ತತ್ಕಾಲ್ ಟಿಕೆಟ್ ಕ್ಯಾನ್ಸಲ್ ಮಾಡಿದ್ರೆ ಎಷ್ಟು ಗಂಟೆಯಲ್ಲಿ ಹಣ ಸಿಗುತ್ತೆ?
Tatkal Ticket Refund Rules: ತತ್ಕಾಲ್ ಟಿಕೆಟ್ ಕನ್ಫರ್ಮ್ ಆಗದಿದ್ದರೆ ಎಷ್ಟು ದಿನದಲ್ಲಿ ಹಣ ವಾಪಸ್ ಆಗುತ್ತದೆ? ತತ್ಕಾಲ್ ಕೌಂಟರ್‌ನಲ್ಲಿ ಬುಕ್ ಮಾಡುವ ಟಿಕೆಟ್ ಬೆಲೆಯೂ ಅಧಿಕವಾಗಿರುತ್ತದೆ. ಕ್ಯಾನ್ಸಲ್ ಮಾಡಿದ್ರೆ ಎಷ್ಟು ರೀಫಂಡ್ ಆಗುತ್ತದೆ?
ನೀವು ರೈಲು ಪ್ರಯಾಣಿಕರಾಗಿದ್ರೆ ಟಿಕೆಟ್ ಹೇಗೆ ಬುಕ್ಕಿಂಗ್ ಮಾಡಬೇಕು ಎಂದು ತಿಳಿದಿರುತ್ತದೆ. ಅದೇ ರೀತಿ ಕಾಯ್ದಿರಿಸಿದ ಟಿಕೆಟ್ ಕ್ಯಾನ್ಸಲ್ ಮಾಡಿದ್ರೆ ಎಷ್ಟು ಮೊತ್ತ ತಮ್ಮ ಖಾತೆಗೆ ಜಮೆ ಆಗುತ್ತೆ ಎಂಬ ಸಣ್ಣ ಮಾಹಿತಿಯನ್ನು ಸಹ ಹೊಂದಿರುತ್ತಾರೆ.
ಪ್ರಯಾಣಕ್ಕೂ ಒಂದು ದಿನ ಮುಂಚಿತವಾಗಿ ಟಿಕೆಟ್ ಬುಕ್ಕಿಂಗ್ ಮಾಡೋದನ್ನು ತತ್ಕಾಲ್ ಎಂದು ಹೇಳಲಾಗುತ್ತದೆ. ನಿಗದಿತ ಸಮಯದಲ್ಲಿ ಮಾತ್ರ ತತ್ಕಾಲ್ ಕೌಂಟರ್ ಓಪನ್ ಆಗುತ್ತದೆ. ಅದೇ ಸಮಯದಲ್ಲಿಯೇ ಟಿಕೆಟ್ ಕಾಯ್ದಿರಿಸಬೇಕಾಗುತ್ತದೆ.
ಭಾರತೀಯ ರೈಲ್ವೆಯಲ್ಲಿ ಪ್ರತಿದಿನ 2.5 ಕೋಟಿಗೂ ಅಧಿಕ ಜನರು ಪ್ರಯಾಣಿಸುತ್ತಾರೆ. ವಿಶ್ವದಲ್ಲಿ ಭಾರತೀಯ ರೈಲ್ವೆ ನಾಲ್ಕನೇ ಅತಿದೊಡ್ಡ ಸಂಪರ್ಕ ಸಾರಿಗೆಯಾಗಿದೆ. ಕಾಯ್ದಿರಿಸಿದ ಆಸನದಲ್ಲಿ ಕುಳಿತು ಪ್ರಯಾಣಿಸಲು ಎಲ್ಲಾ ಪ್ರಯಾಣಿಕರು ಇಷ್ಟಪಡುತ್ತಾರೆ. ಹಾಗಾಗಿಯೇ ಟಿಕೆಟ್ ಸಿಗೋದು ಕಷ್ಟವಾಗುತ್ತದೆ.
ಅದರಲ್ಲಿಯೂ ತತ್ಕಾಲ್ ಕೌಂಟರ್‌ನಲ್ಲಿ ಕನ್ಫರ್ಮ್ ಟಿಕೆಟ್ ಸಿಗುವ ಸಾಧ್ಯತೆಗಳು ಹೆಚ್ಚಿರುತ್ತವೆ. ಸಾಮಾನ್ಯ ಟಿಕೆಟ್ ಬುಕ್ಕಿಂಗ್ ಮತ್ತು ತತ್ಕಾಲ್ ಬುಕ್ಕಿಂಗ್‌ನಲ್ಲಿ ತುಂಬಾ ವ್ಯತ್ಯಾಸವಿರುತ್ತದೆ. ಕೆಲವೊಮ್ಮೆ ತತ್ಕಾಲ್‌ನಲ್ಲಿ ಟಿಕೆಟ್ ಕನ್ಫರ್ಮ್ ಆಗದಿದ್ದರೆ ಕ್ಯಾನ್ಸಲ್ ಮಾಡಬಹುದು. ಟಿಕೆಟ್ ಕ್ಯಾನ್ಸಲ್ ಮಾಡಿದ ಎಷ್ಟು ಗಂಟೆಯೊಳಗೆ ಹಣ ರೀಫಂಡ್ ಆಗುತ್ತದೆ?
