ಬೆಂಗಳೂರಿನಿಂದ ಹೊರಡುವ ಸೂಪರ್ ಫಾಸ್ಟ್ ಹೆಸರಿನ ಈ ರೈಲಿನಲ್ಲಿ ಹೋಗಲು ಸಾವಿರ ಬಾರಿ ಯೋಚಿಸಿ!
ಬೆಂಗಳೂರಿನ ಸರ್ ಎಂ ವಿಶ್ವೇಶರಯ್ಯ ಟರ್ಮಿನಲ್‌ನಿಂದ ಸಂಚರಿಸುವ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲು ಅತಿಹೆಚ್ಚು ಜನಸಂದಣಿಗೆ ಕುಖ್ಯಾತಿ ಪಡೆದಿದೆ. 43 ಗಂಟೆಗಳ ಈ ದೀರ್ಘ ಪ್ರಯಾಣದಲ್ಲಿ, ಸ್ಲೀಪರ್ ಕೋಚ್‌ಗಳಲ್ಲಿಯೂ ಜನರಲ್ ಟಿಕೆಟ್ ಪ್ರಯಾಣಿಕರು ತುಂಬಿರುತ್ತಾರೆ.

ಬೆಂಗಳೂರಿನಿಂದ ಪ್ರಯಾಣ ಆರಂಭಿಸುವ ರೈಲು
ಎಲ್ಲಾ ವರ್ಗದ ಬಹುತೇಕ ಜನರು ದೀರ್ಘ ಮತ್ತು ಆರಾಮದಾಯಕ ಪ್ರಯಾಣಕ್ಕೆ ರೈಲು ಸಾರಿಗೆಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಆದ್ರೆ ಕೆಲವೊಮ್ಮೆ ಜನಸಂದಣಿಯಿಂದಾಗಿ ರೈಲು ಪ್ರಯಾಣ ಬೇಡವೇ ಬೇಡ ಎಂಬ ನಿರ್ಧಾರಕ್ಕೆ ಬರುತ್ತಾರೆ. ಇಂದು ನಾವು ಹೇಳುತ್ತಿರುವ ರೈಲು ಬೆಂಗಳೂರಿನಿಂದ ತನ್ನ ಪ್ರಯಾಣ ಆರಂಭಿಸುತ್ತದೆ. ಈ ರೈಲಿನಲ್ಲಿ ಪ್ರಯಾಣ ಮಾಡುವ ಮುಂಚೆ ಸಾವಿರ ಬಾರಿ ಯೋಚಿಸಬೇಕೆಂದು ಪ್ರಯಾಣಿಕರು ಹೇಳುತ್ತಾರೆ.
43 ಗಂಟೆಯ ದೀರ್ಘ ಪ್ರಯಾಣ
ಈ ರೈಲು ಬೆಂಗಳೂರಿನ ಸರ್ ಎಂ ವಿಶ್ವೇಶರಯ್ಯ ಟರ್ಮಿನಲ್‌ನಿಂದ ತನ್ನ ಪ್ರಯಾಣ ಆರಂಭಿಸುತ್ತದೆ. ಇದು ಬೆಂಗಳೂರಿನಿಂದ ಬಿಹಾರಕ್ಕೆ ಹೋಗುವ ಪ್ರಮುಖ ರೈಲು ಇದಾಗಿದೆ. ಅತಿಹೆಚ್ಚು ಜನಸಂದಣಿಯಿಂದಾಗಿ ಈ ರೈಲು ಜನಪ್ರಿಯತೆಯನ್ನು ತೆಗೆದುಕೊಂಡಿದೆ. ಸ್ಲೀಪರ್ ಕೋಚ್ ಆಗಿದ್ದರೂ ಜನರಲ್ ಟಿಕೆಟ್ ಪ್ರಯಾಣಿಕರು ಸಹ ತುಂಬಿಕೊಳ್ಳುತ್ತಾರೆ. 43 ಗಂಟೆಯ ಈ ರೈಲಿನಲ್ಲಿ ಕುಳಿತುಕೊಳ್ಳಲು ಸ್ಥಳವಿರಲ್ಲ.
Sanghamitra Superfast Express (12295)
ಸಂಘಮಿತ್ರ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲು ಬೆಂಗಳೂರಿನಿಂದ ಪ್ರಯಾಣ ಆರಂಭಿಸಿ ಪಾಟ್ನಾ ಬಳಿಯ ದಾನಾಪುರ ನಿಲ್ದಾಣ ತಲುಪುತ್ತದೆ. ಈ ರೈಲು 46 ಗಂಟೆ 25 ನಿಮಿಷದಲ್ಲಿ 2,684 ಕಿಲೋ ಮೀಟರ್ ದೂರವನ್ನು ಕ್ರಮಿಸುತ್ತದೆ. ವಾರದ ಏಳು ದಿನವೂ ಈ ರೈಲು ಇರುತ್ತದೆ. ಜನರಲ್, ಸ್ಲೀಪರ್ ಕೋಚ್‌ಗಳು ಪ್ರಯಾಣಿಕರಿಂದ ತುಂಬಿ ತುಳುಕುತ್ತದೆ. ಬೆಂಗಳೂರಿನಿಂದ ದಾನಾಪುರದ ನಡುವೆ 34 ರಿಂದ 36 ಕಡೆ ನಿಲುಗಡೆಯನ್ನು ಹೊಂದಿದೆ.
ಕರ್ನಾಟಕದಲ್ಲಿ ಕೇವಲ ಮೂರು ಸ್ಥಳದಲ್ಲಿ ನಿಲುಗಡೆ
ಹೆಸರಿಗೆ ಬೆಂಗಳೂರಿನಿಂದ ರೈಲು ಆರಂಭವಾದರೂ ಕರ್ನಾಟಕದಲ್ಲಿ ಕೇವಲ ಮೂರು ನಿಲ್ದಾಣಗಳಲ್ಲಿ ಮಾತ್ರ ನಿಲುಗಡೆಯನ್ನು ಹೊಂದಿದೆ. ಬೆಂಗಳೂರು, ಕೆಆರ್ ಪುರ ಮತ್ತು ಬಂಗಾರಪೇಟೆಯಲ್ಲಿ ಸಂಘಮಿತ್ರ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲು ನಿಲುಗಡೆಯಾಗುತ್ತದೆ. ಇನ್ನುಳಿದಂತೆ ಬೇರೆ ರಾಜ್ಯಗಳಲ್ಲಿಯೇ ಅತಿ ಹೆಚ್ಚು ನಿಲುಗಡೆಯನ್ನು ಈ ರೈಲು ಹೊಂದಿದೆ.
ಇದನ್ನೂ ಓದಿ: 1900 ಕಿಮೀ ಪ್ರಯಾಣ, ಜಸ್ಟ್ 6 ನಿಲುಗಡೆ; ಬೆಂಗಳೂರಿನಿಂದ ಎಲ್ಲಿಗೆ ಹೋಗುತ್ತೆ ಈ ಸೂಪರ್‌ಫಾಸ್ಟ್ ರೈಲು!
ಸಂಘಮಿತ್ರ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲು ವೇಳಾಪಟ್ಟಿ
ರೈಲು ಸಂಖ್ಯೆ: 12295, ಬೆಳಗ್ಗೆ 9 ಗಂಟೆ 15 ನಿಮಿಷಕ್ಕೆ ಪ್ರಯಾಣ ಆರಂಭಿಸಿ, ಮೂರನೇ ದಿನ ಬೆಳಗ್ಗೆ 7 ಗಂಟೆ 40 ನಿಮಿಷಕ್ಕೆ ದಾನಾಪುರ ನಿಲ್ದಾಣವನ್ನು ತಲುಪುತ್ತದೆ.
ರೈಲು ಸಂಖ್ಯೆ: 12296: ದಾನಾಪುರ ನಿಲ್ದಾಣದಿಂದ ರಾತ್ರಿ 8 ಗಂಟೆ 15 ನಿಮಿಷಕ್ಕೆ ತನ್ನ ಪ್ರಯಾಣ ಆರಂಭಿಸುತ್ತದೆ. ಮೂರನೇ ದಿನ ಸಂಜ 4 ಗಂಟೆ ವೇಳೆಗೆ ಬೆಂಗಳೂರಿನ ಎಸ್‌ಎಂವಿಟಿ ನಿಲ್ದಾಣ ತಲುಪುತ್ತದೆ.
ಇದನ್ನೂ ಓದಿ: ಮೈಸೂರು, ಬೆಂಗಳೂರು, ಚಿತ್ರದುರ್ಗದಿಂದ ವಿಜಯಪುರಕ್ಕಿದೆ ನೇರ ರೈಲು; ಪ್ರಯಾಣಿಕರಿಗೆ ಉತ್ತಮ ಆಯ್ಕೆ
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

