ಈ ಊರಲ್ಲಿ ಹುಡುಗಿಯರಿಗೆ ಪಿರಿಯಡ್ಸ್ ಆದ್ರೆ ಮೂರು ದಿನ ಊಟ ಕೊಡಲ್ವಂತೆ!
ಋತುಚಕ್ರದ ಸಮಯದಲ್ಲಿ ಮಹಿಳೆಯರಿಗೆ ಆರೈಕೆಯ ಅಗತ್ಯವಿರುತ್ತದೆ, ಆದರೆ ಅನೇಕ ಸ್ಥಳಗಳಲ್ಲಿ ಇಂದಿಗೂ ಸಹ ಋತುಚಕ್ರದ ಸಮಯದಲ್ಲಿ ಮಹಿಳೆಯರನ್ನು ತುಂಬಾನೆ ಕೀಳರಿಮೆಯಿಂದ ಕಾಣುವ ಅನೇಕ ಪ್ರದೇಶಗಳಿವೆ. ಒಂದೆಡೆಯಂತೂ ಪಿರಿಯಡ್ಸ್ ಸಮಯದಲ್ಲಿ ಹುಡುಗಿಯರಿಗೆ ಮೂರು ದಿನ ಊಟವನ್ನೇ ನೀಡೋದಿಲ್ಲವಂತೆ.

ಋತುಚಕ್ರವು (periods) ನೈಸರ್ಗಿಕ ಪ್ರಕ್ರಿಯೆಯಾಗಿದ್ದರೂ, ಅದಕ್ಕೆ ಸಂಬಂಧಿಸಿದ ಅನೇಕ ನಿಷೇಧಗಳು ಮತ್ತು ನಂಬಿಕೆಗಳು ಇನ್ನೂ ಚಾಲ್ತಿಯಲ್ಲಿವೆ. 21ನೇ ಶತಮಾನ ತಲುಪಿದ ನಂತರವೂ, ಜನರು ಇನ್ನೂ ಸಹ ಪಿರಿಯಡ್ಸ್ ಗೆ ಸಂಬಂಧಿಸಿದ ಮೂಢ ನಂಬಿಕೆಗಳನ್ನ ಹಲವೆಡೆ ನಂಬಿದ್ದಾರೆ. ಈ ದಿನಗಳಲ್ಲಿ ಮಹಿಳೆಯರಿಗೆ ಹೆಚ್ಚಿನ ಕಾಳಜಿ ಮತ್ತು ನೈರ್ಮಲ್ಯಕ್ಕೆ ಸಂಬಂಧಿಸಿದ ವಿಷಯಗಳ ಕಡೆಗೆ ಗಮನ ಹರಿಸುತ್ತಾರೆ.ಆದರೆ ಕೆಲವೆಡೆ ಪಿರಿಯಡ್ಸ್ ಸಮಯದಲ್ಲಿ ಮಹಿಳೆಯರನ್ನು ತುಂಬಾ ಕೆಟ್ಟದಾಗಿ ಟ್ರೀಟ್ ಮಾಡಲಾಗುತ್ತೆ.
ಕೆಲವು ಜನರು ಮುಟ್ಟಿನ ರಕ್ತವನ್ನು (bleeding of periods) ಹಾನಿಕಾರಕ ಎಂದು ಹೇಳುತ್ತಾರೆ. ಈ ಕಾರಣದಿಂದಾಗಿ, ಮುಟ್ಟಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಋತುಚಕ್ರಕ್ಕೆ ಸಂಬಂಧಿಸಿದ ನಂಬಿಕೆಗಳು ಮತ್ತು ಪದ್ಧತಿಗಳು ದೇಶ ಮತ್ತು ಸಂಸ್ಕೃತಿಯಲ್ಲಿ ವಿಭಿನ್ನವಾಗಿವೆ ಎಂದು ನಿಮಗೆ ತಿಳಿದಿದೆಯೇ? ಇಲ್ಲಿ ಪಾಶ್ಚಿಮಾತ್ಯ ದೇಶ ಕಿರಿಬಾಟಿಯಲ್ಲಿನ ಪಿರಿಯಡ್ಸ್ ಗೆ ಸಂಬಂಧಿಸಿದ ವಿಚಿತ್ರ ಪದ್ಧತಿಯ ಬಗ್ಗೆ ತಿಳಿಸುತ್ತೇವೆ.
arrest
ಇಲ್ಲಿ ಪಿರಿಯಡ್ಸ್ ಸಮಯದಲ್ಲಿ ಹುಡುಗಿಯರಿಗೆ ಮೂರು ದಿನ ಊಟವೇ ಕೊಡೋದಿಲ್ವಂತೆ
ಕಿರಿಬಾಟಿಯಲ್ಲಿ, (Kiribati) ಹುಡುಗಿಗೆ ಮೊದಲ ಬಾರಿ ಋತುಮತಿಯಾದಾಗ, ಆಕೆಗೆ ಮೊದಲ ಮೂರು ದಿನಗಳಲ್ಲಿ ಆಹಾರವನ್ನು ನೀಡಲಾಗುವುದಿಲ್ಲ. ನಾಲ್ಕನೇ ದಿನ, ಅವರಿಗೆ ಸ್ವಲ್ಪ ಆಹಾರ ಮತ್ತು ಪಾನೀಯ ನೀಡಲಾಗುತ್ತದೆ. ತಿನ್ನಲು ಕೇವಲ ಡ್ರೈ ಫ್ರುಟ್ಸ್ ಮಾತ್ರ ನೀಡಲಾಗುತ್ತೆ. ಅಷ್ಟೇ ಅಲ್ಲ ಕುಡಿಯಲು ಎಳನೀರು ಮತ್ತು ತಾಜಾ ಕಳ್ಳಬಟ್ಟಿ ನೀಡಲಾಗುತ್ತೆ. ಇದು ಅಲ್ಲಿನ ಸಾಂಪ್ರದಾಯಿಕ ಪಾನೀಯವಾಗಿದೆ.
