವಾಗಿ ಭೇಟಿಯಾಗಲು ಸಾಧ್ಯವಿಲ್ಲ ಮತ್ತು ಅವರು ಮಿತಿಯೊಳಗೆ ಮಾತನಾಡಬೇಕು.  

1111

ಡೈಲಿ ಮೇಲ್ ಮತ್ತು ವೈಸ್ ಏಷ್ಯಾ ವರದಿಯ ಪ್ರಕಾರ, ಇಲ್ಲಿನ ಹುಡುಗಿಯರನ್ನು 6 ಲಕ್ಷದಿಂದ 98 ಲಕ್ಷ ರೂ.ಗೆ ಮಾರಲಾಗುತ್ತದೆ. ಬಡ ಕುಟುಂಬಗಳ ಹುಡುಗರು ಕಡಿಮೆ ಸುಂದರವಾದ ಹುಡುಗಿಯರನ್ನು ಆಯ್ಕೆ ಮಾಡುತ್ತಾರೆ ಇದರಿಂದ ಅವರು ಕಡಿಮೆ ಹಣದಲ್ಲಿಯೂ ತಮಗಾಗಿ ಉತ್ತಮ ಹೆಂಡತಿಯನ್ನು ಕಂಡುಕೊಳ್ಳಬಹುದು.  
 

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SN
Suvarna News
ಮದುಮಗಳು
ಮಾರುಕಟ್ಟೆ

Latest Videos
Recommended Stories
Recommended image1
ಹಿರಿಯ ನಾಗರಿಕರು, 45+ ಮಹಿಳೆಯರಿಗೆ ಗುಡ್ ನ್ಯೂಸ್ ಕೊಟ್ಟ ರೈಲ್ವೆ; ಇಲ್ಲಿದೆ ಸೂಪರ್ ಅಪ್‌ಡೇಟ್
Recommended image2
ಭೂರೂಪ ಬದಲಾಯಿಸಿದ ಪ್ರವಾಹ.. ವಿಶ್ವದ ಅತಿದೊಡ್ಡ ನದಿ ಮಜುಲಿ ದ್ವೀಪ ಬಗ್ಗೆ ನಿಮಗೆ ಗೊತ್ತೇ?
Recommended image3
ನಿವೃತ್ತಿ ನಂತ್ರವೂ ಪರದಾಡಬೇಕಾಗಿಲ್ಲ, ನೆಮ್ಮದಿ ಜೀವನಕ್ಕೆ ಈ ದೇಶಗಳು ಬೆಸ್ಟ್
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved