Free Travel : ಈ 5 ಪ್ರಸಿದ್ಧ ಸ್ಥಳಗಳಲ್ಲಿ ನೀವು ಫ್ರೀ ಆಗಿ ಆಹಾರ, ವಸತಿ ಪಡೆಯಬಹುದು
ಬಜೆಟ್ ನಿಂದಾಗಿ ಹೆಚ್ಚಾಗಿ ಜನರು ಪ್ರವಾಸವನ್ನು ಮಾಡೋ ಯೋಚನೆಯನ್ನೇ ಬಿಡುತ್ತಾರೆ. ಸಾಮಾನ್ಯವಾಗಿ ಜನರಿಗೆ ಬದುಕಲು ಮತ್ತು ತಿನ್ನಲು ಹೆಚ್ಚು ಹಣವನ್ನು ಖರ್ಚು ಮಾಡುವುದು ದೊಡ್ಡ ಸಮಸ್ಯೆಯಾಗಿದೆ. ಹೀಗಿರುವಾಗ, ಪ್ರವಾಸ ಮಾಡೋದು, ಬೇರೆ ತಾಣಕ್ಕೆ ಹೋಗಿರುವಾಗ ಅಲ್ಲಿ ಉಳಿಯೋದು ಎಲ್ಲವೂ ಖರ್ಚಿನ ಕೆಲಸವಾಗಿದೆ. ಆದರೆ ನೀವು ಭಾರತದ ಕೆಲವೊಂದು ಸುಂದರ ತಾಣಗಳಲ್ಲಿ ಯಾವುದೇ ಹಣ ಖರ್ಚು ಮಾಡದೇ ಉಳಿದುಕೊಳ್ಳಬಹುದು. ಆ ಸುಂದರ ಪ್ರದೇಶಗಳ ಬಗ್ಗೆ ತಿಳಿಯೋಣ.
ಪ್ರತಿಯೊಬ್ಬರೂ ತಿರುಗಾಡಲು, ಬೇರೆ ಬೇರೆ ಪ್ರದೇಶಗಳಿಗೆ ಪ್ರವಾಸ ಮಾಡಲು ಇಷ್ಟಪಡುತ್ತಾರೆ. ಟ್ರಾವೆಲ್ ಮಾಡೊದರಿಂದ ಹೊಸ ಹೊಸ ಪ್ರದೇಶಗಳನ್ನು ನೋಡಲು ಸಾಧ್ಯವಾಗುತ್ತೆ. ಬೇರೆ ಸುಂದರ ತಾಣಗಳಿಗೆ ಹೋದಾಗ ನೀವು ರಿಫ್ರೆಶ್ ಆಗಿರುತ್ತೀರಿ, ಆದರೆ ಅನೇಕ ಬಾರಿ ಬಜೆಟ್ (low budget) ಕಾರಣದಿಂದಾಗಿ ಬೇರೆ ಬೇರೆ ತಾಣಗಳಿಗೆ ಹೋಗುವ ಪ್ಲ್ಯಾನ್ ಕ್ಯಾನ್ಸಲ್ ಮಾಡಲಾಗುತ್ತೆ. ನೀವು ಅದೇ ಯೋಚನೆಯಲ್ಲಿದ್ದರೆ ಈ ಲೇಖನ ನಿಮಗಾಗಿ...
