MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Life
  • Travel
  • Adventures Spots: ಸ್ಕಂದಗಿರಿ ಟ್ರೆಕ್ to ಕಬಿನಿ ಸಫಾರಿ… ಕರುನಾಡಲ್ಲಿದ್ದು ಇದನ್ನ ಮಾಡಿಲ್ಲಾ ಅಂದ್ರೆ ಹೇಗೆ?

Adventures Spots: ಸ್ಕಂದಗಿರಿ ಟ್ರೆಕ್ to ಕಬಿನಿ ಸಫಾರಿ… ಕರುನಾಡಲ್ಲಿದ್ದು ಇದನ್ನ ಮಾಡಿಲ್ಲಾ ಅಂದ್ರೆ ಹೇಗೆ?

ಕರ್ನಾಟಕದಲ್ಲಿ ಟ್ರಾವೆಲ್ ತಾಣಗಳು ಎಷ್ಟೋ ಇದೆ. ನೀವು ಸಾಹಸ ಪ್ರಿಯರಾಗಿದ್ರೆ ಕರ್ನಾಟಕದ ಈ ತಾಣಗಳಲ್ಲಿ ನೀವು ಟ್ರೆಕ್ಕಿಂಗ್, ಡೈವಿಂಗ್, ಸಫಾರಿ ಮಾಡಲೇಬೇಕು. 

2 Min read
Pavna Das
Published : Jul 03 2025, 06:21 PM IST
Share this Photo Gallery
  • FB
  • TW
  • Linkdin
  • Whatsapp
111
Image Credit : Instagram

ನೀವು ಕರ್ನಾಟಕದಲ್ಲಿರುವವರೇ (Karnataka) ಆಗಿದ್ರೆ ಈ 10 ಸಾಹಸಗಳನ್ನು ನೀವು ಜೀವನದಲ್ಲಿ ಒಂದು ಸಲವಾದ್ರೂ ಮಾಡಿರಲೇಬೇಕು. ಟ್ರೆಕ್ಕಿಂಗ್, ಡೈವಿಂಗ್, ಸಫಾರಿಗೆ ಯಾವ ಜಾಗ ಬೆಸ್ಟ್. ನೀವು ಕರುನಾಡಲ್ಲಿ ಏನು ಮಾಡಬೇಕು ನೋಡೋಣಾ.

211
Image Credit : Instagram

ಸ್ಕಂದಗಿರಿ ಟ್ರೆಕ್ (Skandagiri Trek)

ಕಲವರ ದುರ್ಗಾ ಎಂದೂ ಕರೆಯಲ್ಪಡುವ ಸ್ಕಂದಗಿರಿ ಬೆಂಗಳೂರಿನ ಸಮೀಪವಿರುವ ಜನಪ್ರಿಯ ಚಾರಣ ತಾಣವಾಗಿದ್ದು, ಐತಿಹಾಸಿಕ ಕೋಟೆಯ ಅವಶೇಷಗಳು ಮತ್ತು ಸೂರ್ಯೋದಯಕ್ಕೆ ಹೆಸರುವಾಸಿಯಾಗಿದೆ. ಇದು ಬೆಂಗಳೂರಿನಿಂದ ಸುಮಾರು 62 ಕಿ.ಮೀ ಮತ್ತು ಚಿಕ್ಕಬಳ್ಳಾಪುರದಿಂದ 3 ಕಿ.ಮೀ ದೂರದಲ್ಲಿರುವ ಪರ್ವತ ಕೋಟೆಯಾಗಿದೆ.

Related Articles

Related image1
Karnataka Tourism: ಕರ್ನಾಟಕದಲ್ಲಿದ್ದೀರಿ ಅಂದ್ರೆ ಈ ಅದ್ಭುತ ಅನುಭವಗಳನ್ನು ಪಡೆಯದೇ ಇದ್ದರೆ ಹೇಗೆ?
Related image2
Extreme Tourism : ಹುಚ್ಚು ಸಾಹಸಕ್ಕೆ ಜನರು ಏನೆಲ್ಲಾ ಟೂರಿಸಂ ಮಾಡ್ತಾರೆ ನೋಡಿ
311
Image Credit : Instagram

ನೇತ್ರಾಣಿ ಐಲ್ಯಾಂಡಲ್ಲಿ ಸ್ಕೂಬಾ ಡೈವಿಂಗ್ (Netrani Island)

ನೀವು ಸಮುದ್ರದಾಳದ ಜಗತ್ತನ್ನು ಒಂದು ಸಲವಾದರೂ ನೋಡಲು ಬಯಸಿದರೆ, ಮುರುಡೇಶ್ವರದ ಬಳಿ ಇರುವ ನೇತ್ರಾಣಿ ಐಲ್ಯಾಂಡಲ್ಲಿ ಸ್ಕೂಬಾ ಡೈವಿಂಗ್ ಮಾಡಬಹುದು. ಇದು ಹೊಸ ಅನುಭವ ನೀಡುತ್ತದೆ.

