ರಿಸರ್ವೇಶನ್ ಇಲ್ಲದ ಕಾರಣ ರೈಲಿನ ಶೌಚಾಲಯದ ಬಳಿ ಮಲಗಿದ್ದ ಇಬ್ಬರು ಸೈನಿಕರನ್ನು TTE ಗಮನಿಸಿದ್ದಾರೆ. ಚುನಾವಣಾ ಕರ್ತವ್ಯಕ್ಕೆ ತೆರಳುತ್ತಿದ್ದ ಆ ಯೋಧರಿಗೆ TTE ಗೌರವಯುತವಾಗಿ ಬರ್ತ್‌ಗಳ ವ್ಯವಸ್ಥೆ ಮಾಡಿಕೊಟ್ಟರು. 

ನವದೆಹಲಿ: ದೇಶದ ಗಡಿಯಲ್ಲಿ ಕರ್ತವ್ಯ ನಿರ್ವಹಿಸುವ ಸೈನಿಕರು, ದೇಶದೊಳಗೂ ಸಹ ಭದ್ರತಾ ಸೇವೆಯಲ್ಲಿ ತೊಡಗಿಕೊಂಡಿರುತ್ತಾರೆ. ದೇಶದ ಮೇಲೆ ಶತ್ರುಗಳ ದಾಳಿ ಭೀತಿ ಎದುರಾದಾಗ, ಜನರು ಸೈನಿಕರ ಬಗ್ಗೆ ವಿಶೇಷ ಪ್ರೀತಿ ಮತ್ತು ಗೌರವ ತೋರಿಸುತ್ತಾರೆ. ವಾಟ್ಸಪ್ ಸೇರಿದಂತೆ ಸೋಶಿಯಲ್ ಮೀಡಿಯಾದಲ್ಲಿ ದೇಶದ ಸೈನಿಕರ ಬಗ್ಗೆ ಹೆಮ್ಮೆಯಿಂದ ಪೋಸ್ಟ್ ಮಾಡಿಕೊಳ್ಳುತ್ತಿರುತ್ತಾರೆ. ಸೈನಿಕರೊಬ್ಬರು ರೈಲಿನಲ್ಲಿ ಸೀಟ್ ಸಿಗದೇ ಟಾಯ್ಲೆಟ್ ಬಳಿ ಮಲಗಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಸೈನಿಕರೊಬ್ಬರು ಅಸಹಾಯಕರಾಗಿ ಮಲಗಿದ್ರೂ ಇತರೆ ಪ್ರಯಾಣಿಕರು ಕಂಡು ಕಾಣದಂತೆ ಓಡಾಡಿದ್ದಾರೆ. ಕೊನೆಗೆ ಅಲ್ಲಿಗೆ ಬಂದ ಟಿಟಇ ಸೈನಿಕರಿಗೆ ಸಹಾಯ ಮಾಡಿದ್ದಾರೆ.

ರಾತ್ರಿ ರೈಲು ಪ್ರಯಾಣದ ವೇಳೆ ಟಾಯ್ಲೆಟ್ ಮುಂದೆ ಮಲಗಿದ್ದ ಸೈನಿಕರಿಗೆ TTE ಇಬ್ಬರು ಮಲಗಲು ಬರ್ತ್ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. ಈ ಘಟನೆಯ ವಿಡಿಯೋ ವೈರಲ್ ಆಗಿದ್ದು, "ಅವರು ಅದಕ್ಕೆ ಅರ್ಹರು" ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. ಆದ್ರೆ ಈ ಘಟನೆ ಯಾವ ರೈಲಿನಲ್ಲಿ ನಡೆದಿದೆ ಎಂಬುದರ ಬಗ್ಗೆ ತಿಳಿದು ಬಂದಿಲ್ಲ.

TTEಯ ಕಾಳಜಿ

ಟ್ರೈನ್ ಟಾಯ್ಲೆಟ್ ಬಳಿ ನೆಲದ ಮೇಲೆ ಮಲಗಿದ್ದ ಇಬ್ಬರ ಸೈನಿಕರನ್ನು TTE ಎಬ್ಬಿಸುವುದರೊಂದಿಗೆ ವಿಡಿಯೋ ಶುರುವಾಗುತ್ತದೆ. ಎದ್ದ ತಕ್ಷಣ ಸೈನಿಕರು ತಮ್ಮ ಆರ್ಮಿ ಗುರುತಿನ ಚೀಟಿಯನ್ನು TTEಗೆ ತೋರಿಸುತ್ತಾರೆ. ಚುನಾವಣಾ ಕರ್ತವ್ಯಕ್ಕಾಗಿ ತುರ್ತಾಗಿ ಹೊರಟಿದ್ದ ಇಬ್ಬರು ಸೈನಿಕರಾಗಿದ್ದರು. ತಕ್ಷಣ ಹೊರಡಬೇಕಾಗಿದ್ದರಿಂದ ಅವರಿಗೆ ರಿಸರ್ವೇಶನ್ ಮಾಡಿಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಟಿಕೆಟ್ ಪಡೆದು ರೈಲು ಹತ್ತಿ, ನೆಲದ ಮೇಲೆ ಮಲಗಿದ್ದರು.