ಖರ್ಚು ಮಾಡದೇ ಯಾವ ಕೆಲಸವೂ ಆಗೋದೆ ಇಲ್ಲ ಅಲ್ವಾ? ಟ್ರಾವೆಲ್ ಮಾಡಬೇಕು. ಆದರೆ ಜಾಸ್ತಿ ಹಣ ಖರ್ಚಾಗಬಾರದು ಎಂದು ನೀವು ಅಂದುಕೊಂಡಿದ್ದರೆ, ನಿಮಗಾಗಿಯೇ ಅಂತಹ ಜಾಗಗಳು ನಮ್ಮ ದೇಶದಲ್ಲಿವೆ. ದೇಶದಲ್ಲಿ ನೀವು ವಾಸಿಸಲು, ತಿನ್ನಲು, ಎಲ್ಲವೂ ಮುಕ್ತವಾಗಿರಲು ಅನೇಕ ಸ್ಥಳಗಳಿವೆ. ಹೌದು, ನೀವು ಅದನ್ನು ಸರಿಯಾಗಿ ಕೇಳಿದ್ದೀರಿ, ಆ ಸ್ಥಳಗಳ ಬಗ್ಗೆ ನೀವು ನಿಮಗೆ ಹೇಳಲಿದ್ದೀರಿ. ಇಲ್ಲಿ ನೀವು ಸುಂದರವಾದ ತಾಣಗಳನ್ನು (beautiful places) ನೋಡುತ್ತಾ, ಫ್ರೀ ಆಗಿ ಈ ಜಾಗಗಳಲ್ಲಿ ಊಟ, ತಿಂಡಿ ಮಾಡುತ್ತಾ ವಾಸಿಸಬಹುದು. ಅವುಗಳ ಬಗ್ಗೆ ತಿಳಿಯೋಣ.
1. ಹೃಷಿಕೇಶ್ (ಗೀತಾ ಭವನ್)
ಹೃಷಿಕೇಶ್ ಶ್ರದ್ಧಾ ಕೇಂದ್ರವೂ ಹೌದು, ಜೊತೆಗೆ ಎಂಜಾಯ್ ಮಾಡಲು ಅದ್ಭುತವಾದ ತಾಣವಾಗಿದೆ. ನೀವು ಇಲ್ಲಿ ಪ್ರಕೃತಿಯ ಸೌಂದರ್ಯವನ್ನು ಕಣ್ತುಂಬಿಕೊಳ್ಳಬಹುದು, ಅಂತಹ ಅದ್ಭುತವಾದ ತಾಣ ಇದಾಗಿದೆ. ಹೃಷಿಕೇಶ್ ಹೋದ್ರೆ ನೀವು ಗೀತಾ ಭವನದಲ್ಲಿ ಉಳಿಯಬಹುದು. ಇಲ್ಲಿ ಸಾವಿರ ಕೋಣೆಗಳಿವೆ, ಇಲ್ಲಿ ಎಲ್ಲವೂ ಉಚಿತವಾಗಿದೆ. ಈ ಆಶ್ರಮದಿಂದ ನೀವು ಗಂಗೆಯ ರಮಣೀಯ ದೃಶ್ಯವನ್ನು ಸಹ ಆನಂದಿಸಬಹುದು.
2. ಹರಿದ್ವಾರ (ಶಾಂತಿಕುಂಜ್)
ಹರಿದ್ವಾರದ ಗಂಗಾ ಆರತಿ ಬಹಳ ಪ್ರಸಿದ್ಧವಾಗಿದೆ. ನೀವು ಹೃಷಿಕೇಶಕ್ಕೆ ಭೇಟಿ ನೀಡಲು ಯೋಜಿಸುತ್ತಿದ್ದರೆ, ನೀವು ತೀರ್ಥ ಶಾಂತಿಕುಂಜ್ ಹರಿದ್ವಾರದಲ್ಲಿಯೂ ಉಳಿಯಬಹುದು. ಇಲ್ಲಿ ಉಚಿತ ವಾಸ್ತವ್ಯವೂ (free rooms) ಇದೆ. ಇಲ್ಲಿದ್ದುಕೊಂಡು ನೀವು ಹರಿದ್ವಾರದ ಸುಂದರ ಪ್ರದೇಶಗಳಿಗೆ ಭೇಟಿ ನೀಡಬಹುದು.
3. ಉತ್ತರಾಖಂಡ್ (ಹೇಮಕುಂಡ್ ಸಾಹಿಬ್ ಗುರುದ್ವಾರ)
ಉತ್ತರಾಖಂಡದಲ್ಲಿಯೂ ಸಹ, ನೀವು ಹಿಮಾವೃತ ಕಣಿವೆಗಳ ಸೌಂದರ್ಯವನ್ನು ಎಂಜಾಯ್ ಮಾಡಬಹುದು. ಜನಸಂದಣಿಯಿಂದಾಗಿ ಅನೇಕ ಬಾರಿ ಹೋಟೆಲ್ ಪಡೆಯುವುದು ಕಷ್ಟ. ಅಂತಹ ಪರಿಸ್ಥಿತಿಯಲ್ಲಿ, ನೀವು ಶ್ರೀ ಹೇಮಕುಂಡ್ ಸಾಹಿಬ್ ಗುರುದ್ವಾರದಲ್ಲಿ ಉಳಿಯಬಹುದು. ಇದು ಲಂಗರ್ ಸೇವೆಗೆ ಹೆಸರುವಾಸಿಯಾಗಿದೆ. ಇಲ್ಲಿ ನೀವು ಆಹಾರವನ್ನು ಫ್ರೀ ಆಗಿ ಸೇವಿಸಬಹುದು.