411
Image Credit : Instagram

ದಾಂಡೇಲಿಯಲ್ಲಿ ರಾಫ್ಟಿಂಗ್ (River Rafting in Dandeli)

ರಾಫ್ಟಿಂಗ್ ಮಾಡಬೇಕೆಂದು ಬಯಸಿದರೆ ನೀವು ಋಷಿಕೇಶಕ್ಕೆ ಹೋಗಬೇಕಾಗಿಲ್ಲ. ದಾಂಡೇಲಿಗೆ ತೆರಳಿ. ಅಲ್ಲಿ ಅಗ್ಗದ ದರದಲ್ಲಿ ರಿವರ್ ರಾಫ್ಟಿಂಗ್ ಎಂಜಾಯ್ ಮಾಡಬಹುದು.

511
Image Credit : Instagram

ಕುದುರೆಮುಖ ಹೈಕಿಂಗ್ (Hiking to Kudremukh)

ಕುದುರೆಮುಖವು ಟ್ರೆಕ್ಕಿಂಗ್‌ಗೆ ಜನಪ್ರಿಯ ತಾಣವಾಗಿದ್ದು, ಸುಂದರವಾದ ಸೌಂದರ್ಯ ಮತ್ತು ಸವಾಲಿನ ಹಾದಿಗಳ ಸುಂದರ ಜರ್ನಿ ಇದಾಗಿದೆ. ಈ ಟ್ರೆಕ್ಕಿಂಗ್ ತನ್ನ ಹಚ್ಚ ಹಸಿರಿನ ಹುಲ್ಲುಗಾವಲುಗಳು, ದಟ್ಟವಾದ ಕಾಡುಗಳು ಮತ್ತು ಪಶ್ಚಿಮ ಘಟ್ಟಗಳ ಸುಂದರ ನೋಟಗಳಿಗೆ ಹೆಸರುವಾಸಿಯಾಗಿದೆ. ಇದು ಮಧ್ಯಮದಿಂದ ಕಷ್ಟಕರವಾದ ಟ್ರೆಕ್ ಆಗಿದ್ದು, ಒಟ್ಟು ಸುಮಾರು 22 ಕಿ.ಮೀ (ದ್ವಿಮುಖ) ದೂರವನ್ನು ಹೊಂದಿದೆ. ಟ್ರೆಕ್ಕಿಂಗ್ ಮಾಡಲು ಉತ್ತಮ ಸಮಯವೆಂದರೆ ಜೂನ್ ನಿಂದ ಫೆಬ್ರವರಿ ತಿಂಗಳು.

611
Image Credit : Instagram

ರಂಗನತಿಟ್ಟು ಪಕ್ಷಿಧಾಮದಲ್ಲಿ ಪಕ್ಷಿ ವೀಕ್ಷಣೆ (Birdwatching in Ranganathittu)

ನೀವು ಪ್ರಕೃತಿ ಪ್ರೇಮಿಯಾಗಿದ್ದರೆ ರಂಗನತಿಟ್ಟು ಪಕ್ಷಿಧಾಮಕ್ಕೆ ಭೇಟಿ ನೀಡಲೇಬೇಕು. ಹೆಸರಾಂತ ಪಕ್ಷಿವಿಜ್ಞಾನಿ ಡಾ. ಸಲೀಮ್ ಅಲಿ ಅವರ ಮನವಿ ಮೇರೆಗೆ 1940 ರಲ್ಲಿ ಅಭಯಾರಣ್ಯವೆಂದು ಘೋಷಿಸಿದ ರಂಗನತಿಟ್ಟು ಪಕ್ಷಿಧಾಮವು ಪಕ್ಷಿ ವೀಕ್ಷಕರು ಮತ್ತು ಪ್ರಕೃತಿ ಪ್ರಿಯರಿಗೆ ಸ್ವರ್ಗವಾಗಿದೆ.

711
Image Credit : Instagram

ಹಂಪಿಯಲ್ಲಿ ತೆಪ್ಪ ಸವಾರಿ (Coracle ride in Hampi)

ಹಂಪು ತುಂಬಾನೆ ಸುಂದರವಾದ ಐತಿಹಾಸಿಕ ತಾಣ ಅನ್ನೋದು ನಿಮಗೆ ಗೊತ್ತೆ ಇದೆ. ಇಲ್ಲಿ ಬೃಹತ್ ವಿಜಯನಗರ ಸಾಮ್ರಾಜ್ಯದ್ದ ಅಳಿವು ಉಳಿವುಗಳನ್ನು ನೀವು ನೋಡಬಹುದು. ಅದರ ಜೊತೆಗೆ ಹಂಪಿಯಲ್ಲಿ ತೆಪ್ಪ ಸವಾರಿ ಮಾಡುವ ಮಜವೇ ಬೇರೆ.

