ವ್ಯಾನ್ ಅನ್ನೇ ಮನೆ ಮಾಡಿ ವಿಶ್ವದ ಅತಿ ಉದ್ದದ ರಸ್ತೆಯಲ್ಲಿ ಟ್ರಾವೆಲ್ ಮಾಡಿದ ಭಾರತೀಯ ಜೋಡಿ!
ಸ್ಮೃತಿ ಭದೌರಿಯಾ ಮತ್ತು ಕಾರ್ತಿಕ್ ವಾಸನ್ ಇಬ್ಬರೂ ಐ ಕನ್ಸಲ್ಟೆಂಟ್ ಆಗಿದ್ರು. ಇವರಿಬ್ರು 2020 ರಲ್ಲಿ ಚೆನ್ನೈನಲ್ಲಿ ವಿವಾಹವಾದರು. 2018 ರಲ್ಲಿ ಈ ಜೋಡಿ ವರ್ಕ್ ಫ್ರಮ್ ಹೋಮ್ ಮಾಡುತ್ತಿದ್ದರು. ಹಾಗಾಗಿ ಅಂದಿನಿಂದ, ಅವರು ವ್ಯಾನ್ ನಲ್ಲಿಯೇ ಮನೆ ಮಾಡಿಕೊಂಡಿದ್ದಾರೆ.
ತಿರುಗಾಡಲು ಯಾರಿಗೆ ಇಷ್ಟವಿಲ್ಲ ಹೇಳಿ? ಪ್ರತಿಯೊಬ್ಬರೂ ಟ್ರಾವೆಲ್ ಮಾಡೋದಕ್ಕೆ ಇಷ್ಟಪಡ್ತಾರೆ. ಆದರೆ ಮನೆಯ ಜವಾಬ್ದಾರಿಗಳಿಂದಾಗಿ, ವ್ಯಕ್ತಿ ಎಷ್ಟೊಂದು ಕುಗ್ಗಿ ಹೋಗುತ್ತಾನೆ ಅಂದ್ರೆ, ಟ್ರಾವೆಲ್ ಮಾಡೋ ಆಸೆ, ಹವ್ಯಾಸವನ್ನೇ ಮರೆತುಬಿಡುತ್ತಾರೆ. ಆದರೆ ಕೆಲವರು ತಮ್ಮ ನೀರಸ ಜೀವನವನ್ನು ಬಿಟ್ಟು, ಸಾಹಸ ಜೀವನವನ್ನು (adventurous life) ಹುಡುಕುತ್ತಾ ಪ್ರಯಾಣಿಕರಾಗುತ್ತಾರೆ ಮತ್ತು ಕೆಲವರು ಪ್ರಪಂಚವನ್ನು ಸುತ್ತಿ ನೋಡಲು ದೇಶ ವಿದೇಶ ತಿರುಗುತ್ತಾರೆ. ಟ್ರಾವೆಲ್ ಪ್ರಿಯ ಈ ಭಾರತೀಯ ಜೋಡಿ ಸಹ ಅದನ್ನೇ ಮಾಡಿದರು.
ನಾವಿಲ್ಲಿ ಹೇಳುತ್ತಿರೋ ಭಾರತೀಯ ಕಪಲ್ಸ್ (Indian Couples) ವಿಶ್ವದ ಅತಿ ಉದ್ದದ ರಸ್ತೆಯಲ್ಲಿ ಪ್ರಯಾಣಿಸಲು ಹೊರಟರು ಮತ್ತು ಆ ಮೂಲಕ ವಿಶ್ವದ ಅದ್ಭುತ ಸೌಂದರ್ಯವನ್ನು ತಮ್ಮ ವಿಡಿಯೋ ಮೂಲಕ ಇವರು ಜನರಿಗೆ ತಲುಪಿಸಿದರು. ಅಷ್ಟಕ್ಕೂ ಈ ಜೋಡಿ ಮಾಡಿದ್ದೇನೆಂದರೆ, ಮನೆಯನ್ನೇ ಬಿಟ್ಟು, ವ್ಯಾನ್ ನ್ನು ಮನೆ ಮಾಡುವ ಮೂಲಕ ದೇಶ, ವಿದೇಶ ಸುತ್ತುತ್ತಿದ್ದಾರೆ.. ನಾವು ಈಗ ಹೇಳ್ತಾ ಇರೋದು ಸ್ಮೃತಿ ಮತ್ತು ಕಾರ್ತಿಕ್ (Smrithi and Karthik) ಎಂಬ ಟ್ರಾವೆಲ್ ಕಪಲ್ ಬಗ್ಗೆ.
