ತತ್ಕಾಲ್‌ನಲ್ಲಿಯೂ ಸಿಗಲಿಲ್ವಾ? ಈ ಕೋಟಾದಲ್ಲಿ ಬುಕ್ ಮಾಡಿದ್ರೆ ಕನ್ಫರ್ಮ್ ಟಿಕೆಟ್ ಸಿಗೋದು 100% ಗ್ಯಾರಂಟಿ
ಭಾರತದಲ್ಲಿ ರೈಲು ಪ್ರಯಾಣದಲ್ಲಿ ಕನ್ಫರ್ಮ್ ಟಿಕೆಟ್ ಪಡೆಯುವುದು ಸವಾಲಿನ ಕೆಲಸ. ಆದರೆ, ಹೈ ಅಫಿಷಿಯಲ್ ಕೋಟಾದಲ್ಲಿ ಕೆಲವು ದಾಖಲೆಗಳನ್ನು ಸಲ್ಲಿಸುವ ಮೂಲಕ ಕನ್ಫರ್ಮ್ ಟಿಕೆಟ್ ಪಡೆಯಬಹುದು.
ಭಾರತದಲ್ಲಿ ಪ್ರತಿದಿನ 2.5 ಕೋಟಿಗೂ ಅಧಿಕ ಜರನು ರೈಲಿನಲ್ಲಿ ಪ್ರಯಾಣಿಸುತ್ತಾರೆ. ಇದಕ್ಕಾಗಿ ಭಾರತದಲ್ಲಿ ಹಲವು ರೈಲುಗಳು ಚಲಿಸುತ್ತವೆ. ಬಹುತೇಕರು ರೈಲು ಪ್ರಯಾಣ ಇಷ್ಟಪಡೋದರಿಂದ ಜನಸಂದಣಿಯೂ ಅತ್ಯಧಿಕವಾಗಿರುತ್ತದೆ.
ಎಲ್ಲಾ ಪ್ರಯಾಣದಲ್ಲಿಯೂ ರೈಲು ಮಾರ್ಗ ಆರಾಮದಾಯಕವಾಗಿರುತ್ತದೆ. ರೈಲಿನಲ್ಲಿ ಶೌಚಾಲಯದ ವ್ಯವಸ್ಥೆ ಸೇರಿದಂತೆ ಹಲವು ಸೌಲಭ್ಯಗಳು ಲಭ್ಯವಿರುತ್ತವೆ. ಇನ್ನು ರೈಲುಗಳಲ್ಲಿ ರಿಸರ್ವ್ಡ್ ಮತ್ತು ಅನ್ ರಿಸರ್ವ್ಡ್ ಎಂಬ ಎರಡು ಕೋಚ್‌ಗಳಿರುತ್ತವೆ.
ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿರೋದರಿಂದ ಅನ್ ರಿಸರ್ವ್ಡ್ ಕೋಚ್‌ನಲ್ಲಿ ಪ್ರಯಾಣಿಸಲು ಕಷ್ಟವಾಗುತ್ತದೆ. ರಿಸರ್ವ್ಡ್ ಕೋಚ್‌ಗಳಲ್ಲಿ ಸೀಟ್ ಕಾಯ್ದಿರಿಸೋದು ದೊಡ್ಡ ಸವಾಲಿನ ಕೆಲಸವಾಗುತ್ತದೆ. ತತ್ಕಾಲ್‌ನಲ್ಲಿ ಪ್ರಯತ್ನಿಸಿದರೂ ರೈಲಿನಲ್ಲಿ ಕನ್ಫರ್ಮ್ ಟಿಕೆಟ್ ಸಿಗಲ್ಲ
ಕೆಲವೊಮ್ಮೆ ಬುಕ್ ಮಾಡಿದ್ರೂ ಟಿಕೆಟ್ ವೇಟಿಂಗ್ ಅಥವಾ ಆರ್‌ಎಸಿ ಲಿಸ್ಟ್‌ಗೆ ಸೇರ್ಪಡೆಯಾಗುತ್ತದೆ. ವೇಟಿಂಗ್ ಟಿಕೆಟ್ ಹಿಡಿದು ರಿಸರ್ವ್ಡ್ ಕೋಚ್‌ನಲ್ಲಿ ಪ್ರಯಾಣಿಸುವಂತಿಲ್ಲ. ಹಾಗಾಗಿ ಹೆಚ್ಚು ದಟ್ಟಣೆ ಇರೋ ರೈಲಿನಲ್ಲಿ ಆಸನ ಕಾಯ್ದಿರಿಸೋದು ಸವಾಲಿನ ಸಂಗತಿಯಾಗಿರುತ್ತದೆ. ಇಂದು ನಾವು ಹೇಳುವ ಕೋಟಾದಲ್ಲಿ ಬುಕ್ ಮಾಡಿದ್ರೆ ನೂರಕ್ಕೆ ನೂರರಷ್ಟು ಕನ್ಫರ್ಮ್ ಟಿಕೆಟ್ ಸಿಗುತ್ತದೆ.
