Extreme Tourism : ಹುಚ್ಚು ಸಾಹಸಕ್ಕೆ ಜನರು ಏನೆಲ್ಲಾ ಟೂರಿಸಂ ಮಾಡ್ತಾರೆ ನೋಡಿ
ಟೈಟಾನ್ ಜಲಾಂತರ್ಗಾಮಿ ಸ್ಫೋಟದಲ್ಲಿ 5 ಜನ ಸಾವನ್ನಪ್ಪಿರೋ ವಿಷಯ ಪ್ರಪಂಚದಾದ್ಯಂತದ ಜನರು ತಮ್ಮ ಜೀವವನ್ನು ಅಪಾಯಕ್ಕೆ ತಳ್ಳುವಂತಹ ಸಾಹಸ ಮಾಡೋದು ಎಷ್ಟು ಸರಿ ಎಂದು ಯೋಚಿಸುವಂತೆ ಮಾಡಿದೆ. ಈ ಮಧ್ಯೆ ಎಕ್ಸ್ಟ್ರೀಮ್ ಟೂರಿಸಂ ಎಂಬ ಪದವೂ ಸಾಕಷ್ಟು ಸದ್ದು ಮಾಡುತ್ತಿದೆ. ಎಕ್ಸ್ಟ್ರೀಮ್ ಟೂರಿಸಂ ಎಂದರೇನು ಅನ್ನೋದನ್ನು ತಿಳಿಯೋಣ.
ಟೈಟಾನಿಕ್ ಹಡಗಿನ ಅವಶೇಷಗಳನ್ನು ನೋಡಲು ಹೋದ ಜಲಾಂತರ್ಗಾಮಿ ನೌಕೆ (submarine) ಮುಳುಗಿದಾಗಿನಿಂದ, ಒಂದು ಪದವು ಹೆಚ್ಚು ಸುದ್ದಿಯಲ್ಲಿದೆ, ಇದು ಸಾಕಷ್ಟು ಚರ್ಚಿಸಲ್ಪಟ್ಟಂತಹ ಪದವೂ ಹೌದು. 'ಎಕ್ಸ್ಟ್ರೀಮ್ ಟೂರಿಸಂ' (extreme tourism). ಹೆಸರೇ ಸೂಚಿಸುವಂತೆ, 'ಎಕ್ಸ್ಟ್ರೀಮ್ ಎಂದರೆ 'ವಿಪರೀತ' ಮತ್ತು ‘ಟೂರಿಸಂ' ಎಂದರೆ ಪ್ರವಾಸೋದ್ಯಮ. ಇದೀಗ ಜನರಲ್ಲಿ ಈ ಬಗ್ಗೆ ಹೆಚ್ಚು ಕ್ರೇಜ್ ಉಂಟಾಗಿದೆ.
ಈ ಎಕ್ಸ್ಟ್ರೀಮ್ ಟೂರಿಸಂ ಕ್ರೇಜ್ ಜನರ ಜೀವಕ್ಕೆ ಬೆದರಿಕೆಯೊಡ್ಡುವುದಲ್ಲದೆ ಪ್ರಕೃತಿಗೆ ತುಂಬಾ ಹಾನಿಕಾರಕವಾಗಿದೆ. ಸಮುದ್ರದ ಆಳಕ್ಕೆ ಹೋಗುವುದು ಅಥವಾ ಬಾಹ್ಯಾಕಾಶದ ಮತ್ತೊಂದು ಗ್ರಹದ ಮೇಲೆ ಹೋಗೋದು, ಚಂದ್ರನ ಮೇಲೆ ಹೋಗೋದು. ಹೀಗೆ ಜನರ ಕ್ರೇಜ್ ಹೆಚ್ಚಾಗುತ್ತಿದೆ. ಇಲ್ಲಿ ಜನರಿಗೆ ಹುಚ್ಚು ಹೆಚ್ಚಿಸಿದ, ಎಕ್ಸ್ಟ್ರೀಮ್ ಟೂರಿಸಂ ಬಗ್ಗೆ ಒಂದಿಷ್ಟು ಮಾಹಿತಿಯನ್ನು ನೀಡಿದ್ದೇವೆ.
ಟೈಟಾನ್ ಜಲಾಂತರ್ಗಾಮಿ ನೌಕೆ (Titan Submarine)
ಟೈಟಾನಿಕ್ ಹಡಗಿನ ಅವಶೇಷಗಳನ್ನು ನೋಡಲು ಹೋದ ಟೈಟಾನ್ ಜಲಾಂತರ್ಗಾಮಿ ನೌಕೆ ದುರದೃಷ್ಟವಶಾತ್ ಅಪಘಾತಕ್ಕೀಡಾಯಿತು. ಈ ಜಲಾಂತರ್ಗಾಮಿ ನೌಕೆಯು ಸಮುದ್ರದ ಮೇಲ್ಮೈಯಿಂದ 13,000 ಅಡಿ ಆಳಕ್ಕೆ ಹೋಗುತ್ತಿತ್ತು. ಆದರೆ, ಸ್ಫೋಟದಿಂದಾಗಿ ನೌಕೆಯಲ್ಲಿದ್ದ ಎಲ್ಲಾ 5 ಜನರು ಪ್ರಾಣ ಕಳೆದುಕೊಂಡರು. ಟೈಟಾನಿಕ್ ಅವಶೇಷ ನೋಡುವ ಹುಚ್ಚು ಟೂರಿಸಂ 2021 ರಲ್ಲಿ ಪ್ರಾರಂಭವಾಯಿತು. ಇದನ್ನು ಸಮುದ್ರದಾಳದಲ್ಲಿ ಹೋಗಿ ನೋಡಲು ಶುಲ್ಕವನ್ನು $ 2,50,000 ಆಗಿತ್ತು.