ಕಿರಿಬಾಟಿಯಲ್ಲಿ ಈ ಸಂಪ್ರದಾಯ ಇರೋದರ ಹಿಂದೆ ಒಂದು ಕಾರಣವಿದೆ. ಜೀವನದಲ್ಲಿ ಹುಡುಗಿಯ ಕುಟುಂಬದಲ್ಲಿ ತಿನ್ನಲು ಆಹಾರದ ಕೊರತೆಯಿದ್ದಾಗ, ಆ ಮಹಿಳೆ ತನ್ನ ಹೊಟ್ಟೆಯನ್ನು ತುಂಬುವ ಮೊದಲು ಮಕ್ಕಳು ಮತ್ತು ಗಂಡನಿಗೆ ಆಹಾರವನ್ನು ನೀಡಬೇಕು ಎಂದು ನಂಬಲಾಗಿದೆ. ಹಾಗಾಗಿ ಆಕೆಗೆ ಹಸಿವನ್ನು ತಡೆಯುವಂತಹ ಶಕ್ತಿ ಬರಲು ಈ ರೀತಿ ಮಾಡಲಾಗುತ್ತೆ
ಈ ಪದ್ಧತಿಯನ್ನು ಮೂರನೇ ದಿನ ಆಚರಿಸಲಾಗುತ್ತೆ
ಮೂರನೇ ದಿನವನ್ನು, ಹುಡುಗಿ ಸ್ಥಳೀಯರಲ್ಲಿ ಜನಿಸಿದ ಮೊದಲ ವ್ಯಕ್ತಿಯೊಂದಿಗೆ ಹಂಚಿಕೊಳ್ಳುತ್ತಾಳೆ. ನಂತರ ಸಂಪ್ರದಾಯ ಪ್ರಾರಂಭವಾಗುತ್ತದೆ. ಇದರ ನಂತರ, ಸಂಬಂಧಿಕರು ಹುಡುಗಿಯ ಮನೆಗೆ ಬರುತ್ತಾರೆ. ಈ ಸಮಯದಲ್ಲಿ, ಪೋಷಕರು ಆಹಾರವನ್ನು ನೀಡುತ್ತಾರೆ. ಸಮಾರಂಭದಲ್ಲಿ ನೃತ್ಯವೂ ನಡೆಯುತ್ತೆ. ಎಲ್ಲರೂ ಹುಡುಗಿಯನ್ನು ಯುವತಿಯಂತೆ ನೋಡುತ್ತಾರೆ.
ಎನ್ಸಿಬಿಐ (NCBI) ವರದಿ ಏನು ಹೇಳುತ್ತದೆ?
ಎನ್ಸಿಬಿಐ ವರದಿಯ ಪ್ರಕಾರ, ಕಿರಿಬಾಟಿಯಲ್ಲಿ ಹುಡುಗಿಯರಿಗೆ ಋತುಚಕ್ರಕ್ಕೆ ಸಂಬಂಧಿಸಿದ ಮಾಹಿತಿಯ ಕೊರತೆಯಿದೆ. ಪಿಎನ್ಜಿ ನಡೆಸಿದ ಅಧ್ಯಯನವು ಹುಡುಗಿಯರಿಗೆ ಋತುಚಕ್ರದ ಬಗ್ಗೆ ಹೆಚ್ಚು ತಿಳಿದಿಲ್ಲ ಎಂದು ಕಂಡುಹಿಡಿದಿದೆ, ಇದರಿಂದಾಗಿ ಅವರು ಋತುಚಕ್ರಕ್ಕೆ ಸಹ ಸಿದ್ಧರಿರಲಿಲ್ಲ. ಅಷ್ಟೇ ಅಲ್ಲ, ಋತುಚಕ್ರದ ಬಗ್ಗೆ ಹುಡುಗಿಯರಲ್ಲಿ ತಪ್ಪು ಕಲ್ಪನೆಯೂ ಇತ್ತು.
ಶಾಲೆಗೆ ಹೋಗುವ ಹುಡುಗಿಯೊಬ್ಬಳು ತಾಯಂದಿರು ನಮಗೆ ಜನ್ಮ ನೀಡಿದಾಗ, ತ್ಯಾಜ್ಯವು ಒಂದು ವಯಸ್ಸಿನವರೆಗೆ ದೇಹದಲ್ಲಿ ಉಳಿಯುತ್ತದೆ. ನಮಗೆ ಋತುಚಕ್ರವಾದಾಗ, ಈ ತ್ಯಾಜ್ಯ ರಕ್ತವು (waste blood) ಹೊರಬರುತ್ತದೆ. ಅಷ್ಟುಮಾತ್ರವಲ್ಲದೆ, ದೇವರಿಗೆ ಅಗೌರವ ತೋರಿಸುವವರು ಅದನ್ನು ಪಾಪವೆಂದು ಪರಿಗಣಿಸುತ್ತಾರೆ ಎಂದು ಅಲ್ಲಿನ ಹುಡುಗಿಯರು ನಂಬಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.