ಇಬ್ಬರ ಐಡಿ ಕಾರ್ಡ್ ಪರಿಶೀಲಿಸಿದ TTE, ಅವರಿಗೆ ಗೌರವಯುತವಾಗಿ ಮಲಗಲು ಎರಡು ಬರ್ತ್‌ಗಳ ವ್ಯವಸ್ಥೆ ಮಾಡಿಕೊಟ್ಟರು. TTEಯ ಈ ಕಾಳಜಿ ಸೋಶಿಯಲ್ ಮೀಡಿಯಾ ಬಳಕೆದಾರರ ಮನಗೆದ್ದಿದ್ದು, ಎಲ್ಲರೂ ಅವರನ್ನು ಶ್ಲಾಘಿಸಿದ್ದಾರೆ.

TTEಗೆ ಜನರ ಮೆಚ್ಚುಗೆ

ದೇಶದ ಗಡಿ ಕಾಯುವ ಸೈನಿಕರಿಗೆ ಮಲಗಲು ಬರ್ತ್ ಹುಡುಕಿಕೊಟ್ಟ TTEಯನ್ನು ವಿಡಿಯೋ ನೋಡಿದವರೆಲ್ಲರೂ ಹೊಗಳಿದ್ದಾರೆ. "ಈ ದೇಶಕ್ಕಾಗಿ ಎಲ್ಲವನ್ನೂ ತ್ಯಾಗ ಮಾಡುವ ಈ ವೀರ ಯೋಧರಿಗಾಗಿ ನಿಮ್ಮ ಕೈಲಾದಷ್ಟು ಮಾಡಿ" ಎಂದು ಒಬ್ಬರು ಬರೆದಿದ್ದಾರೆ. ಇನ್ನು ಕೆಲವರು, ಸೈನಿಕರು ಈ ರೀತಿ ಪ್ರಯಾಣಿಸಬೇಕಾಗಿ ಬಂದಿದ್ದು ನಮ್ಮ ವ್ಯವಸ್ಥೆಯ ವೈಫಲ್ಯ ಎಂದು ಟೀಕಿಸಿದ್ದಾರೆ. "ಮೊದಲನೆಯದಾಗಿ, ಅವರು ವಾಶ್‌ರೂಮ್ ಬಳಿ ಯಾಕೆ ಮಲಗಬೇಕು? ಇದು ನಮ್ಮ ವ್ಯವಸ್ಥೆಗೆ ನಾಚಿಕೆಗೇಡು. TTEಗೆ ನನ್ನ ಗೌರವ," ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: Hubballi: ನೈಋತ್ಯ ರೈಲ್ವೆಯಿಂದ ದಾಖಲೆಗಳ ಮೇಲೆ ದಾಖಲೆ; ಆದಾಯ ಕೇಳಿದ್ರೆ ಶಾಕ್ ಆಗ್ತೀರಿ!

ಕೆಲವರು ವಿಡಿಯೋದ ಸತ್ಯಾಸತ್ಯತೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಈ ದೃಶ್ಯವನ್ನು ಚಿತ್ರೀಕರಿಸಲೆಂದೇ ವಿಡಿಯೋ ಮಾಡಿದಂತಿದೆ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಇನ್ನು ಕೆಲವರು, ಚುನಾವಣಾ ಕರ್ತವ್ಯಕ್ಕೆ ಸೈನಿಕರನ್ನು ಕರೆಯುವಾಗ, ಚುನಾವಣಾ ಆಯೋಗ ಅಥವಾ ಸೇನಾ ಮುಖ್ಯಸ್ಥರು ಅವರಿಗೆ ಸರಿಯಾದ ಪ್ರಯಾಣದ ವ್ಯವಸ್ಥೆ ಮಾಡಿಕೊಡಬೇಕು. ಅವರು ತಮ್ಮ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸದ ಕಾರಣ, ಸಾಮಾನ್ಯ ಸೈನಿಕರು ವಾಶ್‌ರೂಮ್ ಮುಂದೆ ಮಲಗಬೇಕಾದ ಪರಿಸ್ಥಿತಿ ಬಂದಿದೆ ಎಂದು ಬೆಟ್ಟು ಮಾಡಿದ್ದಾರೆ.

ಇದನ್ನೂ ಓದಿ: ಎಕ್ಸ್‌ಪ್ರೆಸ್ ರೈಲಿನ ಶೌಚಾಲಯದ ಬಾಗಿಲು ತೆರೆದ ಪ್ರಯಾಣಿಕನಿಗೆ ಆಘಾತ: ನಡುಗುತ್ತಾ ಅಳುತ್ತಿತ್ತು ನವಜಾತ ಶಿಶು

Scroll to load tweet…