ಮೌಂಟ್ ಎವರೆಸ್ಟ್ ಏರುವುದು (Mount Everest)
ಈ ವರ್ಷ ಮೌಂಟ್ ಎವರೆಸ್ಟ್ ಸುಮಾರು 600 ಆರೋಹಿಗಳು ಏರಿದ್ದರು. ಈ ಸಮಯದಲ್ಲಿ ಸುಮಾರು 13 ಜನರು ಪ್ರಾಣ ಕಳೆದುಕೊಂಡರು ಮತ್ತು 4 ಜನರು ಕಾಣೆಯಾಗಿದ್ದಾರೆ. 20,030 ಅಡಿ ಎತ್ತರದಲ್ಲಿರುವ ಮೌಂಟ್ ಎವರೆಸ್ಟ್ ಏರುವುದು ಇನ್ನೂ ಅತ್ಯಂತ ಅಪಾಯಕಾರಿ.
ಬಾಹ್ಯಾಕಾಶದ ಹಾರಾಟ (Space travel)
ಬ್ಲೂ ಒರಿಜಿನ್ ಎಂಬ ಕಂಪನಿಯು 2021 ರಿಂದ ಸ್ಪೇಸ್ ನಲ್ಲಿ ಹಾರಡುವ ಜನರ ಕನಸನ್ನು ನನಸು ಮಾಡಲು ಹೊರಟಿದೆ. ಇದು 10 ನಿಮಿಷಗಳ ಸುದೀರ್ಘ ಹಾರಾಟ ಒಳಗೊಂಡಿದೆ, ಇದಕ್ಕೆ $ 2.8 ಮಿಲಿಯನ್ ವೆಚ್ಚವಾಗುತ್ತದೆ. ವರ್ಜಿನ್ ಗ್ಯಾಲಕ್ಟಿಕ್ ಎಂಬ ಮತ್ತೊಂದು ಕಂಪನಿಯು ಆಗಸ್ಟ್ 2023 ರಿಂದ ಬಾಹ್ಯಾಕಾಶಕ್ಕೆ ಪ್ರಯಾಣಿಸಲು ತಯಾರಿ ನಡೆಸುತ್ತಿದೆ. ಈ ಕಂಪನಿಯು ಪ್ರತಿ ವ್ಯಕ್ತಿಗೆ 30 ನಿಮಿಷಗಳ ನಡಿಗೆಗೆ $ 4,90,000 ಶುಲ್ಕ ವಿಧಿಸಬಹುದು.
ವನ್ಯಜೀವಿ ಅನುಭವ (experiencing wildlife)
ಪ್ರಸಿದ್ಧ ವೈಲ್ಡ್ ಲೈಫ್ ಟ್ರಾವೆಲರ್ ಬೇರ್ ಗ್ರಿಲ್ಸ್ ಕಾಡಿನಲ್ಲಿ ಉಳಿವಿಗಾಗಿ ಹೋರಾಡುವುದನ್ನು ನಾವೆಲ್ಲರೂ ಟಿವಿಯಲ್ಲಿ ನೋಡಿದ್ದೇವೆ. ಬಹುಶಃ ಇದೇ ಕಾರಣದಿಂದ ಸಾಮಾನ್ಯ ಜನರಲ್ಲಿ ಅದನ್ನು ಅನುಭವಿಸುವ ಬಯಕೆ ಹೆಚ್ಚಾಗಲು ಪ್ರಾರಂಭಿಸಿದೆ. ಅದಕ್ಕಾಗಿಯೇ ಜನರಲ್ಲಿ ರಸ್ತೆ ಮಾರ್ಗಗಳೇ ಇಲ್ಲದ ಕಾಡಿನಲ್ಲಿ ಜೀವನವನ್ನು ನಡೆಸುವ ಕ್ರೇಜ್ ಹೆಚ್ಚುತ್ತಿದೆ.