4. ಕೊಯಮತ್ತೂರು (ಇಶಾ ಫೌಂಡೇಶನ್)
ಈ ಆಶ್ರಮವು (Isha foundation) ಕೊಯಮತ್ತೂರಿನಿಂದ ಸುಮಾರು 40 ಕಿ.ಮೀ ದೂರದಲ್ಲಿದೆ. ಇಲ್ಲಿರುವ ಆದಿಯೋಗಿಯ ಪ್ರತಿಮೆಯು ವಿಶ್ವದಲ್ಲಿಯೇ ಪ್ರಸಿದ್ಧವಾಗಿದೆ. ನೀವು ಈ ಸ್ಥಳಕ್ಕೂ ಭೇಟಿ ನೀಡಬಹುದು. ಇಲ್ಲಿ ಉಚಿತ ಸೇವೆಯೂ ಇದೆ. ಇಲ್ಲಿ ವಿವಿಧ ಕಾರ್ಯಕ್ರಮಗಳು ಸಹ ನಡೆಯುತ್ತೆ, ಕೊಯಮತ್ತೂರಿನ ಇನ್ನೂ ಹಲವು ತಾಣಗಳನ್ನು ಸಹ ನೀವು ನೋಡಬಹುದು.
5. ಕಾಝಂಗಾಡ್ (ಆನಂದ್ ಆಶ್ರಮ)
ನೀವು ಕೇರಳಕ್ಕೆ ಭೇಟಿ ನೀಡಲು ಯೋಜಿಸುತ್ತಿದ್ದರೆ, ಖಂಡಿತವಾಗಿಯೂ ಈ ಸ್ಥಳಕ್ಕೆ ಹೋಗಿ. ಹಸಿರಿನ ನಡುವೆ ಇರುವ ಆನಂದ ಆಶ್ರಮದಲ್ಲಿ ಉಳಿಯಲು ಇದು ನಿಮಗೆ ಉತ್ತಮ ಆಯ್ಕೆಯಾಗಿದೆ. ಇಲ್ಲಿನ ಆಹಾರವು ಜನರಿಗೆ ಸೂಕ್ತವಾಗಿದೆ. ವಾಸ್ತವವಾಗಿ, ಇಲ್ಲಿನ ಪ್ರದೇಶಗಳಲ್ಲಿ ಕಡಿಮೆ ತೈಲ-ಮಸಾಲೆಗಳನ್ನು ಬಳಸಲಾಗುತ್ತದೆ.
ಇನ್ನು ನೀವು ಮುಖ್ಯವಾಗಿ ಗಮನಿಸಬೇಕಾದ ವಿಷಯ ಏನೆಂದರೆ ಇಲ್ಲಿ ಉಚಿತವಾಗಿ ಉಳಿಯಲು, ನೀವು ಈ ಅಗತ್ಯ ದಾಖಲೆಗಳನ್ನು ಹೊಂದಿರಬೇಕು. ಉದಾಹರಣೆಗೆ, ಗುರುತಿನ ಚೀಟಿಗಳು (identity card), ಆಧಾರ್ ಕಾರ್ಡ್ ಗಳನ್ನು (Adhar card) ಹೊಂದಿದ್ದರೆ, ಈ ಸ್ಥಳಗಳಿಗೆ ಹೋಗಿ ಅಲ್ಲಿನ ಸೇವೆ ಪಡೆದುಕೊಳ್ಳಬಹುದು. ಕಡಿಮೆ ದರದಲ್ಲಿ ನಿಮ್ಮ ಟ್ರಿಪ್ ಎಂಜಾಯ್ ಮಾಡಬಹುದು.