811
Image Credit : Instagram

ಯಾನ ಗುಹೆಗೆ ಟ್ರೆಕ್ಕಿಂಗ್ (Yana Cave Trek)

ಉತ್ತರ ಕನ್ನಡ ಜಿಲ್ಲೆಯಲ್ಲಿಯಲ್ಲಿರುವ ಯಾನ ಗುಹೆಗೆ ಟ್ರೆಕ್ಕಿಂಗ್ ಮಾಡೋದು ಸಹ ಅದ್ಭುತ ಅನುಭವ ಕೊಡುತ್ತದೆ. ಆ ಪ್ರಕೃತಿ ಸೌಂದರ್ಯ, ಅಲ್ಲಿನ ದೈವೀಕ ಕಳೆ ಎಲ್ಲವೂ ವಿಭಿನ್ನ ಅನುಭವ ನೀಡೋದಂತು ಸುಳ್ಳಲ್ಲ.

911
Image Credit : Instagram

ಕಬಿನಿಯಲ್ಲಿ ವೈಲ್ಡ್ ಲೈಫ್ ಸಫಾರಿ (Wildlife Safari in Kabini)

ಕಾಡೂ ಪ್ರಾಣಿಗಳನ್ನು ಅವುಗಳ ವಾಸ ಸ್ಥಾನದಲ್ಲಿ ನಿರ್ಭೀತರಾಗಿ ಓಡಾಡುತ್ತಾ ಇರೋದನ್ನು ನೋಡಬೇಕು ಎಂದು ನೀವು ಬಯಸಿದ್ರೆ ಖಂಡಿತವಾಗಿಯೂ ಕಬಿನಿ ವೈಲ್ಡ್ ಲೈಫ್ ಸಫಾರಿ ಮಾಡಲೇಬೇಕು. ಪಕ್ಷಿ, ಪ್ರಾಣಿಗಳು, ಎಲ್ಲವನ್ನೂ ನಿಮ್ಮ ಕಣ್ಣಲ್ಲಿ ಸೆರೆ ಹಿಡಿಯಬಹುದು.

1011
Image Credit : Instagram

ರಾಮನಗರದಲ್ಲಿ ರಾಕ್ ಕ್ಲೈಂಬಿಂಗ್ (Rock Climbing in Ramnagar)

ರಾಮನಗರವು ರಾಕ್ ಕ್ಲೈಂಬಿಂಗ್‌ಗೆ ಹೆಸರುವಾಸಿಯಾಗಿದೆ. ರಾಮದೇವರ ಬೆಟ್ಟವು ಸಾಹಸಿಗರು ಮತ್ತು ಬಂಡೆ ಏರುವವರನ್ನು ಖಂಡಿತವಾಗಿಯೂ ಆಕರ್ಷಿಸುತ್ತೆ. ಇಲ್ಲಿ ರಾಕ್ ಕ್ಲೈಂಬಿಂಗ್ ಮತ್ತು ರಾಪ್ಪೆಲಿಂಗ್ ಚಟುವಟಿಕೆಗಳು ಲಭ್ಯವಿದೆ. ತಜ್ಞರ ಮಾರ್ಗದರ್ಶನ ಪಡೆದು ಇಲ್ಲಿ ನೀವು ರಾಕ್ ಕ್ಲೈಂಬಿಂಗ್ ಮಾಡಬಹುದು.

1111
Image Credit : Instagram

ಕವಲೆದುರ್ಗ ಕೋಟೆಗೆ ಟ್ರೆಕ್ಕಿಂಗ್ (Kavaledurga Fort Trek)

ಕವಲೆದುರ್ಗ ಕೋಟೆ ಐತಿಹಾಸಿಕ ಕೋಟೆಯಾಗಿದ್ದು, ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನಲ್ಲಿದೆ. ಇದು 9ನೇ ಶತಮಾನದಲ್ಲಿ ನಿರ್ಮಾಣವಾಯಿತು. ಮಳೆಗಾಲದಲ್ಲಿ ಇದರ ಸೌಂದರ್ಯ ದ್ವಿಗುಣವಾಗಿರುತ್ತೆ. ಒಮ್ಮೆ ಈ ಮಳೆಗಾಲದಲ್ಲಿ ಟ್ರೆಕ್ಕಿಂಗ್ ಮಾಡಿ.

About the Author

PD
Pavna Das
ಮೂಲತಃ ಮಂಗಳೂರಿನವಳು. ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ . ಕಳೆದ 12 ವರ್ಷಗಳಿಂದ ಪತ್ರಿಕೆ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಕೆಲಸ . ಸುದ್ದಿ ಬಿಡುಗಡೆ, ಗಲ್ಫ್ ಕನ್ನಡಿಗ, ಈ ಟಿವಿ ಭಾರತ್, ಕನ್ನಡ ನ್ಯೂಸ್ ನೌ, ವಿಜಯಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ. ಈಗ ಏಷ್ಯಾನೆಟ್ ಸುವರ್ಣದಲ್ಲಿ ಫ್ರೀಲಾನ್ಸರ್ . ಮನೋರಂಜನೆ, ಲೈಫ್ ಸ್ಟೈಲ್, ಟ್ರಾವೆಲ್ ಬರವಣಿಗೆ ಇಷ್ಟ.
ಪ್ರವಾಸೋದ್ಯಮ

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved