- Home
- Life
- Travel
- ಹುಬ್ಬಳ್ಳಿಯಿಂದ ವಿಜಯಪುರಕ್ಕೆ ಚಲಿಸುವ ರೈಲುಗಳು ಇನ್ಮುಂದೆ ಕಾಯಂ; ಟಿಕೆಟ್ ದರ ಶೇ.25-ಶೇ.30ರಷ್ಟು ಇಳಿಕೆ
ಹುಬ್ಬಳ್ಳಿಯಿಂದ ವಿಜಯಪುರಕ್ಕೆ ಚಲಿಸುವ ರೈಲುಗಳು ಇನ್ಮುಂದೆ ಕಾಯಂ; ಟಿಕೆಟ್ ದರ ಶೇ.25-ಶೇ.30ರಷ್ಟು ಇಳಿಕೆ
ಹುಬ್ಬಳ್ಳಿಯಿಂದ ಯೋಗ ನಗರಿ ಋಷಿಕೇಶ್ ಮತ್ತು ವಿಜಯಪುರಕ್ಕೆ ಸಂಚರಿಸುವ ಮೂರು ವಿಶೇಷ ರೈಲುಗಳನ್ನು ಕಾಯಂಗೊಳಿಸಲಾಗಿದೆ. ಇದರಿಂದಾಗಿ ಟಿಕೆಟ್ ದರಗಳು ಶೇ. 25-30 ರಷ್ಟು ಕಡಿಮೆಯಾಗಲಿದ್ದು, ಉತ್ತರ ಕರ್ನಾಟಕದ ಹಲವು ಜಿಲ್ಲೆಗಳ ಪ್ರಯಾಣಿಕರಿಗೆ ಅನುಕೂಲವಾಗಲಿದೆ.

ಹುಬ್ಬಳ್ಳಿಯಿಂದ ಸಂಚರಿಸುವ ಮೂರು ರೈಲುಗಳು
ಹುಬ್ಬಳ್ಳಿ-ಯೋಗ ನಗರಿ ಋಷಿಕೇಶ್ ಮಧ್ಯೆ ಸಂಚರಿಸುವ ರೈಲು ಸೇರಿದಂತೆ ಮೂರು ವಿಶೇಷ ರೈಲುಗಳನ್ನು ಕಾಯಂಗೊಳಿಸಿ ಸೋಮವಾರ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹಸಿರು ನಿಶಾನೆ ತೋರಿಸಿದರು.

ಕಾಯಂ ರೈಲುಗಳ ಮಾಹಿತಿ
ಈ ಮೊದಲು ವಿಶೇಷ ರೈಲುಗಳಾಗಿ ಸಂಚರಿಸುತ್ತಿದ್ದ ಎಸ್‌ಎಸ್‌ಎಸ್ ಹುಬ್ಬಳ್ಳಿ- ಯೋಗನಗರಿ ಋಷಿಕೇಶ್- ಎಸ್‌ಎಸ್‌ಎಸ್ ಹುಬ್ಬಳ್ಳಿ (ಟ್ರೈನ್ ಸಂಖ್ಯೆ- 17363/64) ವೀಕ್ಲಿ ಎಕ್ಸ್‌ಪ್ರೆಸ್, ಎಸ್‌ಎಸ್‌ಎಸ್ ಹುಬ್ಬಳ್ಳಿ-ವಿಜಯಪುರ-ಎಸ್‌ಎಸ್‌ಎಸ್ ಹುಬ್ಬಳ್ಳಿ (ಸಂಖ್ಯೆ 56919/20) ಪ್ಯಾಸೆಂಜರ್, ಎಸ್‌ಎಸ್‌ಎಸ್ ಹುಬ್ಬಳ್ಳಿ-ವಿಜಯಪುರ ಎಸ್‌ಎಸ್‌ಎಸ್ ಹುಬ್ಬಳ್ಳಿ ಮೆಮೂ (ಸಂಖ್ಯೆ- 66501/02) ರೈಲುಗಳನ್ನು ಕಾಯಂ ಆಗಿ ಸಂಚರಿಸಲಿವೆ.