ವೈಲ್ಡ್ ಲೈಫ್ ಸಾಹಸ ಪ್ಯಾಕೇಜ್‌ಗಳನ್ನು ತಯಾರಿಸುವ ಅನೇಕ ಕಂಪನಿಗಳು ಸಹ ಹುಟ್ಟಿಕೊಂಡಿವೆ. ಇದೀಗ ಜನರು ಬ್ರೆಜಿಲ್ ನ ಅಮೆಜಾನ್ ಮಳೆಕಾಡುಗಳನ್ನು ಸುತ್ತುವ ಅವಕಾಶವನ್ನು ಪಡೆದಿದ್ದಾರೆ. ಈ ಸಮಯದಲ್ಲಿ, ಬೆಂಕಿಕಡ್ಡಿಗಳು ಮತ್ತು ಲೈಟರ್‌ಗಳಿಲ್ಲದೇ ಬೆಂಕಿ ಹಚ್ಚಲು ಪ್ರಯತ್ನಿಸುವುದರಿಂದ ಹಿಡಿದು ತಿನ್ನಲು ಹೆಣಗಾಡುವವರೆಗೆ, ಒಬ್ಬ ವ್ಯಕ್ತಿಯು ಪರಿಪೂರ್ಣ ವೈಲ್ಡ್ ಲೈಫ್ ಅನುಭವಿಸುವ ಅವಕಾಶವನ್ನು ಪಡೆಯುತ್ತಾನೆ.
ಹಿಮಾವೃತ ಅಂಟಾರ್ಕ್ಟಿಕಾಗೆ ಪ್ರವಾಸ (Antartica Tour)
ಅಂಟಾರ್ಕ್ಟಿಕಾ ಖಂಡಕ್ಕೆ ಹೋಗಿ ಅಲ್ಲಿ ಬದುಕುಳಿಯುವುದು ಸುಲಭವಲ್ಲ ಎಂದು ನಾವೆಲ್ಲರೂ ಬಾಲ್ಯದಿಂದಲೂ ಕೇಳುತ್ತಿದ್ದೇವೆ. ಇದು ಭೂಮಿ ಮೇಲಿನ ಎಲ್ಲಾ ಏಳು ಖಂಡಗಳಲ್ಲಿ ಅತ್ಯಂತ ಶೀತಮಯ ಪ್ರದೇಶವಾಗಿದೆ ಮತ್ತು ಅದರ ಸುಮಾರು 98 ಪ್ರತಿಶತವು ಮಂಜುಗಡ್ಡೆಯಿಂದ ಆವೃತವಾಗಿದೆ.
ಈಗ ಅಲ್ಲಿ ವಾಸಿಸಲು ಸಾಧ್ಯವಿಲ್ಲ ಎನ್ನುವ ವಿಷಯವು ಹಳೆಯದಾಗಿದೆ ಮತ್ತು ಎಕ್ಸ್ಟ್ರೀಮ್ ಟೂರಿಸಂ ಕ್ರೇಜ್ ನಿಂದಾಗಿ, ಜನರು ಈಗ ಪೆಂಗ್ವಿನ್ ಗಳನ್ನು ಭೇಟಿಯಾಗಲು ಅಲ್ಲಿಗೆ ಹೋಗುತ್ತಿದ್ದಾರೆ. ಈ ಖಂಡವನ್ನು ತಲುಪಲು ದಕ್ಷಿಣ ಅಮೆರಿಕಾದಿಂದ ಕ್ರೂಸ್ ಇದೆ. ಇದಲ್ಲದೆ, ದಕ್ಷಿಣ ಧ್ರುವದಿಂದ ವಿಮಾನಗಳು ಸಹ ಲಭ್ಯವಿದೆ, ಇದರ ಫೀಸ್ ಸುಮಾರು $ 76,000 ಆಗಿದೆ.
ಎಕ್ಸ್ಟ್ರೀಮ್ ಟೂರಿಸಂ ಎಲ್ಲಾ ಅಪಾಯಗಳ ಹೊರತಾಗಿಯೂ, ಈ ಸ್ಥಳಗಳಲ್ಲಿ ಪ್ರವಾಸೋದ್ಯಮವು ಹೆಚ್ಚುತ್ತಿದೆ. ತಜ್ಞರ ಪ್ರಕಾರ, ಎಕ್ಸ್ಟ್ರೀಮ್ ಟೂರಿಸಂ ಸಾಹಸ ಪ್ರವಾಸೋದ್ಯಮದ ಒಂದು ಸಣ್ಣ ಭಾಗವಾಗಿದೆ, ಇದು ಕೋವಿಡ್ ಲಾಕ್ಡೌನ್ ಸಮಯದಲ್ಲಿ ಬಹಳ ಜನಪ್ರಿಯವಾಯಿತು. ಜನರು ಜೀವನದಲ್ಲಿ ವಿಭಿನ್ನ ಅನುಭವವನ್ನು ಪಡೆಯಲು ಇದನ್ನು ಮಾಡುತ್ತಿದ್ದಾರೆ. ಅದಕ್ಕಾಗಿ ತಮ್ಮ ಪ್ರಾಣ ಕಳೆದುಕೊಳ್ಳಲು ಸಹ ಅವರು ತಯಾರಿರುತ್ತಾರೆ.