ಭಾರತೀಯ ರೈಲಿನಲ್ಲಿ ಹೈ ಅಫಿಷಿಯಲ್ ಕೋಟಾ ಇರುತ್ತದೆ. ಈ ಕೋಟಾದಲ್ಲಿ ಎಮೆರ್ಜೆನ್ಸಿ ಟಿಕೆಟ್ ಕಾಯ್ದಿರಿಸಲಾಗುತ್ತದೆ. ಇಲ್ಲಿ ವೇಟಿಂಗ್ ಟಿಕೆಟ್ ನೀಡಿದ್ರೂ ಕನ್ಫರ್ಮ್ ಟಿಕೆಟ್ ನೀಡಲಾಗುತ್ತದೆ. ಸಾಮಾನ್ಯವಾಗಿ ಸರ್ಕಾರಿ ಗೆಸ್ಟ್, ರೈಲ್ವೆಯ ಹಿರಿಯ ಅಧಿಕಾರಿಗಳು, ವಿಐಪಿ, ಸಂಸದರು, ಶಾಸಕರು, ಸರ್ಕಾರಿ ಅಧಿಕಾರಿಗಳು ಮತ್ತು ಹೈಕೋರ್ಟ್ ಮುಖ್ಯ ನ್ಯಾಯಾಧೀಶರಿಗಾಗಿ ಈ ಕೋಟಾ ಮೀಸಲಿರಿಸಲಾಗಿರುತ್ತದೆ.
Indian Railways
ಈ ಕೋಟಾ ವಿಶೇಷ ಅಧಿಕಾರಿಗಳು ಮತ್ತು ವಿಐಪಿಗಳಿಗಾಗಿದ್ರೂ ಸಾಮಾನ್ಯ ಜನರು ಸಹ ಇಲ್ಲಿ ಕನ್ಫರ್ಮ್ ಟಿಕೆಟ್ ಪಡೆದುಕೊಳ್ಳಬಹುದು. ಮೊದಲಿಗೆ ವೇಟಿಂಗ್/ಆರ್‌ಎಸಿ ಟಿಕೆಟ್ ಪಡೆಯಬೇಕು. ಆನಂತರ ಕೆಲ ದಾಖಲೆಗಳನ್ನು ಸಲ್ಲಿಸುವ ಮೂಲಕ ಕನ್ಫರ್ಮ್ ಟಿಕೆಟ್ ಪಡೆದುಕೊಳ್ಳಬಹುದು. ಈ ಟಿಕೆಟ್ ಬುಕ್ಕಿಂಗ್ ಸಮಯದಲ್ಲಿ ಸಿಗಲ್ಲ.
ಸಾಮಾನ್ಯ ಟಿಕೆಟ್ ಪಡೆದುಕೊಂಡು ರೈಲು ನಿಲ್ದಾಣಕ್ಕೆ ತೆರಳಬೇಕು. ಅಲ್ಲಿ ನಿಮ್ಮ ಎಮೆರ್ಜೆನ್ಸಿಗೆ ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಸಿ ಕನ್ಫರ್ಮ್ ಟಿಕೆಟ್‌ಗಾಗಿ ಮನವಿ ಸಲ್ಲಿಸಬೇಕು. ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸಿ ಕನ್ಫರ್ಮ್ ಟಿಕೆಟ್ ನೀಡುತ್ತಾರೆ.