ಶೇ.25ರಿಂದ 30ರಷ್ಟು ಇಳಿಕೆ
ಈ ವೇಳೆ ಮಾತನಾಡಿದ ಕೇಂದ್ರ ಸಚಿವರು, ವಿಶೇಷ ರೈಲುಗಳು ನಿರಂತರವಾಗಿ ಸಂಚರಿಸಲಿವೆ. ಇದರಿಂದ ರಜಾ ದಿನಗಳಲ್ಲಿ ಟಿಕೆಟ್ ಅಭಾವ ತಗ್ಗಲಿದೆ. ಟಿಕೆಟ್ ದರದಲ್ಲೂ ಸುಮಾರು ಶೇ.25ರಿಂದ 30ರಷ್ಟು ಇಳಿಕೆಯಾಗಲಿದೆ. ಇದರಿಂದ ಪ್ರಯಾಣಿಕರಿಗೆ ಲಾಭವಾಗಲಿದೆ.
ಪ್ರಯಾಣಿಕರಿಗೆ ಅನುಕೂಲ
ಈ ರೈಲುಗಳ ಓಡಾಟದಿಂದ ಬೆಳಗಾವಿ, ಧಾರವಾಡ, ಹಾವೇರಿ, ಗದಗ, ಕೊಪ್ಪಳ, ವಿಜಯನಗರ, ಬಳ್ಳಾರಿ, ರಾಯಚೂರು, ಯಾದಗಿರಿ ಜಿಲ್ಲೆಗಳ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಈ ವೇಳೆ ನೈಋತ್ಯ ರೈಲ್ವೆ ವಲಯದ ಮಹಾಪ್ರಬಂಧಕ ಪಿ. ಅನಂತ, ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಮಂಜುನಾಥ ಕನಮಡಿ, ಸೇರಿದಂತೆ ಇನ್ನಿತರೆ ರೈಲ್ವೆ ಅಧಿಕಾರಿಗಳು ಉಪಸ್ಥಿತರಿದ್ದರು.
ಇದನ್ನೂ ಓದಿ: ಯಶವಂತಪುರ -ವಿಜಯಪುರ-ಸಿಂಧನೂರು ರೈಲಿಗೆ ಜರ್ಮನ್ ತಂತ್ರಜ್ಞಾನ ; ಈಗ ಮತ್ತಷ್ಟು ಆರಾಮದಾಯಕ ಪ್ರಯಾಣ
ಕೈಗೆಟಕುವ ದರದಲ್ಲಿ ಪ್ರಯಾಣ
ರೈಲುಗಳ ನಿಯಮಿತ ಸೇವೆಯಿಂದಾಗಿ ಪ್ರಯಾಣಿಕರಿಗೆ ಆರ್ಥಿಕವಾಗಿಯೂ ದೊಡ್ಡ ಲಾಭವಾಗಲಿದೆ. ಸಾಮಾನ್ಯ ದರ್ಜೆಯ ಪ್ರಯಾಣಿಕರಿಗೆ ಸೂಪರ್‌ಫಾಸ್ಟ್ ಹೆಚ್ಚುವರಿ ಶುಲ್ಕವಿರುವುದಿಲ್ಲ. ಮೀಸಲು ದರ್ಜೆಯ ಟಿಕೆಟ್ ದರದಲ್ಲಿ ಸುಮಾರು 30% ರಷ್ಟು ಕಡಿತವಾಗಲಿದ್ದು, ಪ್ರಯಾಣವು ಅತ್ಯಂತ ಕೈಗೆಟಕುವ ದರದಲ್ಲಿ ಸಿಗಲಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.
ಇದನ್ನೂ ಓದಿ: ಭಾರತೀಯ ರೈಲ್ವೆಯ ಚಲಿಸುವ ನರಕ; ತಾಳ್ಮೆ, ಗುಂಡಿಗೆ ಗಟ್ಟಿ ಇದ್ರೆ ಮಾತ್ರ ಈ ರೈಲಿನಲ್ಲಿ ಪ್ರಯಾಣಿಸಿ
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

