- Home
- Karnataka Districts
- ಶಿವಮೊಗ್ಗ-ತಾಳಗುಪ್ಪ ಮಲೆನಾಡು ರೈಲ್ವೇ ಪ್ರಯಾಣಿಕರಿಗೆ ಗುಡ್ ನ್ಯೂಸ್ ಕೊಟ್ಟ ಸಂಸದ ಬಿ.ವೈ ರಾಘವೇಂದ್ರ!
ಶಿವಮೊಗ್ಗ-ತಾಳಗುಪ್ಪ ಮಲೆನಾಡು ರೈಲ್ವೇ ಪ್ರಯಾಣಿಕರಿಗೆ ಗುಡ್ ನ್ಯೂಸ್ ಕೊಟ್ಟ ಸಂಸದ ಬಿ.ವೈ ರಾಘವೇಂದ್ರ!
ಬೆಂಗಳೂರು: ತಾಳಗುಪ್ಪ-ಬೆಂಗಳೂರು ನಡುವಿನ ರೈಲುಗಳು ಕೆಲವೊಮ್ಮೆ ತಾಳಗುಪ್ಪ ತಲುಪುವುದು ತುಂಬಾ ತಡವಾಗುತ್ತಿದೆ ಎನ್ನುವ ಮಾತುಗಳು ಪ್ರಯಾಣಿಕರಿಂದ ಕೇಳಿ ಬಂದಿದ್ದವು. ಇದೀಗ ಮಲೆನಾಡಿನ ರೈಲ್ವೇ ಪ್ರಯಾಣಿಕರಿಗೆ ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಗುಡ್ ನ್ಯೂಸ್ ಕೊಟ್ಟಿದ್ದಾರೆ.

ಮಲೆನಾಡು ರೈಲ್ವೇ ಪ್ರಯಾಣಿಕರಿಗೆ ಗುಡ್ ನ್ಯೂಸ್
ಮಲೆನಾಡು ಭಾಗದ ಪ್ರಮುಖ ರೈಲ್ವೇ ಸಂಪರ್ಕ ಕೊಂಡಿಯಾಗಿರುವ ಬೀರೂರು-ತಾಳಗುಪ್ಪ ಮಾರ್ಗದಲ್ಲಿ ಸಂಚರಿಸುವ ರೈಲುಗಳ ಗರಿಷ್ಠ ಸಂಚಾರ ವೇಗವನ್ನು ಹೆಚ್ಚಿಸಲಾಗಿದೆ. ಇದು ಪ್ರಯಾಣಿಕರ ಪ್ರಯಾಣದ ಸಮಯವನ್ನು ಗಣನೀಯವಾಗಿ ಉಳಿತಾಯ ಮಾಡುವುದರ ಜತೆಗೆ ಪ್ರಯಾಣಿಕರ ಅನುಭವವನ್ನು ಮತ್ತಷ್ಟು ಸುಧಾರಿಸಲಿದೆ ಎಂದು ಸಂಸದ ಬಿ.ವೈ ರಾಘವೇಂದ್ರ ತಿಳಿಸಿದ್ದಾರೆ.

ಬದಲಾವಣೆಗಳು ಎಲ್ಲಿ ಮತ್ತು ಎಷ್ಟು?
ಬೀರೂರು (RRB) ಇಂದ ಕುಂಸಿ (KMSI): ರೈಲುಗಳ ಗರಿಷ್ಠ ವೇಗವನ್ನು ಗಂಟೆಗೆ 90 ಕಿ.ಮೀ ನಿಂದ 110 ಕಿ.ಮೀ ಗೆ ಹೆಚ್ಚಿಸಲಾಗಿದೆ.
ಆನಂದಪುರದಿಂದ ಸಾಗರವರೆಗೆ
ಆನಂದಪುರಂ (ANF) ಇಂದ ಸಾಗರ ಜಂಬಗಾರು (SRF): ಗರಿಷ್ಠ ವೇಗವನ್ನು ಗಂಟೆಗೆ 70 ಕಿ.ಮೀ ನಿಂದ 75 ಕಿ.ಮೀ ಗೆ ಹೆಚ್ಚಿಸಲಾಗಿದೆ.
ಸಾಗರದಿಂದ ತಾಳಗುಪ್ಪವರೆಗೆ
ಸಾಗರ ಜಂಬಗಾರು (SRF) ಇಂದ ತಾಳಗುಪ್ಪ (TLGP): ಗರಿಷ್ಠ ವೇಗವನ್ನು ಗಂಟೆಗೆ 90 ಕಿ.ಮೀ ನಿಂದ 110 ಕಿ.ಮೀ ಗೆ ಹೆಚ್ಚಿಸಲಾಗಿದೆ.
ಸಮಯದ ಉಳಿತಾಯ:
ರೈಲುಗಳು ಹೆಚ್ಚಿನ ವೇಗದಲ್ಲಿ ಚಲಿಸುವುದರಿಂದ ಬೆಂಗಳೂರು, ಮೈಸೂರು ಸೇರಿದಂತೆ ವಿವಿಧ ನಗರಗಳಿಗೆ ಪ್ರಯಾಣಿಸುವ ನಮ್ಮ ಭಾಗದ ಸಾರ್ವಜನಿಕರಿಗೆ ಅಮೂಲ್ಯವಾದ ಸಮಯ ಉಳಿಯಲಿದೆ.
ಉತ್ತಮ ಸಂಪರ್ಕ:
ರೈಲುಗಳ ಸುಗಮ ಮತ್ತು ವೇಗದ ಕಾರ್ಯಾಚರಣೆಯಿಂದ ಮಲೆನಾಡಿನ ಸಂಪರ್ಕ ಕ್ರಾಂತಿಗೆ ಹೊಸ ವೇಗ ಸಿಕ್ಕಂತಾಗಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಅಭಿಪ್ರಾಯಪಟ್ಟಿದ್ದಾರೆ.