ಸ್ಮೃತಿ ಭದೌರಿಯಾ ಮತ್ತು ಕಾರ್ತಿಕ್ ವಾಸನ್ ಇಬ್ಬರೂ ಸಹ ಐ ಕನ್ಸಲ್ಟೆಂಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. 2018 ರಿಂದಲೇ ವರ್ಕ್ ಫ್ರಮ್ ಹೋಮ್ (work from home) ಮಾಡುತ್ತಿದ್ದ ಈ ಜೋಡಿಗಳು. 2020 ರಲ್ಲಿ ಚೆನ್ನೈನಲ್ಲಿ ವಿವಾಹವಾದರು. ಅಂದಿನಿಂದ, ಅವರು ವ್ಯಾನ್ ಅನ್ನೆ ತಮ ಮನೆಯಾಗಿಸಿ, ಅಲ್ಲಿಯೇ ವಾಸಿಸುತ್ತಿದ್ದಾರೆ.
ಹೌದು ಈ ಜೋಡಿಗಳಿಗೆ ಟ್ರಾವೆಲ್ ಮಾಡೊ ಆಸೆ, ತುಂಬಾ ಸಮಯ ಮನೆ ಬಿಟ್ಟು ಕೆಲಸ ಬಿಟ್ಟು ಟ್ರಾವೆಲ್ ಮಾಡೋದು ಕಷ್ಟ. ಅದಕ್ಕಾಗಿಯೇ ಇವರು ವಿಂಟೇಜ್ ವ್ಯಾನ್ ಅನ್ನು ಖರೀದಿಸಿ, ಅದರ ಮೂಲಕ ಕೆಲಸ ಮಾಡಿಕೊಂಡೇ ಟ್ರಾವೆಲ್ ಮಾಡೋ ಯೋಜನೆ ಹಾಕಿಕೊಂಡರು. ಕೋವಿಡ್ ನಂತರ ಅವರ ಆಸೆ ರೆಕ್ಕೆಗಳನ್ನು ಪಡೆದುಕೊಂಡಿತು. ಅವರು ತಮ್ಮ ವ್ಯಾನ್ ಅನ್ನು ಸಂಪೂರ್ಣವಾಗಿ ರಿನೋವೇಟ್ ಮಾಡಿದರು ಮತ್ತು ನಂತರ ಅವರು ವಿಶ್ವದ ಅತಿ ಉದ್ದದ ರಸ್ತೆಯಲ್ಲಿ (longest road in the world), ಅಂದರೆ ಪ್ಯಾನ್ ಅಮೇರಿಕನ್ ಹೆದ್ದಾರಿಯಲ್ಲಿ ಟ್ರಾವೆಲ್ ಮಾಡಲು ಆರಂಭಿಸಿದರು.