ತತ್ಕಾಲ್ ಕೌಂಟರ್‌ನಲ್ಲಿ ನಿಮ್ಮ ಟಿಕೆಟ್ ಕನ್ಫರ್ಮ್ ಆಗದಿದ್ದರೆ ರೈಲ್ವೇ ನಿಮ್ಮ ಟಿಕೆಟ್ ಅನ್ನು ಸ್ವಯಂಚಾಲಿತವಾಗಿ ರದ್ದುಗೊಳಿಸುತ್ತದೆ. ಇದರ ನಂತರ ಮರುಪಾವತಿ 2 ರಿಂದ 3 ದಿನಗಳಲ್ಲಿ ನಿಮಗೆ ಕಳುಹಿಸಲಾಗುತ್ತದೆ. ಹಣ ಕಡಿತವಾದ ಖಾತೆಗೆ ರೀಫಂಡ್ ಜಮೆ ಆಗುತ್ತದೆ.
ಇದನ್ನೂ ಓದಿ: ಬುಕ್ಕಿಂಗ್ ನಿಯಮಗಳಲ್ಲಿ ಮಹತ್ವದ ಬದಲಾವಣೆ; ಒಂದು ಐಡಿ ಬಳಸಿ ಎಷ್ಟು ರೈಲ್ವೆ ಟಿಕೆಟ್ ಮಾಡಬಹುದು?
Indian Railway
ಒಂದು ವೇಳೆ ಪ್ರಯಾಣಿಕರೇ ಕನ್ಫರ್ಮ್ ಆಗಿರುವ ತತ್ಕಾಲ್ ಟಿಕೆಟ್ ಕ್ಯಾನ್ಸಲ್ ಮಾಡಿದ್ರೆ ಭಾರತೀಯ ರೈಲ್ವೆಯಿಂದ ಯಾವುದೇ ರೀಫಂಡ್ ಸಿಗುವುದಿಲ್ಲ. ಒಂದು ವೇಳೆ ಆಸನ ಕಾಯ್ದಿರಿಸಿದ ರೈಲು ಮಾರ್ಗ ಬದಲಿಸಿದ್ರೆ, ಪ್ರಯಾಣ ಮಾಡಲು ನಿಮಗೆ ಇಷ್ಟವಿರದಿದ್ದರೆ ಟಿಕೆಟ್ ರದ್ದುಗೊಳಿಸಬಹುದು. ಇಲ್ಲಿ ಪ್ರಯಾಣಿಕರಿಗೆ ರೀಫಂಡ್ ನೀಡಲಾಗುತ್ತದೆ.
ಇದನ್ನೂ ಓದಿ: ರೈಲಿನಲ್ಲಿ ವೇಟಿಂಗ್ ಲಿಸ್ಟ್ ಟಿಕೆಟ್ ಬುಕ್ ಮಾಡೋದು ಹೇಗೆ? ಇದರಿಂದ ಪ್ರಯಾಣಿಕರಿಗೆ ಏನು ಲಾಭ?
Indian Railway TTE
ತತ್ಕಾಲ್ ಟಿಕೆಟ್ ಅನ್ನು ರೈಲ್ವೇ ರದ್ದುಗೊಳಿಸಿದ ನಂತರ, ಟಿಕೆಟ್‌ನ ಪೂರ್ಣ ಮೊತ್ತವನ್ನು ನಿಮಗೆ ಹಿಂತಿರುಗಿಸಲಾಗುವುದಿಲ್ಲ. ತತ್ಕಾಲ್ ಟಿಕೆಟ್‌ಗಳ ಬುಕಿಂಗ್ ಶುಲ್ಕವನ್ನು ರೈಲ್ವೆ ಕಡಿತಗೊಳಿಸುತ್ತದೆ. ಇದರಲ್ಲಿ ಪ್ಲಾಟ್‌ಫಾರ್ಮ್ ಶುಲ್ಕವನ್ನೂ ಕಡಿತಗೊಳಿಸಲಾಗುತ್ತದೆ. ಅದರ ನಂತರ ಉಳಿದ ಹಣವನ್ನು ಹಿಂತಿರುಗಿಸಲಾಗುತ್ತದೆ.
ಇದನ್ನೂ ಓದಿ: ತತ್ಕಾಲ್‌ನಲ್ಲಿಯೂ ಸಿಗಲಿಲ್ವಾ? ಈ ಕೋಟಾದಲ್ಲಿ ಬುಕ್ ಮಾಡಿದ್ರೆ ಕನ್ಫರ್ಮ್ ಟಿಕೆಟ್ ಸಿಗೋದು 100% ಗ್ಯಾರಂಟಿ