ವಿಶ್ವದ ಅತಿ ಉದ್ದದ ರಸ್ತೆಯಲ್ಲಿ ಪ್ರಯಾಣ
ಡೇಂಜರ್ಸ್ ರೋಡ್ ವೆಬ್ಸೈಟ್ ಪ್ರಕಾರ, ವಿಶ್ವದ ಅತಿ ಉದ್ದದ ರಸ್ತೆ ಅಂದರೆ ಪ್ಯಾನ್ ಅಮೆರಿಕನ್ ಹೆದ್ದಾರಿ ಅಲಾಸ್ಕಾದ ಪ್ರೂಡೋ ಕೊಲ್ಲಿಯಿಂದ ಹುಟ್ಟಿ ಅರ್ಜೆಂಟೀನಾದ ಉಶುವಾಯಾಗೆ ಹೋಗುತ್ತದೆ. ಈ ರಸ್ತೆ 30 ಸಾವಿರ ಕಿ.ಮೀ ಉದ್ದವಿದೆ. ಗಿನ್ನೆಸ್ ವಿಶ್ವ ದಾಖಲೆಗಳ ಪ್ರಕಾರ, ಇದು ಕಾರಿನಲ್ಲಿ ಪ್ರಯಾಣಿಸಲು ಅತಿ ಉದ್ದದ ರಸ್ತೆ ಎಂದು ಪರಿಗಣಿಸಲಾಗಿದೆ. ಈ ಹೆದ್ದಾರಿಯಲ್ಲಿ, ನೀವು ಪ್ರಯಾಣಿಸುವಾಗ 15 ದೇಶಗಳನ್ನು ಸುತ್ತಬಹುದು. ಇಂತಹ ಬೃಹತ್ ರಸ್ತೆಯಲ್ಲಿ ಭಾರತೀಯ ಜೋಡಿ ಟ್ರಾವೆಲ್ ಮಾಡಿದೆ.
ವ್ಯಾನ್ ಗೆ ಮನೆಯ ಲುಕ್ ನೀಡಿದ ಜೋಡಿ
ಈ ಜೋಡಿಗಳು ತಮ್ಮ ವ್ಯಾನ್ ಅನ್ನು ಸಂಪೂರ್ಣವಾಗಿ ಮನೆಯನ್ನಾಗಿ ಮಾಡಿದ್ದಾರೆ. ದ ಬ್ರನ್ ವ್ಯಾನ್ ಲೈಫ್ (The brown van life) ಎಂಬ ಇನ್ಸ್ಟಾಗ್ರಾಮ್ ಪೇಜ್ ನೊಂದಿಗೆ ಅವರು ತಮ್ಮ ಸಂಪೂರ್ಣ ಜರ್ನಿಯ ವಿಡಿಯೋಗಳನ್ನು ಹಂಚಿಕೊಳ್ಳುವ ಮೂಲಕ ಹಲವು ಸುಂದರ ಪ್ರದೇಶಗಳನ್ನು ಜನರಿಗೆ ತೋರಿಸಿದ್ದಾರೆ.
ವ್ಯಾನ್ ಒಳಗೆ, ಆಹಾರ ಮತ್ತು ಪಾನೀಯಗಳನ್ನು ಇಡಲು ಪ್ರತ್ಯೇಕ ಸ್ಥಳವಿದೆ. ಕಿಚನ್ ಕೂಡ ಇದೆ. ಅಲ್ಲದೆ, ಮಲಗಲು ಒಂದು ಹಾಸಿಗೆ ಇದೆ, ಅದು ಚೇಂಜ್ ಕೂಡ ಮಾಡಬಹುದು, ಅಂದರೆ, ಅದು ಡಬಲ್ ಬೆಡ್ ಆಗಿ ಬದಲಾಗುತ್ತದೆ. ಅಷ್ಟೇ ಅಲ್ಲ ಅವರು ತಮ್ಮ ವ್ಯಾನ್ ನಲ್ಲಿ ಬಾತ್ ರೂಮ್ ಸಹ ನಿರ್ಮಿಸಿದ್ದಾರೆ.
ಈ ಜೋಡಿಯ ಅದ್ಭುತ ಜರ್ನಿಯನ್ನು ನೀವು ಅವರ ಇನ್ಸ್ಟಾಗ್ರಾಂ ಪೇಜ್ ನಲ್ಲಿ (instagram page)ಕಾಣಬಹುದು. ಇತ್ತಿಚಿನ ದಿನಗಳಲ್ಲಿ ಹೆಚ್ಚಿನ ಜನರು ಕೋಟಿ ರೂಪಾಯಿ ವೆಚ್ಚ ಮಾಡಿ ವ್ಯಾನ್ ನಲ್ಲೆ ಮನೆ ಮಾಡಿ ಟ್ರಾವೆಲ್ ಮಾಡ್ತಿದ್ದಾರೆ. ಹೇಗಿದೆ ಈ ಭಾರತೀಯ ಜೋಡಿಗಳ ಜರ್ನಿ.